Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಹಣ್ಣುಗಳ ಸಿಪ್ಪೆಯೂ ನಿಮ್ಮ ಮುಖದ ಚರ್ಮಕ್ಕೆ ಯಾವ ರೀತಿ ಪ್ರಯೋಜನಕಾರಿ ಗೊತ್ತಾ?
ಹಣ್ಣುಗಳನ್ನು ಇಷ್ಟ ಪಡದೇ ಇರೋರು ಸಾಮಾನ್ಯವಾಗಿ ಯಾರು ಇಲ್ಲ ಅನ್ಸುತ್ತೆ. ಒಬ್ಬೊಬ್ಬರು ಒಂದೊಂದು ರೀತಿಯ ಹಣ್ಣುಗಳನ್ನು ಇಷ್ಟಪಡ್ತಾರೆ. ನಿಜ ಹೇಳ್ಬೇಕಂದ್ರೆ ಹಣ್ಣಿನ ಪ್ರತಿಯೊಂದು ಭಾಗದಿಂದಲೂ ಕೂಡ ಒಂದೊಂದು ರೀತಿಯ ಪ್ರಯೋಜನಗಳಿದೆ. ಅದ್ರಲ್ಲೂ ಈ ಬೇಸಿಗೆ ಕಾಲದಲ್ಲಿ ಕೆಲವೊಂದು ಹಣ್ಣುಗಳು ನಮಗೆ ವರದಾನ ಅಂತಾನೇ ಹೇಳಬಹುದು. ಹಣ್ಣುಗಳು ನಮ್ಮ ಆರೋಗ್ಯವನ್ನ ರಕ್ಷಣೆ ಮಾಡಿದ್ರೆ, ಹಣ್ಣಿನ ಸಿಪ್ಪೆಯು ಬೇಸಿಗೆಯಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸೋದ್ರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಬೇಸಿಗೆಯಲ್ಲಿ ನಾವು ಹೆಚ್ಚಾಗಿ ನೀರಿನ ಅಂಶ ಹೆಚ್ಚಿರುವ ಹಣ್ಣನ್ನು ತಿನ್ನೋದಕ್ಕೆ ಇಷ್ಟ ಪಡುತ್ತೀವಿ. ಅದ್ರಲ್ಲಿ ಮುಖ್ಯವಾಗಿ ಪಪ್ಪಾಯಿ, ಕಲ್ಲಂಗಡಿ, ಖರ್ಬೂಜ, ಲಿಂಬೆ ಹಣ್ಣಿನ ಜ್ಯೂಸ್, ಕಿತ್ತಳೆ, ಸೇಬು, ಸಪೋಟ ಮುಂತಾದವುಗಳು. ಇವುಗಳನ್ನು ತಿಂದ ಮೇಲೆ ಇದರ ಸಿಪ್ಪೆಯನ್ನು ಎಸೆಯಬೇಡಿ. ಯಾಕಂದ್ರೆ ಇದರ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್, ಮಿನರಲ್, ಸಸ್ಯಾಧಾರಿತ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಚರ್ಮದ ಆರೈಕೆಗೆ ತುಂಬಾನೇ ಒಳ್ಳೆಯದು. ಹಾಗಾದ್ರೆ ಹಣ್ಣಿನ ಸಿಪ್ಪೆಗಳಿಂದ ಯಾವ ರೀತಿ ಪ್ರಯೋಜನ ಇದೆ ಅನ್ನೋದನ್ನ ತಿಳಿಯೋಣ.

1. ಬಾಳೆಹಣ್ಣಿನ ಹಣ್ಣಿನ ಸಿಪ್ಪೆ
ಅತಿಯಾದ ಬಿಸಿಲಿನ ಕಾರಣ ಚರ್ಮವು ಒಡೆದು ಒಣಗಿದಂತಾಗುತ್ತದೆ. ಈ ವೇಳೆ ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚೋದ್ರಿಂದ ಇದು ನಿಮ್ಮ ಚರ್ಮ ಒಣಗುವುದನ್ನು ತಪ್ಪಿಸುತ್ತದೆ. ಇದನ್ನು ಯಾವ ರೀತಿ ಬಳಸಬೇಕೆಂದರೆ ಮೊದಲಿಗೆ ಮುಖ ತೊಳೆದು ನಂತರ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ. ಇದಾದ ಬಳಿಕ ಕ್ಲೆನ್ಸಾರ್ ಬಳಸಿ ಮುಖ ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಪೋಷಣೆಯನ್ನು ಮಾಡುತ್ತದೆ. ಇದನ್ನು ಬಳಕೆ ಮಾಡೋದ್ರಿಂದ ಮುಖ ತುರಿಸುವುದು, ಕಿರಿಕಿರಿ ಉಂಟಾಗುವ ಸಮಸ್ಯೆಯಿಂದ ತಪ್ಪಿಸಿಕೊಳ್ಖಬಹುದು.
2. ಪಪ್ಪಾಯಿ ಹಣ್ಣಿನ ಸಿಪ್ಪೆ
ಪಪ್ಪಾಯಿ ಸಿಪ್ಪೆಯಲ್ಲಿರುವ ಪಪೈನ್ ಎಂಬ ಕಿಣ್ವವು ಚರ್ಮದ ಕೋಶಗಳನ್ನು ಸರಿಪಡಿಸುವ ಮತ್ತು ಚರ್ಮವನ್ನು ಪುನರ್ಯೌವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವಯಸ್ಸಾದ ಚರ್ಮಕ್ಕೆ ಜೀವರಕ್ಷಕನಾಗಿ ಕೆಲಸ ಮಾಡುತ್ತದೆ. ಇದು ಮುಖದ ಬಣ್ಣವನ್ನು ಹೊಳೆಯುವಂತೆ ಮಾಡುತ್ತದೆ. ಬಲಿಯದ ಪಪ್ಪಾಯಿಯ ಸಿಪ್ಪೆಯನ್ನು ಸ್ವಲ್ಪ ಮೊಸರು ಮತ್ತು ಜೇನುತುಪ್ಪದೊಂದಿಗೆ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಕೆಲವರಿಗೆ ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಬಳಸುವಾಗ ಎಚ್ಚರಿಕೆಯಿಂದ ಬಳಸಿ.
3. ಕಿತ್ತಳೆ ಹಣ್ಣಿನ ಸಿಪ್ಪೆ
ಕಿತ್ತಳೆ ಮತ್ತು ನಿಂಬೆಯಂತಹ ಸಿಟ್ರಸ್ ಹಣ್ಣುಗಳು ಎಣ್ಣೆಯುಕ್ತ ಅಥವಾ ಮೊಡವೆ ಪೀಡಿತ ಚರ್ಮಕ್ಕೆ ತುಂಬಾನೇ ಒಳ್ಳೆಯದು. ಈ ಹಣ್ಣುಗಳ ಸಿಪ್ಪೆಯು ಕೂಡ ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಹಣ್ಣಿನ ಸಿಪ್ಪೆಯ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಬಹುದು. ಮೊದಲಿಗೆ ಸಿಪ್ಪೆಗಳನ್ನು ಒಣಗಿಸಿ ನಂತರ ಪುಡಿಮಾಡಿ. ಅದಕ್ಕೆ ನಿಂಬೆ ರಸ ಮತ್ತು ರೋಸ್ ವಾಟರ್ ಅನ್ನು ಸೇರಿಸಿ. ಈ ಪೇಸ್ಟ್ ಅನ್ನು ಮೊಡವೆ ಇರುವ ಮುಖಕ್ಕೆ ಹಚ್ಚಿ. ಕೆಲವೇ ವಾರಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ.
4. ಸೇಬು ಹಣ್ಣಿನ ಸಿಪ್ಪೆ
ಸೇಬು ಹಣ್ಣಿನಲ್ಲಿ ಚರ್ಮಕ್ಕೆ ಬೇಕಾದ ಉತ್ತಮ ಪೋಷಕಾಂಶಗಳಿದೆ. ಸೇಬು ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಮತ್ತು ತಾಮ್ರದ ಅಂಶ ಅಧಿಕ ಪ್ರಮಾಣದಲ್ಲಿದೆ. ಸೇಬು ಹಣ್ಣಿನ ಸಿಪ್ಪೆಯಲ್ಲಿರುವ ವಿಟಮಿನ್ ಎ ಮತ್ತು ಸಿ ಚರ್ಮದಲ್ಲಿನ ಕಾಲಜಿನ್ ಮಟ್ಟವನ್ನು ಸರಿಪಡಿಸಲು ಮತ್ತು ವಯಸ್ಸಾದಂತೆ ಕಾಣುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಸೇಬು ಹಣ್ಣಿನಲ್ಲಿರುವ ಅಂಶ ಬಿಸಿಲಿನಿಂದ ಸುಟ್ಟ ಚರ್ಮವನ್ನು ಸರಿಪಡಿಸುತ್ತದೆ. ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
5. ಕಲ್ಲಂಗಡಿ ಹಣ್ಣಿನ ಸಿಪ್ಪೆ
ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಯಾಕಂದ್ರೆ ಇದು ನಮ್ಮನ್ನು ಡಿಹೈಡ್ರೇಟ್ ಆಗಿಡಲು ಸಹಕರಿಸುತ್ತದೆ. ಇನ್ನೂ ಕಲ್ಲಂಗಡಿ ಹಣ್ಣಿನ ಕೆಂಪಾಗಿರುವ ಭಾಗವನ್ನು ಮಾತ್ರ ಸೇವಿಸುತ್ತೇವೆ. ಆದರೆ ನಿಮಗೊತ್ತಾ ಇದರಲ್ಲಿರುವ ಬಿಳಿಭಾಗ ನಮ್ಮ ಚರ್ಮಕ್ಕೆ ತುಂಬಾನೇ ಅವಶ್ಯಕ. ಇದು ನಿಮ್ಮ ಚರ್ಮವನ್ನು ಸಂಪೂರ್ಣವನ್ನು ಸ್ವಚ್ಛಗೊಳಿಸುತ್ತದೆ. ಹಾಗೂ ಇದು ಆಳವಾದ ಚರ್ಮದೊಳಗಿನಿಂದ ತೈಲ ಮತ್ತು ಕಸವನ್ನು ತೆಗೆಯಲು ಸಹಾಯ ಮಾಡುತ್ತದೆ.
ಹೀಗಾಗಿ ನೀವು ಯಾವುದಾದರೂ ಹಣ್ಣನ್ನು ತಿಂದ ಮೇಲೆ ಅದರ ಸಿಪ್ಪೆಯನ್ನು ಎಸೆಯಬೇಡಿ. ಯಾಕಂದ್ರೆ ಹಣ್ಣಿನ ಸಿಪ್ಪೆಗಳು ಕೂಡ ನಮ್ಮ ಚರ್ಮ ಹಾಗೂ ಕೂದಲಿನ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.



Click it and Unblock the Notifications


