Latest Updates
-
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ!
ಚಳಿಗಾಲ: ಈ ಫೇಸ್‌ಪ್ಯಾಕ್ ಬಳಸಿದರೆ ತ್ವಚೆ ಡ್ರೈಯಾಗಲ್ಲ
ಚಳಿಗಾಲದಲ್ಲಿ, ಚರ್ಮವು ತೇವಾಂಶವನ್ನು ಕಳೆದುಕೊಂಡು, ಶುಷ್ಕತೆ ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ತ್ವಚೆಯು ಒಣ ಮತ್ತು ನಿರ್ಜೀವವಾಗಿ ಕಾಣುತ್ತದೆ. ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು, ರೂಮ್ ಹೀಟರ್ ಮುಂದೆ ಕುಳಿತುಕೊಳ್ಳುವುದು ಕೂಡ ಚರ್ಮವನ್ನು ಒಣಗಿಸುತ್ತದೆ.
ನೀವೂ ಕೂಡ ಚಳಿಗಾಲದಲ್ಲಿ ಒಣ ತ್ವಚೆಗೆ ಚಿಕಿತ್ಸೆ ನೀಡಲು ಮತ್ತು ತ್ವಚೆಯನ್ನು ಮೃದುವಾಗಿಸಲು ಬಯಸಿದರೆ, ಕೆಲವು ಮನೆಮದ್ದುಗಳನ್ನು ಬಳಸಿಕೊಂಡು, ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸಬಹುದು. ಹಾಲು, ನಿಂಬೆ, ತೆಂಗಿನೆಣ್ಣೆ, ಬಾದಾಮಿ ಎಣ್ಣೆಯಂತಹ ಮನೆಮದ್ದುಗಳನ್ನು ಬಳಸುವುದರಿಂದ ಒಣ ಮತ್ತು ನಿರ್ಜೀವ ತ್ವಚೆಯನ್ನು ಸುಧಾರಿಸುವ ಮೂಲಕ ನೀವು ಚರ್ಮವನ್ನು ಮೃದುಗೊಳಿಸಬಹುದು. ಒಣ ತ್ವಚೆಯನ್ನು ಹೋಗಲಾಡಿಸಲು ಹಾಗೂ ತ್ವಚೆಯನ್ನು ಮೃದುವಾಗಿಸಲು ಯಾವ ಪ್ಯಾಕ್ ಗಳನ್ನು ಬಳಸಬಹುದು ಎಂಬುದನ್ನು ಇಲ್ಲಿ ನೋಡೋಣ.
ಚಳಿಗಾಲದ ಒಣತ್ವಚೆ ಹೋಗಲಾಡಿಸಲು ಬಳಸಬೇಕಾದ ಪ್ಯಾಕ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ನಿಂಬೆ ಮತ್ತು ಜೇನುತುಪ್ಪದ ಪ್ಯಾಕ್:
ಚಳಿಗಾಲದಲ್ಲಿ ಚರ್ಮದ ಶುಷ್ಕತೆಯನ್ನು ಹೋಗಲಾಡಿಸಲು, ಹಾಗೆಯೇ ಚರ್ಮವನ್ನು ಮೃದುಗೊಳಿಸಲು, ನೀವು ನಿಂಬೆ ಮತ್ತು ಜೇನುತುಪ್ಪದ ಪ್ಯಾಕ್ ಅನ್ನು ಬಳಸಬಹುದು. ನಿಂಬೆ ಚರ್ಮವನ್ನು ಬ್ಲೀಚ್ ಮಾಡಿ, ಮೈಬಣ್ಣವನ್ನು ಸುಧಾರಿಸುತ್ತದೆ. ನಿಂಬೆಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಬಳಸಿದರೆ ಚರ್ಮವು ಮೃದುವಾಗುತ್ತದೆ. ನಿಮ್ಮ ಚರ್ಮವು ತುಂಬಾ ಒಣಗಿದ್ದರೆ ಈ ಪ್ಯಾಕ್ ಅನ್ನು ಬಳಸಬೇಡಿ.
ಈ ಪ್ಯಾಕ್ ತಯಾರಿಸುವುದು ಹೇಗೆ?:
ಒಂದು ಬಟ್ಟಲಿನಲ್ಲಿ ಅರ್ಧ ಚಮಚ ನಿಂಬೆ ರಸ ಮತ್ತು ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಸಿದ್ಧಪಡಿಸಿದ ಪೇಸ್ಟ್ ಅನ್ನು ಹತ್ತಿಯ ಸಹಾಯದಿಂದ ಮುಖದ ಮೇಲೆ ಹಚ್ಚಿ, 10 ನಿಮಿಷಗಳ ಕಾಲ ಬಿಡಿ, ನಂತರ ಮುಖವನ್ನು ತೊಳೆಯಿರಿ.

ಹಾಲು ಮತ್ತು ಬಾದಾಮಿ ಪ್ಯಾಕ್:
ಚಳಿಗಾಲದಲ್ಲಿ ಮುಖದ ಮೇಲೆ ಹೊಳಪನ್ನು ತರಲು, ಹಾಲು ಮತ್ತು ಬಾದಾಮಿಯ ಪ್ಯಾಕ್ ಅನ್ನು ಹಚ್ಚಿ. ಹಾಲು ಮತ್ತು ಬಾದಾಮಿ ಪ್ಯಾಕ್ ಚಳಿಗಾಲದಲ್ಲಿ ಮುಖದ ಸುಕ್ಕುಗಳನ್ನು ಹೋಗಲಾಡಿಸುತ್ತದೆ ಜೊತೆಗೆ ಚರ್ಮವನ್ನು ಬ್ಲೀಚ್ ಮಾಡುತ್ತದೆ. ಈ ಪ್ಯಾಕ್ ಬಳಸುವುದರಿಂದ ಮುಖದ ಮೇಲಿನ ಕಲೆಗಳು ನಿವಾರಣೆಯಾಗುತ್ತದೆ.
ಪ್ಯಾಕ್ ಅನ್ನು ಹೇಗೆ ತಯಾರಿಸುವುದು?:
ಮೂರರಿಂದ ನಾಲ್ಕು ಹನಿ ಬಾದಾಮಿ ಎಣ್ಣೆಯನ್ನು ಅರ್ಧ ಕಪ್ ಹಾಲಿಗೆ ಬೆರೆಸಿ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. ಇದನ್ನು 15-20 ನಿಮಿಷಗಳ ಕಾಲ, ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

ಇತರ ಸಲಹೆಗಳು:
ಸ್ನಾನಕ್ಕೂ ಮುನ್ನ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಮೈಗೆಲ್ಲಾ ಹಚ್ಚಿಕೊಳ್ಳುವ ಮೂಲಕ ಒಣಚರ್ಮದವರಿಗೆ ಹೆಚ್ಚಿನ ಆರೈಕೆ ದೊರಕುತ್ತದೆ. ಕೊಬ್ಬರಿ ಎಣ್ಣೆಯ ತ್ವಚೆಯ ಆಳಕ್ಕಿಳಿದು ಪೋಷಣೆ ನೀಡುವ ಗುಣ ಹೊಂದಿದೆ ಹಾಗೂ ಸ್ನಾನದ ಸಮಯದಲ್ಲಿ ಸೂಕ್ಷ್ಮರಂಧ್ರಗಳಿಂದ ಆರ್ದ್ರತೆ ನಷ್ಟವಾಗದಂತೆ ತಡೆಯುತ್ತದೆ. ಆದರೆ ಕೊಬ್ಬರಿ ಎಣ್ಣೆಯನ್ನು ಪ್ರತಿ ಬಾರಿಯ ಸ್ನಾನಕ್ಕೂ ಮುಂಚೆ ಹಚ್ಚಿಕೊಳ್ಳಬೇಕಾಗಿಲ್ಲ. ದಿನದ ಯಾವುದೇ ಹೊತ್ತಿನಲ್ಲಿ ಹಚ್ಚಿಕೊಳ್ಳಬಹುದು. ಕೊಬ್ಬರಿ ಎಣ್ಣೆಯ ನೈಸರ್ಗಿಕ ಪರಿಮಳದೊಂದಿಗೆ ನಿಮ್ಮ ಇಷ್ಟದ ಲ್ಯಾವೆಂಡರ್ ಅಥವಾ ಇತರ ಅವಶ್ಯಕ ತೈಲದ ಹನಿಗಳನ್ನು ಬೆರೆಸಿಕೊಳ್ಳುವ ಮೂಲಕ ನಿಮ್ಮ ಸ್ನಾನವನ್ನು ಇನ್ನಷ್ಟು ತೇಜೋಹಾರಿಯಾಗಿಸಬಹುದು.
ಜೇನುತುಪ್ಪಕ್ಕೆ ಗುಲಾಬಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿದರೂ ತ್ವಚೆ ಒಣಗುವುದಿಲ್ಲ.
ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖವೂ ಹೊಳೆಯುತ್ತದೆ. ಒಣ ತ್ವಚೆ ಸಮಸ್ಯೆಯೂ ದೂರವಾಗುತ್ತದೆ.



Click it and Unblock the Notifications