Latest Updates
-
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ!
ನಿಮ್ಮ ತ್ವಚೆಗೆ ತಕ್ಕ ಬನಾನ ಫೇಸ್‌ಪ್ಯಾಕ್, ಬಳಸಿದ ಮರುಕ್ಷಣವೇ ಹೆಚ್ಚುತ್ತೆ ಮುಖದ ಗ್ಲೋ
ಬಿಸಿಲಿನಲ್ಲಿ ಓಡಾಡಿ ಮುಖ ಕಪ್ಪಗಾಗಿದೆ, ನಾಳೆ ಬೆಳಗ್ಗೆ ಫಂಕ್ಷನ್‌ಗೆ ಹೋಗಬೇಕು, ಸನ್ ಟ್ಯಾನ್ ಹೋಗಲಾಡಿಸಿ ಮುಖದ ಕಾಂತಿ ಹೆಚ್ಚಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಬನಾನ ಫೇಸ್‌ಪ್ಯಾಕ್ ಟ್ರೈ ಮಾಡಿ.

ಅಯ್ಯೋ ಬನಾನ ಫೇಸ್‌ಪ್ಯಾಕ್ ತರಲಿಲ್ಲ ಎಂದು ಯೋಚಿಸಬೇಡಿ, ಇದನ್ನು ನೀವು ಹೊರಗಡೆಯಿಂದ ತರುವ ಅವಶ್ಯಕತೆಯಿಲ್ಲ ಮನೆಯಲ್ಲಯೇ ಮಾಡಬಹುದು, ಅಲ್ಲದೆ ನಿಜವಾಗಲೂ ಈ ಪೇಶಿಯಲ್ ವರ್ಕ್ ಆಗುವುದೇ ಎಂಬ ಅಳುಕು ನಿಮ್ಮಲ್ಲಿದ್ದರೆ, ಅವುಗಳನ್ನು ಮನಸ್ಸಿನಿಂದ ತೆಗೆದುಹಾಕಿ.
ಏಕೆಂದರೆ ನೀವು ಬ್ಯೂಟಿ ಪಾರ್ಲರ್‌ಗೆ ಹೋಗಿ ಸಾವಿರಾರು ರುಪಾಯಿ ಕೊಟ್ಟು ಫೇಶಿಯಲ್ ಮಾಡಿದರೆ ಎಷ್ಟು ಗ್ಲೋ ಪಡೆಯುತ್ತಿರೋ ಅಷ್ಟೇ ಗ್ಲೋ ಬನಾನ್ ಫೇಸ್‌ಪ್ಯಾಕ್ ಬಳಸಿದರೆ ಸಿಗುವುದು.
ನಾವಿಲ್ಲಿ ನಿಮ್ಮ ತ್ವಚೆಗೆ ತಕ್ಕ ಬನಾನ ಫೇಸ್‌ಪ್ಯಾಕ್ ರೆಸಿಪಿ ನೀಡಿದ್ದೇವೆ ನೋಡಿ:
ಎಣ್ಣೆ ತ್ವಚೆಯವರಿಗೆ
ಹಣ್ಣಾದ ಬಾಳೆಹಣ್ಣು 1
ಸೌತೆ
ಪಪ್ಪಾಯಿ
ಮಾಡುವುದು ಹೇಗೆ:
ಒಂದು ಚಿಕ್ಕ ತುಂಡು ಪಪ್ಪಾಯಿ, ಸಿಪ್ಪೆ ಸುಲಿದ ಸೌತೆಕಾಯಿ, ಬಾಳೆಹಣ್ಣ ಈ ಮೂರನ್ನು ಮ್ಯಾಶ್ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆಯಿರಿ.
ಮುಖದಲ್ಲಿ ಮೊಡವೆ ಇದೆಯೇ?
ಅರ್ಧ ಬಾಳೆಹಣ್ಣು
1 ಚಮಚ ಕಹಿಬೇವಿನ ಎಲೆಯ ಪೇಸ್ಟ್
1/2 ಚಮಚ ಅರಿಶಿಣ
ಮೊಡವೆ ಇದ್ದರೆ ನೀವು ಈ ಮೂರು ಮಿಶ್ರಣ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಅರಿಶಿಣ ಹಾಕಿರುವುದರಿಂದ ಮೈಲ್ಡ್ ಫೇಸ್‌ವಾಶ್ ಬಳಸಿ ಮುಖ ತೊಳೆಯಿರಿ.
ಒಣ ತ್ವಚೆಯೇ?
ಒಣ ತ್ವಚೆಯವರಿಗೆ ಎರಡೇ ಎರಡು ಸಾಮಗ್ರಿ ಸಾಕು, ಬಾಳೆ ಹಣ್ಣು ಹಾಗೂ ಜೇನು ಇದ್ದರೆ ನಿಮ್ಮ ಮುಖದ ಅಂದ ಹೆಚ್ಚಿಸಬಹುದು.
ಬಾಳೆಹಣ್ಣು ಮ್ಯಾಶ್ ಮಾಡಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.
ಮುಖದಲ್ಲಿ ಕಪ್ಪು ಕಲೆಗಳಿದ್ದರೆ
ಬಾಳೆಹಣ್ಣು
ನಿಂಬೆರಸ
ಬಾಳೆಹಣ್ಣು ಮ್ಯಾಶ್ ಮಾಡಿ ಅದಕ್ಕೆ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ, ಈ ರೀತಿ ಪ್ರತಿದಿನ ಮಾಡುತ್ತಾ ಬನ್ನಿ, ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುವುದು.
ಮುಖದಲ್ಲಿ ನೆರಿಗೆ ತಡೆಗಟ್ಟಲು
ಬೇಕಾಗುವ ಸಾಮಗ್ರಿ
ಅರ್ಧ ಬಾಳೆಹಣ್ಣು
1 ಚಮಚ ಕೆನೆ
ಬಾಳೆಹಣ್ಣು ಮ್ಯಾಶ್ ಮಾಡಿ ಅದಕ್ಕೆ ಕೆನೆ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿದರೆ ಮುಖದಲ್ಲಿ ಯೌವನ ಕಳೆ ಮಾಸುವುದಿಲ್ಲ.
ನಿಮ್ಮ ತ್ವಚೆಗೆ ತಕ್ಕ ಬಾಳೆಹಣ್ಣಿನ ಫೇಸ್‌ಪ್ಯಾಕ್ ರೆಸಿಪಿ ಗೊತ್ತಾಯ್ತಲ್ಲ, ಇವುಗಳನ್ನು ಬಳಸಿ ನೋಡಿ, ಎಲ್ಲಾ ಫೇಶಿಯಲ್ ಬಿಟ್ಟು ಬಾಳೆಹಣ್ಣು ಫೇಸ್‌ಪ್ಯಾಕ್ ಇಷ್ಟಪಡುತ್ತೀರಿ.



Click it and Unblock the Notifications


