Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಸದ್ಯ ಅಗ್ಗವಾಗಿ ಸಿಗುತ್ತಿರುವ ಈ ವಸ್ತುವಿನಿಂದ ಅಂದವಾದ ತ್ವಚೆ ಪಡೆಯಬಹುದು!
ಕಾಲೋಚಿತ ಅಥವಾ ಸೀಸನಲ್ ಹಣ್ಣು-ತರಕಾರಿಗಳು ನಾವು ಸೇವಿಸಲೇಬೇಕಾದ ಕೆಲವೊಂದು ಅಂಶಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಆ ಕಾಲಕ್ಕೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗುತ್ತವೆ. ಆದರೆ, ನಾವಿಂದು ಇದರ ಸೇವನೆಯ ಬಗ್ಗೆ ಹೇಳುತ್ತಿಲ್ಲ. ಬದಲಾಗಿ, ಸದ್ಯ ಎಲ್ಲೆಡೆ ಕಾಣಸಿಗುತ್ತಿರುವ ಸೀಸನಲ್ ಹಣ್ಣಿನಿಂದ ತ್ವಚೆಗೆ ಹೇಗೆ ಸಹಕಾರಿ ಎಂಬುದನ್ನು ತಿಳಿಸಲಿದ್ದೇವೆ. ಅದೇ ಎಲ್ಲರ ಫೇವರೆಟ್ ದ್ರಾಕ್ಷಿ.
ಪ್ರಸ್ತುತ ಎಲ್ಲೆಡೆ ಸಿಗುತ್ತಿರುವ ದ್ರಾಕ್ಷಿಯು ಆರೋಗ್ಯದ ಜೊತೆಗೆ ಅಂದಕ್ಕೂ ಬಹಳ ಉಪಯುಕ್ತವಾಗಿದೆ. ದ್ರಾಕ್ಷಿಯ ಪೋಷಕಾಂಶಗಳ ಬಗ್ಗೆ ಮಾತನಾಡುವುದಾದರೆ, ಒಂದು ಕಪ್ ದ್ರಾಕ್ಷಿಯಿಂದ 104 ಕಿಲೋ ಕ್ಯಾಲೋರಿ, 122 ಗ್ರಾಂ ನೀರು, 27.3 ಗ್ರಾಂ ಕಾರ್ಬೋಹೈಡ್ರೇಟ್ ಗಳು, 2 ಗ್ರಾಂ ಪ್ರೋಟೀನ್ ಮತ್ತು 0 ಕೊಲೆಸ್ಟ್ರಾಲ್ ಸಿಗುತ್ತದೆ. ಇದು ಫೈಟೋನ್ಯೂಟ್ರಿಯಂಟ್ ಗಳ ಅದ್ಭುತ ಆಗರವಾಗಿದೆ. ಇಂತಹ ಪೋಷಕಾಂಶಭರಿತ ದ್ರಾಕ್ಷಿಯನ್ನು ತ್ವಚೆಯ ಆರೈಕೆಗೆ ಹೇಗೆ ಬಳಸುವುದು ಎಂಬುದನ್ನು ಇಲ್ಲಿ ನೋಡೋಣ.
ದ್ರಾಕ್ಷಿಯನ್ನು ತ್ವಚೆಯ ಆರೈಕೆಗೆ ಹೇಗೆ ಬಳಸುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ದ್ರಾಕ್ಷಿಹಣ್ಣು ಮತ್ತು ಸ್ಟ್ರಾಬೆರಿ ಫೇಸ್ ಪ್ಯಾಕ್:
ಹೊಳೆಯುವ, ಮೊಡವೆಮುಕ್ತ ತ್ವಚೆಗಾಗಿ ಈ ಸ್ಟ್ರಾಬೆರಿ ಫೇಸ್ ಪ್ಯಾಕ್ ತುಂಬಾ ಸಹಕಾರಿ. ಇದಕ್ಕಾಗಿ ನೀವು ಮಾಡಬೇಕಾಗಿರುವುದು, ದ್ರಾಕ್ಷಿ ಮತ್ತು ಸ್ಟ್ರಾಬೆರಿಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಈ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ, ಕನಿಷ್ಠ 20 ನಿಮಿಷಗಳ ಕಾಲ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ, ಕಾಂತಿಯುತ ತ್ವಚೆ ನಿಮ್ಮದಾಗುವುದು.

ಜೇನುತುಪ್ಪ ಮತ್ತು ದ್ರಾಕ್ಷಿಯ ಫೇಸ್ ಪ್ಯಾಕ್:
ಜೇನುತುಪ್ಪ ಮತ್ತು ದ್ರಾಕ್ಷಿಯ ಫೇಸ್ ಪ್ಯಾಕ್ ಪರಿಣಾಮಕಾರಿಯಾಗುವುದರ ಜೊತೆಗೆ, ಇದು ತ್ವರಿತ ಫೇಸ್ ಪ್ಯಾಕ್ ಆಗಿದೆ. ಜೇನುತುಪ್ಪ ನೈಸರ್ಗಿಕ ಮಾಯುಶ್ಚರೈಸರ್ ಆಗಿ ಕಾರ್ಯನಿರ್ವಹಿಸಿದರೆ, ದ್ರಾಕ್ಷಿಯು ಮುಖಕ್ಕೆ ಕಾಂತಿ ತರುವುದು. ಇದಕ್ಕಾಗಿ, ನಾಲ್ಕೈದು ದ್ರಾಕ್ಷಿಯನ್ನು ತೆಗೆದುಕೊಂಡು ಅದನ್ನು ಮ್ಯಾಶ್ ಮಾಡಿ ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಇರಿಸಿ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.

ದ್ರಾಕ್ಷಿ ಮತ್ತು ಮೊಸರು ಫೇಸ್ ಪ್ಯಾಕ್:
ಡ್ರೈ ಸ್ಕಿನ್ ಸಮಸ್ಯೆಯಿಂದ ತೊಂದರೆಗೀಡಾದವರು ಈ ಫೇಸ್ ಪ್ಯಾಕ್ ಉತ್ತಮವಾದ ಆಯ್ಕೆಯಾಗಿದೆ. ಇದಕ್ಕಾಗಿ ದ್ರಾಕ್ಷಿಯ ಸಿಪ್ಪೆಯನ್ನು ತೆಗೆದು ಅದರ ತಿರುಳನ್ನು ಚೆನ್ನಾಗಿ ಹಿಸುಕಿ ಅದಕ್ಕೆ ಒಂದು ಚಮಚ ಮೊಸರನ್ನು ಸೇರಿಸಿ. ನೀವು ಬಯಸಿದರೆ, ನಿಂಬೆ ಹನಿಗಳನ್ನು ಕೂಡ ಸೇರಿಸಬಹುದು. ಈ ಪ್ಯಾಕ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಮತ್ತು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ತ್ವಚೆಗೆ ಉತ್ತಮ ಹೊಳಪು ಬರುವುದು.

ಕಿವಿ ಮತ್ತು ದ್ರಾಕ್ಷಿಯ ಫೇಸ್ ಪ್ಯಾಕ್:
ದ್ರಾಕ್ಷಿ ಮತ್ತು ಕಿವಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಅವುಗಳ ತಿರುಳನ್ನು ಹೊರತೆಗೆಯಿರಿ ಮತ್ತು ಇವೆರಡನ್ನೂ ಮಿಶ್ರಣ ಮಾಡಿ. ಮುಖ ತೊಳೆದ ನಂತರ ಈ ಪ್ಯಾಕ್ ಅನ್ನು ಹಚ್ಚಿ ಚೆನ್ನಾಗಿ ಒಣಗಲು ಬಿಡಿ. ಅದರ ನಂತರ ಉಗುರು ಬೆಚ್ಚಗಿನ ನೀರಿನ ಸಹಾಯದಿಂದ ಪ್ಯಾಕ್ ಅನ್ನು ತೆಗೆದುಹಾಕಿ. ಇದರಿಂದ ಕಳೆದುಹೋದ ಕಾಂತಿ ಮರಳಿ ಬರುವುದು.

ದ್ರಾಕ್ಷಿ ಮತ್ತು ಸೇಬು ಫೇಸ್ ಪ್ಯಾಕ್:
ಮುಖದ ಮೇಲಿರುವ ಧೂಳು, ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಈ ಫೇಸ್ ಪ್ಯಾಕ್ ಬೆಸ್ಟ್ . ಇದಕ್ಕಾಗಿ, ಸೇಬಿನ ಸಿಪ್ಪೆ ತೆಗೆದು ಅದರಿಂದ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ದ್ರಾಕ್ಷಿ ಹಣ್ಣಿನ ತಿರುಳನ್ನು ಸೇರಿಸಿ. ಎರಡನ್ನೂ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕನಿಷ್ಠ ಅರ್ಧ ಘಂಟೆಯವರೆಗೆ ಈ ಪ್ಯಾಕ್ ಅನ್ನು ಮುಖದ ಮೇಲೆ ಇರಿಸಿ. ದಿನನಿತ್ಯದ ಬಳಕೆಯಿಂದ ಮುಖವು ಸ್ವಚ್ಛ ಮತ್ತು ಹೊಳೆಯುತ್ತದೆ.



Click it and Unblock the Notifications