Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಮುಖದ ತಕ್ಷಣದ ಕಾಂತಿಗಾಗಿ ಮುಲ್ತಾನಿ ಮಿಟ್ಟಿಯ ಈ ಪ್ಯಾಕ್‌ಗಳನ್ನ ಬಳಸಿ
ಬಹಳ ಹಿಂದಿನಿಂದಲೂ ತ್ವಚೆಯ ಆರೈಕೆಗೆ ಬಳಸುವ ವಸ್ತುಗಳಲ್ಲಿ ಮುಲ್ತಾನಿ ಮಿಟ್ಟಿಯೂ ಒಂದು. ಇದು ಮೆಗ್ನೀಸಿಯಮ್, ಸಿಲಿಕೇಟ್, ಕ್ಯಾಲ್ಸೈಟ್ ಮುಂತಾದ ಖನಿಜಗಳಿಂದ ಸಮೃದ್ಧವಾಗಿದ್ದು, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದರ ಬಳಕೆಯಿಂದ ಸನ್ ಬರ್ನ್, ಉರಿಯೂತ, ಮೊಡವೆ, ಡೆಡ್ ಸೆಲ್ ಸೇರಿದಂತೆ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ. ಹಾಗಾದರೆ, ಆರೋಗ್ಯಕರ-ಸುಂದರ ಚರ್ಮಕ್ಕಾಗಿ ಮುಲ್ತಾನಿ ಮಿಟ್ಟಿಯ ಬಳಕೆ ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ಕಾಂತಿಯುತ ತ್ವಚೆಗಾಗಿ ಮುಲ್ತಾನಿ ಮಿಟ್ಟಿಯನ್ನು ಹೇಗೆ ಬಳಸಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಮುಲ್ತಾನಿ ಮಿಟ್ಟಿ-ಅರಿಶಿನ-ಶ್ರೀಗಂಧದ ಫೇಸ್ ಮಾಸ್ಕ್:
ಬೇಕಾಗುವ ಸಾಮಾಗ್ರಿಗಳು:
ಎರಡು ಚಮಚ ಮುಲ್ತಾನಿ ಮಿಟ್ಟಿ
ಒಂದು ಚಮಚ ಶ್ರೀಗಂಧದ ಪುಡಿ
ಒಂದು ಚಮಚ ಅರಿಶಿನ
ಅಗತ್ಯಕ್ಕೆ ತಕ್ಕ ನೀರು
ಬಳಸುವ ವಿಧಾನ:
ಒಂದು ಬೌಲ್‌ನಲ್ಲಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ, 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಕೊನೆಯದಾಗಿ ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿ. ಎಣ್ಣೆ ಮುಕ್ತ ಚರ್ಮಕ್ಕಾಗಿ ವಾರಕ್ಕೊಮ್ಮೆ ಈ ಪೇಸ್ಟ್ ಅನ್ನು ಬಳಸಿ.

2. ಮುಲ್ತಾನಿ ಮಿಟ್ಟಿ-ಮೊಸರು ಫೇಸ್ ಮಾಸ್ಕ್:
ಬೇಕಾಗುವ ಸಾಮಗ್ರಿಗಳು:
ಅರ್ಧ ಕಪ್ ಮೊಸರು
ಎರಡು ಚಮಚ ಮುಲ್ತಾನಿ ಮಿಟ್ಟಿ
ಒಂದು ಚಮಚ ರೋಸ್ ವಾಟರ್
ಬಳಸುವ ವಿಧಾನ:
ಪಾತ್ರೆಯಲ್ಲಿ ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯಿರಿ. ನೀವು ಒಣ ಚರ್ಮವನ್ನು ಹೊಂದಿದ್ದರೆ, 15 ದಿನಗಳಿಗೊಮ್ಮೆ ಈ ಫೇಸ್ ಮಾಸ್ಕ್ ಅನ್ನು ಪ್ರಯತ್ನಿಸಿ.

3. ಮುಲ್ತಾನಿ ಮಿಟ್ಟಿ- ಬೇವು ಫೇಸ್ ಮಾಸ್ಕ್:
ಬೇಕಾಗುವ ಸಾಮಾಗ್ರಿಗಳು:
ಎರಡು ಚಮಚ ಮುಲ್ತಾನಿ ಮಿಟ್ಟಿ
ಒಂದು ಚಮಚ ಒಣ ಬೇವಿನ ಸೊಪ್ಪು
ಒಂದು ಚಮಚ ಜೇನುತುಪ್ಪ
ರೋಸ್ ವಾಟರ್
ಬಳಸುವ ವಿಧಾನ:
ಒಂದು ಬೌಲ್‌ನಲ್ಲಿ ಈ ಎಲ್ಲಾ ಪದಾರ್ಥಗಳನ್ನು ಹಾಕಿ, ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಈಗ ಅದನ್ನು ಮುಖಕ್ಕೆ ಚೆನ್ನಾಗಿ ಅನ್ವಯಿಸಿ. 20 ನಿಮಿಷಗಳ ನಂತರ, ನೀರಿನಿಂದ ತೊಳೆಯಿರಿ ಮತ್ತು ಲೈಟ್ ಕ್ರೀಮ್ ಹಚ್ಚಿ.

4. ಮುಲ್ತಾನಿ ಮಿಟ್ಟಿ-ಪಪ್ಪಾಯ ಫೇಸ್ ಮಾಸ್ಕ್:
ಬೇಕಾಗುವ ಸಾಮಾಗ್ರಿಗಳು:
ಒಂದು ಕಪ್ ಮಾಗಿದ ಪಪ್ಪಾಯಿಯ ತಿರುಳು
ಎರಡು ಚಮಚ ಮುಲ್ತಾನಿ ಮಿಟ್ಟಿ
ರೋಸ್ ವಾಟರ್
ಬಳಸುವ ವಿಧಾನ:
ಎಲ್ಲಾ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮೃದುವಾದ ಚರ್ಮಕ್ಕಾಗಿ ವಾರಕ್ಕೊಮ್ಮೆ ಈ ಫೇಸ್ ಮಾಸ್ಕ್ ಅನ್ನು ಬಳಸಿ. ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ.

5. ಮುಲ್ತಾನಿ ಮಿಟ್ಟಿ-ಮೊಸರು ಫೇಸ್ ಮಾಸ್ಕ್:
ಬೇಕಾಗುವ ಸಾಮಾಗ್ರಿಗಳು :
ಅರ್ಧ ಕಪ್ ಮೊಸರು
ಎರಡು ಚಮಚ ಮುಲ್ತಾನಿ ಮಿಟ್ಟಿ
ಒಂದು ಚಮಚ ರೋಸ್ ವಾಟರ್
ಬಳಸುವ ವಿಧಾನ:
ಒಂದು ಪಾತ್ರೆಯಲ್ಲಿ ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ. ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯಿರಿ. ನೀವು ಒಣ ಚರ್ಮವನ್ನು ಹೊಂದಿದ್ದರೆ, 15 ದಿನಗಳಿಗೊಮ್ಮೆ ಈ ಫೇಸ್ ಮಾಸ್ಕ್ ಅನ್ನು ಪ್ರಯತ್ನಿಸಿ. ಇದರಿಂದ ನಿಮ್ಮ ಮುಖದಲ್ಲಿ ಕಳೆದು ಹೋದ ಕಾಂತಿ ಮತ್ತೆ ಮರುಕಳಿಸುವುದು.



Click it and Unblock the Notifications
