Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸ್ಟೈಲಿಶ್ ಲುಕ್ನಲ್ಲಿ ನವವಿವಾಹಿತೆ ಬಿಪಾಶಾ ಬಸು...
ಬಿ ಟೌನ್ನಲ್ಲಿ ಈಗ ಸದ್ದು ಮಾಡುತ್ತಿರುವ ಸುದ್ದಿಯಾಗಿದೆ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ವಿವಾಹವಾಗಿದೆ. ಏಪ್ರಿಲ್ 30 ರಂದು ವಿವಾಹವಾಗಿರುವ ಈ ಜೋಡಿ ನವವಿವಾಹಿತರ ಗುಂಗಿನಲ್ಲಿದ್ದು ಸಂಭ್ರಮದಿಂದಲೇ ತಮ್ಮ ವಿವಾಹ ಸಮಯಗಳನ್ನು ಆನಂದಿಸುತ್ತಿದ್ದಾರೆ. ಬಂಗಾಳಿ ಮತ್ತು ಪಂಜಾಬಿ ಸಂಪ್ರದಾಯಗಳೆರಡರಲ್ಲೂ ಈ ಜೋಡಿ ಮದುವೆಯಾಗಿದ್ದು ವಿವಾಹ ಸಂದರ್ಭ, ಮೆಹಂದಿ, ಆರತಕ್ಷತೆ ಕಾರ್ಯಕ್ರಮಗಳಲ್ಲಿ ಧರಿಸಿರುವ ದಿರಿಸುಗಳು ನಿಜಕ್ಕೂ ಇವರಿಬ್ಬರ ಅಭಿಮಾನಿಗಳನ್ನು ರಂಜಿಸಿದ್ದು ಸುಳ್ಳಲ್ಲ.

ನವವಿವಾಹಿತರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಮಯವನ್ನು ಕಳೆಯುತ್ತಿದ್ದು ಬಿಪಾಶಾ ಅತ್ಯಾಕರ್ಷಕ ದಿರಿಸುಗಳಿಂದ ಕಂಗೊಳಿಸುತ್ತಿದ್ದಾರೆ. ಪ್ರಿಸ್ಟಿನ್ ಭಾರತೀಯ ದಿರಿಸು ಬೆಳ್ಳಿಯ ಜರಿ ಕುಸುರಿ ಕೆಲಸವನ್ನು ಸಂಪೂರ್ಣವಾಗಿ ಎಲ್ಲೆಡೆ ಪಡೆದುಕೊಂಡಿದೆ.
ಮ್ಯಾಕ್ಸಿ ಕುರ್ತಾ ಮುಂಭಾಗದಲ್ಲಿ ಸ್ಲಿಟ್ ಅನ್ನು ಪಡೆದುಕೊಂಡಿದ್ದು ಲೈನ್ ಕುರ್ತಾದ ಮೇಲೆ ಬಿಳಿ ಬಣ್ಣದ ಎಂಬ್ರಾಯಿಡರಿ ವಿನ್ಯಾಸವನ್ನು ಪಡೆದುಕೊಂಡಿದೆ. ದಾವಣಿಯಲ್ಲಿರುವ ಬೆಳ್ಳಿಯ ಜರಿ ಬೊಮೇನ್ ಸ್ಮರ್ಶವನ್ನು ದಿರಿಸಿಗೆ ನೀಡಿದೆ.
ಈ ದಿರಿಸನ್ನು ವಿನ್ಯಾಸಪಡಿಸಿದವರು ಸುಕೃತಿ ಮತ್ತು ಆಕೃತಿ ವಿನ್ಯಾಸಕಾರರಾಗಿದ್ದು ತಮ್ಮ ಅದ್ಭುತ ದಿರಿಸುಗಳಿಗೆ ಇವರು ಖ್ಯಾತರಾಗಿದ್ದಾರೆ. ಇನ್ನು ಸ್ಟೈಲಿಂಗ್ ನಡೆಸಿದವರು ಶ್ಯಾಮಿಲಿ ಅರೋರಾ. ನವವಿವಾಹಿತೆ ಬಿಪಾಶಾ ಬಸು ತಮ್ಮ ಅದ್ಭುತ ದಿರಿಸುಗಳಿಂದ ನಮ್ಮ ಮನವನ್ನು ಕದ್ದಿರುವುದಂತೂ ನಿಜ



Click it and Unblock the Notifications


