For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿಯನ್ನು ಹೆಚ್ಚಿಸುವ ಮ್ಯಾಜಿಕ್ ವಸ್ತು ಈ ಜೇಡ್ ರೋಲರ್

|

ಜೇಡ್ ರೋಲರ್ ಎಂಬುದು ಇಂದು ತಮ್ಮ ಸೌಂದರ್ಯ ಸಮಸ್ಯೆಗಳಿಗೆ ತ್ವರಿತ ಪರಿಹಾರ ಹುಡುಕುವ ಜನರಿಗೆ ಅಚ್ಚುಮೆಚ್ಚಿನ ಸೌಂದರ್ಯ ಸಾಧನವಾಗಿ ಹೊರಹೊಮ್ಮುತ್ತಿದೆ. ಆದರೆ ಇದು ಹೊಸ ವಿಷಯವಲ್ಲ. ಇದನ್ನು ಪ್ರಾಚೀನ ಕಾಲದಿಂದಲೂ ಚೀನಾದಲ್ಲಿ ಬಳಸಲಾಗುತ್ತಿದೆ. ಚೀನಿಯರು ಸಾಂಪ್ರದಾಯಿಕವಾಗಿ ಇದನ್ನು ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ಮಸಾಜ್ ಗಳಿಗಾಗಿ ಬಳಸುತ್ತಿದ್ದರು. ಹಾಗಾದರೆ ಬನ್ನಿ ಈ ಜೇಡ್ ರೋಲರ್ ನ್ನು ನಿಮ್ಮ ಸೌಂದರ್ಯ ಹಾಗೂ ತ್ವಚೆಯ ಕಾಂತಿಯನ್ನು ಹೇಗೆ ಬಳಸಬೇಕು ಎಂಬುದನ್ನು ಹೇಳಲಾಗಿದೆ.

ಜೇಡ್ ರೋಲರ್ ಏನು ಮಾಡುತ್ತದೆ?:

ಜೇಡ್ ರೋಲರ್ ಏನು ಮಾಡುತ್ತದೆ?:

ನಿಮ್ಮ ಮುಖದ ಮೇಲೆ ಸೌಮ್ಯ ಒತ್ತಡವನ್ನು ಹೇರಲು ಜೇಡ್ ರೋಲರ್ ಅನ್ನು ಬಳಸಬಹುದು. ಇದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮುಖದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ನಿಮ್ಮ ತ್ವಚೆಯನ್ನು ಮೃದು ಮಾಡಿ, ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಇದು ನಿಮ್ಮ ಚರ್ಮದಿಂದ ಕಲ್ಮಶವನ್ನು ತೆಗೆದು, ಗಟ್ಟಿಗೊಳಿಸುತದೆ. ಇದರ ದೃಢವಾದ ಬಳಕೆಯು ನಿಮ್ಮ ಚರ್ಮವನ್ನು ದೃಡಗೊಳಿಸಿ, ವಯ್ಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಒತ್ತಡವನ್ನು ಕಡಿಮೆ ಮಾಡಿ, ಉರಿಯೂತವನ್ನು ಶಮನಗೊಳಿಸುತ್ತದೆ.

ಜೋಡ್ ರೋಲರ್ ಅನ್ನು ಬಳಸುವುದು ಹೇಗೆ?:

ಜೋಡ್ ರೋಲರ್ ಅನ್ನು ಬಳಸುವುದು ಹೇಗೆ?:

ಜೇಡ್ ರೋಲರ್ ನ್ನು ಉತ್ತಮ ಫಲಿತಾಂಶಗಳಿಗಾಗಿ ಅದನ್ನು ಹೇಗೆ ಬಳಸಬೇಕೆಂದು ಇಲ್ಲಿ ಹೇಳಲಾಗಿದೆ. ಕನ್ನಡಿಯ ಮುಂದೆ ನಿಂತು ಮುಖದ ಕೆಳಗಿನ ಭಾಗದಲ್ಲಿ ರೋಲ್ ಮಾಡಿ. ಗಲ್ಲದಿಂದ ನಿಧಾನವಾಗಿ ಮೇಲೆ ರೋಲ್ ಮಾಡುತ್ತಾ ಬನ್ನಿ. ಮೇಲ್ಮುಖವಾಗಿ ಮತ್ತು ಕೆಳಕ್ಕೆ ಚಲಿಸುವಾಗ ಎರಡೂ ರೋಲರ್ ಗಳು ಉರುಳುತ್ತಿರಬೇಕು. ಆದರೆ ನಿಮ್ಮ ಕಣ್ಣುಗಳ ಸಮೀಪವಿರುವ ಪ್ರದೇಶದ ಸುತ್ತಲೂ ಜಾಗರೂಕರಾಗಿರಿ. ಈ ಸ್ಥಳವು ಸೂಕ್ಷ್ಮವಾಗಿದೆ. ರೋಲಿಂಗ್ ಪ್ರಾರಂಭಿಸುವ ಮೊದಲು, ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ನೀವು ತಂಪಾದ ಪರಿಣಾಮವನ್ನು ಬಯಸಿದರೆ ನಿಮ್ಮ ಜೇಡ್ ರೋಲರ್ ಅನ್ನು ಫ್ರಿಜ್ ನಲ್ಲಿ ಇಡಬಹುದು.

ಇದನ್ನು ಯಾರು ಬಳಸಬಹುದು?:

ಇದನ್ನು ಯಾರು ಬಳಸಬಹುದು?:

ಜೇಡ್ ರೋಲರ್‌ಗಳು ಬಹುತೇಕ ಎಲ್ಲಾ ಚರ್ಮದ ಪ್ರಕಾರಗಳಿಗೂ ಪರಿಣಾಮಕಾರಿ. ನೀವು ಶುಷ್ಕ ಅಥವಾ ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಪರವಾಗಿಲ್ಲ. ಆದರೆ ಶುಷ್ಕ ಚರ್ಮ ಹೊಂದಿರುವ ಜನರು ಉತ್ತಮ ಫಲಿತಾಂಶಕ್ಕಾಗಿ ಮೊದಲು ಮಾಯಿಶ್ಚರೈಸರ್, ಎಣ್ಣೆ ಅಥವಾ ಸೀರಮ್ ಅನ್ನು ಅನ್ವಯಿಸಬಹುದು.

ಜೇಡ್ ರೋಲರ್ ಗಳ ಪ್ರಯೋಜನಗಳು:

ಜೇಡ್ ರೋಲರ್ ಗಳ ಪ್ರಯೋಜನಗಳು:

ಈ ಉತ್ಪನ್ನದ ಉತ್ತಮ ವಿಷಯವೆಂದರೆ ಸಂಪೂರ್ಣವಾಗಿ ನೈಸರ್ಗಿಕ ಮತ್ತು ರಾಸಾಯನಿಕಗಳಿಂದ ಮುಕ್ತವಾಗಿರುತ್ತದೆ. ಇದು ನಿಮ್ಮ ಚರ್ಮಕ್ಕೆ ಕಾಂತಿ ಮತ್ತು ವಿಶ್ರಾಂತಿ ನೀಡುತ್ತದೆ. ನಿಯಮಿತ ಬಳಕೆಯು ನಿಮ್ಮ ಚರ್ಮವನ್ನು ನಯವಾದ ಮತ್ತು ಕಾಂತಿಯುತವಾಗಿಸುತ್ತದೆ. ಕಲ್ಮಶವನ್ನು ತೆಗೆಯುವುದರಿಂದ ನೀವು ಹೆಚ್ಚುವರಿ ಹೊಳಪನ್ನು ಪಡೆಯುತ್ತೀರಿ ಮತ್ತು ಅದು ನಿಮ್ಮನ್ನು ಯುವಕರಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುವುದಿಲ್ಲ. ಆದರೆ ನೀವು ಅದನ್ನು ಬಳಸುವ ಮೊದಲು ಮಾಯಿಶ್ಚರೈಸರ್ ಅನ್ನು ಅನ್ವಯಿಸಿದರೆ, ನೀವು ಮೃದು ಮತ್ತು ಪೂರಕ ಚರ್ಮವನ್ನು ಪಡೆಯುತ್ತೀರಿ.

English summary

How To Use Jade Face Rollers To Get Extra Glow On Your Face

There are many beauty aids out there. Butt a jade roller is a chemical-free and absolutely natural way to beautiful and radiant skin. Have a look
X
Desktop Bottom Promotion