Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಟ್ಯಾಟೂ ಹಾಕಿಸಿದರೆ 1 ವರ್ಷದವರೆಗೆ ರಕ್ತದಾನ ಮಾಡಬಾರದು, ಏಕೆ?
ರಕ್ತದಾನ ಮಹಾದಾನ, ಆದರೆ ಟ್ಯಾಟೂ ಹಾಕಿದವರು ರಕ್ತದಾನ ಮಾಡಬಹುದೇ ಎಂದು ಕೇಳುವುದಾದರೆ ನೀವು 1 ವರ್ಷದವರೆಗೆ ರಕ್ತದಾನ ಮಾಡದಿರುವುದೇ ಒಳ್ಳೆಯದು.

ರಕ್ತದಾನವನ್ನು ಎಲ್ಲರೂ ಮಾಡುವಂತಿಲ್ಲ. ರಕ್ತದಾನ ಮಾಡುವವರು ಆರೋಗ್ಯವಂತರಾಗಿರಬೇಕು, ಅಲ್ಲದೆ ರಕ್ತದ ಮೂಲಕ ಹರಡುವ ಕಾಯಿಲೆ ಹೊಂದಿರಬಾರದು. ಟ್ಯಾಟೂ ಹಾಕಿಸಿಕೊಂಡಾಗ ಕೆಲವೊಂದು ಅಪಾಯಕಾರಿ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ರಕ್ತದಾನ ಮಾಡಿದರುವುದು ಒಳ್ಳೆಯದು.
ಟ್ಯಾಟೂವಿಗೆ ಬಳಸುವ ಸೂಜಿ ಬಗ್ಗೆ ಎಚ್ಚರ
ಟ್ಯಾಟೂ ಹಲವು ಕಡೆ ಹಾಕುತ್ತಾರೆ. ಟ್ಯಾಟೂ ಹಾಕಿಸುವಾಗ ಎಲ್ಲಾ ಸುರಕ್ಷಿತ ವಿಧಾನಗಳನ್ನು ಅನುಸರಿಸುವ ಪರಿಣಿತರ ಬಳಿ ಹಾಕಿಸುವುದು ಒಳ್ಳೆಯದು. ಏಕೆಂದರೆ ಟ್ಯಾಟೂ ಹಾಕಿಸುವಾಗ ಬಳಸುವ ಸೂಜಿ ಬಗ್ಗೆ ತುಂಬಾನೇ ಎಚ್ಚರವಹಿಸಬೇಕು. ಒಬ್ಬರಿಗೆ ಬಳಸಿದ ಸೂಜಿ ಮತ್ತೊಬ್ಬರಿಗೆ ಬಳಸಿದಾಗ ಏಡ್ಸ್, ಹೆಪಟೈಟಿಸ್ ಮುಂತಾದ ಅಪಾಯಕಾರಿ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಟ್ಯಾಟೂ ಹಾಕಿದ ಬಳಿಕ ರಕ್ತದಾನಕ್ಕೆ ಮುಂದಾಗಬೇಡಿ.
ಟ್ಯಾಟೂ ಹಾಕಿಸಿ ಒಂದು ವರ್ಷದವರೆಗೆ ರಕ್ತದಾನ ಮಾಡಬೇಡಿ
ಟ್ಯಾಟೂ ಹಾಕಿಸುವುದು ಒಂದು ಟ್ರೆಂಡ್. ಬಹುತೇಕ ಜನರು ಟ್ಯಾಟೂ ಹಾಕಿಸುತ್ತಾರೆ. ಟ್ಯಾಟೂ ಹಾಕಿಸಿದವರು ರಕ್ತದಾನ ಮಾಡುವಾಗ ತಮ್ಮ ಆರೋಗ್ಯ ತಪಾಸಣೆ ಮಾಡಿಸಿದ್ದರೂ ಸೂಜಿಯ ಮೂಲಕ ಸೋಂಕು ರೋಗ ಹರಡಿದ್ದರೆ ಅದು ತಿಳಿಯಲು ಕೆಲವು ತಿಂಗಳುಗಳು ಬೇಕಾಗಿರುವುದರಿಂದ ಈ ಸಂದರ್ಭದಲ್ಲಿ ರಕ್ತದಾನ ಮಾಡಿದರೆ ಹರಡುವ ಸಾಧ್ಯತೆ ಇರುವುದರಿಂದ ಟ್ಯಾಟೂ ಹಾಕಿಸಿ ಕನಿಷ್ಠ 6 ತಿಂಗಳವರೆಗೆ ರಕ್ತದಾನ ಮಾಡಲೇಬೇಡಿ, ಒಂದು ವರ್ಷದವರೆಗೆ ಮಾಡದಿದ್ದರೆ ಒಳ್ಳೆಯದು.
ಟ್ಯಾಟೂ ಹಾಕಿಸಿಕೊಳ್ಳುವಾಗ ಈ ಎಚ್ಚರಿಕೆವಹಿಸಿ
ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವಾಗ ಟ್ಯಾಟೂ ಹಾಕುವ ಕಲಾವಿದರು ಹೊಸ ಸೂಜಿಗಳನ್ನು ಬಳಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಒಮ್ಮೆ ಬಳಸಿದ ಸೂಜಿ ಬಳಸಲು ಅನುಮತಿ ನೀಡಬೇಡಿ. ಅಲ್ಲದೆ ಹಚ್ಚೆ ಹಾಕಲು ಬಳಸುವ ಪರಿಕರಗಳನ್ನು ಸರಿಯಾಗಿ ಸ್ಟೆರ್‌ಲೈಸ್ ಮಾಡುತ್ತಿದ್ದಾರೆಯೇ ಎಂದು ಗಮನಿಸಿದ ಬಳಿಕವಷ್ಟೇ ಟ್ಯಾಟೂ ಹಾಕಿಸಿ.
ಟ್ಯಾಟೂ ಹಾಕಿಸುವ ಕಲಾವಿದನ ಬಗ್ಗೆ ಮಾಹಿತಿ ಇರಲಿ
ನಿಮಗೆ ಟ್ಯಾಟೂ ಹಾಕುವ ಕಲಾವಿದ ಸಹ ಮುಖ್ಯವಾಗುತ್ತಾನೆ. ಮೊದಲಿಗೆ ಟ್ಯಾಟೂ ಹಾಕುವ ಸ್ಥಳದ, ಉಪಕರಣಗಳ ಸ್ವಚ್ಛತೆ ಹಾಗೂ ಎಲ್ಲಾ ಅಗತ್ಯ ಉಪಕರಣಗಳು ಇದೆಯೇ ಎಂಬುದನ್ನು ಪರಿಶೀಲಿಸಿ, ನಂತರ ಅವರ ಅನುಭವ, ಕೌಶಲ್ಯದ ಬಗ್ಗೆ ವಿಚಾರಿಸಿ. ಅವರ ಹಿಂದಿನ ಕೆಲಸಗಳನ್ನು ನೋಡಿ. ಇಲ್ಲವಾದಲ್ಲಿ ಇದು ನಿಮ್ಮ ಆರೋಗ್ಯ ಹಾಗೂ ಟ್ಯಾಟೂ ವಿನ್ಯಾಸದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.
ಉತ್ತಮ ಟ್ಯಾಟೂ ಕಲಾವಿದ ಸಿಕ್ಕಾಗ ಹಣ ವಿಷಯಕ್ಕಾಗಿ ರಾಜಿಯಾಗಿ ನಿರಾಕರಿಸಬೇಡಿ. ಇದು ನಿಮ್ಮ ಜೀವನದುದ್ದಕ್ಕೂ ನಿಮ್ಮ ಜೊತೆಯಲ್ಲಿರುವ, ಅಲ್ಲದೆ ನಿಮ್ಮ ಮೊದಲ ಟ್ಯಾಟೂ ಇದಾಗಿದೆ ಎಂಬುದು ನೆನಪಿನಲ್ಲಿಡಿ. ಇವರು ಉತ್ತಮ ಅನುಭವಿಗಳೂ ಆಗಿರುತ್ತಾರೆ, ಟ್ಯಾಟೂ ಹಾಕಿದ ನಂತರ ಅವರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ.
ಏಕೆಂದರೆ ಫ್ಯಾಷನ್‌ಗಿಂತ ನಿಮ್ಮ ಆರೋಗ್ಯ ಮುಖ್ಯ ಅಲ್ಲವೇ?
ಟ್ಯಾಟೂ ಅಡ್ಡಪರಿಣಾಮಗಳು
ಟ್ಯಾಟೂಗಳಿಂದ ಚರ್ಮ ರೋಗಗಳು ಸುಲಭವಾಗಿ ಹರಡುತ್ತವೆ. ಸೋಂಕನ್ನು ತಡೆಗಟ್ಟಲು, ಅವುಗಳನ್ನು ಆಗಾಗ್ಗೆ ಬ್ಯಾಂಡೇಜ್ ಅಥವಾ ಅಂಟಿಕೊಳ್ಳುವ ಬಟ್ಟೆಯಿಂದ ಸುತ್ತಿಡಲಾಗುತ್ತದೆ. ಹಾಗಂತ ಅದನ್ನು ಬಟ್ಟೆಯಿಂದ ಮುಚ್ಚುವುದು ಅಥವಾ ಗಾಳಿ ಆಡದಂತಹ ಬಟ್ಟೆಯನ್ನು ಧರಿಸಬಾರದು. ಹಾಗೆ ಮಾಡಿದರೆ ಸಾಕಷ್ಟು ತೊಂದರೆ ಉಂಟಾಗುವುದು. ಹೊಟ್ಟೆ, ತೋಳು ಅಥವಾ ಇನ್ಯಾವುದೇ ಪ್ರದೇಶದಲ್ಲಿ ಹಚ್ಚೆಯನ್ನು ಹಾಕಿಸಿಕೊಂಡಿದ್ದರೆ ಅದರ ನೋವು ಮತ್ತು ಗಾಯ ಗುಣವಾಗುವ ತನಕ ಗಾಳಿ ಆಡಲು ಬಿಡಬೇಕು. ಆಗ ಬಹುಬೇಗ ಗಾಯ ಗುಣವಗುವುದು. ಸೋಂಕು ಮತ್ತು ಗಾಯಗಳಂತಹ ಸಮಸ್ಯೆ ಆಗದಂತೆ ಸುಲಭವಾಗಿ ತಡೆಯಬಹುದು.
ಅಲರ್ಜಿ ಸಮಸ್ಯೆಯಿದ್ದರೆ ಟ್ಯಾಟೂ ಹಾಕಿಸಬೇಡಿ
ನಿಮಗೆ ಅಲರ್ಜಿ ಸಮಸ್ಯೆಯಿದ್ದರೆ ಟ್ಯಾಟೂ ಹಾಕಿಸಲು ಹೋಗಬೇಡಿ, ಏಕೆಂದರೆ ಇದರಿಂದ ಅಲರ್ಜಿ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಟ್ಯಾಟೂ ಹಾಕಿಸುವಾಗಲೂ ಎಚ್ಚರವಹಿಸಿ, ಟ್ಯಾಟೂ ಹಾಕಿಸಿದ ಬಳಿಕ ಚೆನ್ನಾಗಿ ಆರೈಕೆ ಮಾಡಿ.
ಟ್ಯಾಟೂ ಹಾಕಿಸಿ 6 ತಿಂಗಳು ಅಥವಾ 1 ವರ್ಷದ ಬಳಿಕ ನಿಮ್ಮ ಆರೋಗ್ಯ ಸ್ಥಿತಿ ಬಗ್ಗೆ ತಿಳಿಯಲು ರಕ್ತ ಪರೀಕ್ಷೆ ಮಾಡಿಸಿ, ನಂತರವಷ್ಟೇ ರಕ್ತದಾನಕ್ಕೆ ಮುಂದಾಗಿ.



Click it and Unblock the Notifications

