Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ, ಈ ಗಿಡಮೂಲಿಕೆ ಪೇಸ್ಟ್ಗಳನ್ನ ಬಳಸಿ
ಬೇಸಿಗೆ ಕಾಲ ಸಮೀಪಿಸುತ್ತಿದೆ. ಈ ಸಮಯದಲ್ಲಿ ಚರ್ಮವನ್ನು ಹೆಚ್ಚು ಕಾಡುವ ಸಮಸ್ಯೆ ಅಂದ್ರೆ ಟ್ಯಾನಿಂಗ್. ಸ್ವಲ್ಪ ಹೊರಗೆ ಹೋಗಿ ಬಂದರೂ ಸಾಕು, ಸೂರ್ಯನ ಶಾಖಕ್ಕೆ ಚರ್ಮ ಕಂದು ಬಣ್ಣಕ್ಕೆ ತಿರುಗುವುದು. ಇದನ್ನು ತೊಡೆದುಹಾಕಲು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಆದರೆ, ನಾವಿಂದು ಟ್ಯಾನಿಂಗ್ ಸುಲಭವಾಗಿ ತೆಗೆದುಹಾಕಲು ಕೆಲವು ಗಿಡಮೂಲಿಕೆಗಳ ಪೇಸ್ಟ್ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವುಗಳು ಕಂದುಬಣ್ಣವನ್ನು ತೊಲಗಿಸಿ, ನಿಮ್ಮ ತ್ವಚೆಯ ಬಣ್ಣವನ್ನು ಮರಳಿ ನೀಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.
ಟ್ಯಾನಿಂಗ್ ನಿವಾರಣೆಗೆ ಗಿಡಮೂಲಿಕೆಗಳ ಪೇಸ್ಟ್ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಜೇನುತುಪ್ಪ ಮತ್ತು ಪಪ್ಪಾಯಿ:
ಈ ಎರಡೂ ಪದಾರ್ಥಗಳು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುವ ಗುಣಗಳನ್ನು ಹೊಂದಿವೆ. ನೀವು ಮಾಡಬೇಕಾಗಿರುವುದು ಇಷ್ಟೇ..ಒಂದು ಬಟ್ಟಲಿನಲ್ಲಿ ಸ್ವಲ್ಪ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಹರ್ಬಲ್ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, 15 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಟ್ಯಾನಿಂಗ್ ನಿವಾರಣೆಯಾಗುತ್ತದೆ.

ಸೌತೆಕಾಯಿ ಮತ್ತು ನಿಂಬೆ:
ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆ, ಟ್ಯಾನಿಂಗ್ ಅನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಸೌತೆಕಾಯಿ ಚರ್ಮವನ್ನು ತಂಪಾಗಿಸಿ, ತಾಜಾ ಅನುಭವ ನೀಡುವುದು. ಇದಕ್ಕಾಗಿ ನೀವು ಒಂದು ಬಟ್ಟಲಿನಲ್ಲಿ ತುರಿದ ಸೌತೆಕಾಯಿಯನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಬೇಸಿಗೆಯಲ್ಲಿ ವಾರಕ್ಕೆ ಮೂರು ಬಾರಿ ಈ ಪೇಸ್ಟ್ನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ಬಳಿಕೆ ತೊಳೆಯಿರಿ.

ಆಲೂಗಡ್ಡೆ ರಸ ಮತ್ತು ಮುಲ್ತಾನಿ ಮಿಟ್ಟಿ:
ಟ್ಯಾನಿಂಗ್ ಅನ್ನು ತೆಗೆದುಹಾಕಲು ಆಲೂಗಡ್ಡೆ ರಸವನ್ನು ಬಳಸಲು ತಜ್ಞರು ಶಿಫಾರಸು ಮಾಡುತ್ತಾರೆ. ಒಂದು ಪಾತ್ರೆಯಲ್ಲಿ ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಅದಕ್ಕೆ ಮೂರು ಚಮಚ ಆಲೂಗಡ್ಡೆ ರಸವನ್ನು ಮಿಶ್ರಣ ಮಾಡಿ. ಈ ಹರ್ಬಲ್ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮುಲ್ತಾನಿ ಮಿಟ್ಟಿ ಮೊಡವೆಗಳನ್ನು ನಿವಾರಿಸಿದರೆ, ಆಲೂಗಡ್ಡೆ ಟ್ಯಾನಿಂಗ್ ನಿವಾರಿಸುವುದು.

ಸ್ಟ್ರಾಬೆರಿ ಪೇಸ್ಟ್:
ಸ್ಟ್ರಾಬೆರಿಯಿಂದ ತಯಾರಿಸಿದ ಈ ಪೇಸ್ಟ್ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಮಾಡಲು, ತುರಿದ ಸ್ಟ್ರಾಬೆರಿಗಳಿಗೆ ಹಾಲಿನ ಕೆನೆ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಸುಮಾರು 10 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.

ಹಾಲು ಮತ್ತು ಕೇಸರಿ:
ಅನಾದಿ ಕಾಲದಿಂದಲೂ ಬಿಸಿಲ ಬೇಗೆಯನ್ನು ನಿವಾರಿಸಲು ಕೇಸರಿಯನ್ನು ಬಳಸಲಾಗುತ್ತಿದೆ. ಹಾಲಿಗೆ ಸ್ವಲ್ಪ ಕೇಸರಿ ಬೀಜಗಳನ್ನು ಸೇರಿಸಿ ಮತ್ತು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಟ್ಟ ನಂತರ, ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.



Click it and Unblock the Notifications
