Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
Miss Universe 2021: 21 ವರ್ಷದ ಬಳಿಕ ಭಾರತಕ್ಕೆ ಒಲಿದ ಮಿಸ್ ಯೂನಿವರ್ಸ್: ಕಿರೀಟ ಮುಡಿಗೇರಿಸಿದ ಹರ್ನಾಝ್ ಸಂಧು
2021ರ ಮಿಸ್ ಯೂನಿವರ್ಸ್ (ಭುವನ ಸುಂದರಿ) ಕಿರೀಟ ಭಾರತದ ಸುಂದರಿಯ ಮುಡಿಗೇರಿದೆ. ಪಂಜಾಬ್‌ನ 21 ವರ್ಷದ ಹರ್ನಾಝ್ ಸಂಧು ಇಸ್ರೇಲ್ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧಿಯಲ್ಲಿ ಗೆಲ್ಲುವ ಮೂಲಕ ಮಿಸ್ ಯೂನಿವರ್ಸ್ ಕಿರೀಟಕ್ಕೆ ಮುತ್ತಿಟ್ಟಿದ್ದಾರೆ.

ಫ್ಯಾಷನ್ ಜಗತ್ತಿನ ಪ್ರತಿಷ್ಠಿತ ಕಾರ್ಯಕ್ರಮ
ಫ್ಯಾಷನ್ ತುಂಬಾ ಕುತೂಹಲದಿಂದ ಎದುರು ನೋಡುತ್ತಿರುವ ಸ್ಪರ್ಧೆಯಿದು. ಈ ಸ್ಪರ್ಧೆಗೆ ಬೇರೆ-ಬೇರೆ ದೇಶಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಾರೆ. ಸೌಂದರ್ಯ ಹಾಗೂ ಚಾಣಾಕ್ಷ ಬುದ್ಧಿ ಇರುವವರಿಗೆ ಒಲಿಯುವ ಕಿರೀಟ ಇದಾಗಿದೆ. 2021ರ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧಿಯಲ್ಲಿ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕವನ್ನು ಹಿಂದಿಕ್ಕಿ ಭಾರತದ ಸುಂದರಿ ಹರ್ನಾಝ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ದಶಕದ ಬಳಿಕ ಭಾರತಕ್ಕೆ ಒಲಿದ ಮಿಸ್ ಯೂನಿವರ್ಸ್ ಪಟ್ಟ
ಮಿಸ್ ಯೂನಿವರ್ಸ್ ಪಟ್ಟ ಭಾರತಕ್ಕೆ ಇಲ್ಲಿಯವರೆಗೆ ಮೂರು ಭಾರಿ ಸಿಕ್ಕಿದೆ. 1994ರಲ್ಲಿ ಸುಸ್ಮಿತಾ ಸೇನ್ ಗೆದ್ದಿದ್ದರು, ನಂತರ 2000ದಲ್ಲಿ ಲಾರಾ ದತ್ತ ಮಿಸ್‌ಯೂನಿವರ್ಸ್ ಕಿರೀಟವನ್ನು ಗೆದ್ದಿದ್ದರು. ಅದಾಗಿ ಎರಡು ದಶಕದ ಬಳಿಕ ಹರ್ನಾಝ್ ಸಿಂಧು ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿರುವುದು ಭಾರತೀಯರಿಗೆ ಸಂತಸ ತಂದಿದೆ.

21 ವರ್ಷದ ಬಳಿಕ ಭಾರತಕ್ಕೆ ಮತ್ತೆ ಕಿರೀಟ ತಂದ ಖುಷಿಯಲ್ಲಿ ಹರ್ನಾಝ್
ಮಿಸ್ ಯೂನಿವರ್ಸ್ ಕಿರೀಟ ಪಡೆದ ಬಳಿಕ ಮಾತನಾಡಿದ ಹರ್ನಾಝ್' ನಾನು ದೇವರಿಗೆ, ನನ್ನ ಪೋಷಕರಿಗೆ, ಮಿಸ್ ಇಂಡಿಯಾ ಆಯೋಜಕರಿಗೆ ನನಗೆ ಗೈಡ್ ಮಾಡಿ, ಸಪೋರ್ಟ್ ಮಾಡಿದ್ದಕ್ಕೆ ಅಬಾರಿಯಾಗಿದ್ದೇನೆ. ಯಾರೆಲ್ಲಾ ನಾನು ಈ ಕಿರೀಟ ಗೆಲ್ಲಬೇಕೆಂದು ಆಶಿಸಿದ್ದರೋ ಅವರಿಗೆಲ್ಲಾ ನನ್ನ ಪ್ರೀತಿ ಪೂರ್ವಕ ಧನ್ಯವಾದಗಳು. 21 ವರ್ಷದ ಬಳಿಕ ಭಾರತಕ್ಕೆ ಆ ಹೊಳೆಯುವ ಕಿರೀಟ ತಂದಿರುವುದು ನನಗೆ ಹೆಮ್ಮೆಯ ಕ್ಷಣವಾಗಿದೆ' ಎಂದಿದ್ದಾರೆ.



Click it and Unblock the Notifications
