Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತಾರುಣ್ಯಪೂರ್ಣ ತ್ವಚೆಗೆ ಈ ಒಣದ್ರಾಕ್ಷಿ ಫೇಸ್ ಪ್ಯಾಕ್ ಟ್ರೈ ಮಾಡಿ
ಒಣದ್ರಾಕ್ಷಿ ಆರೋಗ್ಯಕ್ಕೆ ಬಹಳ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಕಬ್ಬಿಣದ ಕೊರತೆಯಿಂದ ಬಳಲುತ್ತಿರುವ ಜನರು ಪ್ರತಿದಿನ ಒಣದ್ರಾಕ್ಷಿ ನೆನಸಿದ ನೀರು ಸೇವನೆ ಮಾಡಬೇಕು ಎಂದು ಹೇಳುವುದುಂಟು. ಆದರೆ ಈ ಒಣದ್ರಾಕ್ಷಿ ಸೌಂದರ್ಯಕ್ಕೂ ಸಹಕಾರಿಯಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ?.
ಹೌದು, ಒಣದ್ರಾಕ್ಷಿಯ ಫೇಸ್ ಪ್ಯಾಕ್ ನಿಮ್ಮ ತ್ವಚೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುವುದು. ಹಾಗಾದರೆ ಬನ್ನಿ, ನಿಮ್ಮ ಚರ್ಮ ಪ್ರಕಾರಕ್ಕೆ ಅನುಗುಣವಾಗಿ ಒಣದ್ರಾಕ್ಷಿಯ ಫೇಸ್ ಪ್ಯಾಕ್ ತಯಾರಿಸುವುದು ಹೇಗ? ಇದರಿಂದ ಹೇಗೆ ಪ್ರಯೋಜನ ಸಿಗುವುದು ಎಂಬುದನ್ನು ನೋಡೋಣ.
ತ್ವಚೆಯ ಸಮಸ್ಯೆಗೆ ಒಣದ್ರಾಕ್ಷಿ ಹೇಗೆ ಸಹಕಾರಿ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಚರ್ಮಕ್ಕೆ ಒಣದ್ರಾಕ್ಷಿಯ ಪ್ರಯೋಜನಗಳು:
ಅಧ್ಯಯನಗಳ ಪ್ರಕಾರ, ಒಣದ್ರಾಕ್ಷಿ ಮುಖದಲ್ಲಿನ ಕಲೆಗಳನ್ನು ಕಡಿಮೆ ಮಾಡುವುದರ ಜೊತೆಗೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂದು ಕಂಡುಬಂದಿದೆ. ಇದರ ಹೊರತಾಗಿ, ತ್ವಚೆಯ ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಣದ್ರಾಕ್ಷಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಮತ್ತು ಖನಿಜಗಳಂತಹ ಅನೇಕ ಅಗತ್ಯ ಪೋಷಕಾಂಶಗಳಿದ್ದು, ತ್ವಚೆಯ ಒಳಗಿನಿಂದ ಆರೋಗ್ಯಕರ ಹೊಳಪು ನೀಡುವುದು.
ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಾಲಿನ್ಯ ಮತ್ತು ಚರ್ಮದ ಮೇಲೆ ರಾಸಾಯನಿಕಗಳ ಬಳಕೆಯಿಂದ ಉಂಟಾಗುವ ಹಾನಿಯನ್ನು ಸರಿಪಡಿಸಿ, ಮೃದುವಾಗಿ, ಕಾಂತಿಯುತಗೊಳಿಸುತ್ತದೆ.
ಒಣದ್ರಾಕ್ಷಿಗಳನ್ನು ಪ್ರತಿದಿನ ಸೇವಿಸಬಹುದು ಅಥವಾ ಅವುಗಳನ್ನು ಮುಖಕ್ಕೆ ಹಚ್ಚಬಹುದು.

ಒಣದ್ರಾಕ್ಷಿ ಸೇರಿಸಿದ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ:
ಎಣ್ಣೆಯುಕ್ತ ತ್ವಚೆಗಾಗಿ ಒಣದ್ರಾಕ್ಷಿ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥಗಳು:
ಒಣದ್ರಾಕ್ಷಿ
ಟೀ ಟ್ರೀ ಆಯಿಲ್
ನಿಂಬೆ ರಸ
ಲೋಳೆಸರ
ಮುಲ್ತಾನಿ ಮಿಟ್ಟಿ

ತಯಾರಿಸುವ ವಿಧಾನ:
- ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಒಟ್ಟಿಗೆ ಮಿಶ್ರಣ ಮಾಡಿ.
- ನಂತರ ಅವುಗಳನ್ನು ಗ್ರೈಂಡರ್‌ಗೆ ವರ್ಗಾಯಿಸಿ, ದಪ್ಪ ಪೇಸ್ಟ್ ಮಾಡಿ. ಸ್ಥಿರತೆ ದಪ್ಪವಾಗಿದ್ದರೆ ಮತ್ತು ಒಣಗಿದ್ದರೆ ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಬಹುದು.
- ಈಗ ನಿಮ್ಮ ಬೆರಳುಗಳನ್ನು ಬಳಸಿ ಮುಖಕ್ಕೆ ಮಾಸ್ಕ್ ಹಚ್ಚಿ ಮಸಾಜ್ ಮಾಡಿ. ಇದನ್ನು 25 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ.
- ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಂತರ ಅವುಗಳನ್ನು ಗ್ರೈಂಡರ್ ಗೆ ಹಾಕಿ ರುಬ್ಬಿಕೊಳ್ಳಿ.
- ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ನಂತರ 20 ನಿಮಿಷಗಳ ಕಾಲ ಹಾಗೆ ಬಿಡಿ. ಇದು ಒಣಗಿದ ನಂತರ, ರೋಸ್ ವಾಟರ್ ಮತ್ತು ನೀರಿನ ಮಿಶ್ರಣದಿಂದ ತೊಳೆಯಿರಿ.

ಸಾಮಾನ್ಯ ಮತ್ತು ಒಣ ಚರ್ಮಕ್ಕಾಗಿ ಒಣದ್ರಾಕ್ಷಿ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥಗಳು:
ಒಣದ್ರಾಕ್ಷಿ
ಮೊಸರು
ಸೌತೆಕಾಯಿ
ಹಾಲು
ಕಡಲೆ ಹಿಟ್ಟು
ಗುಲಾಬಿ ದಳಗಳು
ತಯಾರಿಸುವ ವಿಧಾನ:



Click it and Unblock the Notifications