Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ವಾವ್! ಎಷ್ಟೊಂದು ಆಕರ್ಷಕ ಈ ಮಾನ್ಸೂನ್ ನೇಲ್ ಆರ್ಟ್
ಮಳೆಗಾಲ ಬಂದಾಯ್ತು, ನಮ್ಮ ಧಿರಿಸು, ಸ್ಟೈಲ್, ಫ್ಯಾಷನ್ ಎಲ್ಲಾ ಬದಲಾಗಲೇಬೇಕು. ಬೇಸಿಗೆಯಲ್ಲಿ ಧರಿಸುವ ಹಾಗೆ ತುಂಬಾ ಸ್ಟೈಲಿಷ್ ಬಟ್ಟೆಗಳನ್ನು ಧರಿಸಲು ಮಳೆಗಾಲದಲ್ಲಿ ಸಾಧ್ಯವಾಗುವುದಿಲ್ಲ, ಹೊರಗಡೆ ಹೋಗುವಾಗ ಮಳೆನೀರು ಬಿದ್ದು ಬಟ್ಟೆ ಹಾಳಾಗುತ್ತದೆ.

ಇನ್ನು ಮೇಕಪ್ ಮಾಡುವಾಗಲೂ ಅಷ್ಟೇ ಮಳೆಗಾಲಕ್ಕೆ ತಕ್ಕಂತೆ ಮಾಡಬೇಕು, ಇಲ್ಲದಿದ್ದರೆ ಮಳೆ ಹನಿ ಮುಖಕ್ಕೆ ಬಿದ್ದರೆ ಮುಖದಲ್ಲಿರುವ ಮೇಕಪ್ ಹಾಳಾಗುವುದು. ಇನ್ನು ಹೇರ್ ಸ್ಟೈಲ್ ಕೂಡ ಅಷ್ಟೇ ಮಳೆಗಾಲದಲ್ಲಿ ತುರುಬು ಕಟ್ಟುವುದು, ಜಡೆ ಹಾಕುವುದೇ ಸೂಕ್ತ.
ಹಾಗಾದರೆ ಮಳೆಗಾಲದಲ್ಲಿ ಇನ್ನಷ್ಟು ಫ್ಯಾಷನಬಲ್ ಆಗಿ ಕಾಣಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಟ್ರೆಂಡಿ ನೇಲ್ ಆರ್ಟ್ ಮಾಡುವ ಮೂಲಕ ಇತರರ ಗಮನ ಸೆಳೆಯಬಹುದು ನೋಡಿ. ಇಲ್ಲಿ ಮಾನ್ಸೂನ್ ಟ್ರೆಂಡಿ ನೇಲ್ ಆರ್ಟ್ ಡಿಸೈನ್ ಬಗ್ಗೆ ಹೇಳಿದ್ದೇವೆ, ಈ ಡಿಸೈನ್‌ಗಳು ನಿಮಗೂ ಇಷ್ಟವಾಗಬಹುದು ನೋಡಿ:

ಡಾರ್ಕ್ ರೈನಿ ಶವರ್
ಈ ನೇಲ್ ಆರ್ಟ್ ಮಾಡುವುದು ಸುಲಭ, ನೀಲಿ ಬಣ್ಣದ ನೇಲ್ ಪಾಲಿಷ್ ಇದ್ದರೆ ಅದನ್ನು ಹಚ್ಚಿ ಅದರ ಮೇಲೆ ಡಾರ್ಕ್ ನೇಲ್ ಆರ್ಟ್ ಮಾಡಿದರೆ ಸಾಕು ತುಂಬಾಆಕರ್ಷಕವಾಗಿ ಕಾಣುವುದು, ಇಲ್ಲದಿದ್ದರೆ ನೀಲಿ ಬಣ್ಣದ ನೇಲ್ ಪಾಲಿಷ್ ಮೇಲೆ ಬಿಳಿ ಬಣ್ಣದಲ್ಲಿ ಮಳೆ ಹನಿಯ ಚಿತ್ತಾರ ಮೂಡಿಸಿದರೂ ಆಕರ್ಷಕವಾಗಿ ಕಾಣುತ್ತದೆ.

ರೈನ್ ಡ್ರಾಫ್‌ಲೆಟ್ಸ್ ಅಂಡ್ ಬ್ಲೂಮಿಂಗ್ ಫ್ಲವರ್
ಇದು ಕೂಡ ಮಳೆಗಾಲದ ಫೀಲ್ ನೀಡುವ ನೇಲ್ ಆರ್ಟ್ ಆಗಿದೆ. ನೀವು ಇಲ್ಲಿ ನೀಡಿದಂತೆ ನೇಲ್ ಆರ್ಟ್ ಮಾಡಿ ನೋಡಿ, ನೋಡಿದವರ ಗಮನ ನಿಮ್ಮ ಉಗುರು ಮೇಲೆ ಹೋಗುವುದು, ಈ ಆರ್ಟ್ ಮಾಡಲು ಮೂರು ಬಣ್ಣದ ನೇಲ್ ಪಾಲಿಷ್ ನಿಮ್ಮ ಬಳಿ ಇರಬೇಕು, ಬಿಳಿ, ತೆಳು ನೀಲಿ, ಕಡು ನೀಲಿ ಬಣ್ಣದ ನೇಲ್ ಪಾಲಿಷ್ ಇದ್ದರೆ ಮೂರು ಬೆರಳಿಗೆ ವೈಟ್ ವಿಥ್ ಬ್ಲೂ, ಇನ್ನೆರಡು ಬೆರಳಿಗೆ ಲೈಟ್ ಬ್ಲೂ ವಿಥ್ ಡಾರ್ಕ್ ಬ್ಲೂ ಹಚ್ಚಿದರೆ ಸಾಕು ಆಕರ್ಷಕವಾಗಿರುವುದು.

ರೈನಿ ಡೇ ಸ್ಟೋರಿ
ಇನ್ನು ನೀವು ಆಕರ್ಷಕ ಛತ್ರಿ ವಿನ್ಯಾಸ ಕೂಡ ನಿಮ್ಮ ಬೆರಳುಗಳ ಮೇಲೆ ಮೂಡಿಸಬಹುದು. ಈ ವಿನ್ಯಾಸ ಮೂಡಿಸಲು ನಿಮಗೆ ಇಷ್ಟವಿರುವ ಬಣ್ಭದ ನೇಲ್‌ಪಾಲಿಷ್ ಬಳಸಬಹುದು. ಇನ್ನ ಮಡಚಿದ ಛತ್ರಿ, ಬಿಡಿಸಿರುವ ಛತ್ರಿ ಅವುಗಳಿಂದ ಮಳೆ ನೀರು ತೊಟ್ಟಿಕ್ಕುವ ರೀತಿಯಲ್ಲಿ ಆಕರ್ಷಕವಾಗಿ ಚಿತ್ತಾರ ಮೂಡಿಸಬಹುದು.

ಮೋಡಗಳ ಚಿತ್ತಾರ
ಮಳೆಗಾಲ ಎಂದ ಮೇಲೆ ಮೋಡ ಕವಿದ ವಾತಾವರಣ, ಆ ಮೋಡಗಳ ಸೊಬಗು ನಿಮ್ಮ ಉಗುರಿನ ಮೇಲೆ ಮೂಡಿಸಬಹುದು, ಬ್ಲ್ಯಾಕ್, ಸಿಲ್ವರ್ ಬಣ್ಣದ ನೇಲ್ ಪಾಲಿಷ್ ಇದ್ದರೆ ಈ ರೀತಿ ಮೋಡಗಳ ಚಿತ್ತಾರ ಮೂಡಿಸಬಹುದು.

ಬ್ಲೂ ವಿಥ್ ವೈಟ್ ಶೈನ್
ಇನ್ನು ಜಸ್ಟ್ ಬ್ಲೂ ಬಣ್ಣದ ನೇಲ್ ಪಾಲಿಷ್ ಹಚ್ಚಿ, ಅದರ ಮೇಲೆ ಹೀಗೆ ಬಿಳಿ ಬರ್ಣಣದ ನೇಲ್ ಪಾಲಿಷ್ ಹಚ್ಚಿದರೆ ಸಾಕು, ಆಕರ್ಷಕವಾಗಿ ಕಾಣುವುದು. ತೆಳು ಬಣ್ಣದ ಡ್ರೆಸ್‌ಗೆ ಮ್ಯಾಚಿಂಗ್ ಆಗಿ ಈ ರೀತಿಯ ಡ್ರೆಸ್ಸಿಂಗ್ ಮಾಡಬಹುದು ನೋಡಿ.

ಟ್ರಾನ್ಸ್‌ಫರಂಟ್ ನೇಲ್‌ಪಾಲಿಷ್‌ಗೆ ವಿನ್ಯಾಸ
ಟ್ರಾನ್ಸ್‌ಫರಂಟ್ ನೇಲ್ ಪಾಲಿಷ್ ಇದ್ದರೆ ಅದನ್ನು ಹಚ್ಚಿ ಅದರ ಮೇಲೆ ಬಿಳಿ, ಬ್ಲೂ, ರೆಡ್ ಹೀಗೆ ಯಾವುದೇ ಡಾರ್ಕ್ ಬಣ್ಣದ ನೇಲ್ ಪಾಲಿಷ್‌ನಿಂದ ವಿನ್ಯಾಸಗೊಳಿಸಿ, ಇದು ಕೂಡ ಸಕತ್ ಸ್ಟೈಲಿಷ್ ಆಗಿವೆ.
ಇಲ್ಲಿ ನೀಡಿರುವ ನೇಲ್ ಆರ್ಟ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್ ಗಮನ ಸೆಳೆದ ಮಾನ್ಸೂನ್ ನೇಲ್ ಆರ್ಟ್ ಫ್ಯಾಷನ್‌ಗಳಾಗಿವೆ.



Click it and Unblock the Notifications
