Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೂಗಿನ ಮೇಲಿರುವ ಬ್ಲಾಕ್‌ಹೆಡ್ಸ್‌ನ್ನು ಈ ರೀತಿ ಮನೆಯಲ್ಲಿಯೇ ತೆಗೆಯಬಹುದು
ಮೂಗಿನ ಮೇಲಿನ ಬ್ಲಾಕ್‌ಹೆಡ್ಸ್‌ಗಳು ಮುಖದ ಸೌಂದರ್ಯವನ್ನೇ ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಮೂಗಿನ ಚರ್ಮದ ರಂಧ್ರಗಳು ಸಾಮಾನ್ಯವಾಗಿ ನಿಮ್ಮ ಮುಖದ ಇತರ ಚರ್ಮ ರಂಧ್ರಗಳಿಗಿಂತ ದೊಡ್ಡದಾಗಿರುತ್ತವೆ. ಅದೇ ಕಾರಣಕ್ಕಾಗಿ ಕೊಳಕು, ಹೆಚ್ಚವರಿ ಎಣ್ಣೆಯಿಂದ ಆ ರಂಧ್ರಗಳು ತುಂಬಿಕೊಂಡು, ಬ್ಲಾಕ್‌ಹೆಡ್ಸ್‌ಗಳ ರೂಪದಲ್ಲಿ ಕಪ್ಪುಕಲೆಗಳಾಗಿ ಗೋಚರವಾಗುತ್ತವೆ.
ಆದ್ದರಿಂದ ಕಾಲಕಾಲಕ್ಕೆ ನಿಮ್ಮ ಮೂಗಿನಿಂದ ಈ ಬ್ಲಾಕ್‌ಹೆಡ್ಸ್‌ಗಳನ್ನು ತೆಗೆಯುತ್ತಿರಬೇಕು, ಇಲ್ಲವಾದಲ್ಲಿ ಅದು ಮುಖದ ಸೌಂದರ್ಯಕ್ಕೆ ಅಡ್ಡಿಯುಂಡುಮಾಡುವ ಕಲೆಗಳಾಗಿ ಉಳಿದುಬಿಡುತ್ತವೆ. ಹಾಗಾಗಿ ನೀವು ಮನೆಯಲ್ಲಿ ಮಾಡಬಹುದಾದ ಮೂಗಿನ ಬ್ಲಾಕ್‌ಹೆಡ್ ತೆಗೆಯಲು ಹಂತಗಳನ್ನು ವಿವರಿಸಿದ್ದೇವೆ.

ಹಂತ 1: ಫೇಸ್ ಸ್ಕ್ರಬ್‌ನೊಂದಿಗೆ ಪ್ರಾರಂಭಿಸಿ:
ನಿಮ್ಮ ಮೂಗಿನ ಮೇಲಿರುವ ಬ್ಲಾಕ್‌ಹೆಡ್ಸ್ ತೆಗೆಯಲು ಮೊದಲಿಗೆ ಸೌಮ್ಯವಾದ ಎಕ್ಸ್‌ಫೋಲಿಯೇಟಿಂಗ್ ಫೇಸ್ ಸ್ಕ್ರಬ್ ಬಳಸಿ. ನಿಮ್ಮ ತ್ವಚೆಗೆ ಸರಿಹೊಂದುವಂತಹ ಸ್ಕ್ರಬ್ ಆಯ್ಕೆಮಾಡಿಕೊಂಡು, ಅದನ್ನು ಮೂಗಿನ ಮೇಲೆ ಹಚ್ಚಿನ, ಮೇಲ್ಮುಖ ಚಲನೆಯಲ್ಲಿ ನಿಮ್ಮ ಮೂಗಿನ ಮೇಲೆ ನಿಧಾನವಾಗಿ ಉಜ್ಜಿ. ಇದರಿಂದ ಡೆಡ್ ಸೆಲ್‌ಗಳು ಹಾಗೂ ಬ್ಲ್ಯಾಕ್‌ಹೆಡ್‌ಗಳೆಲ್ಲವೂ ದೂರವಾಗಿ, ಒರಟುತನವು ಕಡಿಮೆಯಾಗುತ್ತದೆ. ಜೊತೆಗೆ ಮೃದುವಾದ ಚರ್ಮವನ್ನು ಪಡೆಯುತ್ತೀರಿ. ಎಕ್ಸ್‌ಫೋಲಿಯೇಟಿಂಗ್ ಹಂತ ಮುಂದಿನ ಹಂತಕ್ಕಾಗಿ ನಿಮ್ಮ ಮೂಗಿನ ರಂಧ್ರಗಳನ್ನು ಸಿದ್ಧಪಡಿಸುತ್ತದೆ.

ಹಂತ 2: ಮುಖಕ್ಕೆ ಸ್ಟೀಮ್ ನೀಡಿ:
ನಿಮ್ಮ ಮುಖವನ್ನು ನಿಧಾನವಾಗಿ ಉಜ್ಜಿದ ನಂತರ ಅದನ್ನು ಒದ್ದೆಯಾದ ಟಿಸ್ಯು ಪೇಪರ್‌ನಿಂದ ಒರೆಸಿ ನಂತರ ಮುಖದ ಸ್ಟೀಮರ್ ಬಳಸಿ. ಈ ಬಿಸಿ ಹಬೆಯು ನಿಮ್ಮ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಇದರಿಂದ ಬ್ಲ್ಯಾಕ್ ಹೆಡ್ ತೆಗದುಹಾಕಲು ಸುಲಭವಾಗುತ್ತದೆ. ಇದಕ್ಕೆ ನೀವು ಸಾಮಾನ್ಯ ಸ್ಟೀಮರ್ ಬಳಸುವುದಕ್ಕಿಂತ ನ್ಯಾನೋ-ಸ್ಟೀಮ್ ತಂತ್ರಜ್ಞಾನವಿರುವ ಸ್ಟೀಮರ್ ಬಳಸುವುದು ಉತ್ತಮ. ಇದು ಚರ್ಮದ ಮೇಲೆ ಮೃದುವಾಗಿರುವುದಲ್ಲದೇ ಕೆಮ್ಮು ಅಥವಾ ಆವಿಯಾಗುವಿಕೆಗೆ ಸಾಮಾನ್ಯ ಸ್ಟೀಮರ್‌ಗಳಿಗಿಂತ 10 ಪಟ್ಟು ಆಳವಾಗಿ ಚರ್ಮದೊಳಗೆ ಸೇರಿಕೊಳ್ಳುತ್ತವೆ.

ಹಂತ 3: ಟೂಲ್ ಮೂಲಕ ಬ್ಲ್ಯಾಕ್ ಹೆಡ್ಸ್ ತೆಗೆಯಿರಿ:
ಸ್ಟೀಮರ್ ಆನ್ ಇರುವಾಗ, ಬ್ಲ್ಯಾಕ್ ಹೆಡ್ ತೆಗೆಯುವ ಉಪಕರಣವನ್ನು ಬಳಸಿ ಬ್ಲ್ಯಾಕ್ ಹೆಡ್ಸ್ ಮತ್ತು ಡೆಡ್ ಸೆಲ್‌ಗಳನ್ನು ತೆಗೆಯಿರಿ. ಈ ಉಪಕರಣವು ಕಪ್ಪು ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಬ್ಲಾಕ್ ಹೆಡ್ಸ್ ತೆಗೆದ ನಂತರ, ಅದನ್ನು ಒದ್ದೆಯಾದ ಬಟ್ಟೆಯಿಂದ ಅಥವಾ ಒದ್ದೆಯಾದ ಟಿಸ್ಯು ಪೇಪರ್‌ನಿಂದ ಸ್ವಚ್ಛಗೊಳಿಸಿ.

ಹಂತ 4: ಮಣ್ಣಿನ ಅಥವಾ ಕ್ಲೇ ಫೇಸ್‌ಪ್ಯಾಕ್ ಹಾಕಿ:
ಒಮ್ಮೆ ನೀವು ಬ್ಲ್ಯಾಕ್ ಹೆಡ್ಸ್ ತೆಗೆದು ಮುಗಿಸಿದ ನಂತರ, ಕ್ಲೆನ್ಸಿಂಗ್ ಕ್ಲೇ ಫೇಸ್‌ಪ್ಯಾಕ್ ಹಾಕಿಕೊಳ್ಳಿ. ಇದನ್ನು ನಿಮ್ಮ ಸಂಪೂರ್ಣ ಮುಖದ ಮೇಲೆ ಅಥವಾ ನಿಮ್ಮ ಮೂಗಿನ ಮೇಲೆ ಹಚ್ಚಿಕೊಳ್ಳಬಹುದು. ಈ ಫೇಸ್ ಪ್ಯಾಕ್ ಮುಖದ ಹೆಚ್ಚುವರಿ ಎಣ್ಣೆಯನ್ನು ಹೊರತೆಗೆದು, ದೈನಂದಿನ ಮಾಲಿನ್ಯಕಾರಕಗಳಿಂದ ರಕ್ಷಿಸುತ್ತದೆ, ಇದರ ಪರಿಣಾಮವಾಗಿ ತ್ವಚೆಯು ಸ್ಪಷ್ಟವಾಗಿ ಕಾಣುತ್ತದೆ. ಇದು ಮೇಲ್ಮೈ ಕಲ್ಮಶಗಳನ್ನು ತೆಗೆಯಲು ಮತ್ತು ಚರ್ಮದ ನೈಸರ್ಗಿಕ ತಡೆ ಕಾರ್ಯವನ್ನು ಬೆಂಬಲಿಸಲು ಕೆಲಸ ಮಾಡುತ್ತದೆ.

ಹಂತ 5: ಮಾಯಿಶ್ಚರೈಸರ್ ಬಳಸಿ ಮುಗಿಸಿ:
ಫೇಸ್‌ಮಾಸ್ಕನ್ನು 10 ನಿಮಿಷಗಳ ಕಾಲ ಬಿಡಿ, ನಂತರ ಉಗುರುಬೆಚ್ಚಗಿನ ನೀರು ಅಥವಾ ಒದ್ದೆಯಾದ ಬಟ್ಟೆಯಿಂದ ತೊಳೆಯಿರಿ. ಎಣ್ಣೆ ರಹಿತ ಮಾಯಿಶ್ಚರೈಸರ್ ಹಚ್ಚುವ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಮುಗಿಸಿ. ಈಮೂಲಕ ನಿಮ್ಮ ಬ್ಲಾಕ್‌ಹೆಡ್ಸ್‌ಗಳನ್ನು ಸುಲಭವಾಗಿ ಮನೆಯಲ್ಲಿಯೇ ತೆಗೆಯಬಹುದು.



Click it and Unblock the Notifications
