Latest Updates
-
ನವರಾತ್ರಿ ಸಂಭ್ರಮ: ಕೇವಲ 30 ನಿಮಿಷದಲ್ಲಿ ಪರಿಸರಸ್ನೇಹಿ ಪೂಜಾ ಮಂಟಪ ಅಲಂಕರಿಸುವ ಸುಲಭ ಟಿಪ್ಸ್! -
ನವರಾತ್ರಿ ಉಪವಾಸ: ಗಾರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯಕರ ಡಯಟ್ ಪ್ಲಾನ್ ಇಲ್ಲಿದೆ -
ನವರಾತ್ರಿ ಗರ್ಬಾ ಡ್ರೆಸ್ ರೆಡಿ ಇಲ್ಲವೇ? ಬೆಂಗಳೂರು, ಮುಂಬೈ, ಅಹಮದಾಬಾದ್ನಲ್ಲಿ ಬಾಡಿಗೆಗೆ ಪಡೆಯಲು ಬೆಸ್ಟ್ ಸ್ಥಳಗಳು ಮತ್ತು ಟಿಪ್ಸ್ ಇಲ್ಲಿದೆ! -
ನವರಾತ್ರಿ ಉಪವಾಸದ ಆಯಾಸ, ಕಾಲು ನೋವು ಕಾಡ್ತಿದೆಯಾ? ಗರ್ಬಾ ಡ್ಯಾನ್ಸ್ಗೆ ಸಿದ್ಧರಾಗಲು ಇಲ್ಲಿದೆ 8 ನಿಮಿಷಗಳ ಮ್ಯಾಜಿಕ್ ವರ್ಕೌಟ್ -
ನವರಾತ್ರಿ ಗರ್ಬಾ ಸಂಭ್ರಮ: ನಕಲಿ ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆಡಿ! -
ದೆಹಲಿ AQI ಏರಿಕೆ: ಮನೆಯೊಳಗೆ 'ಏರ್ ಶೀಲ್ಡ್' ಸಿದ್ಧಪಡಿಸಿ, ಕೇವಲ 20 ನಿಮಿಷದಲ್ಲಿ ಧೂಳಿನಿಂದ ಬಚಾವಾಗಿ! -
ನವರಾತ್ರಿ ಹಬ್ಬದ ಸಂಭ್ರಮ: ಕುತ್ತು ಹಿಟ್ಟು, ಸಿಹಿ ತಿಂಡಿ ಕೊಳ್ಳುವಾಗ ಈ ತಪ್ಪು ಮಾಡಬೇಡಿ! -
ಶಾರ್ದೀಯ ನವರಾತ್ರಿ 2026: ಘಟಸ್ಥಾಪನೆ ಮುಹೂರ್ತ, ಬಣ್ಣಗಳ ಪಟ್ಟಿ ಮತ್ತು ಹಬ್ಬದ ಫ್ಯಾಷನ್ ಟಿಪ್ಸ್ ಇಲ್ಲಿದೆ! -
ಮಂಡಿ ನೋವಿನ ಚಿಂತೆಯೇ ಬೇಡ: ಗರ್ಬಾ ಆಡುವ ಮುನ್ನ ಈ 7 ನಿಮಿಷದ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು!
ಬಾಲಿವುಡ್ ಬೆಡಗಿ ಕೃತಿ ಸನೋನ್ ಹಾಲ್ಗೆನ್ನೆಯ ಹಿಂದಿನ ಸೀಕ್ರೇಟ್ ಇದೇ ನೋಡಿ
ಪ್ರತಿಯೊಬ್ಬರಿಗೂ ತ್ವಚೆ ಆರೈಕೆ ಬಹಳ ಮುಖ್ಯ. ಅದ್ರಲ್ಲೂ ಸಿನಿಮಾ ತಾರೆಯರಿಗೆ ತ್ವಚೆಯನ್ನ ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ಸೆಲೆಬ್ರೆಟಿಗಳು ಹಲವಾರು ರೀತಿಯ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ಮನೆಮದ್ದು ಹಾಗೂ ಉತ್ತಮ ತ್ವಚೆ ದಿನಚರಿಯನ್ನು ಕಾಪಾಡಿಕೊಳ್ಳುವ ಮೂಲಕವೇ ಸದಾ ತಾರುಣ್ಯಪೂರ್ಣ ತ್ವಚೆ ಪಡೆದುಕೊಳ್ಳುತ್ತಾರೆ. ಅಂತಹ ಲಿಸ್ಟ್‌ಗೆ ಸೇರೋದು ಬಾಲಿವುಡ್ ನಟಿ ಕೃತಿ ಸನೋನ್. ಹೌದು, ಈ ನಟಿ ತನ್ನ ತ್ವಚೆಯ ಆರೈಕೆಯ ಕುರಿತಂತೆ ಒಂದು ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ತಮ್ಮ ಹಾಲ್ಗೆನ್ನೆಯ ಹಿಂದಿರುವ ರಹಸ್ಯವನ್ನು ತಿಳಿಸಿದ್ದಾರೆ. ನಾವಿಂದು ನಟಿ ಕೃತಿ ಸನೋನ್ ಸೌಂದರ್ಯ ರಹಸ್ಯ ನಿಮ್ಮ ಮುಂದೆ ತೆರೆದಿಡಲಿದ್ದೇವೆ.

ನಟಿ ಕೃತಿ ಸನೋನ್‌ರ ತ್ವಚೆಯ ಆರೈಕೆಯ ಹಂತಗಳನ್ನು ಈ ಕೆಳಗೆ ನೀಡಲಾಗಿದೆ:
ಫೇಸ್ ಮಾಸ್ಕ್:
ದಿನ ಆರಂಭವನ್ನೇ ತ್ವಚೆಯ ಆರೈಕೆಯೊಂದಿಗೆ ಶುರು ಮಾಡಬೇಕು ಎಂಬ ಮಾತಿದೆ. ಅದಕ್ಕಾಗಿ ಬೆಳಗ್ಗೆ ನಿಮ್ಮ ತ್ವಚೆಯನ್ನು ಪೋಷಣೆಯುಕ್ತ ಮತ್ತು ಹೈಡ್ರೀಕರಿಸಿದ ವಸ್ತುಗಳನ್ನ ಬಳಸಬೇಕು. ಇಡೀ ದಿನ ನೀವು ಮನೆಯಿಂದ ಹೊರಗಿರುವುದರಿಂದ, ತ್ವಚೆಯು ಸೂರ್ಯನಿಗೆ ಮತ್ತು ಅದರ ಹಾನಿಕಾರಕ ಯುವಿಕಿರಣಗಳಿಗೆ ತೆರೆದುಕೊಳ್ಳುತ್ತದೆ. ಇದು ನಿಮ್ಮ ತ್ವಚೆಗೆ ಬಹಳ ಸೂಕ್ಷ್ಮವಾಗಿ ಪರಿಣಾಮ ಬೀರುತ್ತದೆ. ಅದಕ್ಕಾಗಿ ಕೃತಿ ಸನೋನ್ ತನ್ನ ಚರ್ಮವನ್ನು ಹೈಡ್ರೇಟ್ ಆಗಿರಿಸಲು ಬೆಳಗ್ಗೆ ನಿಂಬೆ ಮಿಶ್ರಿತ ನೀರನ್ನು ಕುಡಿಯುತ್ತಾರೆ. ಇದಲ್ಲದೆ, ತಮ್ಮ ತ್ವಚೆಯ ವಿನ್ಯಾಸಕ್ಕೆ ಅನುಗುಣವಾಗಿ ವಿವಿಧ ರೀತಿಯ ಫೇಸ್ ಮಾಸ್ಕ್ ಅನ್ವಯ ಮಾಡಿಕೊಳ್ಳುತ್ತಾರೆ.
ಟೋನರ್:
ತ್ವಚೆಯ ಆರೈಕೆಯಲ್ಲಿ ಟೋನರ್ ಬಹಳ ನಿರ್ಣಾಯಕ ಪಾತ್ರ ವಹಿಸುತ್ತದೆ. ನಿಮ್ಮ ತ್ವಚೆಯ ಟೋನ್ ಸುಧಾರಿಸಲು ಟೋನರ್‌ಗಳು ಸಹಕಾರಿ. ಅದೇ ರೀತಿ ಕೃತಿ ಅವ್ರು ನಿಯಾಸಿನಾಮೈಡ್ ಸಮೃದ್ಧವಾಗಿರುವ ಟೋನರನ್ನು ಬಳಸುತ್ತಾರೆ. ಇದು ಮೊಡವೆಗಳನ್ನು ಗುಣಪಡಿಸಲು, ಆರೋಗ್ಯಕರ ತ್ವಚೆಯ ಕೋಶಗಳನ್ನು ಪುನರ್ನಿರ್ಮಿಸಲು ಮತ್ತು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಸಿ ಸೀರಮ್:
ವಿಟಮಿನ್ ಸಿ ಸೀರಮ್ ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸುವಲ್ಲಿ ಸಹಕಾರಿ. ಅದಕ್ಕಾಗಿ ಈ ಈ ನಟಿಯೂ ಸಹ ತನ್ನ ಮುಖಕ್ಕೆ ವಿಟಮಿನ್ ಸಿ ಸೀರಮ್ ಮಿಸ್ ಮಾಡದೇ ಬಳಸುತ್ತಾರೆ. ವಿಟಮಿನ್ ಸಿ ಸೀರಮ್ ಚರ್ಮದಲ್ಲಿ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇವು ನಿಮ್ಮ ತ್ವಚೆಯನ್ನು ವಯಸ್ಸಾಗುವಿಕೆಯ ಲಕ್ಷಣಗಳನ್ನು ನಿಧಾನಗೊಳಿಸಿ, ಸದಾ ತಾರುಣ್ಯಪೂರ್ಣವಾಗಿರುವಂತೆ ಮಾಡುತ್ತದೆ.
ಮಾಯಿಶ್ಚರೈಸಿಂಗ್ ಎಸ್‌ಪಿಎಫ್:
ತ್ವಚೆ ತೇವಾಂಶದಿಂದ ಕೂಡಿರಲು ಮಾಯಿಶ್ಚರೈಸರ್ ಹಚ್ಚುವುದು ಅತ್ಯಗತ್ಯ. ಅದೇ ರೀತಿ ಸನ್‌ಸ್ಕ್ರೀನ್ ಕೂಡ. ನಿಮ್ಮ ತ್ವಚೆಯ ಆರೈಕೆಯಲ್ಲಿ ಬೇರೆ ಯಾವುದನ್ನು ತಪ್ಪಿಸಿದರೂ, ಇವೆರಡನ್ನೂ ಮಿಸ್ ಮಾಡಲೇಬಾರದು. ಮಾಯಿಶ್ಚರೈರ್ ಮತ್ತು ಸನ್‌ಸ್ಕ್ರೀನ್ ಪ್ರತ್ಯೇಕವಾಗಿ ಅನ್ವಯಿಸುವ ಬದಲು, ಕೃತಿ ಹೈಡ್ರೇಟಿಂಗ್ ಸನ್‌ಸ್ಕ್ರೀನ್ ಬಳಸುತ್ತಾರಂತೆ. ಇದು ನಿಮ್ಮ ತ್ವಚೆಯನ್ನು ಹಾನಿಕಾರಕ ಯುವಿ ಕಿರಣಗಳಿಂದ ತಡೆದು ತಕ್ಷಣೆ ನೀಡುತ್ತದೆ.
ಲಿಪ್ ಬಾಮ್:
ಆರೋಗ್ಯಕರ ತುಟಿಗಾಗಿ ಲಿಪ್‌ಬಾಮ್ ಹಚ್ಚಿಕೊಳ್ಳುವುದು ಬಹಳ ಮುಖ್ಯ. ಇವು ನಿಮ್ಮ ತಟಿಯನ್ನು ತೇವಾಂಶದಿಂದ ಕೂಡಿರಲು ಸಹಕಾರಿ. ಅದೇ ರೀತಿ ಕೃತಿ ಸನೋನ್ ತನ್ನ ತುಟಿಗಳನ್ನು ಮೃದುವಾಗಿಡಲು ಲಿಪ್ ಬಾಮ್ ಬಳಸುತ್ತಾರೆ. ಇವರು ತುಟಿಗಳ ಮೇಲೆ ಲಿಪ್ ಬಾಮ್ನ ದಪ್ಪ ಪದರವನ್ನು ಹಚ್ಚಿಕೊಳ್ಳುತ್ತಾರೆ.



Click it and Unblock the Notifications


