Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
ಮುಖದ ಸುಕ್ಕು ನಿವಾರಣೆಗೆ ದುಬಾರಿ ಉತ್ಪನ್ನಕ್ಕಿಂತ, ಈ ಅಗ್ಗದ ವಸ್ತುಗಳೇ ಸಾಕು
ವಯಸ್ಸಿಗೆ ತಕ್ಕಂತೆ ಸೌಂದರ್ಯವೂ ಬದಲಾಗುತ್ತಾ ಹೋಗುತ್ತದೆ ಎಂಬ ಮಾತಿದೆ. ಆದರೆ, ಈ ಹೇಳಿಕೆಯು ಎಲ್ಲರಿಗೂ ಅನ್ವಯಿಸುವುದಿಲ್ಲ. ವೃದ್ಧಾಪ್ಯದವರೆಗೂ ತಮ್ಮ ಸೌಂದರ್ಯವನ್ನು ಹಾಗೆಯೇ ಕಾಪಾಡಿಕೊಂಡು ಬಂದಂತಹ ಅನೇಕ ಮಹಿಳೆಯರಿದ್ದಾರೆ. ಇದಕ್ಕಾಗಿ ಚರ್ಮವನ್ನು ಒಳಗಿನಿಂದ ಹಾಗೂ ಹೊರಗಿನಿಂದ ಕಾಳಜಿ ಮಾಡುವುದು ತುಂಬಾ ಮುಖ್ಯ.
ನಾವು ಸೇವಿಸುವ ಆಹಾರ, ನಮ್ಮ ಮುಖದ ಮೇಲೆ ಗೋಚರವಾಗುತ್ತದೆ. ಆರೋಗ್ಯಕರ ಆಹಾರದಿಂದ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು. ಜೊತೆಗೆ ವಯಸ್ಸಾದಂತೆ ಕಂಡುಬರುವ ಸುಕ್ಕು, ಸೂಕ್ಷ್ಮ ರೇಖೆಗಳನ್ನು ನಿಧಾನಗೊಳಿಸಬಹುದು. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಹಾಗಾದರೆ, ವಯಸ್ಸಾಗುವಿಕೆಯ ಲಕ್ಷಣಗಳನ್ನು ನಿಧಾನಗೊಳಿಸುವ ಶಕ್ತಿ ಇರುವ ಆಹಾರಗಳು ಯಾವುವು ಇಲ್ಲಿ ನೋಡೋಣ.
ಸುಕ್ಕುಗಳನ್ನು ಕಡಿಮೆ ಮಾಡುವ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅಗಸೆ ಬೀಜ:
ಅಗಸೆ ಬೀಜಗಳಿಂದ ಅನೇಕ ಪ್ರಯೋಜನಗಳಿವೆ. ಇದನ್ನು ಚರ್ಮ ಮತ್ತು ಕೂದಲು ಎರಡಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುವುದು. ಇದರಲ್ಲಿರುವ, ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಯೌವನವಾಗಿಡಲು ಸಹಾಯ ಮಾಡುತ್ತವೆ, ಏಕೆಂದರೆ ಅವು ಕಾಲಜನ್‌ನ ಸಂಶ್ಲೇಷಣೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ವಯಸ್ಸಾದ ಲಕ್ಷಣಗಳನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಅಗಸೆ ಬೀಜಗಳನ್ನಯ ಲಡ್ಡು, ಹಾಲಿನೊಂದಿಗೆ ಬೆರೆಸುವ ಮೂಲಕ ಆಹಾರದಲ್ಲಿ ಸೇರಿಸಬಹುದು.

ವಿಟಮಿನ್ ಸಿ ಹಣ್ಣುಗಳು:
ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇರಿಸಿ. ಕಿತ್ತಳೆ, ಬೆರಿಹಣ್ಣುಗಳು, ಸ್ಟ್ರಾಬೆರಿಗಳು ಮತ್ತು ದಾಳಿಂಬೆಗಳಂತಹ ಹಣ್ಣುಗಳನ್ನು ಸೇರಿಸಿ . ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಈ ಹಣ್ಣುಗಳು ನಿಮ್ಮ ತ್ವಚೆಯನ್ನು ಯೌವನವಾಗಿರಿಸಲು ಸಹಾಯ ಮಾಡುವುದಲ್ಲದೆ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಬೇಕಿದ್ದಲ್ಲಿ ವಿವಿಧ ಹಣ್ಣುಗಳನ್ನು ಸೇರಿಸಿ, ಸ್ಮೂಥಿ ಅಥವಾ ಜ್ಯೂಸ್ ಅನ್ನು ತಯಾರಿಸಬಹುದು. ಬೆಳಗಿನ ಉಪಾಹಾರದಲ್ಲಿ ಇದನ್ನು ತೆಗೆದುಕೊಳ್ಳುವುದು ನಿಮಗೆ ತುಂಬಾ ಪ್ರಯೋಜನಕಾರಿ.

ಡ್ರೈ ಫ್ರೂಟ್ಸ್:
ವಾಲ್್ನಟ್ಸ್, ಬಾದಾಮಿ, ಒಣದ್ರಾಕ್ಷಿ ಮತ್ತು ಪಿಸ್ತಾಗಳಂತಹ ಡ್ರೈ ಫ್ರೂಟ್ಸ್‌ಗಳನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು. ಇದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ. ಜೊತೆಗೆ ಡ್ರೈ ಪ್ರೂಟ್ಸ್‌ನಲ್ಲಿ ವಿವಿಧ ಜೀವಸತ್ವಗಳು, ಅಗತ್ಯ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳಿವೆ. ಅವು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಯುವ ಮತ್ತು ಸುಂದರವಾಗಿಡಲು ಸಹಾಯ ಮಾಡುತ್ತದೆ.

ಮೊಳಕೆಕಾಳು:
ವಿಟಮಿನ್ ಎ ಮತ್ತು ಸಿ ಮೊಳಕೆಗಟ್ಟಿದ ಕಾಳುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದರಲ್ಲಿರುವ ವಿಟಮಿನ್ ಸಿ ಕಾಲಜನ್ ಅನ್ನು ಉತ್ತೇಜಿಸುತ್ತದೆ. ಸೂರ್ಯನ ಹಾನಿ ಮತ್ತು ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ವಿಟಮಿನ್ ಎ ಮತ್ತು ಫೋಲೇಟ್ ಅಗತ್ಯವಿದೆ. ಇವೆರಡೂ ಮೊಳಕೆಕಾಳುಗಳಲ್ಲಿ ಲಭ್ಯವಿವೆ. ಅಷ್ಟೇ ಅಲ್ಲ, ಇವು ಚರ್ಮ ಮತ್ತು ಕೂದಲು ಎರಡಕ್ಕೂ ಪ್ರಯೋಜನಕಾರಿ. ಆದ್ದರಿಂದ ಇದನ್ನು ನಿಮ್ಮ ಬೆಳಗ್ಗಿನ ಉಪಹಾರದಲ್ಲಿ ಸೇರಿಸಿ.

ಹಸಿರು ಸೊಪ್ಪು:
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಸಂಪರ್ಕವು ಎಲ್ಲವೂ ಹೊಟ್ಟೆಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಹೊಟ್ಟೆಯು ಆರೋಗ್ಯಕರವಾಗಿದ್ದರೆ, ಅರ್ಧದಷ್ಟು ರೋಗಗಳನ್ನು ಕಡಿಮೆ ಮಾಡಬಹುದು. ಅದಕ್ಕಾಗಿಯೇ ಅನೇಕ ಜನರಿಗೆ ನೀರನ್ನು ಸೇವಿಸಲು ಮತ್ತು ಫೈಬರ್ ಭರಿತ ಆಹಾರವನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ. ಮತ್ತೊಂದೆಡೆ, ಹಸಿರು ಸೊಪ್ಪುಗಳನ್ನು ಜೀರ್ಣಿಸಿಕೊಳ್ಳಲು ಸುಲಭ. ಇವು ವಯಸ್ಸಾದ ಚಿಹ್ನೆಗಳು ಅಕಾಲಿಕವಾಗಿ ಬರುವುದನ್ನು ತಡೆಯುತ್ತದೆ. ನೀವು ಅಕಾಲಿಕ ಸುಕ್ಕುಗಳು ಅಥವಾ ಸೂಕ್ಷ್ಮ ರೇಖೆಗಳನ್ನು ತಪ್ಪಿಸಲು ಬಯಸಿದರೆ, ಖಂಡಿತವಾಗಿಯೂ ಈ ವಿಷಯಗಳನ್ನು ಆಹಾರದಲ್ಲಿ ಸೇರಿಸಿ.



Click it and Unblock the Notifications