Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ರೀತಿಯೆಲ್ಲಾ ಮಾಡಿದರೆ ಫೇಶಿಯಲ್ ಮಾಡಿಸಿಯೂ ಪ್ರಯೋಜನವಿಲ್ಲ
ಪ್ರತಿಯೊಬ್ಬ ಮಹಿಳೆಯು ಸುಂದರವಾಗಿ ಕಾಣಲು ಹಾತೊರೆಯುತ್ತಾಳೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾಳೆ. ಮುಖದ ಕಾಂತಿಯನ್ನು ಹೆಚ್ಚಿಸಲು ಫೇಶಿಯಲ್ ಉತ್ತಮ ಮಾರ್ಗವಾಗಿದೆ. 30 ವರ್ಷದ ನಂತರ ಪ್ರತಿ ತಿಂಗಳು ಫೇಶಿಯಲ್ ಮಾಡಿಸಿಕೊಳ್ಳುವುದು ತ್ವಚೆಗೆ ತುಂಬಾ ಪ್ರಯೋಜನಕಾರಿ.
ಬ್ಯೂಟಿ ಪಾರ್ಲರ್‌ಗಳಲ್ಲಿ ವಿವಿಧ ರೀತಿಯ ಫೇಶಿಯಲ್‌ಗಳಿವೆ. ನಿಮ್ಮ ತ್ವಚೆಗೆ ಅನುಗುಣವಾಗಿ ಫೇಶಿಯಲ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು, ಇದರಿಂದ ನಿಮ್ಮ ತ್ವಚೆಯು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ.
ಫೇಶಿಯಲ್ ಮುಖಕ್ಕೆ ಪ್ರಯೋಜನಕಾರಿ, ಆದರೆ ಫೇಶಿಯಲ್ ಮಾಡಿದ ನಂತರ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನೀವು ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಅವು ನಿಮ್ಮ ಚರ್ಮಕ್ಕೆ ಹಾನಿಯುಂಟುಮಾಡುತ್ತವೆ. ಹಾಗಾದರೆ, ಅಂತಹ ವಿಷಯಗಳಾವುವು ನೋಡೋಣ.
ಫೇಶಿಯಲ್ ನಂತರ ನೆನಪಿಡಬೇಕಾದ ವಿಷಯಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸೋಪ್ ಬಳಸಬೇಡಿ:
ಹೌದು, ಫೇಶಿಯಲ್ ನಂತರ ಸೋಪ್ ಬಳಸಬೇಡಿ. ಏಕೆಂದರೆ, ಫೇಶಿಯಲ್ ಮಾಡಿದ ನಂತರ ಚರ್ಮವು ತುಂಬಾ ಮೃದುವಾಗುತ್ತದೆ. ಆದ್ದರಿಂದ ಸೋಪಿನ ಶುಷ್ಕತೆಯಿಂದ ತ್ವಚೆ ಹಾನಿಗೊಳಗಾಗಬಹುದು, ಅದಕ್ಕಾಗಿ ಫೇಶಿಯಲ್ ನಂತರ ಕನಿಷ್ಠ 24 ರಿಂದ 48 ಗಂಟೆಗಳ ಕಾಲ ಸೋಪ್ ಅನ್ನು ಬಳಸಬೇಡಿ. ನೀವು ಮುಖವನ್ನು ತೊಳೆಯಬೇಕಾದರೆ ಹಸಿ ಹಾಲಿನಿಂದ ತೊಳೆಯಿರಿ.

ಸ್ಕ್ರಬ್ ಮಾಡಬೇಡಿ:
ಫೇಶಿಯಲ್ ಮಾಡಿದ 12 ರಿಂದ 24 ಗಂಟೆಗಳ ಕಾಲ ಚರ್ಮದ ಮೇಲೆ ಏನನ್ನೂ ಬಳಸಬೇಡಿ. ಕೆಲವರು ಫೇಶಿಯಲ್ ಮಾಡಿದ ನಂತರವೂ ಚರ್ಮದ ಮೇಲೆ ಸ್ಕ್ರಬ್‌ಗಳನ್ನು ಬಳಸುವುದನ್ನು ಮುಂದುವರೆಸುತ್ತಾರೆ, ಇದು ನಿಮ್ಮ ಮುಖದ ತ್ವಚೆಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಸ್ಕ್ರಬ್ ಮಾಡಬೇಡಿ.

ಫೇಶಿಯಲ್ ಮೊದಲು ಥ್ರೆಡಿಂಗ್ ಮಾಡಿ:
ನೀವು ಥ್ರೆಡಿಂಗ್ ಮತ್ತು ಫೇಶಿಯಲ್ ಎರಡನ್ನೂ ಒಟ್ಟಿಗೆ ಮಾಡಬೇಕಾದರೆ, ಮೊದಲು ಥ್ರೆಡಿಂಗ್ ಮಾಡಿ ನಂತರ ಫೇಶಿಯಲ್ ಮಾಡಬೇಕು. ಫೇಶಯಲ್ ನಂತರ, ಚರ್ಮವು ತುಂಬಾ ಸೂಕ್ಷ್ಮ ಮತ್ತು ಮೃದುವಾಗುತ್ತದೆ. ಸೂಕ್ಷ್ಮ ಚರ್ಮದ ಮೇಲೆ ಥ್ರೆಡ್ ಮಾಡುವುದು ಹಾನಿಕಾರಕವಾಗಿದೆ ಏಕೆಂದರೆ ಥ್ರೆಡಿಂಗ್ ತುಂಬಾ ನೋವಿನ ಪ್ರಕ್ರಿಯೆಯಾಗಿದೆ. ಫೇಶಿಯಲ್ ಮೊದಲು ಯಾವಾಗಲೂ ಥ್ರೆಡಿಂಗ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

ಸುಡುವ ಬಿಸಿಲಿನಿಂದ ರಕ್ಷಿಸಿ:
ಫೇಶಿಯಲ್ ಮಾಡಿದ ತಕ್ಷಣ ಬಿಸಿಲಿಗೆ ಹೋಗಬೇಡಿ, ಟ್ಯಾನಿಂಗ್ ಆಗುವ ಅಪಾಯವಿದೆ. ನೀವು ಬಿಸಿಲಿನಲ್ಲಿ ಹೋಗಬೇಕಾದರೆ, ನಿಮ್ಮ ಮುಖ ಮತ್ತು ಕುತ್ತಿಗೆಯನ್ನು ಸಂಪೂರ್ಣವಾಗಿ ಮುಚ್ಚಬೇಕು. ಜೊತೆಗೆ ಛತ್ರಿ ಬಳಸಿದರೆ ಉತ್ತಮ. ಇಲ್ಲವಾದಲ್ಲಿ ಸೂರ್ಯನ ಬಿಸಿಲಿನ ತಾಪಕ್ಕೆ ಗುರಿಯಾಗುವ ಸಾಧ್ಯತೆಯಿದೆ.

ವ್ಯಾಕ್ಸ್ ಮಾಡಬೇಡಿ:
ಫೇಶಿಯಲ್ ಮಾಡಿದ ತಕ್ಷಣ ಫೇಸ್ ವ್ಯಾಕ್ಸಿಂಗ್ ಮಾಡಬೇಡಿ. ಮೇಲೆ ಹೇಳಿದಂತೆ. ಪೇಶಿಯಲ್ ನಂತರ, ಚರ್ಮವು ತುಂಬಾ ಸೂಕ್ಷ್ಮ ಮತ್ತು ಮೃದುವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಕ್ಸಿಂಗ್ ಮಾಡುವುದು ಮುಖದ ಚರ್ಮವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ಇಂತಹ ನೋವಿನ ಏನೇ ಕೆಲಸವಿದ್ದರೂ, ಫೇಶೀಯಲ್ ಮುನ್ನವೇ ಮಾಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ವ್ಯಾಕ್ಸಿಂಗ್ ನೋವಿನಿಂದ ಮುಕ್ತಿಯೂ ಪಡೆಯಬಹುದು.

ಹೊಸ ಉತ್ಪನ್ನಗಳನ್ನು ಬಳಸಬೇಡಿ:
ಫೇಶಿಯಲ್ ಮಾಡಿದ ನಂತರ, ಮುಖದ ಮೇಲೆ ಯಾವುದೇ ಹೊಸ ಉತ್ಪನ್ನವನ್ನು ಬಳಸದಂತೆ ವಿಶೇಷ ಕಾಳಜಿ ವಹಿಸಿ, ಏಕೆಂದರೆ ಫೇಶಿಯಲ್ ನಂತರ ಹೊಸ ಉತ್ಪನ್ನವನ್ನು ಬಳಸುವುದರಿಂದ ನಿಮ್ಮ ಮುಖದಲ್ಲಿ ಸೋಂಕು ಉಂಟಾಗುತ್ತದೆ. ನೀವು ಈಗಾಗಲೇ ಬಳಸಿದ ಉತ್ಪನ್ನಗಳನ್ನು ಮಾತ್ರ ಬಳಸಿ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ, ಫೇಶಿಯಲ್ ಮೂಲಕ ಹೊಳೆಯುವ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಬಹುದು.



Click it and Unblock the Notifications
