Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ನರಹುಲಿ ಹೋಗಲಾಡಿಸಲು ಪರಿಣಾಮಕಾರಿಯಾದ ಮನೆಮದ್ದು
ನರಹುಲಿ ಸಮಸ್ಯೆ ಅಂದರೆ ಕತ್ತಿನ ಭಾಗದಲ್ಲಿ, ಮುಖದ ಮೇಲೆ, ಕೈಗಳ ಬೆರಳುಗಳ ಮೇಲೆ ಚಿಕ್ಕ ಮಾಂಸದ ಗಂಟುಗಳು ಏಳುವುದು. ಹೀಗೆ ನರಹುಲಿ ಬಂದರೆ ಅದು ನಮ್ಮ ಬಾಹ್ಯ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಇವುಗಳು ಕತ್ತಿನ ಭಾಗದಲ್ಲಿ ಕೆಲವರಿಗೆ ಹೆಚ್ಚಾಗಿ ಕಂಡು ಬರುತ್ತದೆ.

ನರಹುಲಿ ಸಮಸ್ಯೆ ಬಂದಾಗ ಚರ್ಮರೋಗ ತಜ್ಞರ ಬಳಿ ಚಿಕ್ಕ ಶಸ್ತ್ರಕ್ರಿಯೆ ಮೂಲಕ ಇವುಗಳನ್ನು ತೆಗೆಯುತ್ತಾರೆ. ಆದರೆ ಇವುಗಳನ್ನು ಮನೆಮದ್ದು ಮೂಲಕ ಕೂಡ ತೆಗೆಯಬಹುದು. ಇಲ್ಲಿ ನಾವು ನರಹುಲಿ ತೆಗೆಯಲು ಸರಳವಾದ ಹಾಗೂ ಪರಿಣಾಮಕಾರಿಯಾದ ಮನೆಮದ್ದು ನೀಡಿದ್ದೇವೆ. ಇವುಗಳನ್ನು ಮಾಡಿದರೆ ನರಹುಲಿ ಸಮಸ್ಯೆ ಇಲ್ಲವಾಗಿಸಬಹುದು ನೋಡಿ:

1. ಚಾಕ್ ಪೀಸ್
ನರಹುಲಿ ಹೋಗಲಾಡಿಸಲು ನಿಮ್ಮ ಮನೆಯಲ್ಲಿರುವ ಚಾಕ್‌ಪೀಸ್ ಸಾಕು. ಚಾಕ್‌ಪೀಸ್ ಬಳಸಿ ನರಹುಲಿ ತೆಗೆಯುವುದು ಹೇಗೆ ಎಂದು ನೋಡೋಣ:
ನರಹುಲಿ ತೆಗೆದು ಹಾಕಲು ಒಂದು ಬಟ್ಟಲಲ್ಲಿ ಸೀಮೆ ಸುಣ್ಣವನ್ನು ಪುಡಿ ಮಾಡಿ ಹಾಕಿ. ಪುಡಿ ತುಂಬಾ ನುಣ್ಣಗೆ ಇರಬೇಕು. ಈಗ ಪುಡಿ ಮಾಡಿರುವ ಸುಣ್ಣವನ್ನು ದೇಹದಲ್ಲಿರುವ ನರಹುಲಿಗಳಿ ಮೇಲೆ ಹಚ್ಚಿ ನಂತರ ಅದರ ಮೇಲೆ ಗಾಯಕ್ಕೆ ಹಾಕುವ ಪ್ಲಾಸ್ಟರ್ ಹಾಕಿ. ಈ ರೀತಿ ರಾತ್ರಿ ಮಲಗುವಾಗ ಮಾಡಿ. ಬೆಳಗ್ಗೆ ಎದ್ದ ಬಳಿಕ ಪ್ಲಾಸ್ಟರ್ ತೆಗೆಯಿರಿ. ಈ ರೀತಿ ದಿನಬಿಟ್ಟು ದಿನದಂತೆ ಹದಿನೈದು ದಿನ ಮಾಡಿದರೆ ನರಹುಲಿ ಪೂರ್ತಿಯಾಗಿ ಇಲ್ಲವಾಗುವುದು.

2. ಈರುಳ್ಳಿ ರಸ
ನರಹುಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಪರಿಣಾಮಕಾರಿ ವಿಧಾನವೆಂದರೆ ಈರುಳ್ಳಿ ರಸ ಹಾಗೂ ಕೊಬ್ಬರಿ ಎಣ್ಣೆ. ಈರುಳ್ಳಿ ಪೇಸ್ಟ್ ಮಾಡಿ, ಅದರ ರಸ ತೆಗೆದು, ಅದಕ್ಕೆ ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಶುದ್ಧಕೊಬ್ಬರಿ ಎಣ್ಣೆ ಹಾಕಿ ಮಿಶ್ರಮಾಡಿ, ನರಹುಲಿ ಇರುವ ಕಡೆ ಹಚ್ಚಿ 10 ನಿಮಿಷ ಬಿಡಿ, ಆ ರಸ ಒಣಗಿದ ಮೇಲೆ ಮತ್ತೊಮ್ಮೆ ಹಚ್ಚಿ 2-3 ಗಂಟೆ ಬಿಡಿ, ರಾತ್ರಿ ಹೊತ್ತಿನಲ್ಲಿ ಹಚ್ಚಿ ಬೆಳಗ್ಗೆ ತೊಳೆದರೆ ಇನ್ನೂ ಒಳ್ಳೆಯದು. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಅಥವಾ ಸ್ಕಿನ್ ಟ್ಯಾಗ್ ಇಲ್ಲವಾಗುವುದು.

3. ಬೆಳ್ಳುಳ್ಳಿ
2-3 ಎಸಳು ಬೆಳ್ಳುಳ್ಳಿ ತೆಗೆದು ಸಿಪ್ಪೆ ಸುಲಿದು ಜಜ್ಜಿ, ಅದನ್ನು ನರಹುಲಿ ಮೇಲೆ ಇಡಿ, ಅದರ ಮೇಲೆ ಪ್ಲಾಸ್ಟರ್ ಹಚ್ಚಿ ರಾತ್ರಿ ಹೊತ್ತು ಬಿಡಿ, ಬೆಳಗ್ಗೆ ಹೊತ್ತು ಪ್ಲಾಸ್ಟರ್ ತೆಗೆಯಿರಿ. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಬಿದ್ದು ಹೋಗುವುದು.

4. ಬಾಳೆಹಣ್ಣು ಸಿಪ್ಪೆ
ನರಹುಲಿ ಇರುವ ಕಡೆ ಬಾಳೆಸಿಪ್ಪೆ ಸಿಪ್ಪೆ ಇಟ್ಟು ಪ್ಲಾಸ್ಟರ್ ಹಾಕಿ, ಬೆಳಗ್ಗೆ ತೆಗೆಯಿರಿ. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಇಲ್ಲವಾಗುವುದು.

5. ಅಡುಗೆ ಸೋಡಾ
ಅರ್ಧಚಮಚ ಅಡುಗೆ ಸೋಡಾವನ್ನುಒಂದು ಚಮಚ ಹರಳೆಣ್ಣೆಯಲ್ಲಿ ಮಿಶ್ರ ಮಾಡಿ. ನಂತರ ಇದನ್ನು ನರಹುಲಿ ಇರುವ ಕಡೆ ಹಚ್ಚಿ ಪ್ಲಾಸ್ಟರ್ ಹಾಕಿ, ಈ ರೀತಿ ದಿನಬಿಟ್ಟು ದಿನ ಮಾಡಿದರೆ ಕೆಲವೇ ದಿನಗಳಲ್ಲಿ ನರಹುಲಿ ಇಲ್ಲವಾಗುವುದು. ಇದನ್ನು ಮುಖಕ್ಕೆ ಹಾಕುವ ಮುನ್ನ ಕುತ್ತಿಗೆ ಭಾಗದಲ್ಲಿ ಹಾಕಬಹುದು.

6. ನೇಲ್ ಪಾಲಿಶ್
ನೇಲ್ ಪಾಲಿಶ್ ಬಳಸಿ ಕೂಡ ನರಹುಲಿ ತೆಗೆಯಬಹುದು. ನರಹುಲಿ ಇರುವ ನೇಲ್‌ಪಾಲಿಷ್ ಹಚ್ಚಿ ಬೆಳಗ್ಗೆ ಕೊಬ್ಬರಿ ಎಣ್ಣೆ ಹಚ್ಚಿ ತೆಗೆಯಿರಿ. ಈ ರೀತಿ ಹದಿನೈದು ದಿನ ಮಾಡಿದರೆ ನರಹುಲಿ ಬಿದ್ದು ಹೋಗಿರುತ್ತದೆ.



Click it and Unblock the Notifications
