Latest Updates
-
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ!
ಅಡುಗೆಮನೆಯ ಈ ವಸ್ತುಗಳಿಗಿಂತ ಉತ್ತಮ ಸ್ಕ್ರಬ್ ಬೇರೊಂದಿಲ್ಲ!
ಹೊಳೆಯುವ, ತಾಜಾ ಮತ್ತು ಸ್ವಚ್ಛವಾದ ತ್ವಚೆಯನ್ನು ಅನ್ಲಾಕ್ ಮಾಡಲು ಎಕ್ಸ್ಫೋಲಿಯೇಶನ್ ಅಗತ್ಯವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಖರೀದಿಸಿದ ಪ್ರತಿಯೊಂದು ಸ್ಕ್ರಬ್ ನಮ್ಮ ಚರ್ಮಕ್ಕೆ ಹೊಂದಿಕೆಯಾಗುವುದಿಲ್ಲ. ಅದಕ್ಕಾಗಿ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಸ್ಕ್ರಬ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಅಸ್ವಸ್ಥತೆ, ಕಿರಿಕಿರಿ ಅಥವಾ ಸಂಭಾವ್ಯ ಅಲರ್ಜಿಗಳನ್ನು ತಡೆಯಬಹುದು.
DIY ಸ್ಕ್ರಬ್ಗಳಿಗಾಗಿ ನಿಮ್ಮ ಅಡುಗೆಮನೆಯಲ್ಲಿರುವ ಈ 4 ಪದಾರ್ಥಗಳನ್ನು ಬಳಸಬಹುದು. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಮನೆಯಲ್ಲಿಯೇ ತಯಾರಿಸಬಹುದಾದ ಸ್ಕ್ರಬ್ ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಕಾಫಿ:
ಕಾಫಿಯು ಚರ್ಮವನ್ನು ಪುನರುಜ್ಜೀವನಗೊಳಿಸುವ ಉತ್ಕರ್ಷಣ ನಿರೋಧಕಗಳಿಂದ ತುಂಬಿರುವುದರಿಂದ ಎಕ್ಸ್ಫೋಲಿಯೇಶನ್ ಗೆ ಉತ್ತಮವಾಗಿದೆ. ಇದು ನಿಮ್ಮ ತ್ವಚೆಯನ್ನು ಡೆಡ್ ಸೆಲ್ ಮತ್ತು ಕೊಳಕುಗಳಿಂದ ಮುಕ್ತಗೊಳಿಸುತ್ತದೆ ಜೊತೆಗೆ ಸಮನಾದ ಟೋನ್ ನೀಡುತ್ತದೆ. ಮುಖದ ಡಲ್ ನೆಸ್ ಹೋಗಲಾಡಿಸಿ, ಉರಿಯೂತ ಮತ್ತು ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆ.
ಈ ಸ್ಕ್ರಬ್ ತಯಾರಿಸಲು, ಸ್ವಲ್ಪ ನುಣ್ಣಗೆ ಕಾಫಿ ಪುಡಿಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ, ನಿಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡಿ. (ಸೌಮ್ಯವಾಗಿ ಮುಖದ ಮೇಲೆ, ದೇಹದ ಮೇಲೆ ಆಳವಾಗಿ).

ಸಕ್ಕರೆ:
ಸಕ್ಕರೆ ನಿಮ್ಮ ತುಟಿಗಳಿಗೆ ಬಹಳ ಒಳ್ಳೆಯದು, ಆದರೆ ಮುಖಕ್ಕೆ ಬಳಸುವುದು ಉತ್ತಮವಲ್ಲ, ಏಕೆಂದರೆ, ಅದು ಗಾತ್ರದಲ್ಲಿ ದೊಡ್ಡದಾಗಿರವುದುರಿಂದ, ಮುಖಕ್ಕೆ ಹಾನಿ ಮಾಡುವ ಸಂಭವವಿದೆ. ಆದ್ದರಿಂದ, ಸಕ್ಕರೆ ಸ್ಕ್ರಬ್ಗಳನ್ನು ದೂರವಿಡುವುದು ಉತ್ತಮ. ಆದರೆ, ನಿಮ್ಮ ದೇಹ ಮತ್ತು ತುಟಿಗಳಿಗೆ ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಒಡೆದ ಮತ್ತು ತುಟಿಗಳಿಂದ ಸಿಪ್ಪೆ ಹೋಗುವುದನ್ನು ತೊಡೆದುಹಾಕಲು ಸಕ್ಕರೆ ಪಾಲಿಶ್ ಅನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಇದು ಚರ್ಮಕ್ಕೂ ಅದ್ಭುತವಾಗಿದೆ.
ಇದಕ್ಕಾಗಿ, ಸಕ್ಕರೆ ಮತ್ತು ಆಲಿವ್ ಎಣ್ಣೆ ಅಥವಾ ಜೊಜೊಬಾ ಎಣ್ಣೆಯನ್ನು ಮಿಶ್ರಣ ಮಾಡಿ, ತುಟಿಗೆ ಸ್ಕ್ರಬ್ ಮಾಡಿ.

ಓಟ್ ಮೀಲ್:
ಓಟ್ಮೀಲ್ ನಿಮ್ಮ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಶುಷ್ಕ ಚರ್ಮ ಮತ್ತು ಎಸ್ಜಿಮಾ ಪೀಡಿತ ಚರ್ಮಕ್ಕಾಗಿ ಉತ್ತಮ ಪರಿಹಾರಕ. ಜೊತೆಗೆ ನಿಮ್ಮ ಚರ್ಮವನ್ನು ನಿಧಾನವಾಗಿ ಎಫ್ಫೋಲಿಯೇಟ್ ಮಾಡಲು ಓಟ್ಮೀಲ್ ಬಳಸಿಕೊಳ್ಳಬಹುದು. ಓಟ್ ಮೀಲ್ ಚರ್ಮವನ್ನು ಶುಚಿಗೊಳಿಸುವ, ಉರಿಯೂತವನ್ನು ಕಡಿಮೆ ಮಾಡುವ, UV ಹಾನಿಯನ್ನು ಹಿಮ್ಮೆಟ್ಟಿಸುವ, ಕಿರಿಕಿರಿಯನ್ನು ಶಮನಗೊಳಿಸುವ, ಚರ್ಮವನ್ನು ರಕ್ಷಿಸುವ ಮತ್ತು ಪೋಷಿಸುವ ಗುಣಗಳನ್ನು ಹೊಂದಿದೆ.
ಇದಕ್ಕಾಗಿ ಓಟ್ ಮೀಲ್ ಅನ್ನು ನೀರಿನೊಂದಿಗೆ ಬೆರೆಸಿ , ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಉಜ್ಜಿಕೊಳ್ಳಿ.

ಗ್ರೀನ್ ಟೀ:
ಎಲ್ಲಾ ಆಧುನಿಕ ಸಮಸ್ಯೆಗಳಿಗೆ ಗ್ರೀನ್ ಟೀ ನಿಮ್ಮ ಒಂದು ಪರಿಹಾರವಾಗಿದೆ. ಇದು ಹೈಪರ್ಪಿಗ್ಮೆಂಟೇಶನ್, ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ, ಮೊಡವೆ, ಮಂದತೆ ಮತ್ತು ಮುಚ್ಚಿಹೋಗಿರುವ ರಂಧ್ರಗಳಿಗೆ ಸಹಾಯ ಮಾಡುತ್ತದೆ.. ಗ್ರೀನ್ ಟೀಯಿಂದ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದರಿಂದ ಆರೋಗ್ಯಕರ ಚರ್ಮವನ್ನು ಬಹಿರಂಗಪಡಿಸಲು ಸಹಾಯ ಆಗುತ್ತದೆ.
ಇದಕ್ಕಾಗಿ ಗ್ರೀನ್ ಟೀ ಪ್ಯಾಕ್ ತೆರೆದು, ಮೊಸರಿನೊಂದಿಗೆ ಪುಡಿಯನ್ನು ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ.



Click it and Unblock the Notifications
