Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಸ್ಕ್ರೀನ್ ಅವಾರ್ಡ್ಸ್‌ರಲ್ಲಿ ಶ್ರುತಿ ಹಾಸನ್ ಮತ್ತು ವಾಣಿ ಕಪೂರ್
2014 ನೇ ಸ್ಕ್ರೀನ್ ಅವಾರ್ಡ್ಸ್‌ನಲ್ಲಿ, ಗೌರವ್ ಗುಪ್ತಾ ವಿನ್ಯಾಸದ ಅತ್ಯಂತ ನವೀನ ಮಾದರಿಗಳಲ್ಲೊಂದಾದ ಕೌಟರ್ಸ್ ಅನ್ನು ಧರಿಸಿ ಯುವ ಮತ್ತು ಉತ್ಸಾಹಭರಿತ ಸುಂದರಿ ಶ್ರುತಿ ಹಾಸನ್ ರೆಡ್ ಕಾರ್ಪೆಟ್ ಮೇಲೆ ನಡೆದರು. ಅವರ ಸುಂದರ ಸ್ಟೈಲಿಶ್ ನೋಟಗಳು ಎಲ್ಲರ ಮೇಲೂ ಜಾದೂವನ್ನೇ ಮಾಡಿದ್ದವು. ಅವರು ಧರಿಸಿದ ಸುಂದರ ಕೌಟರ್ಸ್ ಅವರನ್ನು ಇನ್ನಷ್ಟು ಸುಂದರಗೊಳಿಸಿತ್ತು.
ಗೌರವ್ ಗುಪ್ತಾ ವಿನ್ಯಾಸದ ಕೌಟರ್ಸ್ ಉಡುಗೆಯಲ್ಲಿ ಶ್ರುತಿ ಕಡೆದಿಟ್ಟ ಶಿಲ್ಪದಂತೆ ಕಾಣುತ್ತಿದ್ದರು. ಅವರ ಬಳುಕುವ ಬಳ್ಳಿಯಂತಿರುವ ದೇಹ ಈ ಉಡುಗೆಯಲ್ಲಿ ಮನಮೋಹಕವಾಗಿತ್ತು. ಇಂತಹ ದಿರಿಸುಗಳನ್ನು ಶ್ರುತಿ ಧರಿಸುವುದು ಹೊಸತೇನಲ್ಲ. ಈ ಮೊದಲೂ ಧೈರ್ಯವಂತೆ ಬೋಲ್ಡ್ ಸುಂದರಿ ಶ್ರುತಿ ವಿಧ ವಿಧದ ಉಡುಗೆಗಳಲ್ಲಿ ಮಿಂಚಿದ್ದಾರೆ.
ಈ ಸಮಯದಲ್ಲಿ ಅಂದರೆ 2014 ಸ್ಕ್ರೀನ್ ಅವಾರ್ಡ್ಸ್‌ನಲ್ಲಿ ಶ್ರುತಿ ಇನ್ನಷ್ಟು ಮೋಹಕವಾಗಿದ್ದಾರೆ. ಗೌರವ್ ಗುಪ್ತಾ ವಿನ್ಯಾಸದ ಗೌನ್ ಸಂಪೂರ್ಣವಾಗಿ ಸುಂದರವಾಗಿದೆ. ಗೌನ್‌ನ ಬಣ್ಣವು ಅನನ್ಯವಾಗಿದ್ದು ಶ್ರುತಿಯನ್ನು ಇನ್ನಷ್ಟು ಸುಂದರವಾಗಿಸಿದೆ. ಅವರ ಉಡುಗೆಯಲ್ಲಿರುವ ಪಾರದರ್ಶಕ ಲೇಸ್ ಮೋಹಕವಾಗಿದ್ದು ಗೌನ್‌ಗೆ ಸುಂದತೆಯನ್ನು ನೀಡಿದೆ.
ಉಡುಗೆಗೆ ಸಮನಾದ ಕಪ್ಪು ಫ್ಲೋರಲ್ ಕಿವಿಯಾಭರಣಗಳನ್ನು ಶ್ರುತಿ ಧರಿಸಿದ್ದು ಅವರ ತುಟಿಯ ಕೆಂಪು ರಂಗು ಢಾಳವಾಗಿ ಕಂಡುಬರುತ್ತಿದೆ. ಈ ಸುಂದರ ಉಡುಗೆಗೆ ಕಪ್ಪು ಚುಕ್ಕೆ ಎಂದರೆ ಬನ್ ರೀತಿಯಲ್ಲಿ ತುರುಬು ಕಟ್ಟಿದ ಕೇಶವಿನ್ಯಾಸವು ಉಡುಗೆಗೆ ಅಷ್ಟಾಗಿ ಚೆನ್ನಾಗಿ ಹೊಂದಿಕೆಯಾಗುತ್ತಿಲ್ಲ ಎಂಬುದಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರೆಡ್ ಕಾರ್ಪೆಟ್‌ನಲ್ಲಿ, ಮಂತ್ರಮುಗ್ಧಗೊಳಿಸಿದ ಸೋನಾಕ್ಷಿ
ಸ್ಕ್ರೀನ್ ಅವಾರ್ಡ್ಸ್‌ನಲ್ಲಿ, ಅತ್ಯಧ್ಭುತ ಗೌನ್ ಧರಿಸಿ ಇನ್ನಷ್ಟು ಮೋಹಕವಾಗಿ ಕಂಡುಬಂದವರು ವಾಣಿ ಕಪೂರ್. ಇಲ್ಲಿ ನಾವು ಶ್ರುತಿ ಹಾಸನ್ ಮತ್ತು ವಾಣಿ ಕಪೂರ್‌ರ ಕೆಲವೊಂದು ಸುಂದರ ಭಂಗಿಗಳನ್ನು ನೀಡುತ್ತಿದ್ದೇವೆ

ಶ್ರುತಿ ಹಾಸನ್
ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಗೌರವ್ ಗುಪ್ತಾ ಕೌಟರ್ಸ್‌ಗಿಂತಲೂ ಸುಂದರಿ ಶ್ರುತಿ ಹಾಸನ್ ಇನ್ನಷ್ಟು ಸುಂದರಿಯಾಗಿದ್ದಾರೆ.

ಶ್ರುತಿ ಹಾಸನ್ ಪರಿಪೂರ್ಣತೆ
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ನಟಿಯು ಸಂಪೂರ್ಣವಾಗಿ ಪರಿಪೂರ್ಣತೆಯನ್ನು ಹೊಂದಿರುವ ಡೇರಿಂಗ್ ಉಡುಗೆಯಲ್ಲಿ ಕಂಡುಬಂದಿದ್ದಾರೆ.

ವಾಣಿ ಕಪೂರ್
ಫೇರಿ ಟೇಲ್ ಪುಸ್ತಕದಲ್ಲಿ ಬರುವ ರಾಜಕುಮಾರಿಯಂತೆ ಸ್ಟೈಲಿಶ್ ವಾಣಿ ಕಪೂರ್ ಕಂಡುಬರುತ್ತಿದ್ದಾರೆ ನಿಮಗೂ ಹಾಗೆ ಅನ್ನಿಸಿಲ್ಲವೇ?

ವಾಣಿ ಕಪೂರ್ ಸಿಲ್ವರ್ ಉಡುಗೆಯಲ್ಲಿ
ಸ್ಕ್ರೀನ್ ಅವಾರ್ಡ್ಸ್ 2014 ಕ್ಕೆ ಧರಿಸಲು ಉತ್ತಮವಾದ ಬಣ್ಣಗಳನ್ನೇ ವಾಣಿ ಆಯ್ಕೆಮಾಡಿಕೊಂಡಿದ್ದಾರೆ. ಈ ಝಗಮಗಿಸುವ ಗೌನ್ ಅನ್ನು ಯಾವುದಕ್ಕೂ ಸೋಲಿಸಲು ಸಾಧ್ಯವಿಲ್ಲ.

ನಟಿಯರಿಬ್ಬರ ಸೊಬಗು
ನಿಮ್ಮ ಪ್ರಕಾರ, ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಯಾರು ಅತ್ಯುತ್ತಮವಾಗಿ ಕಂಡುಬರುತ್ತಿದ್ದಾರೆ?



Click it and Unblock the Notifications
