Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
2023: ಮಿಸ್ ಯೂನಿವರ್ಸ್ ಸ್ಪರ್ಧೆ ಕಣದಲ್ಲಿ ಕರ್ನಾಟಕದ ದಿವಿತಾ ರೈ, ಭಾರತಕ್ಕೆ ತರುವರೇ ಆ ಪ್ರತಿಷ್ಠಿತ ಕಿರೀಟ

ಫ್ಯಾಷನ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ 71ನೇ ಮಿಸ್ ಯೂನಿವರ್ಸ್ ಸ್ಪರ್ಧೆ ಜನವರಿ 14ರಂದು ನಡೆಯಲಿದೆ. ಈ ಸ್ಪರ್ಧೆಗೆ ವಿಶ್ವದ ಹಲವು ಕಡೆಯಿಂದ 80 ಗಣ್ಯರು ಭಾಗವಹಿಸಲಿದ್ದಾರೆ.
71ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ನಮ್ಮ ಕರ್ನಾಟಕದ ದಿವಿತಾ ಪ್ರತಿನಿಧಿಸಲಿದ್ದಾರೆ. ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಳ್ಳಲು ಭಾರತ ಸೇರಿ, 86 ಸುಂದರಿಯರು ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ದಿವಿತಾ ರೈ ಗೆದ್ದರೆ ಮಿಸ್ ಯೂನಿವರ್ಸ್ ಆದ ಭಾರತದ ಮೂರನೇಯವರು ಎಂಬ ಹೆಗ್ಗಳಿಕೆಗೆ ದಿವಿತಾರೈ ಪಾತ್ರರಾಗಲಿದ್ದಾರೆ.
2021ರಲ್ಲಿ 21ವರ್ಷಗಳ ಬಳಿಕ ಹರ್ನಾಝ್ ಸಂಧು ಭಾರತಕ್ಕೆ ಮಿಸ್ ಯೂನಿವರ್ಸ್ ಕಿರೀಟ ತಂದರು. ಈ ವರ್ಷ ಮಿಸ್ ಯೂನಿವರ್ಸ್ ಎಂಬ ಆ ಪ್ರತಿಷ್ಠಿತ ಕಿರೀಟ ಭಾರತದ ದಿವಿತಾ ರೈ ಮುಡಿಗೇರಲಿ ಎಂಬುವುದೇ ಭಾರತೀಯರ ಆಶಯ.
ದಿವಿತಾ ರೈ ಕರ್ನಾಟಕದ ಮಂಗಳೂರಿನವರು, ಆದರೆ ಬೆಳೆದಿರುವುದು ಮುಂಬೈಯಲ್ಲಿ. 23 ವರ್ಷ ದಿವಿತಾ ರೈ ಮುಂಬೈಯ ಸರ್ ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್ ವಿದ್ಯಾಭ್ಯಾಸ ಮಾಡಿದ್ದಾರೆ. ವೃತ್ತಿಯಲ್ಲಿ ಆರ್ಕಿಟೆಕ್ಚರ್ ಆಗಿರುವ ಅವರಿಗೆ ಮಾಡೆಲಿಂಗ್ ಕ್ಷೇತ್ರ ತುಂಬಾನೇ ಆಸಕ್ತಿ. ಇವರಿಗೆ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಆಟ ತುಂಬಾನೇ ಇಷ್ಟ. ಪೇಂಟಿಂಗ್, ಸಂಗೀತ ಕೇಳುವುದು, ಓದುವುದು ಇವರ ಹವ್ಯಾಸ.
ಈ ಬಾರಿಯ ಮಿಸ್ ಯೂನಿವರ್ಸ್ ಕಿರೀಟ ಭಾರತದ ಈ ಸುಂದರಿಗೆ ಒಲಿಯುವಂತಾಗಲಿ....ಆಲ್ ದಿ ಬೆಸ್ಟ್ ದಿವಿತಾ ರೈ....
2023ರಲ್ಲಿ ದಿವಿತ ರೈ ಮಿಸ್‌ಯೂನಿವರ್ಸ್ ಕಣದಲ್ಲಿದ್ದು ಅವರ ಬಗ್ಗೆ ಹೆಚ್ಚಿನ ವಿವರಗಳು ನೋಡುವುದಾದರೆ
* 23 ವರ್ಷದ ದಿವಿತಾ ರೈ ಕರ್ನಾಟಕದ ಮೂಲದವರು, 2022, ಆಗಸ್ಟ್ 28ಕ್ಕೆ ಮಿಸ್ ದಿವಾ ಯೂನಿವರ್ಸ್ 2022 ವಿಜೇತರಾಗಿ ಕಿರೀಟ ಮುಡಿದಿದ್ದಾರೆ.
* 2021ರಲ್ಲಿನಡೆದ ಮಿಸ್ ದಿವಾ ಯೂನಿವರ್ಸ್‌ನಲ್ಲೂ ಭಾಗವಹಿಸಿದ್ದರು ಆಗ ಹರ್ನಾಝ್ ಸಂಧು ವಿಜೇತರಾದರೆ ಇವರಿಗೆ ರನ್ನರ್ ಅಪ್ ಸ್ಥಾನ ಸಿಕ್ಕಿತ್ತು.
ದಿವಿತಾ ರೈ ಸಾಮಾಜಿಕ ಕಳಕಳಿ ಹೊಂದಿರುವವರು
2021ರಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಹಣಕಾಸಿನ ತೊಣದರೆ ಅನುಭವಿಸುತ್ತಿದ್ದ ಮಕ್ಕಳಿಗಾಗಿ ಫಂಡ್ ರೈಸ್ ಮಾಡಿ ಆ ಮೂಲಕ ಅವರ ಚಿಕಿತ್ಸೆಗೆ ನೆರವಾಗಿದ್ದರು. ಅಲ್ಲದೆ ಬಾಯಿಯ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಡೆಂಟಲ್ ಕಿಟ್‌ಗಳನ್ನು ವಿತರಿಸಿದ್ದರು. ಗುಣಮಟ್ಟದ ಶಿಕ್ಷಣ ಎಂಬುವುದು ಎಲ್ಲರಿಗೂ ದೊರೆಯುವಂತಾಗಬೇಕು ಎಂಬುವುದು ಇವರ ಬಯಕೆ.
ದಿವಿತಾ ತಮ್ಮ ಬಾಲ್ಯದಲ್ಲಿ 6 ಶಾಲೆಗಳಲ್ಲಿ ಓದಿದ್ದಾರೆ, ಬೇರೆ-ಬೇರೆ ಸ್ಥಳಗಳಲ್ಲಿ ಓದಿರುವುದು ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದೆ. ಆರ್ಥಿಕ ತೊಂದರೆಗಳಿಂದ ಹೊರಬರಲು ತಂದೆ ಪಡುತ್ತಿದ್ದ ಕಷ್ಟಗಳ ಅರಿವು ಅವರಿಗಿದೆ. 'ಜೀವನವನ್ನು ಸ್ವೀಕರಿಸಿ, ಬದಲಾವಣೆಗೆ ಭಯಪಡಬೇಡಿ, ಪ್ರತಿಯೊಂದು ಕ್ಷಣವನ್ನು ಅನುಭವಿಸಿ' ಎಂಬುವುದೇ ಅವರ ಮಾತಾಗಿದೆ.
ದಿವಿತಾ ರೈ ಸುಸ್ಮಿತಾ ಸೇನ್ ನೋಡಿ ತಾನೂ ಮಿಸ್ ಯೂನಿವರ್ಸ್ ಆಗಬೇಕೆಂದು ಬಯಸಿದ್ದರು.
ಮಿಸ್ ಯೂನಿವರ್ಸ್ ಕಿರೀಟ ಧರಿಸಿದ ಭಾರತೀಯರು
ಸುಸ್ಮಿತಾ ಸೇನ್: 1994ರಲ್ಲಿಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಮೊದಲ ಭಾರತೀಯಳು. ಇವರು ಫೆಮಿನಾ 1994ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಫೆಮಿನಾ ಮಿಸ್ ಇಂಡಿಯಾ ಆಗಿ ಆಯ್ಕೆ ಆಗಿದ್ದರು. ಅದಾದ ಬಳಿಕ ಬಾಲಿವುಡ್ ನಟಿಯಾಗಿ ಗಮನ ಸೆಳೆದರು.
ಲಾರಾ ದತ್ತಾ: ಸುಸ್ಮಿತಾ ಸೇನ್ ಮಿಸ್ಯೂನಿವರ್ಸ್ ಆಗಿ 6 ವರ್ಷಗಳಲ್ಲಿ ಭಾರತಕ್ಕೆ ಮತ್ತೆ ಮಿಸ್ ಯೂನಿವರ್ಸ್ ಪದಕ ತಂದುಕೊಟ್ಟವರು ಲಾರಾದತ್ತಾ. 1997ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದರು. ಲಾರಾದತ್ತಾ ಕೂಡ ಬಾಲಿವುಡ್ ನಡಿಯಾದರು.
ಹರ್ನಾಝ್ ಸಂಧು: ಸುಸ್ಮಿತಾ ಸೇನ್, ಲಾರಾದತ್ತಾ ಬಳಿಕ 21 ವರ್ಷಗಳವರೆಗೆ ಮಿಸ್‌ಯೂನಿವರ್ಸ್ ಆಗಿ ಭಾರತ ಯಾವ ಸ್ಪರ್ಧಿಯಾ ಆಯ್ಕೆ ಆಗಿರಲಿಲ್ಲ. 21 ವರ್ಷಗಳ ಬಳಿಕ ಹರ್ನಾಝ್ ಸಂಧು ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದರು.
2021ರ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧಿಯಲ್ಲಿ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕವನ್ನು ಹಿಂದಿಕ್ಕಿ ಭಾರತದ ಸುಂದರಿ ಹರ್ನಾಝ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಮಿಸ್ ಯೂನಿವರ್ಸ್ ಪದಕ ಗೆದ್ದ ಕೆಲವೇ ತಿಂಗಳುಗಳಲ್ಲಿ ಮೈ ತೂಕ ಹೆಚ್ಚಾಗಿ ತುಂಬಾ ಟ್ರೋಲ್‌ಗೆ ಒಳಗಾಗಿದ್ದರು ಹರ್ನಾಝ್ ಸಂಧು.



Click it and Unblock the Notifications




