For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್‌: ನಿರ್ಮಲಾ ಸೀತಾರಾಮನ್‌ ಕೆಂಪು ಬಣ್ಣಕ್ಕೆ ಒತ್ತು ನೀಡುವುದ್ದೇಕೆ?

|

2022-23ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ಕಳೆದ ವರ್ಷದಂತೆಯೇ ಈ ಸಾಲಿನಲ್ಲಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪೇಪರ್‌ಲೆಸ್‌ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿ ಬಜೆಟ್‌ ಮಂಡನೆ ಮಾಡುವಾಗ ನಿರ್ಮಲಾ ಸೀತಾರಾಮನ್‌ ಕ್ರಿಸ್ಪ್‌ ಆರೇಂಜ್‌ ಮತ್ತು ಮರೂನ್‌ ಸಿಲ್ಕ್ ಪೋಚಂಪಲ್ಲಿ ಕೈ ಮಗ್ಗದ ಸೀರೆ ಧರಿಸಿದ್ದರು. ಅದರಲ್ಲೂ ಪಲ್ಲು ಇಕಾತ್ ಮಾದರಿ ಹೊಂದಿದ್ದು ಗೋಲ್ಡನ್‌ ಬಾರ್ಡರ್ ಹೊಂದಿದೆ. ಸೀರೆಗೆ ಮ್ಯಾಚ್‌ ಹೊಂದುವ ಮರೂನ್ ಬ್ಲೌಸ್‌ ಧರಿಸಿದ್ದರು.

Union Budget 2022: Nirmala Sitharaman Chooses an Orange Handloom Saree for budget presentation

ಕಳೆದ ಸಾಲಿನಂತೆ ಈ ಬಾರಿಯೂ ಬಜೆಟ್‌ ಡಾಕ್ಯೂಮೆಂಟ್‌ ಎಲ್ಲವೂ ಟ್ಯಾಬ್ಲೆಟ್‌ನಲ್ಲಿತ್ತು, ಆ ಟ್ಯಾಬ್ಲೆಟ್‌ ಅನ್ನು ಕೆಂಪು ಬಣ್ಣದ ಕವರ್‌ನಲ್ಲಿ ಇಡಲಾಗಿತ್ತು.

ಕಳೆದ ವರ್ಷವೂ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸುವಾಗ ಬಾರ್ಡರ್‌ನಲ್ಲಿ ಇಕಾತ್ ವರ್ಕ್‌ ಇರುವ ಬ್ರೈಟ್‌ ಕೆಂಪು ಬಣ್ಣದ ಸೀರೆ ಉಟ್ಟಿದ್ದರು.

ಕೆಂಪು ಬಣ್ಣ ಅದೃಷ್ಟದ ಬಣ್ಣವೇ?

ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಅದೃಷ್ಟದ ಬಣ್ಣವಾಗಿರುತ್ತದೆ. ನಿರ್ಮಮಾ ಸೀತಾರಾಮನ್‌ ಅವರಿಗೆ ಕೆಂಪು ಅದೃಷ್ಟದ ಬಣ್ಣವೆಂದು ಕಾಣುತ್ತದೆ. ಅವರು ಬಜೆಟ್‌ ಮಂಡಿಸಿದಾಗೆಲ್ಲಾ ಕೆಂಪು ಹೈಲೈಟ್‌ ಆಗಿರುವುದನ್ನು ಗಮನಿಸಬಹುದು. ಅಷ್ಟು ಮಾತ್ರವಲ್ಲ ಕೆಲವೊಂದು ಮಹತ್ವದ ದಿನಗಳಲ್ಲಿ ಅವರು ಕೆಂಪು ಬಣ್ಣ ಇರುವ ಸೀರೆ ಧರಿಸಿರುತ್ತಾರೆ.

ಕೆಂಪು ಬಣ್ಣ ಶಕ್ತಿ ಹಾಗೂ ಆತ್ಮವಿಶ್ವಾಸದ ಪ್ರತೀಕ ಕೂಡ ಆಗಿದೆ.

2022ನ ಸಾಲಿನಲ್ಲಿ ಮಂಡಿಸಲಗಿರುವ ಬಜೆಟ್‌ ಉತ್ತಮವಾಗಿದೆ ಎಂದು ಕೆಲವರು ವಿಶ್ಲೇಷಿಸಿದರೆ, ಉದ್ಯೋಗ ನಿರ್ಮಾಣಕ್ಕೆ ಹೆಚ್ಚಿನ ಒತ್ತಾಯ ನೀಡಬೇಕಾಗಿತ್ತು ಎಂಬ ಮಾತೂ ಕಡೆ ಕೇಳಿ ಬರುತ್ತಿದೆ, ಈ ಬಜೆಟ್‌ ಅನ್ನು ಪ್ರಧಾನಿ ಮೋದಿ ಜನಸ್ನೇಹಿ, ಪ್ರಗತಿಪರ ಬಜೆಟ್‌ ಎಂದಿದ್ದಾರೆ.

English summary

Union Budget 2022: Nirmala Sitharaman Chooses an Orange Handloom Saree for budget presentation

Union Budget 2022: Nirmala Sitharaman Chooses an Orange Handloom Saree for budget presentation, Read on...
Story first published: Tuesday, February 1, 2022, 16:15 [IST]
X
Desktop Bottom Promotion