Latest Updates
-
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ತ್ವಚೆಯ ಎಲ್ಲಾ ಸಮಸ್ಯೆಗೆ ಕರಿಬೇವು ಒಂದೇ ಮದ್ದು
ಕರಿಬೇವಿನ ಎಲೆಗಳು ನಮ್ಮ ಅಡುಗೆಮನೆಗೆ ಹೊಸದೇನಲ್ಲ. ಇದನ್ನು ವರ್ಷಗಳಿಂದ ವಿವಿಧ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತಿದೆ, ಆದರೆ ಆಹಾರದಲ್ಲಿ ಸುವಾಸನೆಗಾಗಿ ಬಳಸುವ ಈ ಎಲೆಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಇದು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಆರೋಗ್ಯಕರ-ಸುಂದರ ಚರ್ಮಕ್ಕಾಗಿ ಅವುಗಳನ್ನು ವಿವಿಧ ರೂಪದಲ್ಲಿ ಬಳಸಬಹುದು. ಅದು ಹೇಗೆ ಎಂಬುದನ್ನು ನೋಡೋಣ.
ಕರಿಬೇವಿನ ಎಲೆಗಳು ತ್ವಚೆಗೆ ಹೇಗೆ ಸಹಕಾರಿ ಎಂಬದನ್ನು ಈ ಕೆಳಗೆ ನೀಡಲಾಗಿದೆ:

1. ಕರಿಬೇವು ಹಾಗೂ ನಿಂಬೆ:
ನಿಂಬೆ ಹಣ್ಣಿನಲ್ಲಿ ವಿಟಮಿನ್ ' ಸಿ ' ಅಂಶವಿದ್ದು ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳಿವೆ. ಕರಿಬೇವಿನ ಎಲೆಗಳು ನಿಂಬೆ ಹಣ್ಣಿನ ಮಿಶ್ರಣದ ಫೇಸ್ ಪ್ಯಾಕ್ ನಿಮ್ಮ ಮುಖದ ಚರ್ಮವನ್ನು ಹೊಳೆಯುವಂತೆ ಮಾಡಿ ಮುಖದ ಮೇಲಿನ ಕಲೆಗಳನ್ನು ನಿವಾರಣೆ ಮಾಡಿ ಮೊಡವೆಗಳನ್ನು ದೂರ ಮಾಡುತ್ತದೆ. ಇದಕ್ಕಾಗಿ 4-5 ಕರಿಬೇವಿನ ಎಲೆಗಳನ್ನು ರುಬ್ಬುವ ಮೂಲಕ ಪೇಸ್ಟ್ ಮಾಡಿ. ಈ ಪೇಸ್ಟ್‌ಗೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.

2 . ಕರಿಬೇವು-ರೋಸ್‌ವಾಟರ್:
ಈ ಫೇಸ್ ಪ್ಯಾಕ್‌ನ ಉಪಯೋಗದಿಂದ ನಿಮ್ಮ ಮುಖದ ಚರ್ಮ ಮೊಡವೆಗಳಿಂದ ಮುಕ್ತವಾಗಿ, ಹೊಳೆಯಲು ಪ್ರಾರಂಭವಾಗುತ್ತದೆ. ರೋಸ್ ವಾಟರ್ ನಿಮ್ಮ ಚರ್ಮದ ಪಿಹೆಚ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ ಎರಡು ಮೂರು ದಿನಗಳ ಕಾಲ ಕರಿಬೇವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಒಂದು ಚಮಚ ಕರಿಬೇವಿನ ಎಲೆಯ ಪುಡಿಗೆ ಒಂದು ಚಮಚ ಮುಲ್ತಾನಿ ಮಿಟ್ಟಿ ಮತ್ತು ಕೆಲವು ಹನಿ ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದಾಗ ನೀರಿನಿಂದ ತೊಳೆಯಿರಿ. ಮುಖ ಹೊಳೆಯಲಾರಂಭಿಸುತ್ತದೆ.

3. ಕರಿಬೇವು- ಅರಿಶಿನ:
ಎಲ್ಲರಿಗೂ ಗೊತ್ತಿರುವ ಹಾಗೆ ಅರಿಶಿಣ ಮತ್ತು ಕರಿಬೇವಿನ ಎಲೆಗಳು ಆಂಟಿ - ಬ್ಯಾಕ್ಟರಿಯಲ್ ಗುಣ ಲಕ್ಷಣಗಳಿಂದ ತುಂಬಿದೆ. ಇವೆರಡರ ಮಿಶ್ರಣದಿಂದ ತಯಾರಾದ ಫೇಸ್ ಪ್ಯಾಕ್ ಕೇವಲ ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ವಾಸಿ ಮಾಡುವುದಲ್ಲದೆ ಆರೋಗ್ಯಕರ ಚರ್ಮ ನಿಮ್ಮದಾಗುವಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಕರಿಬೇವಿನ ಎಲೆಗಳ ಪೇಸ್ಟ್‌ಗೆ ಸ್ವಲ್ಪ ಅರಿಶಿನ ಮತ್ತು ಕೆಲವು ಹನಿ ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ. ಇದರಿಂದ ಮುಖದ ಕಲೆಗಳಲ್ಲೂ ನಿವಾರಣೆಯಾಗಿ, ಮುಖದಲ್ಲಿ ಹೊಳಪು ಮೂಡುವುದು.

4. ಕರಿಬೇವು-ಹಾಲು:
15-20 ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್ ಹಾಲಿನಲ್ಲಿ ಕುದಿಸಿ. ತಣ್ಣಗಾದ ನಂತರ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ನೀವು ಮುಖದ ಮೇಲಿನ ಕಲೆಗಳನ್ನು ತೊಡೆದುಹಾಕುತ್ತೀರಿ.

5. ಕರಿಬೇವು-ನಿಂಬೆ:
ಒಂದು ಮಿಕ್ಸರ್ ಜಾರ್ ನಲ್ಲಿ ಕರಿಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮೊಡವೆಗಳನ್ನು ತೊಡೆದುಹಾಕಲು ವಾರಕ್ಕೊಮ್ಮೆ ಈ ಪ್ಯಾಕ್ ಅನ್ನು ಹಚ್ಚಿ.



Click it and Unblock the Notifications