Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏನ್ ಚಂದಾನೇ ಸೋನಂ, ನಿನ್ನ ಉಡುಗೆ-ತೊಡುಗೆ!
ಸೋನಂ ಕಪೂರ್ ತನ್ನ ಫ್ಯಾಷನ್ ಮತ್ತು ಟ್ರೆಂಡ್ ಸೆಟ್ ಮಾಡುವಂತಹ ನವೀನ ರೀತಿಯ ಫ್ಯಾಷನ್ ಉಡುಗೆಗಳಿಗೆ ಹೆಸರುವಾಸಿ. ಬಾಲಿವುಡ್ ಅಂಗಳದ ಈ ಸಪೂರ ಚೆಲುವೆ ಯಾವಾಗಲೂ ತಾನು ಸ್ಟೈಲ್ ಆಗಿ ಕಾಣಬೇಕು ಎಂಬ ಮನೋಭಾವದಿಂದ ಕಾಣಿಸಿಕೊಳ್ಳುತ್ತಾಳೆ. ಈಕೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಸಹ ಸೆಲೆಬ್ರಿಟಿ ಹಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ಪ್ರಧಾನ ಕಾರಣ, ಆಕೆಯ ಫ್ಯಾಷನ್ ಪ್ರಜ್ಞೆ.
ಆಕೆ ಎಲ್ಲಿಯೂ ತನ್ನ ಅಭಿಮಾನಿಗಳನ್ನು ತನ್ನ ಫ್ಯಾಷನ್‌ನಿಂದ ನಿರಾಸೆ ಮಾಡಿಲ್ಲ. ಇಂದು ಸ್ಟೋರ್‌ನಲ್ಲಿ ಸೋನಂ ನಮಗಾಗಿ ಯಾವ ಅಂಶವನ್ನು ನೀಡಿದ್ದಾರೆ ಎಂಬುದನ್ನು ನೀವು ಸಹ ನೋಡಬೇಕೆಂದು ಖಾತರರಾಗಿದ್ದೀರಲ್ಲವೇ? ಸ್ಕ್ರೋಲ್ ಡೌನ್ ಮಾಡಿ, ಅದನ್ನು ನೀವು ನೋಡಿ.

ಇತ್ತೀಚೆಗೆ ಸೋನಂ ಕಪೂರ್ ಇಂಡಿಯಾ ಟುಡೇ ಸಮಿಟ್ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಸೋನಂ ಎಲ್ಲರ ಪ್ರಧಾನ ಆಕರ್ಷಣೆಯಾಗಿದ್ದರು. ಈಕೆ ಈ ಸಮಾರಂಭಕ್ಕೆ ಅಡಿಯಿಂದ ಮುಡಿಯವರೆಗೆ ಜನಪದ ಶೈಲಿಯಲ್ಲಿ ಕಾಣಿಸಿಕೊಂಡು ಜನಮನ ಸೂರೆಗೊಂಡರು. ಈಕೆ ಹೊಳಪಿನಿಂದ ಕೂಡಿದ ಅನಾರ್ಕಲಿ ಗೌನ್ ಧರಿಸಿದ್ದಳು. ಇದರಲ್ಲಿ ಭರ್ಜರಿಯಾದ ಎಂಬ್ರಾಯಿಡರಿ ಮತ್ತು ಅಲಂಕಾರಿಕ ಅಂಶಗಳನ್ನು ನಾವು ಕಾಣಬಹುದಾಗಿತ್ತು.
ಇಡೀ ಲುಕ್‌ನ ಪ್ರಧಾನ ಆಕರ್ಷಣೆ, ಎಸ್ಟಾ ಇಯರ್ ರಿಂಗ್‌ಗಳು. ಇದು ಆಕೆಯ ಇಡೀ ಲುಕ್‌ಗೆ ಕಳಶಪ್ರಾಯವಾಗಿ ಕಾಣಿಸಿಕೊಳ್ಳುತ್ತಿತ್ತು. ಆಕೆಯನ್ನು ನೋಡಿದವರು ಆಕೆಯ ಕಿವಿಯೊಲೆಗೆ ಮನಸೋಲುತ್ತಿದ್ದುದು ಸಾಮಾನ್ಯವಾಗಿತ್ತು. ತ್ರಿಕೋನಾಕಾರದ ವಜ್ರದ ಕಿವಿಯೊಲೆಯು ಆಕೆಯ ಅಂದಕ್ಕೆ ಮತ್ತಷ್ಟು ಅಂದವನ್ನು ನೀಡಿತ್ತು. ಈ ದಿನದ ಆಕೆಯ ಸ್ಟೈಲಿಸ್ಟ್ ರೆಯಾ ಕಪೂರ್, ಆಕೆಗೆ ಅಭಿಲಾಷ ದೇವ್‌ನಾನಿ ಮತ್ತು ಚಾಂದಿನಿ ವಾಬಿ ಸಹಾಯ ಮಾಡಿದ್ದರು. ನಾವು ಬೋಲ್ಡ್‌ಸ್ಕೈ ನವರು ಸೋನಂ ಕಪೂರ್‌ರವರ ಲುಕ್ ಅನ್ನು ಇಷ್ಟಪಟ್ಟೆವು. ನೀವು ಸಹ ಇಷ್ಟಪಟ್ಟಿರಾ? ನಮಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.



Click it and Unblock the Notifications

