Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ರೆಡ್ ಕಾರ್ಪೆಟ್‌ನಲ್ಲಿ, ಮಂತ್ರಮುಗ್ಧಗೊಳಿಸಿದ ಸೋನಾಕ್ಷಿ
ಹೊಸ ವರ್ಷದ ಮೊದಲ ತಿಂಗಳಲ್ಲೇ ಪ್ರಶಸ್ತಿ ಪುರಸ್ಕಾರ ಸೀಸನ್ ಆರಂಭಗೊಂಡಿದೆ! ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕುರಿತು ಹೆಚ್ಚು ಮಾತನಾಡಿದ ನಂತರ ಮುಂದಿನ ಪ್ರಶಸ್ತಿ ಪ್ರಧಾನ ಸಮಾರಂಭ ಇಂಡಿಯನ್ ಸ್ಕ್ರೀನ್ ಅವಾರ್ಡ್‌ನದ್ದಾಗಿದೆ.
20 ನೇ ವಾರ್ಷಿಕ ಸ್ಕ್ರೀನ್ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್ ಅನ್ನು ಹಾಸಲಾಗಿದೆ. ಅತ್ಯದ್ಭುತ ವಿನ್ಯಾಸದ ಉಡುಗೆಗಳಲ್ಲಿ ಸೆಲೆಬ್ರಿಟಿಗಳು ಸ್ಕ್ರೀನ್ ಅವಾರ್ಡ್ಸ್‌ನ ರೆಡ್ ಕಾರ್ಪೆಟ್‌ನತ್ತ ಮುನ್ನುಗ್ಗುತ್ತಿದ್ದಾರೆ. ಕಾಜೋಲ್‌ನಿಂದ ಹಿಡಿದು ಮನಮೋಹಕಗೊಳಿಸುವ ಭಾರತೀಯ ಸುಂದರಿ ಸೋನಾಕ್ಷಿ ಸಿನ್ಹಾವರೆಗೆ ಪ್ರತಿಯೊಬ್ಬರೂ ಬಾಲಿವುಡ್‌ನ ಗೌರವಯುತ ಅವಾರ್ಡ್‌ನಲ್ಲಿ ರಾತ್ರಿ ತಮ್ಮ ಪ್ರಸ್ತುತಿಯನ್ನು ಉಂಟುಮಾಡಲು ಬಯಸುತ್ತಿದ್ದಾರೆ. ಅದ್ಭುತ ಸುಂದರಿ ಸೋನಾಕ್ಷಿಯ ಸುಂದರ ಭಂಗಿಗಳನ್ನು ಇಲ್ಲಿ ನಾವು ನಿಮಗಾಗಿ ಸೆರೆಹಿಡಿದಿದ್ದೇವೆ.

ನಟಿಯು ತಮ್ಮ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್‌ಗಾಗಿ, ಮಂತ್ರಮುಗ್ಧಗೊಳಿಸುವ ಸೆಕ್ಸಿ ನೋಟದಲ್ಲಿ ಕಂಡುಬರಲು ಸೋನಾಕ್ಷಿ ನಿರ್ಧರಿಸಿದ್ದಾರೆ ಎಂದರೆ ತಪ್ಪಾಗಲಾರದು. ವಿನ್ಯಾಸಕಾರ ಅಮಿತ್ ಜಿಟಿ ವಿನ್ಯಾಸದ ಪೀಚ್ ಕಲರ್‌ನ ಮಿನುಗು ಬೊಟ್ಟುಳ್ಳ ಗೌನ್‌ನಲ್ಲಿ ಸೋನಾಕ್ಷಿ ಮನಮೋಹನಾಂಗಿಯಾಗಿದ್ದಾರೆ.
ನಿಮಗೆ ಈ ಲೇಖನ ಕೂಡ ಇಷ್ಟವಾಗಬಹುದು: ಸ್ಕ್ರೀನ್ ಅವಾರ್ಡ್ಸ್ 2014
ಈ ಗೌನ್ ಸಿಲ್ವರ್ ಬಣ್ಣದಲ್ಲಿನ ಮಿನುಗು ಬೊಟ್ಟುಗಳನ್ನು ಹೊಂದಿದ್ದು ಪೀಚ್ ಬಣ್ಣದಲ್ಲಿ ವಿನ್ಯಾಸಕಾರ ಅಮಿತ್ ಜಿಟಿಯ ಕಲಾಗಾರಿಕೆಯನ್ನು ಎತ್ತಿ ಹಿಡಿದಿದೆ. ಸ್ಕ್ರೀನ್ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್‌ನಲ್ಲಿ ಸೋನಾಕ್ಷಿ ಸಿನ್ಹಾ ಧರಿಸಿದ ಗೌನ್ ವೃತ್ತಾಕಾರದ ನೆಕ್‌ಲೈನ್ ಅನ್ನು ಹೊಂದಿದೆ. ಗೌನ್‌ನ ಕೆಳಭಾಗದವರೆಗೂ ಝಗಮಗಿಸುವ ಪರದೆಯಂತಹ ಬಟ್ಟೆಯನ್ನು ಆವರಿಸಿಕೊಂಡಿದೆ.
ಮುಕ್ಕಾಲು ಭಾಗ ಸ್ಲೀವ್‌ಗಳನ್ನೇ ಹೊಂದಿರುವ ಅಮಿತ್ ಜಿಟಿಯ ಗೌನ್ ಭಾರೀಯಾಗಿದ್ದು ಮಿನುಗು ಬೊಟ್ಟುಗಳ ಕುಸುರಿ ಕೆಲಸವನ್ನು ಹೊಂದಿದೆ. ಮನಮೋಹಕಗೊಳಿಸುವ ಗೌನ್‌ನಲ್ಲಿ ನಮಗೆ ಹೆಚ್ಚು ಅನನ್ಯವಾಗಿ ಕಂಡುಬಂದದ್ದು ಸಣ್ಣ ಮೇಲಂಗಿಯಾಗಿದೆ.
ಸೋನಾಕ್ಷಿಯ ಗೌನ್ ಹಿಂಭಾಗದಲ್ಲಿ ನೆಟ್ ಮೇಲಂಗಿಯನ್ನು ಹೊಂದಿದ್ದು ಇದೊಂದು ಸೀರೆಯ ಗೌನ್ ಎಂಬ ಭ್ರಮೆಯನ್ನು ಉಂಟುಮಾಡುತ್ತದೆ. ಸಮಕಾಲೀನ ಶೈಲಿಯನ್ನು ಪ್ರೀತಿಸಿ. ಸೋನಾಕ್ಷಿ ಸಿನ್ಹಾರ ಬಳುಕುವ ದೇಹಕ್ಕೆ ಗೌನ್ ಸುಂದರವಾಗಿ ಕಂಡುಬರುತ್ತಿದೆ.
ಗೌನ್ ಕೆಳಭಾಗದಲ್ಲಿ ಫ್ರಿಲ್ ಅನ್ನು ಹೊಂದಿದ್ದು, ಇದಕ್ಕೆ ಸರಿ ಹೊಂದುವಂತೆ ಸೋನಾಕ್ಷಿ ಡ್ಯೂನ್ ಶೂವನ್ನು ಹಾಕಿದ್ದಾರೆ. ಚೌಕಾಕಾರದ ಕಲ್ಲು ಕೂರಿಸಿರುವ ಮೆಟಲ್ ಕಿವಿಯಾಭರಣವನ್ನು ಸೋನಾಕ್ಷಿ ಧರಿಸಿದ್ದಾರೆ. ಗುಲಾಬಿ ಬಣ್ಣದ ತುಟಿರಂಗನ್ನು ಇಳಿಬಿಟ್ಟಂತಹ ಗುಂಗುರು ಸ್ಟೈಲ್‌ನ ಕೇಶವಿನ್ಯಾಸವನ್ನು ಮಾಡಿರುವ ಸೋನಾಕ್ಷಿ ರೆಡ್ ಕಾರ್ಪೆಟ್‌ಗೆ ತಮ್ಮ ಅಲಂಕಾರವನ್ನು ಚೊಕ್ಕವಾಗಿ ಪೂರ್ಣಗೊಳಿಸಿದ್ದಾರೆ. ಇವರನ್ನು ಸ್ಟೈಲಿಶ್ ಮಾಡಿದ್ದು ಸಾಕ್ಷಿ ಮೆಹ್ರಾ.
ಸ್ಕ್ರೀನ್ ಅವಾರ್ಡ್ಸ್ 2014 ರಲ್ಲಿ ಸೋನಾಕ್ಷಿ ಅತ್ಯದ್ಭುತವಾಗಿ ಕಂಡುಬಂದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಇತರ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್‌ಗಾಗಿ ಯಾವ ಅಲಂಕಾರವನ್ನು ಉಡುಗೆಯನ್ನು ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಿ.



Click it and Unblock the Notifications
