Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸಕತ್ ಟ್ರೆಂಡ್ ಆದ ಸಾನಿಯಾ ಮಿರ್ಜಾ ಫ್ಯಾಷನ್‌ಗಳಿವು
ಭಾರತದ ಹೆಮ್ಮೆಯ ಟೆನಿಸ್ ಆಟಗಾರ್ತಿ 20 ವರ್ಷದ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. 2003ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದ ಸಾನಿಯಾ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಆಡಿದ್ದಾರೆ. ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ 3 ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗಳಿಸಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ವಿಶ್ವದ ನಂಬರ್ 1 ಪಟ್ಟದಲ್ಲಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ ಸಾನಿಯಾ ಮಿರ್ಜಾ ಸೋಲಿನ ಕಹಿಯೊಂದಿಗೆ ತಮ್ಮ ವೃತ್ತಿ ಜಿವನಕ್ಕೆ ವಿದಾಯ ಹೇಳಬೇಕಾಗಿ ಬಂದಿರುವುದು ವಿಷಾದದ ಸಂಗತಿಯೇ ಸರಿ.
ಸಾನಿಯಾ ಮಿರ್ಜಾ ಬರೀ ಕ್ರೀಡಾ ಲೋಕದಲ್ಲಿ ಮಾತ್ರವಲ್ಲ ಫ್ಯಾಷನ್ ಲೋಕದಲ್ಲಿಯೂ ಮಿಂಚಿದವರು. ಸಾನಿಯಾ ಅವರು ಮೂಗುತಿ ಸುಂದರಿ ಎಂದೇ ಫೇಮಸ್. ತಮ್ಮ ಸ್ಟೈಲ್‌ಸ್ಟೇಟ್‌ಮೆಂಟ್ ಮೂಲಕ ಸಕತ್ ಟ್ರೆಂಡ್ ಸೃಷ್ಟಿ ಮಾಡುತ್ತಿರುತ್ತಾರೆ, ಇವರ ಡ್ರೆಸ್ಸಿಂಗ್, ಸ್ಟೈಲ್ ತುಂಬಾನೇ ಸದ್ದು ಮಾಡಿದ್ದೆವು, ಈಗಲೂ ಫ್ಯಾಷನ್ ಜಗತ್ತಿನಲ್ಲಿ ತಮ್ಮ ಸ್ಟೈಲ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ.
ಇವರು ತಮ್ಮ ಫ್ಯಾಷನ್ ಕಾರಣದಿಂದ ಅನೇಕ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಸಕತ್ ಸದ್ದು ಮಾಡಿದ ಇವರ ಫ್ಯಾಷನ್ ಬಗ್ಗೆ ನೋಡುವುದಾದರೆ...

ತುಂಬಾ ಚರ್ಚೆಗೆ ಕಾರಣವಾಗಿದ್ದ ಶಾರ್ಟ್ ಸ್ಕರ್ಟ್
ಇವರು ಟೆನಿಸ್ ಆಡುವಾಗ ಶಾರ್ಟ್ ಸ್ಕರ್ಟ್ ಧರಿಸಿ ಆಡುತ್ತಿದ್ದರು. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿರುವ ಸಾನಿಯಾ ಈ ರೀತಿಯ ಉಡುಗೆ ತೊಡುವುದು ಪಟ್ಟಭದ್ರ ಹಿತಾಸಕ್ತಿಗಳಿಗೆ ಸರಿಕಂಡಿರಲಿಲ್ಲ, ಈ ಕಾರಣಕ್ಕೆ ವಿವಾದ ಮಾಡಿದ್ದರು. ಆದರೆ ಸಾನಿಯಾ ಆ ಹೆದರಿಕೆಗೆ ಬಗ್ಗಲಿಲ್ಲ, ಅವರು ತಮ್ಮ ಆಟಕ್ಕೆ ಅನುಕೂಲಕರವಾಗುವ ಟಬಟ್ಎ ಧರಿಸುತ್ತಿದ್ದರು. ಅವರು ತಮ್ಮ ಡ್ರೆಸ್ಸಿಂಗ್‌ನಲ್ಲಿ ಸಕತ್ ಗ್ಲಾಮರಸ್ ಆಗಿ ಕಾಣುತ್ತಿದ್ದರಿಂದ ಮಾಡಲಿಂಗ್ ಜಗತ್ತಿನ ಗಮನ ಸೆಳೆದಿದ್ದರು.

ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಿಂಚಿರುವ ಸಾನಿಯಾ
ನೋಡಲು ಆಕರ್ಷಕವಾಗಿರುವ ಕಾರಣಕ್ಕೆ ಸಾನಿಯಾ ಮಿರ್ಜಾ ಅನೇಕ ಪ್ರಸಿದ್ಧ ಬ್ರ್ಯಾಂಡ್‌ಗಳ ಬ್ರ್ಯಾಂಡ್ ಅಂಬಾಸಿಡರ್ ಕೂಡ ಹೌದು. ಕ್ಯಾಡ್‌ಬರ್ರಿ ಬೋರ್ನ್‌ವಿಟಾ, ಅಡಿಡಾಸ್, ಸೆಂಚುರಿ ಮ್ಯಾಟ್ರಸ್ ಹೀಗೆ ಹಲವಾರು ಬ್ರ್ಯಾಂಡ್‌ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದರಿಂದ ಈ ಮೂಲಕ ಕೂಡ ಅವರಿಗೆ ಹಣ ಬರುತ್ತಿದೆ.

ಮೂಗುತಿ ಟ್ರೆಂಟ್
ಯಾವಾಗ ಸಾನಿಯಾ ರಿಂಗ್ ಮೂಗುತಿ ಬಳಸಿದರೂ ಅದು ಸಕತ್ ಟ್ರೆಂಡ್ ಆಗಿತ್ತು. ಯಾವ ಹೆಣ್ಮಕ್ಕಳನ್ನು ನೋಡಿದರೂ ಸಾನಿಯಾ ರೀತಿಯ ಮೂಗುತಿಯಲ್ಲಿ ಕಂಗೊಳಿಸುತ್ತಿದ್ದರು. ಇತ್ತೀಚೆಗೆ ಸಾನಿಯೂ ರಿಂಗ್ ತೆಗೆದು ಸ್ಟಡ್ ಹಾಕಿದ್ದಾರೆ, ಆದರೆ ಅವರಿಗೆ ರಿಂಗ್ ಮೂಗುತಿಯೇ ಸೂಪರ್ ಅಲ್ವಾ?

ಹೆರಿಗೆಯ ಬಳಿಕ ಗಮನ ಸೆಳೆದ ಸಾನಿಯಾ ಮಿರ್ಜಾ
ಮಗ ಹುಟ್ಟಿ ಸ್ವಲ್ಪ ತಿಂಗಲಾದ ಮೇಲೆ ವರ್ಕೌಟ್ ಮಾಡಿ ಮತ್ತೆ ಮೈಕಟ್ಟನ್ನು ಫಿಟ್ ಮಾಡಿಕೊಂಡು ಸಾನಿಯಾ ಟೆನಿಸ್ ಲೋಕಕ್ಕೆ ಮರಳುವ ಮೂಲಕ ಗಮನ ಸೆಳೆದಿದ್ದರು.

ಫ್ಯಾಷನ್ ಲುಕ್ ಮೂಲಕ ಆಗಾಗ ಗಮನ ಸೆಳೆಯುವ ಸಾನಿಯಾ ಮಿರ್ಜಾ
ಇನ್‌ಸ್ಟಾಗ್ರಾಮ್‌ನಲ್ಲಿ 11 ಮಿಲಿಯನ್‌ಗಿಂತಲೂ ಅದಿಕ ಫಾಲೋವರ್ಸ್ ಹೊಂದಿರುವ ಸಾನಿಯಾ ಮಿರ್ಜಾ ತಮ್ಮ ಫ್ಯಾಷನ್ ಲುಕ್ ಮೂಲಕ ಗಮನ ಸೆಳೆಯುತ್ತಾರೆ. ಫ್ಯಾಷನ್ ಹಾಗೂ ಕಂಫರ್ಟಬಲ್ ಲುಕ್ ಮೂಲಕ ಸಾನಿಯಾ ತುಂಬಾನೇ ಗಮನ ಸೆಳೆದಿದ್ದಾರೆ. ಸೆಲ್ವಾರ್, ಸೂಟ್‌ನಲ್ಲೂ ಸಕತ್ ಸ್ಟೈಲಿಷ್ ಆಗಿ ಕಾಣಬಹುದು ಎಂಬುವುದೇ ಸಾನಿಯಾ ಸ್ಟೈಲ್‌ಸ್ಟೇಟ್ಮೆಂಟ್.



Click it and Unblock the Notifications
