Latest Updates
-
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
ನಿಮ್ಮದು ಎಣ್ಣೆಯುಕ್ತ ತ್ವಚೆಯೇ? ಹಾಗಿದ್ದರೆ ಈ ವಸ್ತುಗಳು ನಿಮ್ಮ ಬಳಿ ಇರಲೇಬೇಕು
ಎಣ್ಣೆಯುಕ್ತ ತ್ವಚೆ ಹೊಂದಿರುವವರ ಪಾಡು ಒಂದೆರಡಲ್ಲ. ಆಗಾಗ ಕಾಡುವ ಮೊಡವೆ ಒಂದೆಡೆಯಾದರೆ, ಮುಖದ ಮೇಲಿನ ಜಿಡ್ಡಿನ ಸಮಸ್ಯೆ ಇನ್ನೊಂದೆಡೆ. ಇದರಿಂದ ಮೊಡವೆ ಕಲೆಗಳನ್ನು ಮರೆಮಾಚಲು ಮಾಡಿಕೊಳ್ಳುವ ಮೇಕಪ್ ಕೂಡ ಹೆಚ್ಚು ಕಾಲ ಉಳಿಯುವುದಿಲ್ಲ. ಇದರಿಂದ ಕಿರಿಕಿರಿ ಅನುಭವಿಸುತ್ತಲೇ ಇರುತ್ತೇವೆ. ಆದರೆ, ಕೆಲವೊಂದು ಮೂಲಭೂತ ವಸ್ತುಗಳು ನಿಮ್ಮ ಬಳಿ ಇದ್ದರೆ, ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇವುಗಳು ನಿಮ್ಮ ಮುಖದಲ್ಲಿರುವ ಜಿಡ್ಡನ್ನು ಕಡಿಮೆ ಮಾಡಿ, ಸುಂದರ ನೋಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಎಣ್ಣೆಯುಕ್ತ ತ್ವಚೆ ಹೊಂದಿರುವವರು ತಮ್ಮ ಬಳಿ ಇಟ್ಟುಕೊಳ್ಳಲೇಬೇಕಾದ ಕೆಲವೊಂದು ವಸ್ತುಗಳನ್ನು ಈ ಕೆಳಗೆ ನೀಡಲಾಗಿದೆ:

1. ಬ್ಲಾಟಿಂಗ್ ಪೇಪರ್ಸ್:
ಬ್ಲಾಟಿಂಗ್ ಪೇಪರ್‌ಗಳು ನಿಜವಾದ ಜೀವರಕ್ಷಕಗಳಾಗಿದ್ದು, ಎಣ್ಣೆಯುಕ್ತ ನೋಟದಿಂದ ನಿಮ್ಮನ್ನು ಉಳಿಸುವ ಉತ್ತಮ ಸ್ನೇಹಿತ. ಈ ಪೇಪರ್‌ಗಳು ನಿಮ್ಮ ತ್ವಚೆಯಿಂದ ಎಣ್ಣೆಯನ್ನು ಹೀರಿಕೊಳ್ಳುತ್ತವೆ ಮತ್ತು ಹೊಳಪನ್ನು ಹೊರಹಾಕಲು ಸಹಾಯ ಮಾಡುತ್ತದೆ. ನೀವು ಮೇಕಪ್ ಮಾಡಿಕೊಂಡಿದ್ದರೂ ಅಥವಾ ಇಲ್ಲದಿದ್ದರೂ, ಈ ಹಾಳೆಗಳು ಕಾರ್ಯನಿರ್ವಹಿಸುತ್ತವೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಯಾವಾಗಲೂ ಇವುಗಳ ಪ್ಯಾಕೆಟ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ನೀವು ಇದರಿಂದ ಮುಖವನ್ನು ಒರೆಸಬೇಕಾಗಿಲ್ಲ ಬದಲಾಗಿ ಪ್ಯಾಟ್ ಮಾಡಬೇಕು ಎಂಬುದನ್ನು ನೆನಪಿಡಿ.

2. ಲೂಸ್ ಪೌಡರ್:
ಎಣ್ಣೆಯುಕ್ತ ಚರ್ಮವನ್ನು ನಿಯಂತ್ರಿಸಲು ಪೌಡರ್ ಅತ್ತ್ಯುತ್ತಮವಾಗಿದ್ದು, ಮ್ಯಾಟ್ ಪರಿಣಾಮವನ್ನು ನೀಡುತ್ತದೆ. ನೈಸರ್ಗಿಕ ನೋಟವನ್ನು ಪಡೆಯಲು ಕಲರ್ ಬದಲಿಗೆ ಅರೆಪಾರದರ್ಶಕ ಪೌಡರ್ ಬಳಸಿ. ಮೇಕಪ್ ಹಾಕದಿದ್ದರೂ ಸಹ ಈ ಪುಡಿಯನ್ನು ಹಾಕಿಕೊಳ್ಳಬಹುದು. ಇದು ಮುಖದ ಹೊಳಪನ್ನು ಕಾಪಾಡುತ್ತದೆ. ಜೊತೆಗೆ ಇದನ್ನು ದಿನದಲ್ಲಿ ಆಗಾಗ ಹಾಕಿಕೊಳ್ಳುತ್ತಿರಬಹುದು. ಆದ್ದರಿಂದ ಅನುಕೂಲಕ್ಕಾಗಿ ಯಾವಾಗಲೂ ಪ್ರಯಾಣದ ಗಾತ್ರದ ಪ್ಯಾಕ್ ಅನ್ನು ನಿಮ್ಮ ಬ್ಯಾಗ್‌ನಲ್ಲಿಟ್ಟುಕೊಳ್ಳಿ.

3. ಕ್ಲೇ ಮಾಸ್ಕ್:
ಜೇಡಿಮಣ್ಣಿನ ಮುಖವಾಡಗಳು ಎಣ್ಣೆಯುಕ್ತ ಚರ್ಮಕ್ಕಾಗಿ ಅದ್ಭುತಗಳನ್ನು ಮಾಡುತ್ತವೆ ಏಕೆಂದರೆ ಅವುಗಳು ಅತ್ಯುತ್ತಮವಾದ ತೈಲವನ್ನು ಹೀರಿಕೊಳ್ಳುವ ಗುಣಲಕ್ಷಣಗಳನ್ನು ಹೊಂದಿವೆ. ಇವು ಮೊಡವೆಗಳ ಸೌಮ್ಯ ರೂಪಗಳನ್ನು ತಡೆಯಲು ಸಹ ತಡೆಯುತ್ತವೆ. ಆದ್ದರಿಂದ ಜಿಡ್ಡು ಮುಕ್ತ ತ್ವಚೆಗಾಗಿ ನಿಯಮಿತವಾಗಿ ಕ್ಲೇ ಮಾಸ್ಕ್ ಬಳಸುತ್ತಿರಿ.

4. ತೈಲ ಮುಕ್ತ ಫೋಮಿಂಗ್ ಕ್ಲೆನ್ಸರ್:
ಎಣ್ಣೆಯುಕ್ತ ತ್ವಚೆ ಹೊಂದಿರುವವರು, ತೈಲ ಮುಕ್ತ ಫೋಮಿಂಗ್ ಕ್ಲೆನ್ಸರ್ ಬಳಸಿ. ಇವು ಚರ್ಮವನ್ನು ಸ್ವಚ್ಛಗೊಳಿಸಿ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತವೆ ಜೊತೆಗೆ ಹೊಳೆಯುವಂತೆ ಮಾಡುತ್ತವೆ. ಆದಾಗ್ಯೂ, ಹೊಸ ತ್ವಚೆ ಉತ್ಪನ್ನವನ್ನು ಪ್ರಯತ್ನಿಸುವ ಮೊದಲು, ಪ್ಯಾಚ್ ಪರೀಕ್ಷೆಯನ್ನು ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಎಲ್ಲಾ ಉತ್ಪನ್ನಗಳು ಎಲ್ಲರಿಗೂ ಸರಿಹೊಂದುವುದಿಲ್ಲ. ಆದ್ದರಿಂದ, ಇದು ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.

5. ವಾಟರ್ ಬೇಸ್ಡ್ ಮಾಯಿಶ್ಚರೈಸರ್:
ನೀವು ಎಣ್ಣೆಯುಕ್ತ ತ್ವಚೆ ಹೊಂದಿದ್ದರೂ ಸಹ ತೇವಾಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಧೂಳು ಮತ್ತು ಯುವಿ ಕಿರಣಗಳಂತಹ ಬಾಹ್ಯ ಅಂಶಗಳಿಂದ ಶುಷ್ಕತೆ ಉಂಟಾಗಬಹುದು, ಇದು ಅತಿಯಾದ ತೈಲ ಉತ್ಪಾದನೆಗೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಚರ್ಮವನ್ನು ರಕ್ಷಿಸಲು ಮಾಯಿಶ್ಚರೈಸರ್ ಅನ್ನು ಬಳಸಬೇಕು. ಹಗುರವಾದ ಮಾಯಿಶ್ಚರೈಸರ್ ಅನ್ನು ಆರಿಸಿ. ಹೆಚ್ಚಾಗಿ, ನೀರು ಆಧಾರಿತ ಮಾಯಿಶ್ಚರೈಸರ್ ಬಳಸಿ.



Click it and Unblock the Notifications
