Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಬ್ಯೂಟಿ ಟಿಪ್ಸ್: ಮನೆಯಲ್ಲಿಯೇ ತಯಾರಿಸಿ ನೋಡಿ ಈರುಳ್ಳಿ ಫೇಸ್ ಪ್ಯಾಕ್
ಸೌಂದರ್ಯವೆನ್ನುವುದು ಜನರಿಗೆ ಮಾತ್ರವಲ್ಲ, ದೊಡ್ಡ ದೊಡ್ಡ ಕಂಪೆನಿಗಳಿಗೂ ಲಾಭ ತರುವಂತದ್ದಾಗಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಮಾರುಕಟ್ಟೆಗೆ ಪ್ರತೀ ದಿನವೂ ಹೊಸ ಹೊಸ ಉತ್ಪನ್ನಗಳು ಬರುತ್ತಲೇ ಇರುತ್ತವೆ. ಇದನ್ನು ಕೊಂಡುಕೊಳ್ಳುವರ ಸಂಖ್ಯೆಯು ಅಧಿಕವಾಗಿದೆ. ಯಾಕೆಂದರೆ ಎಲ್ಲಾ ಕಡೆಯೂ ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ.
ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳು ಕೆಲವು ಸಮಯ ಕಾಲ ಸೌಂದರ್ಯ ವೃದ್ಧಿ ಮಾಡಬಹುದು. ಆದರೆ ಇದರಿಂದ ಮುಂದೆ ಕೆಲವೊಂದು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದು. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಉತ್ಪನ್ನಗಳ ಬದಲಿಗೆ ಮನೆಯಲ್ಲೇ ಕೆಲವೊಂದು ಫೇಸ್ ಪ್ಯಾಕ್ ಗಳನ್ನು ಮಾಡಿಕೊಂಡು ಬಳಸಿದರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ತ್ವಚೆಗೆ ಲಾಭ ನೀಡುವುದು.

ಈರುಳ್ಳಿಯ ಪ್ರಯೋಜನಗಳು
ಈರುಳ್ಳಿಯು ನಾವು ಪ್ರತಿನಿತ್ಯವು ಬಳಸುವಂತಹ ತರಕಾರಿಯಾಗಿದೆ. ಈರುಳ್ಳಿಯು ನಮ್ಮ ಆಹಾರಕ್ಕೆ ರುಚಿ ಮತ್ತು ಸುವಾಸನೆ ನೀಡುವುದು ಮಾತ್ರವಲ್ಲದೆ, ಇದರಿಂದ ಹಲವಾರು ರೀತಿಯ ಚರ್ಮದ ಸಮಸ್ಯೆ ಕೂಡ ನಿವಾರಣೆ ಮಾಡಬಹುದು. ಈರುಳ್ಳಿ ಯಲ್ಲಿ ಹಲವಾರು ರೀತಿಯ ಪ್ರಮುಖ ಪೋಷಕಾಂಶಗಳು, ಆ್ಯಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ಇವೆ. ಬಿಳಿ, ಸುಂದರ ಹಾಗೂ ಕಾಂತಿಯುತ ಚರ್ಮವನ್ನು ತುಂಬಾ ಕಡಿಮೆ ಸಮಯದಲ್ಲಿ ಪಡೆಯಬೇಕು ಎಂದಾದರೆ ಆಗ ನೀವು ಈರುಳ್ಳಿಯನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಬಳಸಿಕೊಳ್ಳಿ. ಈರುಳ್ಳಿಯಲ್ಲಿ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಚರ್ಮದ ಸೋಂಕು ಮತ್ತು ದದ್ದುಗಳಿಗೆ ಇದು ತುಂಬಾ ಪರಿಣಾಮಕಾರಿಯಾಗಿರುವುದು. ಮನೆಯಲ್ಲೇ ತಯಾರಿಸುವಂತಹ ಈರುಳ್ಳಿಯ ಫೇಸ್ ಪ್ಯಾಕ್ ತುಂಬಾ ಪರಿಣಾಮಕಾರಿಯಾಗಿ ಚರ್ಮದಲ್ಲಿ ಇರುವಂತಹ ಕಲ್ಮಶವನ್ನು ತೆಗೆದು ಹಾಕಿ, ಸೋಂಕು ನಿವಾರಣೆ ಮಾಡುವುದು. ನಿಯಮಿತವಾಗಿ ಈ ಫೇಸ್ ಪ್ಯಾಕ್ ಗಳನ್ನು ಬಳಸಿಕೊಂಡರೆ ಅದರಿಂದ ನಿಮಗೆ ಬೇಕಾಗಿರುವಂತಹ ಕಾಂತಿಯುತ, ಸುಂದರ ತ್ವಚೆಯು ಸಿಗುವುದು.

ಈರುಳ್ಳಿ ಮತ್ತು ಲಿಂಬೆ
•ಸಮ ಪ್ರಮಾಣದ ಈರುಳ್ಳಿ ರಸ ಮತ್ತು ಲಿಂಬೆ ರಸ ತೆಗೆದುಕೊಳ್ಳಿ.
•ಈ ಮಿಶ್ರಣದಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ.
•ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
•ಹಾಗೆ ಅದು ಒಣಗಲು ಬಿಡಿ.
•ಬಳಿಕ ತಣ್ಣೀರಿನಿಂದ ತೊಳೆಯಿರಿ.
•ವಾರದಲ್ಲಿ ಮೂರು ಸಲ ಇದನ್ನು ಬಳಸಿಕೊಳ್ಳಿ.

ಕಡಲೆಹಿಟ್ಟು ಮತ್ತು ಈರುಳ್ಳಿ
ಬೇಕಾಗುವ ಸಾಮಗ್ರಿಗಳು
*1 ಚಮಚ ಕಡಲೆಹಿಟ್ಟು
*1ಚಮಚ ಜಾಯಿಕಾಯಿ ಹುಡಿ
*1 ಚಮಚ ಹಾಲು
*2 ಚಮಚ ತಾಜಾ ಈರುಳ್ಳಿ ರಸ

ವಿಧಾನ
*ಎಲ್ಲವನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಈ ಪೇಸ್ಟ್ ನ್ನು ನೀವು ಮುಖಕ್ಕೆ ಹಚ್ಚಿಕೊಳ್ಳಿ.
*ಹತ್ತು ನಿಮಿಷ ಕಾಲ ಮಸಾಜ್ ಮಾಡಿ ಮತ್ತು ಒಣಗಲು ಬಿಡಿ.
*ಇದರ ಬಳಿಕ ನೀವು ತಣ್ಣೀರಿನಿಂದ ಮುಖ ತೊಳೆಯಿರಿ.
*ಮುಖವು ತುಂಬಾ ನಯ ಹಾಗೂ ಕಾಂತಿಯುತವಾಗಿ ಕಾಣಿಸುವುದು.

ಮುಲ್ತಾನಿ ಮಿಟ್ಟಿ ಮತ್ತು ಈರುಳ್ಳಿ
ಬೇಕಾಗುವ ಸಾಮಗ್ರಿಗಳು
*1 ಚಮಚ ಮುಲ್ತಾನಿ ಮಿಟ್ಟಿ
*1 ಚಮಚ ತಾಜಾ ಈರುಳ್ಳಿ ರಸ
*ಕೆಲವು ಹನಿ ಜೇನು ಮೊಶ್ಚಿರೈಸ್ ಮಾಡಲು

ವಿಧಾನ
ಎಲ್ಲವನ್ನು ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ.
ಇದರ ಬಳಿಕ ಒಣಗಲು ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.



Click it and Unblock the Notifications
