Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಐಶ್ ಧರಿಸಿದ ಬಿಳಿ ಕುರ್ತಾ ಮೋಡಿ ಮಾಡಿದ್ದಂತೂ ನಿಜ!
ಐಶ್ವರ್ಯಾ ರೈ ಹೆಸರೇ ಸೂಚಿಸುವಂತೆ ಸೌಂದರ್ಯಕ್ಕೆ ರಾಣಿ ಎಂದೆನಿಸಿದ್ದಾರೆ. ಸೌಂದರ್ಯ, ಬುದ್ಧಿವಂತಿಕೆಯ ಸಮ್ಮಿಶ್ರಣವೇ ಐಶ್ವರ್ಯಾ ಎಂಬ ಚೆಲುವೆ. ಮಾಜಿ ವಿಶ್ವ ಸುಂದರಿ ಇನ್ನೂ ಕೂಡ ತಮ್ಮ ಸಿನಿ ಪ್ರಯಾಣದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಾ ಬಾಲಿವುಡ್‌ನಲ್ಲಿ ತಮ್ಮ ಝಲಕ್ ಅನ್ನು ತೋರಿಸಿಕೊಡುತ್ತಿದ್ದಾರೆ.

ಪ್ರಸ್ತುತ ರಣಬೀರ್ ಕಪೂರ್ ಜೊತೆಗೆ 'ಏ ದಿಲ್ ಹೇ ಮುಷ್ಕಿಲ್' ಚಿತ್ರದಲ್ಲಿ ಐಶ್ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದು ಚಿತ್ರದ ಪ್ರಮೋಶನ್ ಕಾರ್ಯಕ್ರಮದಲ್ಲಿ ತಮ್ಮನ್ನು ಬಹುವಾಗಿಯೇ ತೊಡಗಿಸಿಕೊಂಡಿದ್ದಾರೆ.
ಐಶ್ ಈ ಬಾರಿ ಸುಂದರವಾಗಿರುವ ಬಿಳಿ ಕುರ್ತಾವನ್ನು ಆಯ್ದುಕೊಂಡಿದ್ದು ಇದು ಪೂರ್ಣ ಸ್ಲೀವ್ ಆಕಾರವನ್ನು ಹೊಂದಿದೆ. ಇದು ಕಾಲರ್ ಅನ್ನು ಪಡೆದುಕೊಂಡಿದ್ದು ನೆರಿಗೆ ಇರುವ ಪ್ರಿಂಟ್ ಒಳಗೊಂಡಿರುವ ಸ್ಕರ್ಟ್ ಇದೆ. ಲೇಬಲ್ ರೋಹಿತ್ ಬಾಲ್ ಈ ಕುರ್ತಾವನ್ನು ಐಶ್‌ಗಾಗಿ ವಿನ್ಯಾಸಗೊಳಿಸಿದ್ದಾರೆ. ಕಪ್ಪು ದಿರಿಸಿನ ಅಪ್ಪಟ ಪ್ರೇಮಿ-ಕರಾವಳಿ ಸಿರಿ ಐಶ್ವರ್ಯ ರೈ
ಇದಕ್ಕೆ ಹೊಂದುವ ಜುಮ್ಕಿಯನ್ನು ಐಶ್ ತೊಟ್ಟುಕೊಂಡಿದ್ದಾರೆ. ಕೂದಲಿಗೆ ಕಂದು ಬಣ್ಣವನ್ನು ಅವರು ಹಚ್ಚಿಕೊಂಡಿದ್ದು ಅದನ್ನು ಸ್ಟೈಲಿಶ್ ಆಗಿ ಐಶ್ ಇರಿಸಿಕೊಂಡಿದ್ದಾರೆ. ತಮ್ಮ ಬಿಳಿ ಬಣ್ಣಕ್ಕೆ ಹೊಂದುವಂತೆ ಸುಂದರ ಆಕರ್ಷಕ ಕಣ್ಣಿನ ಮೇಕಪ್ ಅನ್ನು ಐಶ್ ಮಾಡಿಕೊಂಡಿದ್ದಾರೆ.
ಐಶ್ ಬಿಳಿ ಕುರ್ತಾದಲ್ಲಿ ಫ್ಲೋರಲ್ ಪ್ರಿಂಟ್‌ಗಳನ್ನು ನಮಗೆ ಕಾಣಬಹುದಾಗಿದೆ. ಅಂತೂ ಸುಂದರಿ ಐಶ್ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದಾರೆ ಎಂಬುದನ್ನು ಹೇಳಲು ಮಾತ್ರ ನಾವು ಮರೆಯುವುದಿಲ್ಲ....



Click it and Unblock the Notifications



