Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ತಕ್ಷಣದ ಮುಖದ ಕಾಂತಿಗೆ ಕೇವಲ ಮೂರೇ ಪದಾರ್ಥ ಬಳಸಿ ಈ ಪ್ಯಾಕ್ ತಯಾರಿಸಿ
ಇಂದಿನ ಬಿಡುವಿಲ್ಲದ ಜೀವನ ಹೇಗಾಗಿದೆ ಅಂದರೆ, ನಮ್ಮ ತ್ವಚೆಯ ಅರೈಕೆ ಮಾಡಲು ಸಮಯವಿಲ್ಲದಂತಾಗಿದೆ. ಹಾಗಂತ ತ್ವಚೆಯ ಆರೈಕೆ ಮಾಡದೇ ಬಿಡಬಾರದು. ಆಗಾಗ ಅಗತ್ಯವಿರುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅಕಾಲಿಕವಾಗಿ ಸೌಂದರ್ಯ ಸಂಬಂಧಿತ ಸಮಸ್ಯೆಗಳು ಉದ್ಭವಿಸುತ್ತವೆ.
ಇಂದು ನಾವು ನಿಮಗೆ ಕೇವಲ 15ನಿಮಿಷದಲ್ಲೇ ಮುಖಕ್ಕೆ ಹೊಳಪು ನೀಡುವಂತಹ ಫೇಸ್ ಪ್ಯಾಕ್ ಒಂದನ್ನು ಹೇಳಲಿದ್ದೇವೆ. ಈ ಮೂಲಕ ಪಾರ್ಟಿ, ಫಂಕ್ಷನ್‌ಗಳಿಗೆ ಕೆಲವೇ ನಿಮಿಷಗಳಲ್ಲಿ ತಯಾರಾಗಬಹುದು. ಹಾಗಾದರೆ, ಬನ್ನಿ ಈ ಫೇಸ್ ಪ್ಯಾಕ್‌ಗೆ ಏನೆಲ್ಲಾ ಬೇಕು? ಅದನ್ನು ಬಳಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.
15ನಿಮಿಷದಲ್ಲೇ ಮುಖಕ್ಕೆ ಹೊಳಪು ನೀಡುವಂತಹ ಫೇಸ್ ಪ್ಯಾಕ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ:

ಬೇಕಾಗಿರುವ ಪದಾರ್ಥಗಳು:
8-10 ಬಾದಾಮಿ
2 ಚಮಚ ಹಸಿ ಹಾಲು
1 ಚಮಚ ಜೇನುತುಪ್ಪ

ಬಳಸುವ ವಿಧಾನ ಹೇಗೆ?:
1. ಮೊದಲಿಗೆ ಬಾದಾಮಿಗಳನ್ನು ಪುಡಿಮಾಡಿ.
2. ಒಂದು ಬಟ್ಟಲಿನಲ್ಲಿ, ಮಿಶ್ರಣವನ್ನು ತಯಾರಿಸಲು ಬಾದಾಮಿ ಪುಡಿ, ಹಸಿ ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ.
3. ನಿಮ್ಮ ತೊಳೆದ ಮುಖಕ್ಕೆ ಮುಖವಾಡವನ್ನು ಹಚ್ಚಿ, 10-12 ನಿಮಿಷಗಳ ಕಾಲ ಅದನ್ನು ಬಿಡಿ.
4. ತಣ್ಣೀರಿನಿಂದ ತೊಳೆಯಿರಿ ಮತ್ತು ಒಣಗಿಸಿ.
5. ದಿನಚರಿಯನ್ನು ಪೂರ್ಣಗೊಳಿಸಲು ನಿಮ್ಮ ಮುಖವನ್ನು ಟೋನ್ ಮತ್ತು ಮಾಯಿಶ್ಚರೈಸರ್ ಮಾಡಿ.

ಪದಾರ್ಥಗಳು ಮುಖಕ್ಕೆ ಹೇಗೆ ಸಹಕಾರಿ:
ಬಾದಾಮಿ:
ಬಾದಾಮಿಯು ವಿಟಮಿನ್ ಇ ಯಿಂದ ತುಂಬಿದ್ದು, ಚರ್ಮವನ್ನು ತೇವಾಂಶದಿಂದ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು, ವಯಸ್ಸಾದ ಇತರ ಚಿಹ್ನೆಗಳೊಂದಿಗೆ ಹೋರಾಡಿ, ಚರ್ಮವನ್ನು ಸುಕ್ಕು-ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಇದು ಮೊಡವೆಯುಕ್ತ ತ್ವಚೆ ಇರುವವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಮೃದು ಹಾಗೂ ಎಣ್ಣೆಮುಕ್ತ ಮುಖ ಪಡೆಯಲು ಸಹಾಯ ಮಾಡುವುದು.

ಹಸಿ ಹಾಲು:
ಬಹಳ ಹಿಂದಿನಿಂದಲೂ ಹಸಿ ಹಾಲು ತ್ವಚೆಯ ನಾನಾ ಸಮಸ್ಯೆಗಳಿಗೆ ಬಳಸಲಾಗುತ್ತಿದೆ. ಹಸಿ ಹಾಲಿನಲ್ಲಿ ಲ್ಯಾಕ್ಟೋಸ್, ಪ್ರೋಟೀನ್, ಕೊಬ್ಬು, ಕೌಲ್ಸಿಯಮ್, ವಿಟಮಿನ್ ಎ, ಬಿ-12, ಡಿ ಮತ್ತು ಸತು ಮೊದಲಾದ ಪೋಷಕಾಂಶಗಳು ನಮ್ಮ ಚರ್ಮಕ್ಕೆ ತುಂಬಾ ಉಪಯುಕ್ತವಾಗಿವೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶವನ್ನು ನೀಡುವ ಮೂಲಕ ಚರ್ಮಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡಲಾಗುತ್ತದೆ. ಜೊತೆಗೆ ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ರಂಧ್ರಗಳನ್ನು ಶುದ್ಧೀಕರಿಸುತ್ತದೆ. ಈ ಮೂಲಕ ಮೊಡವೆಗಳಿಗೆ ಕಾರಣವಾಗುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ.

ಜೇನುತುಪ್ಪ:
ಮತ್ತೊಂದೆಡೆ, ಜೇನುತುಪ್ಪವು ಉತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಅದು ಚರ್ಮವನ್ನು ಮೃದುಗೊಳಿಸುತ್ತದೆ. ಜೊತೆಗೆ ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆ ಪೀಡಿತ ಚರ್ಮದ ಮೇಲೆ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ, ಮುಖದಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸುವಲ್ಲಿಯೂ ಸಹ ಜೇನುತುಪ್ಪ ಸಹಕಾರಿ.



Click it and Unblock the Notifications