Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಾಜಲ್ ಅಗರ್ವಾಲ್ ಮದುವೆ: ಮದುಮಗಳ ಕೈ ರಂಗೇರಿಸಿದ ಮದರಂಗಿ
ಹಾಲುಗೆನ್ನೆಯ ಸುಂದರಿ ಕಾಜಲ್ ಅಗರ್ವಾಲ್ ನವ ಜೀವನದ ಹೊಸ್ತಿಲಿನಲ್ಲಿ ನಿಂತಿದ್ದಾರೆ. ಅಕ್ಟೋಬರ್ 30ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಾಜಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೇರ್ ಮಾಡಿದ್ದಾರೆ. ಮದರಂಗಿಯ ರಂಗು ಕೈ ತುಂಬಿಕೊಂಡಿರುವ ಕಾಜಲ್ ಮುಖದಲ್ಲಿ ಮದುಮಗಳ ಕಳೆ ಲಾಸ್ಯವಾಡುತ್ತಿದೆ.
ಇನ್‌ಸ್ಟಾಗ್ರಾಮ್ ಸಕತ್ ಫ್ಯಾಷನ್ ಸ್ಟೇಟ್‌ಮೆಂಟ್ ನೀಡುವ ಕಾಜಲ್ ತಮ್ಮ ಭಿನ್ನವಾದ ಸ್ಟೈಲ್ ಹಾಗೂ ಕ್ಯೂಟ್ ಸ್ಮೈಲ್‌ನಿಂದ ಗಮನ ಸೆಳೆಯುತ್ತಾರೆ. ಬನ್ನಿ ಆಕೆಯ ವಿಶೇಷ ಫೋಟೋಗಳನ್ನು ನೋಡೋಣ:

ಚೂಡಿದಾರ್‌ನಲ್ಲಿ ಮಿಂಚಿದ ಮದುಮಗಳು
ಸಾಮಾನ್ಯವಾಗಿ ಮದು ಮಗಳು ಲೆಹಂಗಾ, ಸೀರೆ ಮುಂತಾದ ಗ್ರ್ಯಾಂಡ್ ಲುಕ್‌ನಲ್ಲಿ ಮಿಂಚಿದರೆ, ಕಾಜಲ್ ತಮ್ಮ ಮೆಹಂದಿ ಶಾಸ್ತ್ರದಲ್ಲಿ ಚೂಡಿದಾರ್ ಧರಿಸಿದ್ದು, ಕಿವಿಗೆ ದೊಡ್ಡ ಕಿವಿಯೋಲೆ ಧರಿಸಿ, ಸಿಂಪಲ್ ಹಾಗೂ ಸುಂದರವಾಗಿ ಕಾಣುತ್ತಿದ್ದಾರೆ.

ಗಮನ ಸೆಳೆದಿದ್ದ ಕುರ್ತಾ ಡ್ರೆಸ್
ವಿಜಯ ದಶಮಿಯಂದು ಕಾಜಲ್ ಧರಿಸಿದ್ದ ಕುರ್ತಾ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದು. ಇದು ಒಂದು ರೀತಿಯ ಘರಾರ ಹಾಗೂ ಕುರ್ತಾ ಲುಕ್‌ನ ಡ್ರೆಸ್ ಆಗಿದ್ದು ಬ್ಲೂ ಕಲರ್ ಡ್ರೆಸ್ಸ್ ಮೇಲೆ ಬ್ಲರ್ ಪೋಲ್ಕಾ ಇದ್ದು ಈ ಡ್ರೆಸ್ ಸಿಂಪಲ್ ಅಂಡ್ ಎಲಿಗಂಟ್ ಆಗಿತ್ತು.

ಭಾವಿ ಪತಿಯ ಜೊತೆ ಕಾಜಲ್
ವಿಜಯ್ ದಶಮಿಯೆಂದು ತನ್ನ ಭಾವಿ ಪತಿಯನ್ನು ಪರಿಚಯಿಸಿದ ಕಾಜಲ್. ಈ ನವ ಜೋಡಿ ಬ್ಲೂ ಕಲರ್ ಕುರ್ತಾ, ಪೈಜಾಮ್ ಲುಕ್‌ನಲ್ಲಿ ಮಿಂಚಿದ್ದಾರೆ.

ಕಾಜಲ್ ಸ್ಟೈಲ್ ಸ್ಟೇಟ್‌ಮೆಂಟ್
ನ್ಯಾಚುರಲ್ ಬ್ಯೂಟಿ ಆಗಿರುವ ಕಾಜಲ್ ಅವರು ಎಲ್ಲಿಯೂ ಓವರ್ ಮೇಕಪ್ ಅಂತ ಮಾಡಿಕೊಳ್ಳುವುದಿಲ್ಲ, ಸದಾ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಾಣುತ್ತಾರೆ. ಈ ಚೆಲುವೆಗೆ ಮಾಡರ್ನ್ ಅಂಡ ಸಾಂಪ್ರದಾಯಿಕ ಎರಡೂ ಲುಕ್ ಸೈ.



Click it and Unblock the Notifications
