Latest Updates
-
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
ತಜ್ಞದ ಪ್ರಕಾರ ತ್ವಚೆಯ ಆರೈಕೆಗಾಗಿ ಇಲ್ಲಿದೆ ದೈನಂದಿನ ದಿನಚರಿ
ಆರೋಗ್ಯಕರ, ಕಾಂತಿಯುತ ಮೈಬಣ್ಣದ ಭರವಸೆ ನೀಡುವ ತ್ವಚೆಯ ಉತ್ಪನ್ನಗಳು ಮತ್ತು ಚಿಕಿತ್ಸೆಗಳಿಗೆ ಯಾವುದೇ ಕೊರತೆಯಿಲ್ಲ. ನಿಮ್ಮ ಚರ್ಮ ಪ್ರಕಾರಕ್ಕೆ ಸೂಕ್ತವಾದವುಗಳನ್ನು ಆರಿಸುವುದರ ಜೊತೆಗೆ, ಸರಿಯಾದ ತ್ವಚೆ ದಿನಚರಿಯನ್ನು ಪಾಲಿಸುವುದು ಅಷ್ಟೇ ಮುಖ್ಯ.
ನಿಮ್ಮ ಸೌಂದರ್ಯ ಉತ್ಪನ್ನಗಳನ್ನು ಸರಿಯಾದ ಕ್ರಮದಲ್ಲಿ ಅನ್ವಯಿಸುವುದರಿಂದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ಇಲ್ಲವಾದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ನಿಮ್ಮ ತ್ವಚೆ ಆರೈಕೆಯ ಪ್ರಮುಖ ವಿಷಯವೆಂದರೆ ಹೀರಿಕೊಳ್ಳುವಿಕೆ. ಉದಾ ಹೇಳುವುದಾದರೆ, ಸೀರಮ್ ಗೆ ಮುಂಚಿತವಾಗಿ ಮಾಯಿಶ್ಚರೈಸರ್ ಅನ್ನು ಹಾಕಿದರೆ, ನಿಮ್ಮ ಸೀರಮ್ ಹೀರಲ್ಪಡುವುದಿಲ್ಲ, ಇದರಿಂದ ನಿಮ್ಮ ಹಣವನ್ನು ವ್ಯರ್ಥವಾಗುವುದು. ಹಾಗಾಗಿ ನಿಮ್ಮ ತ್ವಚೆಯ ರಕ್ಷಣೆಗೆ ಉತ್ತಮವಾದ ದಿನಚರಿಯನ್ನು ನೀಡಲಾಗಿದೆ. ಇದರಲ್ಲಿ ತ್ವಚೆಯ ಆರೈಕೆಗೆ ಏನು ಮಾಡಬೇಕು? ಯಾವುದನ್ನು ಮೊದಲು ಬಳಸಬೇಕು ಎಂಬುದರ ಬಗ್ಗೆ ವಿವರಿಸಲಾಗಿದೆ.

೧. ಕ್ಲೆನ್ಸರ್:
ಯಾವುದೇ ತ್ವಚೆಯ ದಿನಚರಿಯ ಅತ್ಯಂತ ಅವಶ್ಯಕ ಭಾಗವೆಂದರೆ ಕ್ಲೆನ್ಸಿಂಗ್ ಅಥವಾ ಶುದ್ಧೀಕರಣ. ನೀವು ಕ್ಲೆನ್ಸರ್ ಅನ್ನು ಬಳಸದೇ ಇದ್ದರೆ, ನಿಮ್ಮ ಚರ್ಮದ ಮೇಲೆ ತೈಲ ಮತ್ತು ಕಲ್ಮಶಗಳು ಹಾಗೇ ಉಳಿದುಬಿಡುತ್ತವೆ. ಇದು ಯಾವುದೇ ಉತ್ಪನ್ನಗಳು ಸರಿಯಾಗಿ ಪ್ರಭಾವ ಬೀರದಂತೆ ತಡೆಯುತ್ತದೆ. ಇದರಿಂದ ನಿಮ್ಮ ಉತ್ತಮ ಉತ್ಪನ್ನಗಳು ಸಹ ಉದ್ದೇಶಿಸಿದ ಫಲಿತಾಂಶಗಳನ್ನು ನೀಡಲಾರದು.
ಒಂದೇ ಅಥವಾ ಡಬಲ್ ಶುದ್ಧೀಕರಣದಿಂದ ( ಎಣ್ಣೆ ಕ್ಲೆನ್ಸರ್ ನಂತಹ) ನಿಮ್ಮ ಮುಖವನ್ನು ಸಂಪೂರ್ಣವಾಗಿ ಶುದ್ಧೀಕರಿಸಿ, ಆದರೆ ಆ ಉತ್ಪನ್ನಗಳು ನಿಮ್ಮ ಚರ್ಮವನ್ನು ಒಣಗಿಸದಂತೆ ನೋಡಿಕೊಳ್ಳಿ. ಚರ್ಮ ತಜ್ಞರು ನಿಮ್ಮ ಚರ್ಮ ತಡೆಗೋಡೆಗೆ ಅಡ್ಡಿಯಾಗದಂತೆ ನಿಮ್ಮ ಮುಖವನ್ನು ಶುದ್ದೀಕರಿಸುವ ಶಾಂತ ಕ್ಲೆನ್ಸರ್ ಬಳಕೆಯನ್ನು ಪ್ರೋತ್ಸಾಹಿಸುತ್ತಾರೆ.

2. ಟೋನರ್:
ಹೆಚ್ಚಿನ ಜನರಲ್ಲಿ ಈ ಬಗ್ಗೆ ಗೊಂದಲಗಳಿವೆ. ತ್ವಚೆಯ ರಕ್ಷಣೆಯಲ್ಲಿ ಟೋನರ್ ಗಳು ಐಚ್ಛಿಕವೇ ಅಥವಾ ಕಡ್ಡಾಯವಾಗಿ ಬಳಸಬೇಕೆ ಎಂದು. ಆದರೆ ಈ ವಿಚಾರ ನಿಮ್ಮ ಚರ್ಮದ ಕಾಳಜಿಗೆ ಬಿಟ್ತಿದ್ದು. ಈಗಿನ ಕ್ಲೆನ್ಸರ್ ಗಳು ಸೌಮ್ಯವಾಗಿದ್ದು, ಅಗತ್ಯವಿರುವಷ್ತು ಪಿಎಚ್ ಲೆವೆಲ್ ಹೊಂದಿದ್ದರೆ ನಿಮಗೆ ಟೋನರ್ ಅಗತ್ಯವಿರುವುದಿಲ್ಲ. ಇಲ್ಲವಾದಲ್ಲಿ ನಿಮ್ಮ ತ್ವಚೆಗೆ ಟೋನರ್ ಬಳಸುವುದು ಒಳ್ಳೆಯದು.
ನಿಮ್ಮ ತ್ವಚೆಗೆ ಟೋನರ್ ಗಳು ಹೈಡ್ರೇಟ್ ಮಾಡಬಹುದು, ಕಾಂತಿಯುತಗೊಳಿಸಬಹುದು, ಎಕ್ಸ್‌ಫೋಲಿಯೇಟ್ ಮತ್ತು ಮೊಡವೆಗಳಂತಹ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ನೀವು ಟೋನರು ಬಳಸುವುದಾದರೆ, ಕ್ಲೆನ್ಸಿಂಗ್ ನಂತರ ಒದ್ದೆಯಾದ ಚರ್ಮದ ಮೇಲೆ ಅನ್ವಯಿಸಬೇಕು.

3. ಐ ಕ್ರೀಮ್:
ಇದು ಕೂಡ ನಿಮ್ಮ ಆದ್ಯತೆ ಹಾಗೂ ಚರ್ಮದ ಕಾಳಜಿಗಳನ್ನು ಅವಲಂಬಿಸಿರುವ ನಿಮ್ಮ ಐಚ್ಛಿಕ ವಿಚಾರವಾಗಿದೆ. ಡಾರ್ಕ್ ಸರ್ಕಲ್ ಗಳು ಮತ್ತು ಉಬ್ಬಿದ ಕಣ್ಣುಗಳಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇವುಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ಕೆಲವು ಪ್ರದೇಶವನ್ನು ಹೈಡ್ರೇಟ್ ಮಾಡಲು ಸಹ ಬಳಕೆ ಮಾಡುತ್ತದೆ.
ನಿಮ್ಮ ಮುಖದ ಉಳಿದ ಭಾಗಕ್ಕಿಂತ ಕಣ್ಣಿನ ಸುತ್ತಲಿನ ಚರ್ಮವು ತೆಳ್ಳಗಿರುತ್ತದೆ. ಆದ್ದರಿಂದ ಇದನ್ನು ಹಚ್ಚುವಾಗ ಜಾಗರೂಕರಾಗಿರಬೇಕು. ಏಕೆಂದರೆ ಕಣ್ಣುಗಳ ಸುತ್ತಲಿನ ಚರ್ಮವು ಹೆಚ್ಚು ಸೂಕ್ಷ್ಮವಾಗಿರುತ್ತದೆ ಮತ್ತು ಕಿರಿಕಿರಿಯುಂಟುಮಾಡುತ್ತದೆ.

4. ಸೀರಮ್ಗಳು:
ಕಣ್ಣಿನ ಕ್ರೀಮ್ ಅನ್ವಯಿಸಿದ ನಂತರ (ಅದು ನಿಮ್ಮ ದಿನಚರಿಯಲ್ಲಿದ್ದರೆ), ಸೀರಮ್‌ಗಳನ್ನು ದಪ್ಪಕ್ಕೆ ಅನ್ವಯಿಸಲು ಪ್ರಾರಂಭಿಸಿ. ನಿಮ್ಮ ಮುಖಕ್ಕೆ ಹಲವಾರು ಉತ್ಪನ್ನಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಮುಖಕ್ಕೆ ಭಾರದ ಫೀಲ್ ಆಗಬಹುದು. ಸೀರಮ್ ಗಳು ನಿಮ್ಮ ಮುಖಕ್ಕೆ ಚಿಕಿತ್ಸೆಯನ್ನು ನೀಡುತ್ತವೆ. ಹಾಗಂತ ಇದನ್ನು ಒಟ್ಟಾರೆ ಬಳಸಲು ಸಾಧ್ಯವಿಲ್ಲ. ನಿಮ್ಮ ದಿನಚರಿಯನ್ನು ನೋಡಿಕೊಂಡು ನಿಮ್ಮ ಮುಖಕ್ಕೆ ಅಥವಾ ತ್ವಚೆಗೆ ಸೂಕ್ತವಾಗುವ ರೀತಿಯಲ್ಲಿ ಬಳಕೆ ಮಾಡಿ. ನಿಮ್ಮ ದಿನಚರಿಯು ಸಕ್ರಿಯ ಉತ್ಪನ್ನಗಳೊಂದಿಗೆ ವಿವಿಧ ಸೀರಮ್‌ಗಳು ಹೊಂದಿದ್ದರೆ, ನೀವು ಯಾವಾಗಲೂ ನಿಮ್ಮ ಚರ್ಮರೋಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

5. ಮಾಯಿಶ್ಚರೈಸರ್:
ಸೀರಮ್ಗಳನ್ನು ಅನ್ವಯಿಸಿದ ನಂತರ, ಅದನ್ನು ಮಾಯಿಶ್ಚರೈಸರ್ ನಿಂದ ಮುಚ್ಚುವ ಸಮಯ. ನಿಮ್ಮ ಮಾಯಿಶ್ಚರೈಸರ್ ನೀರು ಆಧಾರಿತ (ಎಣ್ಣೆಯುಕ್ತ ಚರ್ಮದ ಪ್ರಕಾರಗಳಿಗೆ ಒಳ್ಳೆಯದು), ತೈಲ ಆಧಾರಿತ ಆಕ್ಲೂಸಿವ್ ಅಥವಾ ಎಮೋಲಿಯಂಟ್ , ಕ್ರೀಮ್‌ಗಳು ಮತ್ತು ಬಾಲ್ಮ್ ಗಳಾಗಿರಬಹುದು.
ಮಾಯಿಶ್ಚರೈಸರ್‌ಗಳು ಸಾಮಾನ್ಯವಾಗಿ ಕೆಲವು ಎಣ್ಣೆಗಳಂತಹ ಗುಣಲಕ್ಷಣಗಳನ್ನು ಹೊಂದಿರುತ್ತವೆ, ಆದ್ದರಿಂದ ಸೀರಮ್ ಗಳ ಮೊದಲು ಅವುಗಳನ್ನು ಅನ್ವಯಿಸುವುದರಿಂದ ಸೀರಮ್ ಗಳಲ್ಲಿನ ಪದಾರ್ಥ ತ್ವಚೆ ಸೇರುವುದನ್ನು ನಿಧಾನಗೊಳಿಸಬಹುದು.



Click it and Unblock the Notifications











