Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಒಣ ಹಣ್ಣುಗಳನ್ನು ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಒಣ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಇದು ಹಲವಾರು ರೀತಿಯ ಕಾಯಿಲೆಗಳು ಬರದಂತೆ ತಡೆಯುವ ಶಕ್ತಿ ಹೊಂದಿದೆ. ಒಣ ಹಣ್ಣುಗಳು ಸ್ವಲ್ಪ ದುಬಾರಿ ಎಂದು ನಮಗೆ ಅನಿಸಿದರೆ ಅದರಲ್ಲಿ ಇರುವಂತಹ ಆರೋಗ್ಯಕಾರಿ ಅಂಶಗಳನ್ನು ಪರಿಗಣಿಸಿದರೆ ನಾವು ನೀಡುವಂತಹ ಹಣಕ್ಕೆ ಸರಿಯಾದ ಮೌಲ್ಯವು ಸಿಕ್ಕಿದಂತೆ ಆಗುವುದು. ಇದು ಸಂಪೂರ್ಣ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ, ಸೌಂದರ್ಯವರ್ಧಕವಾಗಿ ಕಾರ್ಯನಿರ್ವಹಿಸುವುದು. ತುಂಬಾ ರುಚಿಕರವಾಗಿರುವ ಮತ್ತು ಹಲವಾರು ರೀತಿಯ ಖಾದ್ಯಗಳಲ್ಲಿ ಒಣ ಹಣ್ಣುಗಳನ್ನು ಬಳಸಿಕೊಳ್ಳಲಾಗುತ್ತದೆ.
ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿದರೆ ಅದರಿಂದ ನಮಗೆ ತುಂಬಾ ಆರೋಗ್ಯಕಾರಿ ಹಾಗೂ ಫಿಟ್ ಆಗಿರಲು ಸಹಕಾರಿಯಾಗಲಿದೆ. ತೂಕ ಇಳಿಸಿಕೊಳ್ಳಬೇಕೆಂದು ಬಯಸುತ್ತಾ ಇರುವವರಿಗೂ ಇದು ತುಂಬಾ ಸಹಕಾರಿ. ಇದು ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ತಿನ್ನುವ ಬಯಕೆ ಕಡಿಮೆ ಮಾಡುವ ಕಾರಣದಿಂದಾಗಿ ಅನಗತ್ಯವಾಗಿ ಕ್ಯಾಲರಿ ಸೇವಿಸುವುದು ಕಡಿಮೆ ಆಗುವುದು. ಒಣ ಬೀಜಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿದೆ.

ಒಣ ಹಣ್ಣುಗಳು ಚರ್ಮಕ್ಕೆ ತುಂಬಾ ಒಳ್ಳೆಯದು
ಖನಿಜಾಂಶಗಳಾಗಿರುವಂತಹ ತಾಮ್ರ, ಸತು, ವಿಟಮಿನ್ ಎ, ಸಿ ಮತ್ತು ಇ ಒಣ ಹಣ್ಣುಗಳು ಹಾಗೂ ಬೀಜಗಳಲ್ಲಿ ಇದೆ. ಒಣ ಹಣ್ಣುಗಳು ಚರ್ಮಕ್ಕೆ ಕೂಡ ತುಂಬಾ ಒಳ್ಳೆಯದು. ತ್ವಚೆಯು ನಯ ಹಾಗೂ ಸುಂದರವಾಗಿರುವಂತೆ ಮಾಡುವುದು. ಇದರಿಂದಾಗಿ ಮುಖಕ್ಕೆ ನೈಸರ್ಗಿಕ ಕಾಂತಿಯು ಸಿಗುವುದು. ನೀವು ವಿಶೇಷವಾಗಿ ಯಾವುದೇ ರೀತಿಯ ಪ್ರಯತ್ನ ಮಾಡದೆ ಒಣ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ಲಾಭವಾಗುವುದು. ಇದನ್ನು ನೀವು ಉಪಾಹಾರವಾಗಿ ಬಳಸಬಹುದು ಅಥವಾ ದಿನದ ಯಾವುದೆ ಸಮಯದಲ್ಲೂ ನೀವು ಇದನ್ನು ತಿನ್ನಬಹುದು. ಈ ಒಣ ಹಣ್ಣುಗಳು ಹಾಗೂ ಬೀಜಗಳಲ್ಲಿ ಇರುವಂತಹ ಅಂಶಗಳಿಂದಾಗಿ ಇದನ್ನು ಹೆಚ್ಚಾಗಿ ಸೌಂದರ್ಯ ಉತ್ಪನ್ನಗಳಲ್ಲೂ ಬಳಸಲಾಗುತ್ತದೆ. ಹೀಗಾಗಿ ತ್ವಚೆಗೆ ಇದರಲ್ಲಿನ ಲಾಭಗಳು ಸಿಗುವುದು. ಒಣ ಹಣ್ಣುಗಳಲ್ಲಿ ವಯಸ್ಸಾಗುವ ವೇಳೆ ಕಾಣಿಸುವಂತಹ ಲಕ್ಷಣಗಳನ್ನು ತಡೆಯುವ ಗುಣಗಳು ಇವೆ. ವಯಸ್ಸಾಗುವಂತಹ ಲಕ್ಷಣಗಳನ್ನು ಇದು ನಿಧಾನ ವಾಗಿಸುವುದು ಮತ್ತು ದೀರ್ಘಕಾಲ ತನಕ ತ್ವಚೆಯು ಯೌವನಯುತವಾಗಿ ಇರುವಂತೆ ಮಾಡುವುದು. ಸುಂದರ ಹಾಗೂ ಕಾಂತಿಯು ತ್ವಚೆ ಪಡೆಯಲು ನೀವು ಯಾವ್ಯಾವ ಒಣ ಹಣ್ಣುಗಳು ಹಾಗೂ ಬೀಜಗಳನ್ನು ಸೇವಿಸಬೇಕು ಎಂದು ನಾವು ಈ ಲೇಖನದಲ್ಲಿ ಪಟ್ಟಿ ಮಾಡಿದ್ದೇವೆ. ಇದನ್ನು ಓದಿಕೊಂಡು ಸೌಂದರ್ಯ ವರ್ಧಕವಾಗಿ ಒಣ ಬೀಜ ಹಾಗೂ ಹಣ್ಣುಗಳನ್ನು ಬಳಸಿಕೊಳ್ಳಿ.

ಬಾದಾಮಿ
ಬಾದಾಮಿ ತುಂಬಾ ಆರೋಗ್ಯಕಾರಿ. ಇದು ರಕ್ತದೊತ್ತಡ ತಗ್ಗಿಸುವುದು, ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವುದು, ತೂಕ ಕಳೆದುಕೊಳ್ಳಲು ಸಹಕಾರಿ ಮತ್ತು ಹಲವಾರು ರೀತಿಯ ಉನ್ನತ ಮಟ್ಟದ ಪ್ರೋಟೀನ್ ಒದಗಿಸುವುದು. ಬಾದಾಮಿಯು ತುಂಬಾ ರುಚಿಕರವಾಗಿರುವ ಕಾರಣದಿಂದಾಗಿ ಇದನ್ನು ಹಲವಾರು ಖಾದ್ಯ ಮತ್ತು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಬಾದಾಮಿಯು ಕೊಬ್ಬಿನಾಮ್ಲ, ಪ್ರೋಟೀನ್ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ. ಬಾದಾಮಿಯಲ್ಲಿ ವಿಟಮಿನ್ ಇ ಇರುವ ಕಾರಣದಿಂದಾಗಿ ಇದು ಚರ್ಮಕ್ಕೆ ಯಾವಾಗಲೂ ತೇವಾಂಶ ನೀಡುವುದು. ವಿಟಮಿನ್ ಇ ಯು ರಕ್ತನಾಳಗಳು ಹಿಗ್ಗುವಂತೆ ಮಾಡುವುದು. ಚರ್ಮದಲ್ಲಿ ಉಂಟಾಗುವಂತಹ ಮೊಡವೆ ಹಾಗೂ ಕಪ್ಪು ಕಲೆಗಳ ನಿವಾರಣೆ ಮಾಡಲು ಇದು ತುಂಬಾ ಸಹಕಾರಿಯಾಗಿರುವುದು. ಕಾಂತಿಯುತ ತ್ವಚೆ ಪಡೆಯಲು ಬಾದಾಮಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು. ಬಾದಾಮಿ ಪೇಸ್ಟ್ ಮಾಡಲು ಮೊದಲು ಕೆಲವು ಬಾದಾಮಿಯನ್ನು ರಾತ್ರಿ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಮೊದಲಿಗೆ ಬಾದಾಮಿಯ ಸಿಪ್ಪೆ ತೆಗೆದು, ಇದರ ಬಳಿಕ ಅದನ್ನು ಬಾಳೆಹಣ್ಣಿನ ಜತೆಗೆ ಸೇರಿಸಿಕೊಂಡು ರುಬ್ಬಿಕೊಂಡು ಪೇಸ್ಟ್ ಮಾಡಬೇಕು. 4-5 ನಿಮಿಷ ಕಾಲ ಈ ಮಿಶ್ರಣ ಬಳಸಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಬಳಿಕ ನೀವು ಮುಖವನ್ನು ತಣ್ಣಗಿನ ನೀರಿನಿಂದ ತೊಳೆಯಿರಿ. ಚರ್ಮದ ಸತ್ತಕೋಶವನ್ನು ಇದು ತೆಗೆಯುವುದು ಮತ್ತು ಚರ್ಮದಲ್ಲಿನ ಧೂಳು ಹಾಗೂ ಕಲ್ಮಷ ನಿವಾರಣೆ ಮಾಡಿ ಮುಖಕ್ಕೆ ಕಾಂತಿ ನೀಡುವುದು.

ವಾಲ್ ನಟ್(ಆಕ್ರೂಡ)
ವಾಲ್ ನಟ್ ನಲ್ಲಿ ಒಮೆಗಾ 3ಕೊಬ್ಬಿನಾಮ್ಲವು ಇರುವ ಕಾರಣದಿಂದಾಗಿ ಇದು ಉರಿಯೂತ ಶಮನಕಾರಿ ಗುಣ ಹೊಂದಿದೆ. ವಾಲ್ ನಟ್ ನಲ್ಲಿ ವಿಟಮಿನ್ ಬಿ ಕೂಡ ಉತ್ತಮ ಪ್ರಮಾಣದಲ್ಲಿದ್ದು, ವಯಸ್ಸಾಗುವಂತಹ ಲಕ್ಷಣವನ್ನು ಇದು ದೂರವಿಡುವುದು. ಒಂದು ಹಿಡಿ ವಾಲ್ ನಟ್ ಬಳಸಿಕೊಂಡರೆ ಅದು ಆರೋಗ್ಯಕಾರಿ ಚರ್ಮ ನೀಡುವುದು. ವಾಲ್ ನಟ್ ನ ಪೇಸ್ಟ್ ಗೆ ಜೇನುತುಪ್ಪ ಹಾಕಿಕೊಂಡು ಮಿಶ್ರನ ಮಾಡಿ, ಮುಖಕ್ಕೆ ಹಚ್ಚಿಕೊಂಡರೆ ಅದರಿಂದ ಕಾಂತಿಯುತ ಚರ್ಮವನ್ನು ಪಡೆಯಬಹುದು. ನಾಲ್ಕು ವಾಲ್ ನಟ್ ನ್ನು ರುಬ್ಬಿಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್ ಹಾಕಿ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಫ್ರಿಡ್ಜ್ ನಲ್ಲಿಟ್ಟಿರುವ ನೀರಿನಿಂದ ಮುಖ ತೊಳೆಯಿರಿ. ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು ಮತ್ತು ವಯಸ್ಸಾಗುವಂತಹ ಲಕ್ಷಣಗಳು ಬರದಂತೆ ತಡೆಯುವುದು. ಮುಖದಲ್ಲಿ ವರ್ಣ ಕುಂದುವುದನ್ನು ಕೂಡ ಇದು ನಿವಾರಣೆ ಮಾಡುವುದು.

ಒಣದ್ರಾಕ್ಷಿ
ಒಣದ್ರಾಕ್ಷಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಜೋತುಬಿದ್ದ ಚರ್ಮವನ್ನು ಇದು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ನೀವು ದಿನದಲ್ಲಿ ಕೆಲವು ಒಣದ್ರಾಕ್ಷಿ ಸೇವನೆ ಮಾಡಬಹುದು ಅಥವಾ ರಾತ್ರಿ ನೀರಿನಲ್ಲಿ ಒಣದ್ರಾಕ್ಷಿಯನ್ನು ನೆನೆಸಲು ಹಾಕಿ ಬೆಳಗ್ಗೆ ಅದನ್ನು ಸೇವಿಸಬೇಕು. ಚರ್ಮದಲ್ಲಿರುವಂತಹ ವಿಷಕಾರಿ ಅಂಶವನ್ನು ತೆಗೆದುಹಾಕಲು ನೀವು ಒಣದ್ರಾಕ್ಷಿಯನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಕೆಲವು ಒಣದ್ರಾಕ್ಷಿಯನ್ನು ಪೇಸ್ಟ್ ಮಾಡಿಕೊಂಡು, ಅದಕ್ಕೆ ಸ್ವಲ್ಪ ಹಾಲು ಹಾಕಿ. ಈ ಫೇಸ್ಟ್ ನಿಂದ ಮುಖಕ್ಕೆ ಕೆಲವು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಬಳಿಕ ನೀವು ಮುಖವನ್ನು ನೀರಿನಿಂದ ತೊಳೆಯಿರಿ. ಚರ್ಮವು ಮೊಶ್ಚಿರೈಸ್ ನ್ನು ಹೀರಿಕೊಳ್ಳುವಂತಹ ಸಾಮರ್ಥ್ಯವನ್ನು ಇದು ಹೆಚ್ಚು ಮಾಡುವುದು.



Click it and Unblock the Notifications











