Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಫೇಸ್ ವಾಶ್ ಆಯ್ಕೆ ಮಾಡುವಾಗ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ..
ನಿಮ್ಮ ತ್ವಚೆಯು ಅತ್ಯಂತ ಸೂಕ್ಷ್ಮವಾದುದ್ದು. ಅದಕ್ಕೆ ಸರಿಯಾದ ಆರೈಕೆ ಅಗತ್ಯವಾಗಿರುತ್ತದೆ. ಇಲ್ಲವಾದಲ್ಲಿ ಆರೋಗ್ಯ ಹದಗೆಟ್ಟು ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ತ್ವಚೆಯನ್ನು ಕಾಪಾಡುವಂತಹ ಸಾಕಷ್ಟು ಉತ್ಪನ್ನಗಳು ನಮ್ಮ ನಡುವೆ ಇದೆ. ಹಾಗಂತ ಸಿಕ್ಕಿದ ಎಲ್ಲಾ ಉತ್ಪನ್ನಗಳನ್ನು ನಿಮ್ಮ ಮುಖದ ಮೇಲೆ ಪ್ರಯೋಗ ಮಾಡಿದರೆ ಆ ಸೂನ ತ್ವಚೆಯ ಕಥೆಯೇನು ಒಮ್ಮೆ ಯೋಚಿಸಿ. ಮಾರುಕಟ್ಟೆಯಲ್ಲಿ ಅದೆಷ್ಟೇ ಒಳ್ಳೆಯ ಪ್ರಾಡಕ್ಟ್ಗಿದ್ದರೂ, ಅದು ನಿಮ್ಮ ತ್ವಚೆಗೆ ಹೊಂದಿಕೆಯಾಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ತ್ವಚೆಯ ಪ್ರಕಾರವನ್ನು ಅರಿತು ಅದಕ್ಕನುಗುಣವಾದ ಉತ್ಪನ್ನಗಳನ್ನು ಪ್ರಯತ್ನಸಬೇಕು. ಅದರಲ್ಲಿ ಬಹುಮುಖ್ಯವಾದುದು ನೀವು ಬಳಸುವ ಫೇಸ್‌ವಾಶ್.

ಫೇಸ್ ವಾಶ್ ಸೌಂದರ್ಯ ಕಾಪಾಡುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ನಿಮ್ಮ ಮುಖವನ್ನು ಸ್ವಚ್ಛಗೊಳಸುತ್ತದೆ ಮಾತ್ರವಲ್ಲ, ಉತ್ತಮ ಚರ್ಮ ರಕ್ಷಣೆಯ ದಿನಚರಿಯತ್ತ ಮೊದಲ ಹೆಜ್ಜೆಯಾಗಿದೆ. ಆದರೆ ಆಗಾಗ್ಗೆ, ನಾವು ತಪ್ಪಾದ ಫೇಸ್ ವಾಶ್ ಅನ್ನು ಬಳಸುತ್ತೇವೆ. ಆದ್ದರಿಂದ ನಿಮ್ಮ ಚರ್ಮಕ್ಕೆ ಸೂಕ್ತವಾದದ್ದನ್ನು ನೀವು ಹೇಗೆ ನಿರ್ಧರಿಸಬಹುದು ಎಂಬುದು ಇಲ್ಲಿವೆ.
ಮುಖ ತೊಳೆಯುವ ಕ್ಲೆನ್ಸರ್‌ನ ಪ್ರಮುಖ ಕಾರ್ಯವೆಂದರೆ ನಿಮ್ಮ ಮುಖದ ಚರ್ಮವನ್ನು ಸಂಪೂರ್ಣವಾಗಿ ಒಣಗಿಸದೆ ಕೊಳಕು, ಬೆವರು ಮತ್ತು ಮೇಕಪ್ ತೆಗೆಕದುಹಾಕುವುದು. ಆರೋಗ್ಯ ಮತ್ತು ಸೌಂದರ್ಯದ ವಿಚಾರಕ್ಕೆ ಬಂದ್ರೆ, ಸುಗಂಧ ರಹಿತ ಮತ್ತು ಸೌಮ್ಯವಾದ (ನಿಮ್ಮ ಚರ್ಮರೋಗ ವೈದ್ಯರಿಂದ ನಿಮಗೆ ಸೂಚನೆ ನೀಡದ ಹೊರತು) ಕ್ಲೆನ್‌ರ್‌ಗೆ ಹೋಗುವುದು ನಿಮ್ಮ ಸುರಕ್ಷಿತ ದಾರಿಯಾಗಿದೆ.
ನಿಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ಹೇಗೆ ಫೇಸ್‌ವಾಶ್ ಆರಿಸುವುದು ಎಂಬುದು ಇಲ್ಲಿದೆ.

ಕಾಂತಿಯುತ ತ್ವಚೆಗಾಗಿ ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್ ಪ್ರಬಲ ಸೌಂದರ್ಯ ಉತ್ಪನ್ನಗಳಲ್ಲಿ ಒಂದಾಗಿದೆ. ಅದರ ಪಾನೀಯಗಳಿಂದ ಹಿಡಿದು ವಿವಿಧ ವ್ಯಾಪಕ ಶ್ರೇಣಿಯ ಉತ್ಪನ್ನಗಳವರೆಗೆ, ಆಪಲ್ ಸೈಡರ್ ವಿನೆಗರ್ ಹಲವಾರು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕಲ್ಮಶಗಳನ್ನು ಹೊರಹಾಕುವ ಮೂಲಕ ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ. ಅಷ್ಟೇ ಅಲ್ಲ, ಕಾಂತಿಯುತ ನೋಟಕ್ಕಾಗಿ ಚರ್ಮದ ನೈಸರ್ಗಿಕ ಪಿಹೆಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೊಡವೆಗಳು, ಬ್ಲ್ಯಾಕ್‌ಹೆಡ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರಂಧ್ರಗಳನ್ನು ತೆರವುಗೊಳಿಸುತ್ತದೆ.

ಮೊಡವೆ ಮುಕ್ತವಾಗಲು ಟೀ ಟ್ರೀ ಫೇಸ್ ವಾಶ್:
ನಾವೆಲ್ಲರೂ ಮೊಡವೆಗಳ ಬಗ್ಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಈ ಮೊಡವೆಗಳನ್ನು ಕಡಿಮೆ ಮಾಡುವಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುವುದು ಸಹಜ. ಈ ಸಂದರ್ಭದಲ್ಲಿ ಟೀ ಟ್ರೀ ಫೇಸ್ ವಾಶ್ ಮೊಡವೆಗಳನ್ನು ಎದುರಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಿಮ್ಮ ಮುಖದ ಮೇಲೆ ಮೊಡವೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಟೀ ಟ್ರೀ ಫೇಸ್ ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಅದು ಕೆಂಪು ಗುಳ್ಳೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ, ನಿಮ್ಮ ಮುಖದ ಚರ್ಮವು ನಯವಾಗುತ್ತದೆ.

ಎಣ್ಣೆಯುಕ್ತ ತ್ವಚೆಯಿಂದ ಮುಕ್ತಿ ಪಡೆಯಲು ಪ್ಯೂರಿಟಿ ಆಯಿಲ್ ಕಂಟ್ರೋಲ್:
ಎಣ್ಣೆಯುಕ್ತ ಚರ್ಮವನ್ನು ಹೊಂದಿರುವ ಎಲ್ಲ ಜನರಿಗೆ ಅದನ್ನು ನಿಭಾಯಿಸುವುದು ಒಂದು ಹೋರಾಟವೇ ಸರಿ. ತಮ್ಮ ಚರ್ಮಕ್ಕೆ ಸೂಕ್ತವಾದ ಉತ್ನಗಳ ಹುಡುಕಾಟದಲ್ಲಿ ಸದಾ ಇರುತ್ತಾರೆ. ಶುದ್ಧತೆ ತೈಲ ನಿಯಂತ್ರಣ(ಪ್ಯೂರಿಟಿ ಆಯಿಲ್ ಕಂಟ್ರೋಲ್) ಫೇಸ್ ವಾಶ್‌ನೊಂದಿಗೆ, ನಿಮ್ಮ ಎಲ್ಲಾ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಗೆ ವಿದಾಯ ಹೇಳಿ. ಆ ಮೂಲಕ ನಿಮ್ಮ ಚರ್ಮವನ್ನು ಪುನರ್ಯೌವನಗೊಳಿಸಿ. ಇದು ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವವನ್ನು ತೆಗೆದುಹಾಕುವುದು ಮಾತ್ರವಲ್ಲದೆ ನಿಮ್ಮ ತ್ವಚೆಯು ಹೊಳೆಯುವಂತೆ ಮಾಡುತ್ತದೆ.

ಉತ್ತಮ ತೇವಾಂಶ ಪಡೆಯಲು ಹೈಡ್ರೇಶನ್ ಫೇಸ್ ಕ್ಲೆನ್ಸರ್ :
ತ್ವಚೆ ಹೈಡ್ರೇಷನ್ ಆಗಿರುವುದು ಬಹುಮುಖ್ಯ. ಇದು ಚರ್ಮದ ಆರೋಗ್ಯಕ್ಕೆ ಮೂಲಾಧಾರವಾಗಿದೆ. ನಿಮ್ಮ ಮುಖ ಸಾಕಷ್ಟು ಪ್ರಮಾಣದ ತೇವಾಂಶ ಪಡೆದರೆ ನಯವಾಗಿ ಕಾಣಿಸುತ್ತದೆ. ಅಷ್ಟೇ ಅಲ್ಲ, ತ್ವಚೆ ಕಾಂತಿಯುತಗೊಳ್ಳುತ್ತದೆ. ಇದಕ್ಕೆ ಹೈಡ್ರೇಶನ್ ಫೇಸ್ ಕ್ಲೆನ್ಸರ್ ಸರಿಯಾದ ಆಯ್ಕೆಯಾಗಿದೆ. ಇದರಿಂದ ನಿಮ್ಮ ಮುಖಕ್ಕೆ ಹೈಡ್ರೇಷನ್ ದೊರೆಯುತ್ತದೆ. ಹಾಗೂ ಆರೋಗ್ಯವಾಗಿಯೂ ಇರುತ್ತದೆ.



Click it and Unblock the Notifications
