ತ್ವಚೆಯ ಡೆಡ್‌ಸೆಲ್‌ ನಿವಾರಣೆಗೆ ಅಡುಗೆ ಮನೆಯ ಸುಲಭ ಉಪಾಯಗಳಿವು

ಮಾಲಿನ್ಯ, ಕೊಳೆಯಿಂದ ತ್ವಚೆಯ ಮೇಲೆ ಸತ್ತ ಜೀವಕೋಶ ಅಥವಾ ಡೆಡ್ ಸೆಲ್‌ಗಳು ಸಂಗ್ರಹವಾಗುತ್ತವೆ. ಇದನ್ನು ತೆಗೆದುಹಾಕದಿದ್ದರೆ, ಅದು ಮುಂದೆ ಮೊಡವೆ, ಕಪ್ಪು ಕಲೆಗಳನ್ನು ಉಂಟು ಮಾಡುತ್ತದೆ. ಆದರೆ, ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ, ಸರಿಯಾದ ತ್ವಚೆಯ ದಿನಚರಿಯನ್ನು ಅನುಸರಿಸುವುದು ಮುಖ್ಯ. ಜೊತೆಗೆ ಅಡುಗೆಮನೆಯಲ್ಲಿ ಇರುವ ಕೆಲವು ವಸ್ತುಗಳಿಂದ ಸ್ಕ್ರಬ್ ಮಾಡುವ ಮೂಲಕ, ಅವುಗಳನ್ನು ತೆಗೆದುಹಾಕಬಹುದು. ಅವುಗಳಾವುವು ಇಲ್ಲಿ ನೋಡೋಣ.

ಡೆಡ್ ಸೆಲ್‌ ತೆಗೆದುಹಾಕಲು ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಜೇನುತುಪ್ಪ:

ಜೇನುತುಪ್ಪ:

ಜೇನುತುಪ್ಪ ತ್ವಚೆಗೆ ಎಷ್ಟು ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಇದೊಂದು ಉತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವುದಲ್ಲದೇ, ಚರ್ಮದಲ್ಲಿನ ಡೆಡ್ ಸೆಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುವುದು. ಇದಕ್ಕಾಗಿ, ರಾತ್ರಿ ನೆನೆಸಿದ ಬಾದಾಮಿ ಪೇಸ್ಟ್‌ನೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ, ಅದನ್ನು ಮುಖದ ಮೇಲೆ ಹಚ್ಚಿ, ಸ್ವಲ್ಪ ಹೊತ್ತು ಹಾಗೆಯೇ ಇಟ್ಟು ಮುಖಕ್ಕೆ ಮಸಾಜ್ ಮಾಡಿ. ಇದು ಚರ್ಮವನ್ನು ತೇವಾಂಶದಿಂದ ಇಡಲು ಪರಿಣಾಮಕಾರಿಯಾಗಿದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ವ್ಯತ್ಯಾಸವನ್ನು ಕಾಣಬಹುದು.

ಓಟ್ಸ್:

ಓಟ್ಸ್:

ತ್ವಚೆಯಲ್ಲಿರುವ ಕೊಳೆ ಹಾಗೂ ಡೆಡ್ ಸೆಲ್‌ಗಳನ್ನು ಹೋಗಲಾಡಿಸಲು ಓಟ್ಸ್ ಪರಿಣಾಮಕಾರಿ ವಸ್ತು. ಜೊತೆಗೆ, ಇದು ಕ್ಲೆನ್ಸರ್ ಏಜೆಂಟ್ ಆಗಿ ಕಾರ್ಯನಿರ್ವಹಿಸುವುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು, ಓಟ್ಸ್‌ನ್ನು ಮೊಸರಿನ ಜೊತೆಎ ಬೆರೆಸಿ ಮುಖಕ್ಕೆ ಸ್ಕ್ರಬ್ ಆಗಿ ಬಳಸಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದಲ್ಲದೆ, ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಪಪ್ಪಾಯಿ:

ಪಪ್ಪಾಯಿ:

ಪಪ್ಪಾಯಿ ತ್ವಚೆ ಆರೈಕೆಯಲ್ಲಿ ಬಳಸಲಾಗುವ ಅತ್ಯಂತ ಪ್ರಮುಖ ವಸ್ತು. ಈ ಮನೆಮದ್ದನ್ನು ಅಳವಡಿಸಿಕೊಂಡರೆ ತ್ವಚೆಯ ಸತ್ತ ಜೀವಕೋಶಗಳಷ್ಟೇ ಅಲ್ಲ, ಟ್ಯಾನ್ ಕೂಡ ಹೋಗಲಾಡಿಸಬಹುದು, ಮುಖದಲ್ಲಿ ಹೊಳಪನ್ನು ತರಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು, ಪಪ್ಪಾಯಿಯನ್ನು ತೆಗೆದುಕೊಂಡು ಅದನ್ನು ಮ್ಯಾಶ್ ಮಾಡಿದ ನಂತರ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ, ಮಸಾಜ್ ಮಾಡುತ್ತಾ, ಮುಖವನ್ನು ತೊಳೆದುಕೊಳ್ಳಿ. ತದನತರ ಆಗುವ ಬದಲಾವಣೆಯನ್ನು ನೀವೇ ನೋಡಿ.

ಅಕ್ಕಿ:

ಅಕ್ಕಿ:

ಮೊದಲಿನಿಂದಲೂ ಅಕ್ಕಿ, ಅಕ್ಕಿ ನೀರನ್ನು ತ್ವಚೆಯ ಆರೈಕೆಗೆ ಬಳಕೆ ಮಾಡಲಾಗುತ್ತಿದೆ. ಇದನ್ನು ನೈಸರ್ಗಿಕ ಸ್ಕ್ರಬ್ ಎಂದೂ ಕರೆಯುತ್ತಾರೆ. ಅದೇ ರೀತಿ ಡೆಡ್ ಸೆಲ್ ತೆಗೆದುಹಾಕಲು ಮೂರು ಚಮಚ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ರೋಸ್ ವಾಟರ್ ಸೇರಿಸಿ. ಈಗ ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ ಎಫ್ಫೋಲಿಯೇಟ್ ಮಾಡಿ. ಇದು ಮುಖಕ್ಕೆ ಉತ್ತಮ ಹೊಳಪನ್ನು ನೀಡುತ್ತದೆ.

ಹಸಿ ಹಾಲು:

ಹಸಿ ಹಾಲು:

ಹಸಿ ಹಾಲು ಮುಖವನ್ನು ಹೈಡ್ರೀಕರಿಸಿ ಮೃದುವಾಗಿಡಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ 4 ರಿಂದ 5 ಚಮಚ ಹಸಿ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ರವೆ ಸೇರಿಸಿ. ಈಗ ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, ಮಸಾಜ್ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ಮುಖದ ರಂಧ್ರದಲ್ಲಿ ಶೇಖರಣೆಯಾದ ಕೊಳೆಯನ್ನು ತೆಗೆದುಹಾಕಬಹುದು.

English summary

Kitchen things Help in Removing Dead Skin cells From the Face in Kannada

Here we talking about Kitchen things help in removing dead skin cells from the face in Kannada, read on
Story first published: Saturday, March 19, 2022, 11:00 [IST]
X
Desktop Bottom Promotion