Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಬೇಸಿಗೆಯಲ್ಲಿ ಸನ್‌ಸ್ಕ್ರೀನ್ ಸರಿಯಾಗಿ ಬಳಸುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ..!
ಬೇಸಿಗೆಯ ಸಮಯ ಆರಂಭಗೊಂಡಿರುವ ನಡುವೆ ಸೂರ್ಯನ ಕಿರಣಗಳಿಂದ ತಮ್ಮ ತ್ವಚೆಯನ್ನು ರಕ್ಷಿಸುವುದು ಬಹಳ ಉತ್ತಮ. ಏಕೆಂದತೆ ಈ ಸಮಯದಲ್ಲಿ ನೀವು ಮನೆಯಿಂದ ಹೊರ ಬಂದರೆ ಸಾಕು ತ್ವಚೆಯ ಕುರಿತು ಕಾಳಜಿ ವಹಿಸುವುದು ಬಹಳ ಮುಖ್ಯ. ಏಕೆಂದರೆ ಬೇಸಿಗೆಯ ಸಮಯದಲ್ಲಿ ಸೂರ್ಯನ ಕಿರಣಗಳು ಬಹಳ ಅಪಾಯಕಾರಿ ಮಟ್ಟದಲ್ಲಿ ಹಾನಿ ಮಾಡಬಹುದು. ಹೀಗಾಗಿ ನಿಮ್ಮ ತ್ವಚೆಗೆ ಹಾನಿಯಾಗುವ ಸಾಧ್ಯತೆ ಕೂಡ ಬಹಳ ಹೆಚ್ಚು. ಹೀಗಾಗಿ ಬೇಸಿಗೆಯಲ್ಲಿ ಸನ್ಸ್‌ಕ್ರೀನ್ ಬಳಕೆ ಮಾಡುವುದು ಬಹಳ ಉತ್ತಮ.
ಈಗಂತು ಮಾರುಕಟ್ಟೆಯಲ್ಲಿ ಹಲವು ವಿಧದ, ಹಲವು ದರದಲ್ಲಿ ನಾವು ಸನ್ಸ್‌ಸ್ಕ್ರೀನ್ ನೋಡಬಹುದು. ಈಗ ನೀವು ಪ್ರತಿದಿನ ಸನ್‌ಸ್ಕ್ರೀನ್ ಧರಿಸುವುದು ಎಷ್ಟು ಮುಖ್ಯ ಎಂದು ತಿಳಿದಿರಬೇಕು. ಸನ್‌ಸ್ಕ್ರೀನ್ ನಿಮ್ಮ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದಲ್ಲದೆ, ಬಿಸಿಲಿನ ಬೇಗೆಯ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಸನ್‌ಸ್ಕ್ರೀನ್ ಬಳಸಿದರೆ ತ್ವಚೆಗೆ ಸೂರ್ಯನ ಕಿರಣದಿಂದ ಆಗುವ ಹಾನಿ ತಡೆಯುವುದು ಮಾತ್ರವಲ್ಲ. ಚರ್ಮ ಸುಕ್ಕಾಗುವುದು, ಕ್ಯಾನ್ಸರ್ ಅಪಾಯ ತಡೆಯುತ್ತದೆ. ಯುವಿ ಕಿರಣಗಳಿಂದ ಉಂಟಾಗುವ ಚರ್ಮದ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸನ್‌ಸ್ಕ್ರೀನ್ ಬಳಕೆ ಉಪಯುಕ್ತ. ಆದ್ರೆ ಇಂತಹ ಕೆಲವು ಪ್ರಯೋಜನವನ್ನು ನೀವು ಕೂಡ ಪಡೆಯಬೇಕಾದರೆ ಸನ್‌ಸ್ಕ್ರೀನ್ ಅನ್ನು ಸರಿಯಾಗಿ ಪರಿಣಾಮಕಾರಿಯಾಗಿ ಬಳಸುವುದನ್ನು ತಿಳಿದಿರಬೇಕು. ಹಾಗಾದ್ರೆ ಬೇಸಿಗೆಯಲ್ಲಿ ಯಾವ ರೀತಿ ಸನ್‌ಸ್ಕ್ರೀನ್ ಬಳಸಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಎಸ್‌ಪಿಎಫ್ 30ಗಿಂತ ಹೆಚ್ಚಿನ ಪರಿಣಾಮಕಾರಿ ಸನ್‌ಸ್ಕ್ರೀನ್
ಎಸ್‌ಪಿಎಫ್ 30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿನ ಸನ್‌ಸ್ಕ್ರೀನ್ ಬಳಸಿ. ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ ಪ್ರಮಾಣ ಹೆಚ್ಚಾಗಿದಷ್ಟು ಯುವಿ ಕಿರಣದಿಂದ ರಕ್ಷಣೆ ಪರಿಣಾಮಕಾರಿಯಾಗುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ SPF ಇರುವ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಉತ್ತಮ.
ಹೆಚ್ಚಿನ ಪ್ರಮಾಣದಲ್ಲಿ ಹಚ್ಚಿಕೊಳ್ಳುವುದು
ಸನ್‌ಸ್ಕ್ರೀನ್‌ಗಳು ಪರಿಣಾಮಕಾರಿಯಾದಷ್ಟು ಅವುಗಳ ದರದಲ್ಲಿ ಏರಿಕೆಯಾಗುವುದು ನೋಡಬಹುದು. ಹೀಗಾಗಿ ಹಲವರು ಹೆಚ್ಚು ದಿನ ಬರಬೇಕು ಎಂಬ ಕಾರಣಕ್ಕೆ ಸ್ವಲ್ಪ ಸ್ವಲ್ಪವೇ ಹಚ್ಚಿಕೊಳ್ಳಲು ಮುಂದಾಗುತ್ತಾರೆ. ಇಲ್ಲವೆ ಮುಖ ಹಾಗೂ ಕೈ ಭಾಗಕ್ಕೆ ಮಾತ್ರವೇ, ಅದರಲ್ಲೂ ಬಟ್ಟೆ ಇರದ ಕಡೆಗಳಲ್ಲಿ ಮಾತ್ರವೇ ಹಚ್ಚಿಕೊಳ್ಳಲು ಮುಂದಾಗುತ್ತಾರೆ. ಆದ್ರೆ ಈ ಅಭ್ಯಾಸ ಮಾಡದೆ ಉದಾರವಾಗಿ ಹಚ್ಚಿಕೊಳ್ಳಲು ಮುಂದಾಗಿ. ದೇಹದ ಮೇಲೆ ಎಲ್ಲೆಲ್ಲಾ ಸೂರ್ಯನ ಕಿರಣಗಳು ಬೀಳುತ್ತದೆಯೋ ಅಲೆಲ್ಲ ದಪ್ಪವಾಗಿ ಹಾಗೆ ಸೂರ್ಯನ ಬೆಳಕು ಬೀಳುವುದು ಕಡಿಮೆ ಎಂಬ ಕಡೆ ಕಡಿಮೆ ಪ್ರಮಾಣದಲ್ಲಿ ಹಚ್ಚಿಕೊಳ್ಳಿ.
ಮತ್ತೆ ಮತ್ತೆ ಹಚ್ಚಿಕೊಳ್ಳುವುದು
ನೀವು ಇಡೀ ದಿನ ಪ್ರಯಾಣದಲ್ಲಿದ್ದರೆ ಅಥವಾ ಸೂರ್ಯನ ಬೆಳಕಿಗೆ ತೆರೆದುಕೊಳ್ಳುತ್ತಿದ್ದರೆ ಒಮ್ಮೆ ಹಚ್ಚಿ ಬಿಡುವುದಕ್ಕಿಂತಲೂ ಆಗಾಗ ಹಚ್ಚಿಕೊಳ್ಳುತ್ತಿರುವುದು ಬಹಳ ಸೂಕ್ತ. ಏಕೆಂದರೆ ದೇಹದಿಂದ ಬರುವ ಬೆವರಿನ ಕಾರಣಕ್ಕೆ ಸನ್‌ಸ್ಕ್ರೀನ್ ತೊಳೆದುಹೋಗಬಹುದು. ಹೀಗಾಗಿ ಆಗಾಗ ಅನ್ವಯಿಸುತ್ತಿರಿ.
ಮೋಡ ಇದ್ದಾಗಲು ಸನ್‌ಸ್ಕ್ರೀನ್ ಬಳಸಿ
ಕೆಲವರು ಸೂರ್ಯನ ಬೆಳಕು ಇಲ್ಲದೆ ಇದ್ದಾಗ ಸನ್‌ಸ್ಕ್ರೀನ್ ಅಗತ್ಯವಿಲ್ಲ ಎಂದುಕೊಳ್ಳುತ್ತಾರೆ, ಆದರೆ ಇದು ತಪ್ಪು, ಮೋಡ ಕವಿದ ವಾತಾವರಣ ಇದ್ದಾಗಲು ಕೂಡ ಸನ್‌ಸ್ಕ್ರೀನ್ ಬಳಸುವುದು ಬಹಳ ಮುಖ್ಯ. ಹಾಗೆ ಇದರಿಂದ ಯಾವುದೇ ರೀತಿಯ ಹಾನಿಯನ್ನು ತಡೆಯಬಹುದು. ಮೋಡ ಇರುವಾಗಲು ಬೆಳಕು ಬೀಳುತ್ತಿರುತ್ತದೆ. ಆದರೆ ಸೂರ್ಯನ ಕಿರಣಗಳ ಹಾನಿ ಅಷ್ಟು ಪ್ರಮಾಣದಲ್ಲಿರುವುದಿಲ್ಲ.
ಸರಿಯಾದ ಸನ್‌ಸ್ಕ್ರೀನ್ ಆಯ್ಕೆ
ಎಲ್ಲಾ ಕಂಪನಿಗಳ ಸನ್‌ಸ್ಕ್ರೀನ್ ಹೆಚ್ಚು ಪರಿಣಾಮಕಾರಿಯಲ್ಲ ಬದಲಿಗೆ ಅದರಿಂದ ಹಾನಿಯೂ ಆಗಬಹುದು. ಹೀಗಾಗಿ ಉತ್ತಮ ಕಂಪನಿ ಹಾಗೂ ದುಬಾರಿಯಾಗಿರುವ ಸನ್‌ಸ್ಕ್ರೀನ್ ಬಳಸಿ. ಯಾವುದೇ ಕಾರಣಕ್ಕೂ ಕಳಪೆಯಾಗಿರುವ ಹಾಗೆ ಕಡಿಮೆ ಹಣಕ್ಕೆ ಸಿಗುವಂತಹ ಸನ್‌ಸ್ಕ್ರೀನ್ ಬಳಸದೇ ಇರುವುದು ಉತ್ತಮ.



Click it and Unblock the Notifications