Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೂದಲು ಉದುರುವಿಕೆಗೆ ಈ ನೆತ್ತಿ ಮಸಾಜ್ ಮದ್ದು..! ಈ ಯುವತಿಯೇ ಸಾಕ್ಷಿ..!
ಯುವಜನತೆ ಇತ್ತೀಚಿಗೆ ಎದುರಿಸುತ್ತಿರುವ ಸಮಸ್ಯೆಯಲ್ಲಿ ಕೂದಲು ಉದುರುವುದು ಸಹ ಒಂದು. ಇಂದಿನ ಪರಿಸರದಲ್ಲಿ, ಆಹಾರ ಕ್ರಮದಲ್ಲಿ ತಲೆ ಕೂದಲು ಉದುರುವುದು ಹೆಚ್ಚುತ್ತಲೇ ಇದೆ. ಸಣ್ಣ ವಯಸ್ಸಿನಲ್ಲೇ ನಾವು ಕೂದಲು ಉದುರಿ ಬೋಳಾಗುವುದು ತಲೆನೋವಿಗೆ ಕಾರಣವಾಗಿದೆ.
ಈ ರೀತಿ ತಲೆ ಕೂದಲು ಉದುರುವುದಕ್ಕೆ ಪರಿಹಾರವಾಗಿ ಜನರು ಹತ್ತಾರು ಬಗೆಯ ಚಿಕಿತ್ಸೆ ಮಾಡುತ್ತಿರುತ್ತಾರೆ. ಮಾರುಕಟ್ಟೆಯಲ್ಲಿ ನೂರಾರು ವಿಧದ ಔಷಧಿಗಳು ಸಹ ಲಭ್ಯವಿದೆ. ಇಂದು ಕೂದಲು ಆರೈಕೆ ಮತ್ತು ಚಿಕಿತ್ಸೆಗೆಂದೇ ದೊಡ್ಡ ದೊಡ್ಡ ಆಸ್ಪತ್ರೆಗಳು ಸೇರಿದಂತೆ ಚಿಕಿತ್ಸಾ ಕೇಂದ್ರಗಳು, ಆಯುರ್ವೇದ ಚಿಕಿತ್ಸೆ ಕೇಂದ್ರಗಳು ಸಹ ತಲೆ ಎತ್ತಿವೆ.

ಈಗ ಇಲ್ಲೊಬ್ಬ ಯುವತಿ ಚಿಕ್ಕ ವಯಸ್ಸಿನಲ್ಲೇ ಕೂದಲು ಕಳೆದುಕೊಂಡು ಈಗ ಮತ್ತೆ ತಲೆ ತುಂಬಾ ಕೂದಲು ಪಡೆದಿದ್ದಾಳೆ. ಹಾಗಾದ್ರೆ ಇದು ಸಾಧ್ಯವಾಗಿದ್ದು ಹೇಗೆ? ಯಾವ ಚಿಕಿತ್ಸೆ ಮೂಲಕ ಕೂದಲು ಮತ್ತೆ ಬರುವಂತೆ ಮಾಡಲಾಗಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಯುವತಿಯೊಬ್ಬರು ಕಳೆದುಹೋದ ಕೂದಲನ್ನು ಪುನರುತ್ಪಾದಿಸಲು ಆಯುರ್ವೇದ ನೆತ್ತಿಯ ಮಸಾಜ್‌ಗಳಂತಹ ಸಾಂಪ್ರದಾಯಿಕ ವಿಧಾನ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ಅವರು 2019 ರಲ್ಲಿ ತನ್ನ ತಲೆಯ ಅರ್ಧ ಕೂದಲು ಕಳೆದುಕೊಂಡಿದ್ದರಂತೆ, ಜೊತೆಗೆ ಮಧ್ಯ ತಲೆಯಲ್ಲಿ ಬೋಳು ಆವರಿಸಿತ್ತಂತೆ. ಆದರೆ ಈಗ ಮತ್ತೆ ತಲೆಯ ತುಂಬಾ ಕೂದಲು ಪಡೆದಿದ್ದಾರೆ.
ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಭಾರತೀಯ-ಅಮೆರಿಕನ್ ಸೀರತ್ ಸೈನಿ ಅವರು ತಮ್ಮ ಕೂದಲು ಬೆಳೆಸಲು ತೆಗೆದುಕೊಂಡ ಚಿಕಿತ್ಸೆ ಕುರಿತು ವಿವರಿಸಿದ್ದಾರೆ.
2019 ರಲ್ಲಿ, ತನ್ನ ಅರ್ಧದಷ್ಟು ಕೂದಲನ್ನು ಕಳೆದುಕೊಂಡ ನಂತರ, ಅವಳು ತನ್ನ ಕೂದಲನ್ನು ಮರಳಿ ಪಡೆಯಲು ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಲು ನಿರ್ಧರಿಸಿದಳು. ಸುಮಾರು 12 ಇಂಚಿನಷ್ಟು ಜಾಗ ಸಂಪೂರ್ಣ ಖಾಲಿಯಾಗಲು ಆರಂಭಿಸಿದಾಗ ಆಕೆ ಆಯುರ್ವೇದದಲ್ಲಿ ಚಿಕಿತ್ಸೆ ಹುಡುಕಾಟಕ್ಕೆ ನಿಂತಳು.
ಹೀಗಾಗಿ ಒಂದಿಷ್ಟು ನಿಯಮ ಹಾಕಿಕೊಂಡಿ ತಲೆ ಕೂದಲು ಉಳಿಸುವ ಪ್ರತಿಜ್ಞೆ ಮಾಡಿದಳು. ಆಕ ತಲೆ ಸ್ನಾನಕ್ಕೂ ಮುನ್ನ ನಿರ್ದಿಷ್ಟ ಎಣ್ಣೆ ಬಳಸುವಂತೆ ಸೂಚಿಸಿದ್ದಾಳೆ. ಆಕೆಯ ಆದ್ಯತೆಯ ಮಿಶ್ರಣವು ರೋಸ್ಮರಿ ಎಣ್ಣೆ, ಕ್ಯಾಸ್ಟರ್ ಆಯಿಲ್, ಭೃಂಗರಾಜ್ ಮತ್ತು ಈರುಳ್ಳಿಯನ್ನು ಒಳಗೊಂಡಿದೆ. ಅವರು 15 ನಿಮಿಷಗಳ ನೆತ್ತಿಯ ಮಸಾಜ್ ಅನ್ನು ಮಾಡಬೇಕಂತೆ. ಕೊನೆಯ 5 ನಿಮಿಷಗಳ ಕಾಲ, ನೆತ್ತಿಗೆ ರಕ್ತದ ಹರಿವನ್ನು ಉತ್ತೇಜಿಸಲು ನಿಮ್ಮ ಕೂದಲನ್ನು ತಲೆಕೆಳಗಾಗಿ ತಿರುಗಿಸುವಂತೆ ಆಕೆ ಹೇಳುತ್ತಾಳೆ.
ಎಣ್ಣೆಯನ್ನು ಬಿಸಿಮಾಡಿ ಅಥವಾ ಎಣ್ಣೆ ಹಚ್ಚಿನದ ಬಳಿಕ ತಲೆಗೆ ಕ್ಯಾಪ್ ಹಾಕಿಕೊಳ್ಳಬೇಕಂತೆ. ಇದರಿಂದ ನೆತ್ತಿ ಮೇಲಿನ ರಂದ್ರಗಳು ತೆರೆದುಕೊಳ್ಳುತ್ತವೆ. ಜೊತೆಗೆ ಕೂದಲನ್ನು ಬಿಗಿದು ಕಟ್ಟಬಾರದಂತೆ, ಯಾವಾಗಲು ಕೂದಲು ಬಿಚ್ಚಿಕೊಂಡಂತೆ ಇರಬೇಕು, ಇದರಿಂದ ನೆತ್ತಿಗೆ ಆಮ್ಲಜನಕ ಸಿಗುವಂತಾಗಬೇಕು. ಮತ್ತು ಮಲಗುವಾಗ ತಲೆಯ ಕೆಳಗೆ ಮೃದುವಾದ ದಿಂಬು ಅಥವಾ ಬಟ್ಟೆ ಹಾಕಿಕೊಳ್ಳಬೇಕಂತೆ, ಈ ವೇಳೆ ಘರ್ಷಣೆಗೆ ಒಳಗಾಗುವ ಕೂದಲು ಉದುರುವ ಸಾಧ್ಯತೆ ಹೆಚ್ಚಾಗುತ್ತದೆಯಂತೆ.
2019 ರಲ್ಲಿ ಕೂದಲು ಉದುರಲು ಆರಂಭಗೊಂಡು 2022ರಲ್ಲಿ ಉನ್ನತ ಮಟ್ಟ ತಲುಪಿತ್ತಂತೆ. ಆದರೆ ಈ ರೀತಿ ತೈಲ ಮಸಾಜ್ ಹಾಗೂ ಕೆಲವೇ ಕೆಲವು ಮುನ್ನೆಚ್ಚರಿಕೆಗಳು 2 ವರ್ಷದಲ್ಲಿ ಕೂದಲು ಪುನಃ ಬೆಳೆಯಲು ಸಹಾಯವಾಯಿತು ಎಂದು ಆಕೆ ಹೇಳಿಕೊಂಡಿದ್ದಾಳೆ.
ಅಲ್ಲದೆ ನಿರಂತರ ಕೂದಲು ಉದುರುವಿಕೆಗೆ ಒಳಗಾದರೆ ವೈದ್ಯರನ್ನು ಸಂಪರ್ಕಿಸಿ ಅಂತಲೂ ಅವರು ಹೇಳಿದ್ದಾರೆ. ಅವರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಒಂದಿಷ್ಟು ಮಂದಿಗೆ ಉಪಯೋಗವಾಗಲಿದೆ.



Click it and Unblock the Notifications
