Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕೆನ್ನೆ, ಮೂಗಿನ ಮೇಲೆ ಬೀಳುವ ಡಾರ್ಕ್ ಪ್ಯಾಚಸ್‌ಗೆ ಮನೆಮದ್ದು
ಕೆಲವರ ಮುಖದ ಮೇಲೆ ಇದ್ದಕ್ಕಿದ್ದಂತೆ ಡಾರ್ಕ್ ಪ್ಯಾಚ್ ಬೀಳುತ್ತದೆ. ಮೊದಲಿಗೆ ಮಚ್ಚೆ ರೀತಿ ಚಿಕ್ಕದಾಗಿರುವ ಅದು ನಂತರ ದೊಡ್ಡದಾಗುತ್ತದೆ. ಈ ರೀತಿಯ ಡಾರ್ಕ್ ಪ್ಯಾಚ್ ಅನ್ನು ಮೆಲಾಸ್ಮಾ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕೆನ್ನೆ ಹಾಗೂ ಮೂಗಿನ ಮೇಲೆ ಕಂಡು ಬರುವುದು.

ನಾವು ಏನು ಆಹಾರ ಸೇವಿಸುತ್ತೇವೋ ಅದರ ಗುಣ ನಮ್ಮ ಆರೋಗ್ಯ ಹಾಗೂ ತ್ವಚೆಯ ಮೇಲೆ ಕಾಣಬಹುದು. ಆರೋಗ್ಯಕರವಾದ, ಪೋಷಕಾಂಶವಿರುವ ಆಹಾರ ಸೇವಿಸುತ್ತಿದ್ದರೆ ಸಾಮಾನ್ಯವಾಗಿ ತ್ವಚೆ ಸಮಸ್ಯೆ ಕಾಡುವುದಿಲ್ಲ, ಬೇಗ ನೆರಿಗೆ ಉಂಟಾಗುವುದಿಲ್ಲ ಹಾಗೂ ಈ ರೀತಿಯ ಸ್ಕಿನ್ ಪಿಗ್ಮೆಂಟೇಷನ್ ಕಾಣಿಸಿಕೊಳ್ಳುವುದಿಲ್ಲ, ತ್ವಚೆಯ ಹೊಳಪು ಹೆಚ್ಚುವುದು.
ಸ್ಕಿನ್ ಪಿಗ್ಮೆಂಟೇಷನ್ ಅಥವಾ ಡಾರ್ಕ್ ಪ್ಯಾಚ್ ಬಿದ್ದಾಗ ಇದರಿಂದ ತೊಂದರೆಗಳೇನು ಉಂಟಾಗುವುದಿಲ್ಲ, ಆದರೆ ನಮ್ಮ ಲುಕ್ ಹಾಳು ಮಾಡುತ್ತದೆ ಅಷ್ಟೇ. ಡಾರ್ಕ್ ಪ್ಯಾಚ್ ಮುಖದ ಮೇಲೆ ಎದ್ದು ಕಾಣುವುದರಿಂದ ಮೇಕಪ್ ಮಾಡಿದರೂ ಅದು ಎದ್ದು ಕಾಣುವುದರಿಂದ ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ.
ಇಲ್ಲಿ ನಾವು ಮುಖದ ಮೇಲೆ ಬೀಳುವ ಸ್ಕಿನ್ ಪಿಗ್ಮಂಟೇಷನ್ ಹೋಗಲಾಡಿಸಲು ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದು ನೀಡಿದ್ದೇವೆ ನೋಡಿ:

1. ಲೋಳೆಸರ
ಮೆಲಾಸ್ಮಾ ಅಥವಾ ಸ್ಕಿನ್ ಪಿಗ್ಮೆಂಟೇಷನ್ ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಕ್ರೀಮ್ ಬಳಸುವುದು ಅಷ್ಟು ಸೂಕ್ತವಲ್ಲ. ಇದರ ಬದಲಿಗೆ ಯಾವುದೇ ಹಾನಿಕರವಲ್ಲದ ನೈಸರ್ಗಿಕ ವಿಧಾನಗಳ ಮೂಲಕ ಹೋಗಲಾಡಿಸುವುದು ಒಳ್ಳೆಯದು. ಯಾರಿಗೆ ಮುಖದ ಮೇಲೆ ಡಾರ್ಕ್ ಪ್ಯಾಚ್ ಬಿದ್ದರುತ್ತದೆ ಅವರು ಲೋಳೆಸರ ದಿನಾ ಹಚ್ಚಬೇಕು. ಈ ರೀತಿ 5-6 ವಾರಗಳ ಹಚ್ಚಿದರೆ ಸಾಕು ಕಲೆ ಮಾಯವಾಗುವುದು.
ಇದನ್ನು ಮಲಗುವ ಮುನ್ನ ಹಚ್ಚಿ ಮಲಗಿ, ಬೆಳಗ್ಗೆ ಎದ್ದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

2. ನಿಂಬೆರಸ
ಅನೇಕ ತ್ವಚೆ ಸಮಸ್ಯೆ ಹೋಗಲಾಡಿಸಲು ನಿಂಬೆಹಣ್ಣು ಬಳಸಲಾಗುವುದು. ಇದು ಕಲೆ ಹೋಗಲಾಡಿಸಲು ಕೂಡ ತುಂಬಾ ಸಹಕಾರಿ. ಇದು ಮುಖವನ್ನು ಬ್ಲೀಚ್ ಮಾಡುತ್ತದೆ. ನಿಂಬೆರಸ ತುಂಬಾ ಹಾಕಬೇಡಿ, ಉರಿ ಉಂಟಾಗಬಹುದು. 2 ಹನಿ ನಿಂಬೆ ರಸವನ್ನು ಕೈ ಮೇಲೆ ಹಾಕಿ, ಅದನ್ನು ಕಲೆ ಇರುವ ಕಡೆ ಹಚ್ಚಿ 20 ನಿಮಿಷ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ದಿನದಲ್ಲಿ 2-3 ಬಾರಿ ಮಾಡುತ್ತಾ ಬನ್ನಿ, ಬೇಗನೆ ಕಲೆ ಮಾಯವಾಗುವುದು.

3. ಆ್ಯಪಲ್ ಸಿಡರ್ ವಿನೆಗರ್
ಇದು ನ್ಯಾಚುರಲ್ ಕೆಮಿಕಲ್ ಪೀಲಿಂಗ್ ಆಗಿದೆ. ಇದು ತ್ವಚೆಯನ್ನು ಸೂರ್ಯನ ಕಿರಣಗಳಿಂದ ಕೂಡ ರಕ್ಷಣೆ ಮಾಡುತ್ತದೆ. ಇದನ್ನು ಹಚ್ಚುವಾಗ ಅರ್ಧ ಚಮಚ ಆ್ಯಪಲ್ ಸಿಡರ್ ವಿನೆಗರ್‌ಗೆ ಅರ್ಧ ಚಮಚ ನೀರು ಹಾಕಿ ಮಿಶ್ರ ಮಾಡಿ ಹಚ್ಚಿ, ನಂತರ 20 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಹಚ್ಚುವಾಗ ಕಣ್ಣಿಗೆ ತಾಗದಂತೆ ಎಚ್ಚರವಹಿಸಿ.

4. ಗ್ರೀನ್ ಟೀ
ಗ್ರೀನ್ ಟೀ ಕೂಡ ಸೌಂದರ್ಯ ವೃದ್ಧಿಗೆ ತುಂಬಾ ಸಹಕಾರಿ, ಇದು ತ್ವಚೆ ಸಮಸ್ಯೆ ಹೋಗಲಾಡಿಸುವುದರ ಜೊತೆಗೆ ಮುಖದ ಹೊಳಪನ್ನು ಹೆಚ್ಚಿಸುತ್ತದೆ. ದಿನದಲ್ಲಿ 2 ಲೋಟ ಗ್ರೀನ್ ಟೀ ಕುಡಿಯಿರಿ. ಮುಖಕ್ಕೆ ಸ್ವಲ್ಪ ಗ್ರೀನ್ ಟೀ ರಸ ಹಚ್ಚಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುತ್ತಿದ್ದರೆ ಕಲೆ ಕಡಿಮೆಯಾಗಿ ಮುಖದ ಹೊಳಪು ಹೆಚ್ಚುವುದು.

5. ಈರುಳ್ಳಿ ರಸ
ಈರುಳ್ಳಿಯನ್ನು ಕೂದಲಿನ ಆರೈಕೆಯಲ್ಲಿ ಬಳಸುತ್ತಾರೆ ಎಂಬುವುದು ನಿಮಗೆ ಗೊತ್ತಿರಬಹುದು. ಆದರೆ ಇದನ್ನು ಬಳಸಿ ಮುಖದ ಕಲೆಯನ್ನು ಕೂಡ ಹೋಗಲಾಡಿಸಬಹುದು. ಈರುಳ್ಳಿಯನ್ನು ಮಿಕ್ಸಿಯಲ್ಲಿ ನುಣ್ಣನೆ ರುಬ್ಬಿ, ಅದರ ರಸ ತೆಗೆದು, ಹತ್ತಿ ಉಂಡೆಯನ್ನು ಈರುಳ್ಳಿ ರಸಕ್ಕೆ ಅದ್ದಿ ಮುಖಕ್ಕೆ ಹಚ್ಚಿ, 20 ನಿಮಿಷ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈರುಳ್ಳಿ ರಸವನ್ನು ಫ್ರಿಡ್ಜ್‌ನಲ್ಲಿಟ್ಟು ದಿನದಲ್ಲಿ 3-4 ಬಾರಿ ಬಳಸುತ್ತಾ ಬನ್ನಿ, ಬೇಗನೆ ಕಲೆ ಮಾಯವಾಗುವುದು.

6. ಹಾಲು ಮತ್ತು ಅರಿಶಿಣ
ಮುಖದ ಕಲೆ ಕಡಿಮೆ , ಮುಖದ ಹೊಳಪು ಹೆಚ್ಚಿಸುವಲ್ಲಿ ಅರಿಶಿಣ ತುಂಬಾ ಪರಿಣಾಮಕಾರಿ ಎಂಬುವುದು ನಿಮಗೆ ಗೊತ್ತು. ಇದು ಸ್ಕಿನ್ ಪಿಗ್ಮೆಂಟೇಷನ್ ಹೋಗಲಾಡಿಸುವಲ್ಲಿ ಕೂಡ ಸಹಕಾರಿ. ಅರಿಶಿಣವನ್ನು ಹಾಲಿನೊಂದಿಗೆ ಮಿಶ್ರ ಮಾಡಿ ದಿನದಲ್ಲಿ ಎರಡು ಬಾರಿ ಹಚ್ಚಿ. ಹಚ್ಚಿದ ಬಳಿಕ ಒಂದು 30 ನಿಮಿಷ ಹಾಗೇ ಬಿಟ್ಟು ನಂತರ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಕಲೆಯೂ ದೂರ, ಮುಖದ ಹೊಳಪು ಕೂಡ ಹೆಚ್ಚುವುದು.

7. ಆರೇಂಜ್ ಮಾಸ್ಕ್
ಆರೇಂಜ್ ಸಿಪ್ಪೆಯನ್ನು ಒಣಗಿಸಿ ಅದನ್ನು ಪೌಡರ್ ಮಾಡಿ. ಈ ಪೌಡರ್‌ಗೆ ನೀರು, ಜೇನು ಹಾಕಿ ಪೇಸ್ಟ್ ರೀತಿ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಎರಡು ನಿಮಿಷ ಮಸಾಜ್ ಮಾಡಿ, ನಂತರ 10 ನಿಮಿಷ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ ವಾರದಲ್ಲಿ 3-4 ಬಾರಿ ಮಾಡಿದರೆ ಸಾಕು ಕಲೆಯೂ ಮಾಯ, ಮುಖದ ಹೊಳಪು ಕೂಡ ಹೆಚ್ಚುವುದು.
ಇಲ್ಲಿ ನೀಡಿರುವ ಮನೆಮದ್ದುಗಳಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಹಾಗೂ ಇದನ್ನು ಸ್ಕಿನ್ ಪಿಗ್ಮೆಂಟೇಷನ್ ಹೋಗಲಾಡಿಸಲು ಮಾತ್ರವಲ್ಲ, ತ್ವಚೆಯ ಹೊಳಪು ಹೆಚ್ಚಿಸಲೂ ಬಳಸಬಹುದು.



Click it and Unblock the Notifications
