Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಕೇವಲ ಒಂದೇ ದಿನದಲ್ಲಿ ಡಾರ್ಕ್ ಅಂಡರ್ ಆರ್ಮ್ ಸರಿಪಡಿಸಲು ಜೇನುತುಪ್ಪದ ಈ 3 ಪ್ಯಾಕ್ ಬಳಸಿ
ಡೆಡ್ ಸ್ಕಿನ್ ಸೆಲ್ಸ್, ಕೊಳೆ, ಮಾಲಿನ್ಯದಿಂದ ಕಂಕುಳಡಿಯ ಪ್ರದೇಶ ಬಿಳಿಯಿಂದ ಕಪ್ಪುಬಣ್ಣಕ್ಕೆ ತಿರುಗುತ್ತದೆ. ಇದು ಹೆಚ್ಚಿನವರು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತದೆ. ಆದ್ದರಿಂದ ಅಂಡರ್‌ಆರ್ಮ್ಸ್‌ನ ಕಪ್ಪು ಬಣ್ಣವನ್ನು ಹೋಗಲಾಡಿಸಲು ನಾನಾ ಕಸರತ್ತುಗಳು ನಡೆಯುತ್ತಲೇ ಇರುತ್ತದೆ. ಅದಕ್ಕಾಗಿ ನಾವಿಂದು ಇದನ್ನು ಹೋಗಲಾಡಿಸಲು, ಸುಲಭವಾಗಿ ತಯಾರಿಸಬಹುದಾದ ಹಾಗೂ ಕೇವಲ ಒಂದೇ ಬಾರಿಗೆ ಫಲಿತಾಂಶ ನೀಡುವಂತಹ ಜೇನುತುಪ್ಪ ಪ್ಯಾಕ್ ಬಗ್ಗೆ ಹೇಳಲಿದ್ದೇವೆ.
ಜೇನುತುಪ್ಪದಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಮತ್ತು ಔಷಧೀಯ ಗುಣಗಳು ಹೇರಳವಾಗಿವೆ. ಇದು ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಈ ಫೇಸ್ ಪ್ಯಾಕ್ ಅನ್ನು ಅನ್ವಯಿಸುವುದರಿಂದ ಚರ್ಮವು ಸ್ವಚ್ಛವಾಗಿ, ಹೊಳೆಯುವಂತೆ, ಮೃದುವಾಗಿ ಮತ್ತು ಯೌವನದಿಂದ ಕೂಡಿರುತ್ತದೆ. ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ...
ಕಪ್ಪಾಗಿರುವ ಕಂಕುಳಡಿಯನ್ನ ಕೇವಲ 1 ದಿನದಲ್ಲಿ ಸರಿಪಡಿಸುವ ಜೇನುತುಪ್ಪದ ಪ್ಯಾಕ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅರಿಶಿನ ಮತ್ತು ಜೇನುತುಪ್ಪ:
ನೀವು ಜೇನುತುಪ್ಪ ಮತ್ತು ಅರಿಶಿನದ ಪ್ಯಾಕ್ ಅನ್ನು ತಯಾರಿಸಿ, ಹಚ್ಚುವುದರಿಂದ, ಅಂಡರ್ಆರ್ಮ್ ಅಥವಾ ಕಂಕುಳಡಿಯ ಕಪ್ಪು ಬಣ್ಣವನ್ನು ತೆಗೆದುಹಾಕಬಹುದು. ಇದು ನಿಮ್ಮ ತೋಳುಗಳ ಕಪ್ಪನ್ನು ಹೋಗಲಾಡಿಸುವ ಜೊತೆಗೆ ತುರಿಕೆ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 1 ಚಮಚ ಜೇನುತುಪ್ಪ ಮತ್ತು ಹಸಿ ಹಾಲನ್ನು ಮಿಶ್ರಣ ಮಾಡಿ. ನಂತರ ಅದಕ್ಕೆ 2 ಚಿಟಿಕೆ ಅರಿಶಿನ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಸಿದ್ಧಪಡಿಸಿದ ಪ್ಯಾಕ್‌ನ್ನು ಅಂಡರ್ ಆರ್ಮ್ಸ್ ಮೇಲೆ ಹಚ್ಚಿ. ಇದನ್ನು 3-5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ ಮತ್ತು 10 ನಿಮಿಷಗಳ ಕಾಲ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ನೀವು ವಾರಕ್ಕೆ ಎರಡು ಬಾರಿ ಈ ಪರಿಹಾರವನ್ನು ಪ್ರಯತ್ನಿಸಿದರೆ, ವ್ಯತ್ಯಾಸವನ್ನು ನೋಡುತ್ತೀರಿ.

ಜೇನುತುಪ್ಪ ಮತ್ತು ಓಟ್ಸ್:
ನೀವು ಜೇನುತುಪ್ಪ ಮತ್ತು ಓಟ್ಸ್ನೊಂದಿಗೆ ಸ್ಕ್ರಬ್ ಅನ್ನು ಸಹ ಬಳಸಬಹುದು. ಇದರಿಂದ ಚರ್ಮದ ಸತ್ತ ಜೀವಕೋಶಗಳು ಸ್ವಚ್ಛಗೊಳಿಸಲ್ಪಡುತ್ತವೆ ಮತ್ತು ಕಂಕುಳಡಿ ಮೃದುವಾಗಿ ಮತ್ತು ಸ್ವಚ್ಛವಾಗಿ ಕಾಣುತ್ತವೆ. ಇದಕ್ಕಾಗಿ, ಒಂದು ಬೌಲ್ನಲ್ಲಿ 2 ಚಮಚ ಓಟ್ಸ್ ಪುಡಿ ಮತ್ತು ಜೇನುತುಪ್ಪವನ್ನು ಅಗತ್ಯವಿರುವಂತೆ ಮಿಶ್ರಣ ಮಾಡಿ. ನಂತರ, ಅದನ್ನು ಕಂಕುಳಡಿ ಹಚ್ಚಿ. 5 ನಿಮಿಷಗಳ ಕಾಲ ಸ್ಕ್ರಬ್ ಮಾಡುತ್ತಲೇ ಇರಿ. ಬಳಿಕ ಒದ್ದೆ ಬಟ್ಟೆ ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.

ಜೇನುತುಪ್ಪ ಮತ್ತು ನಿಂಬೆ:
ಇದಲ್ಲದೇ, ಜೇನು ಮತ್ತು ನಿಂಬೆಹಣ್ಣಿನ ಪ್ಯಾಕ್ ಮಾಡಿಕೊಂಡು ಕೂಡ ಹಚ್ಚಿಕೊಳ್ಳಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 1 ಟೀಚಮಚ ಜೇನುತುಪ್ಪ, ಆಲೂಗಡ್ಡೆ ರಸ ಮತ್ತು ನಿಂಬೆಯ ಕೆಲವು ಹನಿಗಳನ್ನು ಮಿಶ್ರಣ ಮಾಡಿ. ಸಿದ್ಧಪಡಿಸಿದ ಪೇಸ್ಟ್ ಅನ್ನು ಅಂಡರ್ ಆರ್ಮ್ಸ್ ಮೇಲೆ ಅನ್ವಯಿಸಿ. 10 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಒದ್ದೆ ಬಟ್ಟೆಯಿಂದ ಒರೆಸಿ. ಈ ಪ್ಯಾಕ್ ಅನ್ನು ವಾರಕ್ಕೆ 2-3 ಬಾರಿ ಅನ್ವಯಿಸುವುದರಿಂದ, ನಿಮ್ಮ ಕಂಕುಳಡಿಯ ಕಪ್ಪನ್ನು ತೆಗೆದುಹಾಕಲಾಗುತ್ತದೆ ಮತ್ತು ಅವುಗಳು ಸ್ವಚ್ಛವಾಗಿ, ಹೊಳೆಯುವ ಮತ್ತು ಮೃದುವಾಗಿ ಕಾಣುತ್ತವೆ.



Click it and Unblock the Notifications











