Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಇವೇ ಇಂದಿಗೂ ಬಳಕೆ ಮಾಡುತ್ತಿರುವ ಪುರಾತನ ಕಾಲದ ಬ್ಯೂಟಿ ಸೀಕ್ರೆಟ್‌ಗಳು!
ನಮ್ಮ ತ್ವಚೆಯ ಮ್ಯಾಜಿಕ್ ಮಾಡುವಂತಹ ಹಲವಾರು ನೈಸರ್ಗಿಕ ಪದಾರ್ಥಗಳಿವೆ. ಪ್ರಾಚೀನ ಕಾಲದಿಂದಲೂ ಬಳಕೆ ಮಾಡುತ್ತಿರುವ ಈ ವಸ್ತುಗಳು ಇಂದಿಗೂ ಬಳಕೆಯಲ್ಲಿರುವುದೇ ಈ ನೈಸರ್ಗಿಕ ಪದಾರ್ಥಗಳ ಫಲಿತಾಂಶಕ್ಕೆ ಹಿಡಿದ ಕನ್ನಡಿಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ದುಬಾರಿ ವಸ್ತುಗಳಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲದ ಈ ನೈಸರ್ಗಿಕ ಪದಾರ್ಥಗಳು ಅಗ್ಗವಾಗಿವೆ, ಜೊತೆಗೆ ಯಾವುದೇ ಅಡ್ಡಪರಿಣಾಮಗಳ ಭಯವಿರುವುದಿಲ್ಲ. ಅಂತಹ ಕೆಲವು ಪ್ರಾಚೀನ ಸೌಂದರ್ಯ ವಸ್ತುಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಸೌಂದರ್ಯಕ್ಕೆ ಇಂದಿಗೂ ಬಳಕೆ ಮಾಡುತ್ತಿರುವ ಪುರಾತನ ಕಾಲದ ನೈಸರ್ಗಿಕ ಪದಾರ್ಥಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಕಹಿಬೇವು:
ಮೊಡವೆಗಳನ್ನು ಕಡಿಮೆಮಾಡಲು ಸುರಕ್ಷಿತ ಮಾರ್ಗವೆಂದರೆ ಬೇವಿನ ಎಲೆಗಳನ್ನು ಪೇಸ್ಟ್ ಆಗಿ ಪರಿವರ್ತಿಸಿ, ಅದನ್ನು ಫೇಸ್ ಮಾಸ್ಕ್ ಆಗಿ ಬಳಸುವುದು. ಬೇವಿನ ಎಲೆಗಳು ಸುಲಭವಾಗಿ ಸಿಗುವುದರಿಂದ ಇದು ಸರಳವಾದ ವಿಧಾನವಾಗಿದೆ. ಇದು 100 ಪ್ರತಿಶತ ನೈಸರ್ಗಿಕವಾಗಿರುವುದರಿಂದ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ.

ಉಬ್ಟಾನ್‌ಗಳು:
ಶ್ರೀಗಂಧ, ಅರಿಶಿನ, ಕಡಲೆ ಹಿಟ್ಟು, ಗುಲಾಬಿ ನೀರು ಅಥವಾ ಹಾಲು, ಗಿಡಮೂಲಿಕೆಗಳು ಮತ್ತು ಸಾರಭೂತ ತೈಲಗಳನ್ನು ಮಿಶ್ರಣ ಮಾಡುವ ಮೂಲಕ ಉಬ್ಟಾನ್‌ಗಳನ್ನು ತಯಾರಿಸಲಾಗುತ್ತದೆ. ಈ ಮಿಶ್ರಣವು ನಿಮ್ಮ ಚರ್ಮಕ್ಕೆ ಹೊಸ ಕಾಂತಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಬಹಳ ಹಿಂದಿನಿಂದಲೂ ಬಳಕೆ ಮಾಡಲಾಗುತ್ತಿದೆ.

ಮುಲ್ತಾನಿ ಮಿಟ್ಟಿ:
ಮುಲ್ತಾನಿ ಮಿಟ್ಟಿಯು ಖನಿಜ-ಸಮೃದ್ಧ ಜೇಡಿಮಣ್ಣಿನಂತಹ ವಸ್ತುವಾಗಿದ್ದು, ಕಪ್ಪು ಚುಕ್ಕೆಗಳು, ವೈಟ್‌ಹೆಡ್‌ಗಳು ಮತ್ತು ಮೊಡವೆಗಳನ್ನು ತೆಗೆದುಹಾಕಲು ಫೇಸ್ ಪ್ಯಾಕ್‌ನಂತೆ ಬಳಸಲಾಗುತ್ತದೆ. ಇಂದಿಗೂ ಸಹ, ಹಲವಾರು ಜನರು ಮಾರುಕಟ್ಟೆಯಲ್ಲಿ ಮಾರಾಟವಾಗುವ ರಾಸಾಯನಿಕಗಳಿಗಿಂತ ಈ ನೈಸರ್ಗಿಕ ಉತ್ಪನ್ನವನ್ನು ಬಳಸಲು ಬಯಸುತ್ತಾರೆ. ಏಕೆಂದರೆ, ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.

ಅರಿಶಿನ ಫೇಸ್ ಮಾಸ್ಕ್:
ಅರಿಶಿನವು ಶತಮಾನಗಳಿಂದ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಚರ್ಮದ ಆರೈಕೆಗೆ ಬಂದಾಗ ಅಗಾಧ ಪ್ರಯೋಜನಗಳನ್ನು ಹೊಂದಿದೆ. ಅರಿಶಿನವನ್ನು ಜೇನುತುಪ್ಪ ಮತ್ತು ಶ್ರೀಗಂಧದೊಂದಿಗೆ ಬೆರೆಸಿ ತಯಾರಿಸಿದ ಮಾಸ್ಕ್ ಮೊಡವೆ, ಮೊಡವೆ ಕಲೆಗಳು ಮತ್ತು ಕಪ್ಪು ಕಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಅಲೋ ವೆರಾ:
ಅಲೋವೆರಾದ ಜೆಲ್ ಅನೇಕ ಚರ್ಮ-ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಒಣ ತ್ವಚೆಗೆ ಅತ್ಯುತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಜೊತೆಗೆ ಎಸ್ಜಿಮಾ ಮತ್ತು ಉರಿಯೂತದ ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಆಲಿವ್ ಆಯಿಲ್:
ಸಕ್ಕರೆಯೊಂದಿಗೆ ಆಲಿವ್ ಎಣ್ಣೆಯು ಬೆರೆಸುವುದರಿಂದ, ಚರ್ಮದ ರಂಧ್ರಗಳು ಮುಚ್ಚುವುದಿಲ್ಲವಾದ್ದರಿಂದ ಉತ್ತಮ ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮವನ್ನು ಆರ್ಧ್ರಕಗೊಳಿಸಲು ಸಹಾಯ ಮಾಡುವುದಲ್ಲದೇ, ಶುಷ್ಕ ಚರ್ಮಕ್ಕೆ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ಎಕ್ಸ್‌ಫೋಲಿಯೇಟರ್ ಮಾಡಲು ಒಂದು ಕಪ್ ಸಕ್ಕರೆಗೆ ಅರ್ಧ ಕಪ್ ಆಲಿವ್ ಎಣ್ಣೆಯನ್ನು ಸೇರಿಸಿ, ಎಕ್ಸ್‌ಫೋಲಿಯೇಟ್ ಮಾಡುವಾಗ ನೀರನ್ನು ಸೇರಿಸಿ.
ಈ ನೈಸರ್ಗಿಕ ಸೌಂದರ್ಯ ಸ್ನೇಹಿ ಪದಾರ್ಥಗಳು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ, ನಿಮ್ಮ ತ್ವಚೆಯ ಮೇಲೆ ಅದ್ಭುತವಾಗಿ ಕೆಲಸ ಮಾಡುತ್ತವೆ, ಸುಲಭವಾಗಿ ಲಭ್ಯದ್ದು, ಅಗ್ಗವಾಗಿರುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ರಾಸಾಯನಿಕ ಉತ್ಪನ್ನಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.



Click it and Unblock the Notifications
