ಈ ಕ್ರೀಮ್‌ ಹಚ್ಚಿದರೆ ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ

ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ತ್ಚಚೆಗೂ ವಯಸ್ಸಾಗುವುದು ಸಹಜ. ವಯಸ್ಸಾಗುತ್ತಿದೆ ಆದ್ದರಿಂದ ನೆರಿಗೆ ಬಿದ್ದರೆ ಪರ್ವಾಗಿಲ್ಲ ಎಂದು ಕೂರಲು ಎಲ್ಲರ ಮನಸ್ಸು ಬಯಸುವುದಿಲ್ಲ, ಸೆಲೆಬ್ರಿಟಿಗಳನ್ನು ನೋಡುವಾಗ ಅವರಿಗೂ ನಮ್ಮ ಹಗೆ ವಯಸ್ಸಾಗುತ್ತಿದೆ ಆದರೆ ಅವರ ತ್ವಚೆ ನೋಡುವಾಗ ಎಷ್ಟೊಂದು ಯೌವನದ ಕಳೆಯಿಂದ ಕೂಡಿರುತ್ತದೆ ಅಲ್ವಾ? ಎಂದು ಅನಿಸುವುದು ಸಹಜ. ತ್ವಚೆ ಯೌವನದ ಕಳೆಯಿಂದ ಕೂಡಿರಲು ಅದನ್ನು ಆರೈಕೆ ಮಾಡಬೇಕು. ಅದಕ್ಕಾಗಿ ಆ್ಯಂಟಿ ಏಜಿಂಗ್ ಕ್ರೀಮ್‌ ಬಳಸುವುದಾದರೆ ಅದಕ್ಕೆ ಒಂದಿಷ್ಟು ದುಡ್ಡು ಖರ್ಚು ಮಾಡಬೇಕು. ಎಲ್ಲರಿಗೆ ಅದು ಸಾಧ್ಯವಾಗುವುದಿಲ್ಲ.

Home Made Anti aging Cream,

ಇಲ್ಲಿ ನಾವು ಹೆಚ್ಚೇನು ದುಡ್ಡು ಖರ್ಚು ಮಾಡದೆ ಸೌಂದರ್ಯ ಕಾಪಾಡಲು ಕೆಲವೊಂದು ಮನೆಮದ್ದುಗಳ ರೆಸಿಪಿ ನೀಡಿದ್ದೇವೆ. ಇವುಗಳನ್ನು ಬಳಸಿದರೆ ಮುಖದಲ್ಲಿ ನೆರಿಗೆ ಬೇಗನೆ ಬೀಳುವುದಿಲ್ಲ ಹಾಗೂ ತ್ವಚೆಯೂ ತುಂಬಾ ಆಕರ್ಷಕವಾಗಿ ಕಾಣುವುದು. ಆ್ಯಂಟಿ ಏಜಿಂಗ್ ಕ್ರೀಮ್‌ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

1. ಶೀಯಾ ಬಟರ್, ಜೊಜೊಬಾ ಎಣ್ಣೆ, ಜೇನಿನ ಮೇಣ

1. ಶೀಯಾ ಬಟರ್, ಜೊಜೊಬಾ ಎಣ್ಣೆ, ಜೇನಿನ ಮೇಣ

ಜೇನಿನ ಮೇಣದಲ್ಲಿರುವ ವಿಟಮಿನ್ ಎ ನೆರಿಗೆ ಬೀಳದಂತೆ ತಡೆಗಟ್ಟುವಲ್ಲಿ ಹಾಗೂ ಬಿದ್ದ ಸೂಕ್ಷ್ಮ ನೆರಿಗೆ ಮರೆಯಾಗಲು ಕೂಡ ಸಹಕಾರಿ. ಅಲ್ಲದೆ ಮೇಣ ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ಜೊಜೊಬೊ ಎಣ್ಣೆ ತ್ವಚೆಯನ್ನು ಮೃದುವಾಗಿಸುತ್ತದೆ. ಶಿಯಾ ಬಟರ್‌ ತ್ವಚೆಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಶಿಯಾ ಬಟರ್ ಜತೆಗೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಕೂಡ ಬಳಸಬಹುದು.

ಬೇಕಾಗುವ ಸಾಮಗ್ರಿ

1 ಚಮಚ ಶಿಯಾ ಬಟರ್

2 ಚಮಚ ಜೇನಿನ ಮೇಣ

2 ಚಮಚ ತೆಂಗಿನೆಣ್ಣೆ

1 ಚಮಚ ಚಮದನದ ಎಣ್ಣೆ

1/4ಕಪ್ ಬಾದಾಮಿ ಎಣ್ಣೆ

ಮಾಡುವ ವಿಧಾನ:

* ಒಂದು ಬೌಲ್‌ನಲ್ಲಿ ಶಿಯಾ ಬಟರ್, ಜೇನಿನ ಮೇಣ, ಬಾದಾಮಿ ಎಣ್ಣೆ ಹಾಗೂ ತೆಂಗಿನೆಣ್ಣೆ ಹಾಕಿ.

* ಡಬಲ್ ಬಾಯ್‌ಲರ್ ಪಾತ್ರೆಗೆ ಹಾಕಿ ಎಲ್ಲಾ ಸಾಮಗ್ರಿ ಕರಗುವವರೆಗೆ ಕಾಯಿಸಿ.

* ಈಗ ಉಳಿದ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ.

* ಈಗ ಕರಗಿರುವ ಮಿಶ್ರಣವನ್ನು ಒಂದು ಗಾಜಿನ ಬಾಟಲಿನಲ್ಲಿ ಹಾಕಿಡಿ.

ಈಗ ರೆಡಿಯಾಗಿರುವ ಕ್ರೀಮ್ ಅನ್ನು ಬೆಳಗ್ಗೆ ಹಾಗೂ ಸಂಜೆ ಮುಖಕ್ಕೆ ಹಚ್ಚಿ.

2. ಬೆಣ್ಣೆ ಹಣ್ಣು, ಜೇನಿನ ಮೇಣ, ಆಲೀವ್ ಎಣ್ಣೆ

2. ಬೆಣ್ಣೆ ಹಣ್ಣು, ಜೇನಿನ ಮೇಣ, ಆಲೀವ್ ಎಣ್ಣೆ

ಬೆಣ್ಣೆ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಡಿ ಮತ್ತು ಇ ಇದ್ದು ಮುಖದಲ್ಲಿ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ ಹಾಗಾಗಿ ಇದು ನೆರಿಗೆಯನ್ನು ತಡೆಗಟ್ಟುವಲ್ಲಿ ಸಹಕಾರಿ. ಗೋಧಿ ಹುಲ್ಲಿನಲ್ಲಿ ಕೂಡ ವಿಟಮಿನ್ ಸಿ ಅಧಿಕವಿದ್ದು ತ್ವಚೆಯಲ್ಲಿ ಯೌವನದ ಕಳೆ ಕಾಪಾಡುವಲ್ಲಿ ಸಹಕಾರಿ.

ಬೇಕಾಗುವ ಸಾಮಗ್ರಿ

* ಅರ್ಧ ಬೆಣ್ಣೆಹಣ್ಣು

* 1 ಚಮಚ ಜೇನಿನ ಮೇಣ

* 1 ಚಮಚ ಆಲೀವ್ ಎಣ್ಣೆ

* 1 ಚಮಚ ಗೋಧಿಹುಲ್ಲಿನ ರಸ

ಮಾಡುವ ವಿಧಾನ:

* ಒಂದು ಬೌಲ್‌ನಲ್ಲಿ ಬೆಣ್ಣೆಹಣ್ಣು ಹಾಕಿ ಮ್ಯಾಶ್ ಮಾಡಿ.

* ಈಗ ದಪ್ಪ ತಳವಿರುವ ಪಾತ್ರೆಯಲ್ಲಿ ಜೇನಿನ ಮೇಣ ಹಾಕಿ ಕರಗಿಸಿ.

* ಅದಕ್ಕೆ ಬೆಣ್ಣೆಹಣ್ಣು, ಆಲೀವ್‌ ಎಣ್ಣೆ, ಗೋಧಿಹುಲ್ಲು ಹಾಕಿ ಮಿಕ್ಸ್ ಮಾಡಿ.

* ಈಗ ಉರಿಯಿಂದ ತೆಗೆದು ತಣ್ಣಗಾಗಲು ಬಿಡಿ.

* ರಾತ್ರಿ ಮಲಗುವ ಮುನ್ನ ಸ್ವಲ್ಪ ಕ್ರೀಮ್ ತೆಗೆದುಕೊಂಡು ಮುಖಕ್ಕೆ ಹಚ್ಚಿದರೆ ತ್ವಚೆಯಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಬಹುದು.

3. ತೆಂಗಿನೆಣ್ಣೆ, ಜೇನಿನ ಮೇಣ ಮತ್ತು ವಿಟಮಿನ್ ಇ

3. ತೆಂಗಿನೆಣ್ಣೆ, ಜೇನಿನ ಮೇಣ ಮತ್ತು ವಿಟಮಿನ್ ಇ

ತೆಂಗಿನೆಣ್ಣೆ, ಜೇನಿನ ಮೇಣ ಮತ್ತು ವಿಟಮಿನ್ ಇ ಮೂರು ಮಿಶ್ರಣದ ಕ್ರೀಮ್‌ ಸೂರ್ಯನ ನೇರಳಾತೀತ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುತ್ತದೆ ಹಾಗೂ ತ್ವಚೆ ಮುಪ್ಪಾಗುವುದನ್ನು ತಡೆಗಟ್ಟುತ್ತದೆ.

ಬೇಕಾಗುವ ಸಾಮಗ್ರಿ

ಒಂದೂವರೆ ಚಮಚ ತೆಂಗಿನೆಣ್ಣೆ

ಅರ್ಧ ಚಮಚ ವಿಟಮಿನ್ ಇ ಎಣ್ಣೆ

2 ಚಮಚ ಜೇನಿನ ಮೇಣ

ಬೇಕಿದ್ದರೆ ಎರಡು ಹನಿ ಸುವಾಸನೆ ಬೀರುವ ಎಣ್ಣೆ

ಮಾಡುವ ವಿಧಾನ:

* ಜೇನಿನ ಮೇಣವನ್ನು ಕರಗಿಸಿ, ಅದು ಕರಗಿದಾಗ ಅದಕ್ಕೆ ತೆಂಗಿನೆಣ್ಣೆ ಹಾಕಿ ಅದು ಸಂಪೂರ್ಣಕರಗುವವರೆಗೆ ಮಿಶ್ರ ಮಾಡಿ. * ಈಗ ಉರಿಯಿಂದ ಇಳಿಸಿ, ಅದಕ್ಕೆ ವಿಟಮಿನ್ ಇ ಎಣ್ಣೆ ಹಾಕಿ ಮಿಶ್ರ ಮಾಡಿ.

* ಈಗ ಮಿಶ್ರಣವನ್ನು ಗಾಜಿನ ಡಬ್ಬದಲ್ಲಿ ಹಾಕಿ ತಣ್ಣಗಾಗಲು ಬಿಡಿ.

* ಈ ಕ್ರೀಮ್‌ ಅನ್ನು ಪ್ರತಿದಿನ ಮಲಗುವ ಮುನ್ನ ಹಚ್ಚಿ ಮಲಗಿ, ಇದರಿಂದ ನಿಮ್ಮ ತ್ವಚೆ ಕಾಂತಿ ಹೆಚ್ಚುವುದು , ಬೇಗನೆ ನೆರಿಗೆ ಕೂಡ ಬೀಳದಂತೆ ಸೌಂದರ್ಯ ರಕ್ಷಣೆ ಮಾಡಬಹುದು.

 4. ಸೌತೆಕಾಯಿ, ಶಿಯಾ ಬಟರ್ ಹಾಗೂ ಲೋಳೆಸರ

4. ಸೌತೆಕಾಯಿ, ಶಿಯಾ ಬಟರ್ ಹಾಗೂ ಲೋಳೆಸರ

ಲೋಳೆಸರ ಹಾಗೂ ಸೌತೆಕಾಯಿ ತ್ವಚೆಗೆ ತುಂಬಾ ಒಳ್ಳೆಯದು. ಇದು ತ್ವಚೆಯ ಮಾಯಿಶ್ಚರೈಸರ್ ಹೆಚ್ಚಿಸುತ್ತದೆ. ಇನ್ನು ಇದು ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚುವಂತೆ ಮಾಡಿ ತ್ವಚೆಯ ಯೌವನ ಕಳೆ ಕಾಪಾಡುತ್ತದೆ. ಇನ್ನು ನಿಂಬೆಯಲ್ಲಿರುವ ಅಸಿಡಿಕ್ ಅಂಶ ತ್ವಚೆಯನ್ನು ಕ್ಲೆನ್ಸ್ ಮಾಡುತ್ತದೆ.

ಬೇಕಾಗುವ ಸಾಮಗ್ರಿ

1/4 ಕಪ್ ತುರಿದ ಸೌತೆಕಾಯಿ

1 ಕಪ್ ಶಿಯಾ ಬಟರ್

1/2 ಕಪ್ ಮೊಸರು

ಅರ್ಧ ಚಮಚ ನಿಂಬೆರಸ

ಮಾಡುವ ವಿಧಾನ:

* ಸೌತೆಕಾಯಿ ಪೇಸ್ಟ್ ಮಾಡಿ ರಸವನ್ನು ಹಿಂಡಿ ತಗೆಯಿರಿ.

* ಅದಕ್ಕೆ ಮೊಸರು, ಲೋಳೆಸರ ಹಾಕಿ ಮಿಕ್ಸ್ ಮಾಡಿ.

* ಶಿಯಾ ಬಟರ್ ಹಾಗೂ ತೆಂಗಿನೆಣ್ಣೆಯನ್ನು ಪ್ಯಾನ್‌ಗೆ ಹಾಕಿ.

* ಅದು ಸಂಪೂರ್ಣ ಕರಗುವವರೆಗೆ ಕಡಿಮೆ ಉರಿಯಲ್ಲಿ ಇಡಿ.

* ಈಗ ಉರಿಯಿಂದ ತೆಗೆದು ಕೋಳೆಸರ ಹಾಗೂ ಮೊಸರಿನ ಮಿಶ್ರಣವನ್ನು ಹಾಕಿ ಮಿಶ್ರಣ ಮಾಡಿ.

* ನಂತರ ಮಿಶ್ರಣವನ್ನು ಒಂದು ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ.

* ರಾತ್ರಿ ಮಲಗುವಾಗ ಪ್ರತಿದಿನ ಮುಖಕ್ಕೆ ಹಚ್ಚಿ ಮಲಗಿ.

ಈ ನಾಲ್ಕು ವಿಧಾನಗಳಲ್ಲಿ ನಿಮಗೆ ಇಷ್ಟವಾದ ಕ್ರೀಮ್ ಮಾಡಿ ಬಳಸಿ ಮುಖದ ಸೌಂದರ್ಯ ಹೆಚ್ಚಿಸಬಹುದು.

English summary

Anti-Ageing Creams For Youthful Skin

An expensive creams rarely give us any substantial result. But, what if we tell you that you can get the youthful skin that you so desire with a DIY anti-ageing cream. Yep, you read that right!
Story first published: Tuesday, December 24, 2019, 13:56 [IST]
X
Desktop Bottom Promotion