Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಿಂಚಿನ ನೋಟದಿಂದ ಮೋಡಿ ಮಾಡಿದ ಸುಂದರಿ ಸನ್ನಿ ಲಿಯೋನ್
ಸರ್ಚ್ ದೈತ್ಯ ಗೂಗಲ್ನಲ್ಲಿ ಎರಡನೇ ಬಾರಿ ಹೆಚ್ಚು ಹುಡುಕಾಡಿದ ವ್ಯಕ್ತಿ ಎಂಬ ಕೀರ್ತಿಯನ್ನು ಪಡೆದುಕೊಂಡ ಸನ್ನಿ ಲಿಯೋನ್ ತಮ್ಮ ಮಾದಕ ನಟನೆಯಿಂದ ಬಾಲಿವುಡ್ನಲ್ಲಿ ಸ್ಥಾನಗಳಿಸಿಕೊಂಡಾಕೆ. ನಟನೆಯ ಗಂಧಗಾಳಿ ಗೊತ್ತಿಲ್ಲದವರು ಎಂಬ ಋಣಾತ್ಮಕತೆಯನ್ನು ಮೆಟ್ಟಿನಿಂತು ಇದೀಗ ಬೇಡಿಕೆಯ ಸ್ಥಾನವನ್ನು ಪಡೆದುಕೊಂಡಾಕೆ. ಚಿತ್ರಗಳಲ್ಲಿ ಮಾತ್ರವಲ್ಲದೆ ಸನ್ನಿ ಲಿಯೋನ್ ಜಾಹೀರಾತುಗಳು ಹಾಗೂ ಫ್ಯಾಷನ್ ಮೇಳಗಳಲ್ಲಿ ಕೂಡ ಮಿಂಚುತ್ತಿದ್ದಾರೆ.
ತಮ್ಮ ಅಂದ ಚೆಂದ ಮತ್ತು ಬಳುಕುವ ದೇಹ ಸೌಂದರ್ಯದಿಂದ ಖ್ಯಾತಿಯನ್ನು ಪಡೆಯುತ್ತಿದ್ದು ಕೀರ್ತಿಯ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಇತ್ತೀಚೆಗೆ ತಾನೇ ಮುಂಬೈನ ವರ್ಲಿಯಲ್ಲಿ ನಡೆದ ಲವ್ ಲ್ಯಾಂಡ್ ಡಿಜೆ ಈವೆಂಟ್ನಲ್ಲಿ ಚಿತ್ತ ಕದಡಿದ ಸೌಂದರ್ಯವತಿ ಸನ್ನಿ ಮಿಂಚಿದ್ದಾರೆ. ಟರ್ಕೊಯಿಶ್ ಅರ್ಧ ತೋಳಿನ ಗೌನ್ನಲ್ಲಿ ಮಾದಕ ತಾರೆ ಸನ್ನಿ ಮೋಡಿ ಮಾಡಿದ್ದಾರೆ.

ಫ್ಲೋರಲ್ ವಿನ್ಯಾಸಗಳು ಮತ್ತು ಕಲ್ಲುಗಳಿಂದ ಗೌನ್ ಮಿರಿಮಿರಿ ಮಿಂಚುತ್ತಿದ್ದು ಅದ್ಭುತ ವಿನ್ಯಾಸವನ್ನು ಪಡೆದುಕೊಂಡಿದೆ. ಅಂಜನಾ ಮಿಶ್ರ ಈ ಗೌನ್ ತಯಾರಿಯ ಹಿಂದಿರುವ ವ್ಯಕ್ತಿಯಾಗಿದ್ದಾರೆ. ಈ ಧಿರಿಸಿಗೆ ಸ್ಟೈಲಿಸ್ಟ್ ಆಗಿ ಹಿತೇಂದ್ರಾ ಚೋಪ್ರಾ ಸನ್ನಿಗೆ ಜತೆಯಾಗಿದ್ದಾರೆ. ತಮ್ಮ ಆಯ್ಕೆಯಲ್ಲಿ ಸನ್ನಿ ಎತ್ತಿದ ಕೈ ಎಂದೆನಿಸಿದ್ದು ಸರಳವಾಗಿ ಕೇಶದ ಶೃಂಗಾರವನ್ನು ಮಾಡಿದ್ದಾರೆ. ಸನ್ನಿಯ ಈ ಸ್ಟೈಲಿಶ್ ನೋಟ ನಿಮಗೂ ಇಷ್ಡವಾಯಿತೇ?



Click it and Unblock the Notifications
