Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯಲ್ಲಿ ಹಿಂದಿನವರು ಹೇಗೆ ಕಾಡಿಗೆ ಮಾಡುತ್ತಿದ್ದರು..! ವೈರಲ್ ಆಗುತ್ತಿದೆ ಈ ವಿಡಿಯೋ
ಮಹಿಳೆಯರ ಸೌಂದರ್ಯ ಹೆಚ್ಚಿಸುವ ಅಂಶಗಳಲ್ಲಿ ಕಣ್ಣಿನ ಅಂದ ಕೂಡ ಒಂದಾಗಿದೆ. ಹೀಗಾಗಿ ಇಂದು ಮಾರುಕಟ್ಟೆಯಲ್ಲಿ ಕಣ್ಣಿನ ಅಂದ ಹೆಚ್ಚಿಸುವ ಅದೆಷ್ಟೋ ವಸ್ತುಗಳನ್ನು ನಾವು ನೋಡುತ್ತೇವೆ. ಕಣ್ಣಿನ ಅಂದ ಹೆಚ್ಚಿಸಲು ಕಾಡಿಗೆ, ರೆಪ್ಪೆ, ಐಬ್ರೋ ಹೀಗೆ ಹತ್ತಾರು ಅಂಶಗಳನ್ನು ಬಳಸುತ್ತಾರೆ. ಇದೆಲ್ಲವೂ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹಾಗೂ ರಾಸಾಯನಿಕ ವಸ್ತುಗಳಾಗಿವೆ. ಆದ್ರೆ ಇದನ್ನು ಬಳಸದೆ ಬೇರೆ ವಿಧಿ ಇಲ್ಲ ಎನ್ನುವಂತಾಗಿದೆ.
ಇನ್ನು ಹೆಚ್ಚಿನ ಮಹಿಳೆಯರು ದುಬಾರಿ ಮೇಕ್ ಅಪ್ ಬಳಸದೆ ಇದ್ದರೂ ಕಾಡಿಗೆಯನ್ನಂತು ಹಚ್ಚುತ್ತಾರೆ. ಕಾಡಿಗೆ ಬಳಸುವುದು ಕಣ್ಣಿಗೆ ಉತ್ತಮ ಎನ್ನಲಾಗುತ್ತದೆ. ಸೂರ್ಯನ ಕಿರಣಗಳಿಂದ ಕಣ್ಣುಗಳಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಕಾಡಿಗೆ ಬಳಸಲಾಗುತ್ತದೆ. ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಕಣ್ಣಿನ ಅಂದವು ಹೆಚ್ಚಾಗುತ್ತದೆ.

ಆದ್ರೆ ಕೆಲವೊಮ್ಮೆ ಕಾಡಿಗೆ ಹಚ್ಚಿ ರಿಯಾಕ್ಷನ್ ಆಗುವುದನ್ನು ಸಹ ನಾವು ನೋಡಿದ್ದೇವೆ. ಆದ್ರೆ ಈ ಕಾಡಿಗೆಯಲ್ಲಿ ಖಂಡಿತ ಕೆಮಿಕಲ್ ಬಳಸಿಯೇ ಮಾಡಲಾಗುತ್ತದೆ, ಇದು ಮಕ್ಕಳ ಕಣ್ಣಿಗಂತು ಹಾನಿ ಮಾಡುವುದು ಖಚಿತ. ಆದ್ರೆ ನಾವು ಮನೆಯಲ್ಲೇ ಯಾವುದೇ ಕೆಮಿಕಲ್ ಬಳಸದೆ ಕಾಡಿಗೆ ಮಾಡುವ ಕುರಿತು ತಿಳಿಯೋಣ.
ಹೌದು ಮನೆಯಲ್ಲಿ ಸುಲಭವಾಗಿ ಹಿರಿಯರು ಮಾಡುತ್ತಿದ್ದಂತೆ ಕಾಡಿಗೆ ಮಾಡುವ ಕುರಿತಂತೆ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ನೈಸರ್ಗಿಕವಾಗಿ ಕಾಡಿಗೆ ಮಾಡುವುದು ಹೇಗೆ ಎಂಬುದನ್ನ ಯುವತಿಯೊಬ್ಬಳು ವಿವರಿಸುತ್ತಿದ್ದಾಳೆ. ಈ ವಿಡಿಯೋ ನೋಡಿದ ಮಂದಿ ಅಚ್ಚರಿಯಾಗಿದೆ. ಇಷ್ಟೊಂದು ಸುಲಭವಾಗಿ ಮನೆಯಲ್ಲೇ ಕಾಡಿಗೆ ತಯಾರಿಸಬಹುದೇ ಎಂದು ಹುಬ್ಬೇರಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಕಾಡಿಗೆ ಮಾಡುವುದನ್ನು ವಿವರಿಸುತ್ತಿದ್ದಾಳೆ. ಈ ವಿಡಿಯೋ 7 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಅಲ್ಲದೆ ಈ ವಿಡಿಯೋ ನೋಡಿದ ಮಂದಿ ನೈಸರ್ಗಿಕ ಕಾಡಿಗೆ ತಯಾರಿಸಲು ಸಹಕಾರಿ ಎಂದು ಭಾವಿಸಿ ವಿಡಿಯೋ ಹಂಚಿಕೊಂಡಿದ್ದಾರೆ.
ಮಹಿಳೆ ತನ್ನ ಅಜ್ಜಿಯೊಂದಿಗೆ ಮನೆಯಲ್ಲಿ ಕಾಡಿಗೆ ಮಾಡುವ ವಿಧಾನ ಈ ವಿಡಿಯೋದಲ್ಲಿದೆ. ಆಕೆ ಒಂದು ಹತ್ತಿಯನ್ನು ತಪ್ಪದಲ್ಲಿ ಅದ್ದಿ ದೀಪದಂತೆ ಮಾಡಿ ಇಟ್ಟಿಗೆಗಳ ಇಟ್ಟು ಅದರ ಮಧ್ಯದಲ್ಲಿ ಒಂದು ಪಾತ್ರೆಗೆ ಅದರ ಕರಿ ಹಿಡಿಯುವಂತೆ ಮಾಡುತ್ತಾಳೆ. ಈ ತುಪ್ಪ ಉರಿದು ಅದರಿಂದ ಬರುವ ಕರಿ ಪಾತ್ರೆಗೆ ಹಿಡಿಯುವಂತೆ ಮಾಡಲಾಗುತ್ತದೆ.
ಈ ಕರಿಯನ್ನು ಒಂದು ಡಬ್ಬದಲ್ಲಿ ಇಟ್ಟು ನೀವು ಬಳಸಬಹುದು. ಇಲ್ಲವೆ ನೇರವಾಗಿ ಬೆಂಕಿ ಕಡ್ಡಿಯ ಸಹಾಯದಿಂದ ನಿಮ್ಮ ಕಣ್ಣಿನ ಕೆಳಗೆ ಹಚ್ಚಿಕೊಳ್ಳಬಹುದು. ಆಕೆಯ ಪ್ರಕಾರ ಇದೇ ರೀತಿಯ ಕಾಡಿಗೆಯನ್ನು ಆಕೆ ವರ್ಷಗಳಿಂದ ಬಳಸುತ್ತಿದ್ದಾಳಂತೆ. ಇದರಲ್ಲಿ ಕರಿ ಹೆಚ್ಚಾಗಿ ಮಾಡಿಕೊಂಡಷ್ಟು ಹೆಚ್ಚು ದಿನ ಇದನ್ನು ಬಳಸಬಹುದು. ಈ ಕಾಡಿಗೆ ನೀರಿಗೂ, ಧೂಳಿಗೂ, ಬೆವರಿಗೆ ಹಾಳಾಗುವುದಿಲ್ಲವಂತೆ. ಎಲ್ಲದಕ್ಕೂ ಹೆಚ್ಚಾಗಿ ಇದೊಂದು ಸುರಕ್ಷಿತ ವಿಧಾನ ಎಂಬುದು ಆಕೆಯ ಮಾತಾಗಿದೆ.
ನೀವು ಈ ಕಾಜಲ್ ಅನ್ನು ಒಮ್ಮೆ ತಯಾರಿಸಿದರೆ 8 ವರ್ಷಗಳಿಗಿಂತ ಹೆಚ್ಚು ಕಾಲ ಬಳಸಬಹುದು. ಆದ್ದರಿಂದ ಇದು ಪ್ರಯತ್ನಿಸಲು ಯೋಗ್ಯವಾಗಿದೆ. ಪುಡಿಯನ್ನು ಶೇಖರಿಸಿಟ್ಟು ಅದಕ್ಕೆ ತುಪ್ಪ ಬೆರೆಸಿ ಚಿಕ್ಕ ಉಂಡೆ ಮಾಡಿ ಮರದ ಕಡ್ಡಿಗೆ ಹಾಕಬೇಕು. ಆನಂದಿಸಿ ಎಂದು ಆಕೆ ಬರೆದುಕೊಂಡಿದ್ದಾಳೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಹ್ಯಾಕ್ಸ್ ಕಂಡು ಜನರು ಹೆಚ್ಚು ಹೆಚ್ಚು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಇಷ್ಟೊಂದು ಸುಲಭವಾಗಿ ಕಾಡಿಗೆ ಸಿದ್ಧ ಮಾಡುವ ವಿಧಾನ ನೋಡಿ ಅಚ್ಚರಿಗೂ ಒಳಗಾಗಿದ್ದಾರೆ. ಅಲ್ಲದೆ ಅಲ್ಲರು ಇದು ಇಷ್ಟೊಂದು ಸುರಕ್ಷಿತ ಎಂದು ಸಂತಸ ಹಂಚಿಕೊಂಡಿದ್ದಾರೆ.



Click it and Unblock the Notifications
