Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ತ್ವಚೆ ಹಾಲಿನಂತೆ ಹೊಳೆಯಬೇಕಾದರೆ ಈ ವಿಷಯಗಳನ್ನು ದೂರವಿಡಬೇಡಿ
ನೀವೆಲ್ಲಾ ಸಾಮಾನ್ಯವಾಗಿ ಕಂಡಿರ್ತಿರಾ, ಕೆಲವರು ನೋಡಲು ತೆಳ್ಳಗೆ, ಬೆಳ್ಳಗಿದ್ದರೂ ಅವರ ಮುಖದಲ್ಲಿ ಏನೋ ಒಂದು ಮಿಸ್ ಆಗಿರುತ್ತದೆ. ಅದೇನಪ್ಪ ಅಂದ್ರೆ ತ್ವಚೆಯಲ್ಲಿನ ಹೊಳಪು. ಇದಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ಅವರ ಮುಖದ ಮೇಲೆ ಸುಕ್ಕು, ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿರುತ್ತವೆ.
ಬದಲಾಗುತ್ತಿರುವ, ಹವಾಮಾನದಿಂದ ಮುಖದ ಶುಷ್ಕತೆ ಹೆಚ್ಚಾಗುವುದರಿಂದ, ಅನೇಕ ಸಮಸ್ಯೆಗಳು ಮುನ್ನೆಲೆಗೆ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮುಖದ ಶುಷ್ಕತೆ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಸೇರಿಸಬೇಕು.
ತ್ವಚೆಯ ಶುಷ್ಕತೆ ಕಡಿಮೆ ಮಾಡಲು ಸಹಾಯ ಮಾಡುವ ಆಹಾರ ವಸ್ತುಗಳನ್ನು ಈ ಕೆಳಗೆ ನೀಡಲಾಗಿದೆ:

ಮೊಸರು :
ಮೊಸರಿನಿಂದ ತಯಾರಿಸಿದ ರೈತಾ ಅಥವಾ ಲಸ್ಸಿ ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ. ಅದರ ಜೊತೆಗೆ ನೀವು ಮೊಸರನ್ನು ಅಕ್ಕಿ ಹಿಟ್ಟು ಅಥವಾ ಕಡಲೆ ಹಿಟ್ಟಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬಹುದು. ಇದು ನಿಮ್ಮ ಕಲೆಗಳನ್ನು ತೆಗೆದುಹಾಕುತ್ತದೆ ಮಾತ್ರವಲ್ಲದೇ ತೇವಾಂಶಭರಿತವಾಗಿರಿಸುತ್ತದೆ ಹಾಗೂ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವುದು.

ನಿಂಬೆ:
ನಿಂಬೆ ರಸ ನಿಮ್ಮ ಹೊಟ್ಟೆಗೆ ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ. ಪ್ರತಿದಿನ ನಿಂಬೆ ಬೆರೆಸಿದ ನೀರು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಲ್ಲದೆ, ಮುಖದ ಕಲೆ ಕಡಿಮೆ ಮಾಡಲು ನೀವು ನಿಂಬೆ ರಸವನ್ನು ಸಾಮಾನ್ಯ ನೀರು ಅಥವಾ ಗ್ಲಿಸರಿನ್ ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬಹುದು. ಇದರಲ್ಲಿ ಸಿಟ್ರಿಕ್ ಅಂಶವಿದ್ದು, ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು.

ಕಲ್ಲಂಗಡಿ:
ಹೆಚ್ಚಿನ ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಇದು ದೇಹವನ್ನು ತಂಪಗಿಡಲು ಸಹಾಯ ಮಾಡುವುದು. ಕಲ್ಲಂಗಡಿ ತಿನ್ನುವುದನ್ನು ಹೊರತುಪಡಿಸಿ, ನೀವು ಅದರ ರಸವನ್ನು ಮುಖದ ಮೇಲೆ ಸಹ ಹಚ್ಚಬಹುದು. ಇದು ಕೂಡ ಉತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುವುದು.

ಹಾಲು :
ನಿಮಗೆ ತಿಳಿದಿರುವಂತೆ, ಹಾಲನ್ನು ಪರಿಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ನೀವು ಪ್ರತಿದಿನ ಕನಿಷ್ಠ ಎರಡು ಲೋಟ ಹಾಲು ಕುಡಿಯಬೇಕು. ಬೆಳಿಗ್ಗೆ ಮತ್ತು ರಾತ್ರಿ ತಲಾ ಒಂದು ಲೋಟ ಹಾಲು ಕುಡಿದರೆ ನಿಮ್ಮ ಆರೋಗ್ಯಕ್ಕೆ ಉತ್ತಮ. ತ್ವಚೆಯ ವಿಚಾರಕ್ಕೆ ಬಂದರೆ ಹಸಿ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಬಹುದು. ಇದರಿಂದ ಮುಖದ ಮೇಲಿನ ಕಲೆ ದೂರವಾಗಿ, ಹಾಲಿನಂತೆ ಹೊಳೆಯಲು ಆರಂಭಿಸುವುದು.

ಸೇಬು:
ಎಲ್ಲರಿಗೂ ತಿಳಿದಿರುವ ಹಾಗೆ ಪ್ರತಿದಿನ ಒಂದು ಸೇಬು ಸೇವನೆಯಿಂದ ರೋಗಗಳಿಂದ ದೂರವಿರಬಹುದು. ನಿಮ್ಮ ಆಹಾರದಲ್ಲಿ ಪ್ರತಿದಿನ ಸೇಬನ್ನು ಸೇರಿಸಬೇಕು. ಅಲ್ಲದೆ, ನೀವು ಸೇಬನ್ನು ಪುಡಿಮಾಡಿ ಅದರಿಂದ ರಸವನ್ನು ಹೊರತೆಗೆದು ನಿಮ್ಮ ಮುಖಕ್ಕೆ ಹಚ್ಚಬಹುದು. ಇದು ಕೂಡಾ ಸುಕ್ಕಿನ ವಿರುದ್ಧ ಹೋರಾಡುವುದು. ವಿನೆಗರ್ ಅನ್ನು ಸೇಬಿನಿಂದ ಕೂಡ ತಯಾರಿಸಲಾಗುತ್ತದೆ, ಇದು ಮುಖಕ್ಕೆ ತುಂಬಾ ಒಳ್ಳೆಯದು.



Click it and Unblock the Notifications
