Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಸ್ಕಿನ್ ಟ್ಯಾನ್ ತೆಗೆಯಲು ಈ 5 ಮನೆಮದ್ದುಗಳು ಬಹಳ ಪರಿಣಾಮಕಾರಿ
ಸೂರ್ಯನ ಬೆಳಕಿಗೆ ಹೆಚ್ಚು ತೆರೆದುಕೊಂಡಿದ್ದರೆ, ತ್ವಚೆ ಟ್ಯಾನ್ ಆಗುವುದು ಸಾಮಾನ್ಯ. ಅದರಲ್ಲೂ ರಜಾದಿನಗಳನ್ನು ಕಳೆಯಲಯ ಪರ್ವತಾರೋಹಣ ಮಾಡಿದಾಗ ಅಥವಾ ಸಮುದ್ರದಂಡೆಯ ಬಳಿ ಕಾಲಕಳೆದಾಗ ನಿಮ್ಮ ಚರ್ಮ ಕಂದುಬಣ್ಣಕ್ಕೆ ತಿರುಗಿರುತ್ತದೆ. ಇಂತಹ ಚರ್ಮವನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಚಿಂತೆ ಬಿಡಿ, ಈ ಟ್ಯಾನಿಂಗ್ ನ್ನು ಮನೆಯಲ್ಲಿಯೇ ಸುಲಭವಾದ ಮಾರ್ಗಗಳ ಮೂಲಕ ಅದನ್ನು ತೊಡೆದುಹಾಕಬಹುದು. ಅಂತಹ ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.
ಟ್ಯಾನಿಂಗ್ ಜೊತೆಗೆ ಸ್ಕಿನ್ ಬರ್ನ್‌ಗೆ ರಿಲೀಫ್ ನೀಡಿ ತ್ವಚೆಯನ್ನು ಹೊಳೆಯುವಂತೆ ಮಾಡುವ ಕೆಲವು ಸುಲಭ ಪರಿಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅರಿಶಿನ, ಹಾಲು ಮತ್ತು ಜೇನುತುಪ್ಪ:
ಬಿಸಿಲಿನಿಂದ ಮುಖದ ಮೇಲೆ ಆದ ಟ್ಯಾನಿಂಗ್ ತೆಗೆದುಹಾಕಲು ಅರಿಶಿನ, ಹಾಲು ಮತ್ತು ಜೇನುತುಪ್ಪ ಸಹಾಯ ಮಾಡುತ್ತವೆ. ಅದಕ್ಕಾಗಿ ಈ ಮೂರು ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ಪೇಸ್ಟ್ ತಯಾರಿಸಿ, ನಂತರ ಅದನ್ನು ಮುಖ, ಕುತ್ತಿಗೆ, ಕೈಗಳು ಮತ್ತು ಟ್ಯಾನಿಂಗ್ ಆಗಿರುವಲ್ಲೆಲ್ಲಾ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನಂತರ ಸ್ಕ್ರಬ್ ಮಾಡಿ ತೆಗೆಯಿರಿ. ನೀರಿನಿಂದ ಮುಖ ತೊಳೆದ ನಂತರ ರೋಸ್ ವಾಟರ್ ಸ್ಪ್ರೇ ಮಾಡಿ ಮತ್ತು ಮಾಯಿಶ್ಚರೈಸರ್ ಹಚ್ಚಿ.

ಟೊಮೆಟೊ:
ಟೊಮೇಟೊ ನಿಮ್ಮ ತ್ವಚೆಯ ಬಣ್ಣವನ್ನು ಮೊದಲಿನಂತೆ ಮಾಡುವುದಲ್ಲದೆ ತ್ವಚೆಯನ್ನು ಮೃದುವಾಗಿಡುವುದು. ಟ್ಯಾನಿಂಗ್ ಅನ್ನು ತೆಗೆದುಹಾಕಲು ಟೊಮೆಟೊ ಉತ್ತಮವಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.. ಟೊಮೆಟೊ ರಸವನ್ನು ಚರ್ಮಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು, ನಂತರ ತೊಳೆಯಿರಿ.

ಆಲೂಗಡ್ಡೆ ರಸ:
ಆಲೂಗಡ್ಡೆ ಟ್ಯಾನಿಂಗ್ ಅನ್ನು ತೆಗೆದುಹಾಕುವ ಅತ್ಯುತ್ತಮ ಕೆಲಸವನ್ನು ಮಾಡುತ್ತವೆ. ಇದಕ್ಕಾಗಿ, ಆಲೂಗಡ್ಡೆಯನ್ನು ತುರಿದು, ಅದರ ರಸವನ್ನು ಹೊರತೆಗೆಯಿರಿ. ಈಗ ಅದನ್ನು ಟ್ಯಾನಿಂಗ್ ಆದ ಜಾಗದ ಮೇಲೆ ಅನ್ವಯಿಸಿ. ಅದು ಒಣಗಿದಾಗ, ನೀರಿನಿಂದ ತೊಳೆಯಿರಿ. ತದನಂತರ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ಇದು ಟ್ಯಾನ್ ತೆಗೆದುಹಾಕಿ, ಚರ್ಮವನ್ನು ಮೊದಲಿನಂತೆ ಮಾಡುವುದು.

ಅಲೋವೆರಾ:
ಎಲ್ಲರಿಗೂ ತಿಳಿದಿರುವಂತೆ ಅಲೋವೆರಾ ಅನೇಕ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಕಂದುಬಣ್ಣವನ್ನು ತೆಗೆದುಹಾಕುವುದರ ಜೊತೆಗೆ, ಅಲೋವೆರಾ ಸೂರ್ಯನಿಂದ ಸುಟ್ಟ ಚರ್ಮವನ್ನು ಗುಣಪಡಿಸುತ್ತದೆ ಮತ್ತು ಶಮನಗೊಳಿಸುತ್ತದೆ. ನೀವು ಅಲೋವೆರಾ ಸಸ್ಯವನ್ನು ಹೊಂದಿದ್ದರೆ, ಅದರ ಜೆಲ್ ಹೊರತೆಗೆದು, ನೇರವಾಗಿ ಟ್ಯಾನ್ ಆದ ಜಾಗಕ್ಕೆ ಹಚ್ಚಿ. ಇದರಿಂದ ನಿಮ್ಮ ತ್ವಚೆ ನಿಧಾನವಾಗಿ ಮರಳಿ ದೊರೆಯುವುದು.

ಮುಲ್ತಾನಿ ಮಿಟ್ಟಿ:
ಮುಲ್ತಾನಿ ಮಿಟ್ಟಿಯನ್ನು ದೀರ್ಘಕಾಲದಿಂದಲೂ ಚರ್ಮದ ಆರೈಕೆಗಾಗಿ ಬಳಸಲಾಗುತ್ತದೆ. ಇದಕ್ಕಾಗಿ, ಒಂದು ಅಥವಾ ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು, ಅದರಲ್ಲಿ ರೋಸ್ ವಾಟರ್ ಮತ್ತು ಸೌತೆಕಾಯಿ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಚರ್ಮದ ಮೇಲೆ ಚೆನ್ನಾಗಿ ಹಚ್ಚಿ ಮತ್ತು ಒಣಗಿದ ನಂತರ ನೀರಿನಿಂದ ತೊಳೆಯಿರಿ.



Click it and Unblock the Notifications