Latest Updates
-
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ!
ಬ್ಯೂಟಿ ಟಿಪ್ಸ್: ಮುಖದ ಅಂದ ಹೆಚ್ಚಿಸಲು ಚೆಂಡು ಹೂವಿನ ಫೇಸ್ ಪ್ಯಾಕ್
ಸುಂದರ ಕಲೆಮುಕ್ತವಾಗಿರುವಂತಹ ತ್ವಚೆಯು ತನ್ನದಾಗಿರಬೇಕೆನ್ನುವುದು ಪ್ರತಿಯೊಬ್ಬರ ಕನಸಾಗಿರುವುದು. ಆದರೆ ಇದಕ್ಕಾಗಿ ತುಂಬಾ ಕಠಿಣಶ್ರಮ ವಹಿಸಬೇಕಾಗುತ್ತದೆ. ಆದರೆ ಕೆಲವರು ಇಂತಹ ತ್ವಚೆ ಪಡೆದು ಕೊಂಡಿರುವರು. ಇನ್ನು ಕೆಲವರು ಇದಕ್ಕಾಗಿ ಹಲವಾರು ರೀತಿಯ ಕ್ರೀಮ್, ಲೋಷನ್ ಇತ್ಯಾದಿಗಳನ್ನು ಬಳಸಿಕೊಳ್ಳುವರು. ಆದರೆ ಕೆಲವರು ನೈಸರ್ಗಿಕವಾಗಿ ಸುಂದರ ತ್ವಚೆ ಪಡೆಯಲು ಬಯಸುವರು.
ಆದರೆ ಮನೆಮದ್ದು ಬಳಸುವ ಮೊದಲು ನೀವು ಚರ್ಮದ ವಿಧ ಹಾಗೂ ಅದಕ್ಕೆ ಯಾವ ರೀತಿಯ ಮನೆಮದ್ದು ಸೂಕ್ತವಾಗಿರಲಿದೆ ಎಂದು ತಿಳಿಯಬೇಕು. ನಿಮಗೆ ಸುಂದರ ತ್ವಚೆ ಪಡೆಯಲು ಹಲವಾರು ರೀತಿಯ ಮನೆಮದ್ದುಗಳು ಸಿಗುವುದು ಖಚಿತ. ಯಾಕೆಂದರೆ ಸುಂದರ ತ್ವಚೆ ಪಡೆಯಲು ಮನೆಮದ್ದುಗಳಿಗೆ ಯಾವುದೇ ಕೊನೆಯಿಲ್ಲ.

ಮನೆಮದ್ದಿನ ಮೂಲಕ ನಿಮ್ಮ ಸೌಂದರ್ಯವೃದ್ಧಿಸಿಕೊಳ್ಳಲು ಯಾವತ್ತಾದರೂ ಚೆಂಡು ಹೂವನ್ನು ಬಳಸಿದ್ದೀರಾ? ಇಲ್ಲವೆಂದಾದಲ್ಲಿ ನೀವು ಚೆಂಡುಹೂವನ್ನು ತ್ವಚೆಯ ಆರೈಕೆಗೆ ಬಳಸಿಕೊಂಡು ಅದರಿಂದ ಸುಂದರ ತ್ವಚೆ ಪಡೆಯಬಹುದು. ಚೆಂಡು ಹೂ ತ್ವಚೆಗೆ ತುಂಬಾ ಆರೋಗ್ಯಕಾರಿ ಸೌಂದರ್ಯ ಹಾಗೂ ಕಾಂತಿ ನೀಡುವುದು. ಚೆಂಡು ಹೂವಿನಿಂದ ತ್ವಚೆಗೆ ಸಿಗುವಂತಹ ಲಾಭಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ನಿಮ್ಮ ಸೌಂದರ್ಯವರ್ಧಕದಲ್ಲಿ ಖಂಡಿತವಾಗಿಯೂ ಸ್ಥಾನ ಪಡೆಯಲಿದೆ.
ಚೆಂಡು ಹೂ ತ್ವಚೆಗೆ ಯಾಕೆ ಲಾಭಕಾರಿ?
ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿರುವ ಚೆಂಡು ಹೂ, ತ್ವಚೆಯ ಆರೈಕೆಯ ವಿಚಾರದಲ್ಲಿ ಮೊದಲ ಸ್ಥಾನ ಪಡೆಯುವುದು. ಇದರಲ್ಲಿ ನೈಸರ್ಗಿಕ ಮಾಯಿಶ್ಚಿರೈಸರ್ ಗುಣವಿದೆ ಮತ್ತು ಇದನ್ನು ನಿಯಮಿತ ಹಾಗೂ ದೀರ್ಘಕಾಲದ ತನಕ ಬಳಸಿದರೆ ಅದರಿಂದ ತ್ವಚೆಯು ಕಾಂತಿ ಪಡೆಯುವುದು.
ಇದರಲ್ಲಿ ಅದ್ಭುತವಾಗಿರುವ ಶಮನಕಾರಿ ಗುಣವಿದೆ ಮತ್ತು ಹಲವಾರು ರೀತಿಯ ಚರ್ಮದ ಸಮಸ್ಯೆ ಮತ್ತು ಸೋಂಕಿನಿಂದ ಉಂಟಾಗುವಂತಹ ಮೊಡವೆ, ಬೊಕ್ಕೆ ಮತ್ತು ಇಸಬು ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ತುಂಬಾ ಪ್ರಬಲ ನಂಜುನಿರೋಧಕ ಗುಣದಿಂದಾಗಿ ಇದು ಮೊಡವೆಗಳನ್ನು ನೈಸರ್ಗಿಕವಾಗಿ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಇದು ಚರ್ಮದಲ್ಲಿ ಕಾಲಜನ್ ಉತ್ಪತ್ತಿ ಹೆಚ್ಚಿಸುವುದು ಮತ್ತು ಚರ್ಮದಲ್ಲಿನ ಸ್ಥಿತಿಸ್ಥಾಪಕತ್ವವನ್ನು ನೈಸರ್ಗಿಕವಾಗಿ ಸುಧಾರಣೆ ಮಾಡುವುದು.
ಚರ್ಮದ ಬಣ್ಣವನ್ನು ಸುಧಾರಿಸುವ ಮೂಲಕ ಇದು ತ್ವಚೆಯು ಬಿಳಿ ಹಾಗೂ ಹೊಳೆಯಲು ನೆರವಾಗುವುದು. ಇದು ನೈಸರ್ಗಿಕ ಕಾಂತಿ, ಹೊಳೆಯುವ ಹಾಗೂ ಆರೋಗ್ಯಕಾರಿ ತ್ವಚೆ ನೀಡುವುದು. ನಿಮಗೆ ಕಾಂತಿಯುತ, ಸುಂದರ ಮತ್ತು ಆರೋಗ್ಯಕಾರಿ ತ್ವಚೆ ಬೇಕಾದರೆ ಆಗ ನೀವು ಮನೆಯಲ್ಲೇ ಇದ್ದು, ಚೆಂಡು ಹೂವಿನ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದು ತುಂಬಾ ಸರಳ ಹಾಗೂ ಸುಲಭ. ಇದು ಅಗ್ಗ ಕೂಡ. ಚೆಂಡು ಹೂವಿನಿಂದ ಮಾಡಬಹುದಾದ ಫೇಸ್ ಪ್ಯಾಕ್ ನ ಬಗ್ಗೆ ನೀವು ಈ ಲೇಖನದಲ್ಲಿ ಓದುತ್ತಾ ಸಾಗಿ... ತ್ವಚೆ ಬಿಳಿಯಾಗಲು ಚೆಂಡು ಹೂವಿನ ಫೇಸ್ ಪ್ಯಾಕ್ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
- 3 ಚೆಂಡು ಹೂವು
- 1 ಚಮಚ ಶ್ರೀಗಂಧದ ಹುಡಿ
- 1 ಚಮಚ ಜೇನುತುಪ್ಪ
- ½ ಚಮಚ ಮೊಸರು
- ½ ಚಮಚ ಲಿಂಬೆರಸ
Most Read: ಮುಖದ ಕಾಂತಿ ಹೆಚ್ಚಿಸಲು ಹಾಗೂ ಇತರ ಸೌಂದರ್ಯ ಸಮಸ್ಯೆಗಳಿಗೆ 'ತುಳಸಿ ಎಲೆಗಳ' ಫೇಸ್ ಪ್ಯಾಕ್
ವಿಧಾನ
•ಚೆಂಡು ಹೂವನ್ನು ತೆಗೆದುಕೊಂಡು ಅದನ್ನು ಜಜ್ಜಿಕೊಂಡು ಪೇಸ್ಟ್ ಮಾಡಿ ಮತ್ತು ಸಣ್ಣ ಪಿಂಗಾಣಿಯಲ್ಲಿ ಹಾಕಿಡಿ.
•ಇನ್ನೊಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ಮೊಸರು ಹಾಕಿ.
•ಇದಕ್ಕೆ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಎರಡನ್ನು ಮಿಶ್ರಣ ಮಾಡಿ.
•ಈ ಮಿಶ್ರಣಕ್ಕೆ ಲಿಂಬೆರಸ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ರುಬ್ಬಿ.
•ಇದಕ್ಕೆ ಶ್ರೀಗಂಧದ ಹುಡಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಅಂತಿಮವಾಗಿ ಜಜ್ಜಿಕೊಂಡು ಪೇಸ್ಟ್ ಮಾಡಿಟ್ಟುರುಂತಹ ಚೆಂಡುಹೂವನ್ನು ತೆಗೆದುಕೊಂಡು ಇದಕ್ಕೆ ಹಾಕಿ. ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಚೆಂಡು ಹೂವಿನ ಫೇಸ್ ಪ್ಯಾಕ್ ಈಗ ತಯಾರಾಗಿದೆ ಮತ್ತು ಇದನ್ನು ನೀವು ಬೆರಳುಗಳು ಅಥವಾ ಬ್ರಷ್ ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ಹೆಚ್ಚಾಗಿ ಮಹಿಳೆಯರು ಬ್ರಷ್ ಬಳಸಿಕೊಂಡು ಇದನ್ನು ಹಚ್ಚಿಕೊಳ್ಳುವರು. ಯಾಕೆಂದರೆ ಇದು ಸುಲಭವಾಗುವುದು.
ಹಚ್ಚಿಕೊಳ್ಳುವುದು ಹೇಗೆ?
•ಮೊದಲು ನೀವು ನೀರಿನಿಂದ ಮುಖ ತೊಳೆಯಿರಿ. ಫೇಸ್ ವಾಶ್ ಬಳಸಿಕೊಂಡು ಮುಖ ತೊಳೆಯಿರಿ. ಇದರಿಂದ ಮುಖದಲ್ಲಿರುವ ಧೂಳು ಮತ್ತು ಕೊಳೆ ಹೋಗುವುದು. ಚರ್ಮದಲ್ಲಿರುವ ರಂಧ್ರಗಳು ತೆರೆದುಕೊಳ್ಳಲು ನೀವು ತಣ್ಣೀರಿನಿಂದ ಮುಖ ತೊಳೆದುಕೊಳ್ಳುವುದು ಅತೀ ಅಗತ್ಯವಾಗಿರುವುದು.
•ಬ್ರಷ್ ತೆಗೆದುಕೊಂಡು ಚೆಂಡುಹೂವಿನ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇದನ್ನು ಹಚ್ಚಿಕೊಳ್ಳುವ ವೇಳೆ ಕಿವಿಗಳು, ಕಣ್ಣುಗಳು ಮತ್ತು ಬಾಯಿ ಭಾಗವನ್ನು ಬಿಟ್ಟುಬಿಡಿ.
•15-20 ನಿಮಿಷ ಕಾಲ ಅದು ಹಾಗೆ ಇರಲಿ.
•ಇದರ ಬಳಿಕ ಬಿಸಿ ನೀರು ಬಳಸಿ ತೊಳೆಯಿರಿ. ಇದರಿಂದ ರಂಧ್ರಗಳು ಮುಚ್ಚುವುದು.
•ಒಳ್ಳೆಯ ಫಲಿತಾಂಶ ಪಡೆಯಲು ನೀವು ವಾರದಲ್ಲಿ ಎರಡು ಸಲ ಇದನ್ನು ಬಳಸಿ.
ಚೆಂಡು ಹೂವಿನ ಫೇಸ್ ಪ್ಯಾಕ್ ಮನೆಯಲ್ಲಿ ಮಾಡಬಹುದಾದ ಅತೀ ಸುಲಭ ಫೇಸ್ ಪ್ಯಾಕ್ ಮತ್ತು ಇದು ತುಂಬಾ ಪರಿಣಾಮಕಾರಿ ಕೂಡ. ನೀವು ಫೇಸ್ ಪ್ಯಾಕ್ ಅನ್ನು ಮನೆಯಲ್ಲೇ ಪ್ರಯತ್ನಿಸಿ ನೋಡಿ ಮತ್ತು ಇದರ ಬಗ್ಗೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications