Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಪ್ಪು ಧಿರಿಸಿನಲ್ಲಿ ಕಣ್ಮನ ಸೆಳೆದ ಸುಂದರಿ ಐಶ್ವರ್ಯ
ರೂಪದಲ್ಲಿ ಕಣ್ಮನ ಸೆಳೆಯುವ, ಯುವ ತಾಯಿ ಐಶ್ವರ್ಯ ರೈ ಅನ್ನು ಸೋಲಿಸಲು ಯಾರಿಗಾದರೂ ಸಾಧ್ಯವೇ? ಹ್‌ಮ್ ನೀವೀಗ ಸೌಂದರ್ಯವತಿ ಶಿಲ್ಪಾ ಶೆಟ್ಟಿಯ ಬಗೆಗೆ ಯೋಚಿಸುತ್ತಿರಬಹುದು, ಆದರೆ ಸುಂದರಿ ಐಶ್ವರ್ಯ ರೈ ಅನ್ನು ಒಮ್ಮೆ ನೋಡಿ! ಮುಂಬೈಯಲ್ಲಿ ನಡೆದ ಲೋರಿಯಲ್ ಪ್ಯಾರೀಸ್‌ನ ಐ ಲೈನರ್ ಕಾಜಲ್ ಮಾಜಿಕ್‌ನ ಉದ್ಘಾಟನಾ ಸಮಾರಂಭದಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದರು.
ತಾವು ಧರಿಸಿದ ಜೆಟ್ ಕಪ್ಪು ನಿಲುವಂಗಿಯಲ್ಲಿ ಐಶ್ವರ್ಯ ಅದ್ಭುತವಾಗಿ ಮಿಂಚುತ್ತಿದ್ದರು. ತಮ್ಮ ತೂಕ ಇಳಿಸಿಕೊಂಡು ಮುಂಚಿಗಿಂತಲೂ ಸುಂದರವಾಗಿ ಕಾಣಿಸುತ್ತಿದ್ದ ಐಶ್ವರ್ಯರನ್ನು ನೋಡಿದಷ್ಟೂ ಕಣ್ಣುತಣಿಯುತ್ತಿರಲಿಲ್ಲ. ತಮ್ಮ ಮೈಕಟ್ಟನ್ನು ಇನ್ನಷ್ಟು ಸುಂದರಗೊಳಿಸಿ, ಕಣ್ಣಿನ ಕಾಂತಿಯನ್ನು ಇನ್ನಷ್ಟು ಉಜ್ವಲಗೊಳಿಸುತ್ತಾ ಕಾಂತಿಯುಕ್ತವಾಗಿದ್ದರು. ಕಾಜಲ್ ಮ್ಯಾಜಿಕ್‌ನ ಉದ್ಘಾಟನಾ ಸಂದರ್ಭದಲ್ಲಿ ಸುಂದರಿ ಐಶ್ವರ್ಯ ತನ್ನ ಅಭಿಮಾನಿಗಳನ್ನು ನೆರೆದಿದ್ದ ಪ್ರೇಕ್ಷಕರನ್ನು ತಮ್ಮ ಸುಂದರ ನಗುವಿನಿಂದ ಮಂತ್ರಮುಗ್ಧಗೊಳಿಸಿದ್ದರು. ಆಕೆಯ ಹೊಳೆಯುವ ಲಿಪ್‌ಸ್ಟಿಕ್ ಮತ್ತು ಸೊಗಸಾದ ಕಣ್ಣಿನ ಮೇಕಪ್ ಎಲ್ಲರಿಗಿಂತಲೂ ಸೌಂದರ್ಯದಲ್ಲಿ ಮಿಗಿಲಾದವರು ಆಕರ್ಷಣೀಯರು ಐಶ್ವರ್ಯ ಎಂಬುದನ್ನು ಸಾರಿ ಹೇಳುತ್ತಿದ್ದವು.
ಐಶ್ವರ್ಯ ರೈಯ ಸೌಂದರ್ಯವನ್ನು ಬಿಚ್ಚಿಟ್ಟ ಕೆಲವೊಂದು ಸುಂದರ ಶಾಟ್‌ಗಳು ನಿಮಗಾಗಿ:
ಹೆರಿಗೆಯ ನಂತರ ಐಶ್ವರ್ಯ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ, ಮುಂಬೈಯಲ್ಲಿ ಆಕೆ ಮಿಂಚಿದ ಬಗೆ ಆಕೆಯ ಹಿಂದಿನ ಮಹಾರಾಣಿ ಇಮೇಜ್ ಅನ್ನು ಆಕೆಗೆ ಪುನಃ ತಂದುಕೊಟ್ಟಿತು. ಸಮಾರಂಭದ ಮುಖ್ಯ ಆಕರ್ಷಣೆ ಆಕೆಯಾಗಿದ್ದರು ಎಂಬುದಕ್ಕೆ ಸಾಕ್ಷಿ ಅಲ್ಲಿ ನೆರೆದ ಪ್ರೇಕ್ಷಕರ ವಾಹ್ ಎಂಬ ಉದ್ಗಾರವಾಗಿತ್ತು. ಪ್ರತಿಯೊಬ್ಬರೂ ಐಶ್ವರ್ಯರನ್ನೇ ತದೇಕಚಿತ್ತರಾಗಿ ನೋಡುತ್ತಿದ್ದರು. ಇಲ್ಲಿ ಐಶ್ವರ್ಯರ ಕೆಲವೊಂದು ಸುಂದರ ಭಂಗಿಗಳನ್ನು ಫೋಟೋದಲ್ಲಿ ಸೆರೆಹಿಡಿಯಲಾಗಿದೆ, ಅದರ ಮೇಲೆ ಕಣ್ಣುಹಾಯಿಸಿ ಮಂತ್ರಮುಗ್ಧರಾಗಿ:

1.ಡೋಲ್ಸ್ ಮತ್ತು ಗಬ್ಬನ್:
ಲೋರಿಯಲ್ ಪ್ಯಾರೀಸ್‌ನ ಕಾಜಲ್ ಮ್ಯಾಜಿಕ್ ಉದ್ಘಾಟನೆಗೆ ಬಂದಿದ್ದ ಐಶ್ವರ್ಯ ಡೋಲ್ಸ್ ಗಬ್ಬನ್ ನಿಲುವಂಗಿಯಲ್ಲಿ ಸಖತ್ತಾಗಿ ಕಾಣುತ್ತಿದ್ದರು. ಉದ್ಧದ ಕಪ್ಪು ಲೇಸ್ ಮ್ಯಾಕ್ಸಿ ನಿಲುವಂಗಿ ಆಕೆಯ ಮೈಕಟ್ಟಿಗೆ ಚೆನ್ನಾಗಿ ಹೋಲಿಕೆಯಾಗುತ್ತಿದ್ದು, ಉಸಿರು ತೆಗೆದುಕೊಳ್ಳುವುದನ್ನೇ ಮರೆತು ನೋಡುತ್ತಲೇ ಇರುವ ಎಂಬ ಭಾವನೆಯನ್ನು ಉಂಟುಮಾಡುತ್ತಿತ್ತು.

2.ವೈಸ್ಟ್ ಕೋಟ್:
ತನ್ನ ಡೋಲ್ಸ್ ಗಬ್ಬನ್ ನಿಲುವಂಗಿಯೊಂದಿಗಿನ ಕಪ್ಪು ವೈಸ್ಟ್ ಕೋಟ್ ಐಶ್ವರ್ಯರ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ತಂದಿದೆ. ಆಕೆಯ ಕಪ್ಪು ಕೋಟ್ ಆಕೆಗೆ ಇನ್ನಷ್ಟು ವೃತ್ತಿಪರ ನೋಟವನ್ನು ನೀಡಿದೆ.

3.ಆಕೆಯ ಕಣ್ಣುಗಳು:
ತನ್ನ ಸುಂದರ ಕಣ್ಣುಗಳಿಂದಲೇ ಇಂಡಸ್ಟ್ರಿಯಲ್ಲಿ ಖ್ಯಾತಿವೆತ್ತಿದ್ದ ಈ ಚೆಲುವೆ ತನ್ನ ಕಣ್ಣುಗಳಿಗೆ ಇನ್ನಷ್ಟು ಮೆರುಗು ಹಾಗೂ ಹೊಳಪು ತರುವ ಕಣ್ಣಿನ ಮೇಕಪ್ ಅನ್ನು ಮಾಡಿದ್ದಾರೆ.

4.ಸುಂದರ ತುಟಿಗಳು:
ಸುಂದರ ತುಟಿಗಳು ಇನ್ನಷ್ಟು ಮಿನುಗುವಂತಹ ತುಟಿ ಬಣ್ಣವನ್ನು ಆಯ್ಕೆಮಾಡಿರುವ ಐಶ್ವರ್ಯ ಸುಂದರ ನೋಟಕ್ಕೆ ಹಾಗೂ ಚರ್ಮಕ್ಕೆ ಸಾಟಿಯಾಗುವಂತೆ ತುಟಿ ಬಣ್ಣವನ್ನು ಹಚ್ಚಿಕೊಂಡಿದ್ದಾರೆ

5.ಆಭರಣಗಳು:
ಈ ಡೋಲ್ಸ್ ಮತ್ತು ಗಬ್ಬನ್ ನಿಲುವಂಗಿಯೊಂದಿಗೆ ಐಶ್ವರ್ಯ ಹೆಚ್ಚಿನ ಆಭರಣವನ್ನು ತೊಟ್ಟುಕೊಂಡಿಲ್ಲ. ವಜ್ರದ ಕಿವಿಯಾಭರಣಗಳು, ಚಿನ್ನದ ಉಂಗುರ ಮತ್ತು ಸುಂದರವಾದ ಚಿನ್ನದ ಬ್ರಾಸ್‌ಲೆಟ್ ಆಭರಣವನ್ನು ಮಣಿಗಂಟಿಗೆ ತೊಟ್ಟುಕೊಂಡಿದ್ದಾರೆ.

6.ಆಕೆಯ ಕೇಶವಿನ್ಯಾಸ:
ಈ ಸಲ ಐಶ್ವರ್ಯ ಸರಳ ಹೇರ್‌ಸ್ಟೈಲ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ತನ್ನ ಭುಜಗಳ ಮೇಲೆ ಮಲಗಿದಂತಿರುವ ಸುಂದರ ಕೇಶವಿನ್ಯಾಸವನ್ನು ಐಶ್ ಮಾಡಿಕೊಂಡಿದ್ದಾರೆ.

7.ಬೆಲ್ಟ್:
ಐಶ್ ಈ ಉಡುಗೆಯಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ, ಆಕೆಯ ಸೊಂಟವನ್ನು ಆಧರಿಸಿರುವ ಕಪ್ಪಗಿನ ಅಗಲವಾದ ಬೆಲ್ಟ್ ಐಶ್‌ನ ಸುಂದರ ಮೈಕಟ್ಟನ್ನು ಎತ್ತಿಹಿಡಿದಿದೆ.

8.ಸಹಜವಾಗಿರುವುದು:
ಐಶ್ ಸಹಜವಾಗಿ ಸುಂದರಿಯಾಗಿರುವುದರಿಂದ ಅವರನ್ನು ಸುಂದರಗೊಳಿಸಲು ಹೆಚ್ಚಿನ ಮೇಕಪ್ ಅವಶ್ಯಕತೆಯಿಲ್ಲ, ಲೋರಿಯಲ್ ಪ್ಯಾರೀಸ್‌ನ ಕಾಜಲ್ ಮ್ಯಾಜಿಕ್‌ನ ಉದ್ಘಾಟನೆಗೆ ಬಂದಿದ್ದ ಐಶ್ ತನ್ನ ಕೆನ್ನೆಯ ಸಣ್ಣ ನವಿರಾದ ಮೇಕಪ್ ಅನ್ನು ಹೊರತುಪಡಿಸಿ ಸ್ವಾಭಾವಿಕವಾಗಿ ಸಹಜವಾಗಿ ಕಂಡುಬರುತ್ತಿದ್ದರು.

9. ಹೋಲಿಕೆಯಲ್ಲಿ:
ಅವರ ಹಿಂದಿನ ಸಮಾರಂಭಗಳಿಗೆ ಹೋಲಿಸಿದಾಗ ಐಶ್ ಈ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಕಂಡುಬಂದಿದ್ದಾರೆ. ಅವರು ಗರ್ಭಿಣಿಯಾಗಿರುವಾಗ ಇದ್ದ ತೂಕವನ್ನು ಕಳೆದುಕೊಂಡು ಸಾಕಷ್ಟು ಸ್ಲಿಮ್ ಮತ್ತು ಸುಂದರಿಯಾಗಿದ್ದಾರೆ.



Click it and Unblock the Notifications