Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಡವೆ ಕಲೆ ನಿವಾರಣೆಗೆ, ಸರಳ ಟಿಪ್ಸ್-ತ್ವರಿತ ಪರಿಹಾರ
ಮೊಡವೆಗಳಿಗೆ ಮತ್ತು ಅದರ ಕಲೆಗಳನ್ನು ಹೋಗಲಾಡಿಸಲು ಬೇಕಾದಷ್ಟು ಮುಲಾಮು/ಔಷಧಿಗಳು ದೊರಕುತ್ತವೆ. ಇವುಗಳ ಬೆಲೆಯು ವಿಪರೀತವಾಗಿದ್ದು ಅನೇಕರ ಕೈಗೆ ಎಟಕುವುದಿಲ್ಲ. ಹಾಗಿದ್ದಲ್ಲಿ ಇಲ್ಲಿ ನಾವು ಕೊಡುವ ಸಲಹೆಗಳ ಕಡೆಗೆ ಗಮನವಿಡಿ....
ಮುಖದ ಸೌಂದರ್ಯವನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದೇ ಮೊಡವೆಗಳು. ಅದರಲ್ಲೂ ಹದಿಹರೆಯದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಯಾಕೆಂದರೆ ದೇಹದಲ್ಲಿ ಆಗುವಂತಹ ಹಾರ್ಮೋನು ಬದಲಾವಣೆಯಿಂದಾಗಿ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಮೊಡವೆಗಳಿಂದ ರಕ್ಷಣೆ ಪಡೆಯಲು ಟಿವಿಗಳಲ್ಲಿ ಬರುವಂತಹ ಜಾಹೀರಾತುಗಳನ್ನು ನೋಡಿಕೊಂಡು ಹಲವಾರು ಬಗೆಯ ಕ್ರೀಮ್ ಗಳನ್ನು ಪ್ರಯೋಗಿಸಲು ಆರಂಭಿಸುತ್ತೇವೆ. ಓ ಮೊಡವೆ ಕಲೆಗಳೇ, ನೀ ಹೀಗೇಕೆ ಕಾಡುತ್ತಿರುವೆ?
ಮೊಡವೆಗಳು ನಿವಾರಣೆಯಾದರೂ ಮೊಡವೆಗಳ ಕಲೆಗಳು ಮುಖದ ಮೇಲೆ ಹಾಗೆ ಉಳಿದುಕೊಂಡಿರುತ್ತದೆ. ಇಂತಹ ಕಲೆಗಳನ್ನು ಹೋಗಲಾಡಿಸಲು ಕ್ರೀಮ್ ಗಳನ್ನು ಬಳಸಿದರೂ ಕಲೆಗಳು ಮಾತ್ರ ಹಾಗೆ ಉಳಿದುಕೊಳ್ಳುತ್ತದೆ. ಆದರೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಮೊಡವೆಯ ಕಲೆಗಳನ್ನು ನಿವಾರಣೆ ಮಾಡಬಹುದು. ಮೊಡವೆಗಳ ಕಲೆಗಳನ್ನು ನಿವಾರಣೆ ಮಾಡಲು ಇರುವ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ...

ಇಂಗಿನ ಪೇಸ್ಟ್
ಇಂಗಿನ ಪೇಸ್ಟ್ ಮಾಡಿಕೊಂಡು ಕಲೆ ಇರುವ ಜಾಗಕ್ಕೆ ಹಚ್ಚಿದರೆ ಕಲೆ ಮಾಯವಾಗುವುದು ಮತ್ತು ಹೊಸ ಮೊಡವೆಗಳು ಮೂಡದಂತೆ ಇದು ತಡೆಯುವುದು.

ಮೊಸರಿನ ಮಸಾಜ್
ಕಲೆ ಇರುವಂತಹ ಜಾಗಕ್ಕೆ ಮೊಸರನ್ನು ಪ್ರತೀದಿನ ಮಸಾಜ್ ಮಾಡಿದರೆ ಅದರಿಂದ ಮೊಡವೆಯ ಕಲೆಗಳ ಅಪಾಯ ಕಡಿಮೆ ಮತ್ತು ಮೃಧು ಹಾಗೂ ಕಾಂತಿಯುತ ಚರ್ಮವನ್ನು ಪಡೆಯಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹಣ್ಣುಗಳಲ್ಲಿ ಇರುವಂತಹ ಸಿಟ್ರಿಕ್ ಆಮ್ಲಕ್ಕಿಂತ ಹಗುರವಾಗಿರುವ ಕಾರಣ ಚರ್ಮವನ್ನು ಸುಡುವುದಿಲ್ಲ. ಮೊಸರಿನ ಫೇಸ್ ಮಾಸ್ಕ್: ಕಡಿಮೆ ಖರ್ಚು ಅಧಿಕ ಲಾಭ...

ಕಡಲೆ ಹಿಟ್ಟು ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್
ಕಡಲೆ ಹಿಟ್ಟಿನೊಂದಿಗೆ ರೋಸ್ ವಾಟರ್ ಅನ್ನು ಮಿಶ್ರಣ ಮಾಡಿಕೊಂಡು ಪ್ರತೀದಿನ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಕಲೆಗಳು ಮಾಯವಾಗುವುದು ಮತ್ತು ಮುಖಕ್ಕೆ ಕಾಂತಿ ಬರುವುದು. ಕಡಲೆ ಹಿಟ್ಟು ಬಳಸಿ, ತ್ವಚೆಯ ಕಾಂತಿ ವೃದ್ಧಿಸಿ

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಹುಡಿ ಮಾಡಿಕೊಂಡು ಅದನ್ನು ಹಾಲಿಗೆ ಹಾಕಿ ಫೇಸ್ ಪ್ಯಾಕ್ ಮಾಡಿಕೊಳ್ಳಬೇಕು. ರೆಟಿನಾಲ್ ಅಧಿಕವಾಗಿರುವಂತಹ ಕಿತ್ತಳೆ ಹಣ್ಣು ಈಗಿರುವ ಚರ್ಮವನ್ನು ಒಣಗಿಸುವುದು ಮತ್ತು ಕಲೆ ಹಾಗೂ ಮೊಡವೆಗಳು ಇಲ್ಲದೆ ಇರುವಂತಹ ಹೊಸ ಚರ್ಮ ಬರುವಂತೆ ಮಾಡುವುದು. ಒಳ್ಳೆಯ ಚರ್ಮವನ್ನು ಪಡೆಯಲು ಇದು ನಿಮಗೆ ನೆರವಾಗುವುದು.

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಹುಡಿ ಮಾಡಿಕೊಂಡು ಮುಚ್ಚಳ ಮುಚ್ಚಿರುವ ಡಬ್ಬದಲ್ಲಿ ಹಾಕಿಡಬೇಕು. ಮೊಡವೆ ಕಲೆಗಳನ್ನು ನಿವಾರಿಸುವಂತಹ ಇತರ ಮನೆಮದ್ದುಗಳೆಂದರೆ ಟೊಮೆಟೋ ಜ್ಯೂಸ್, ಆಲೂಗಡ್ಡೆ ಸಿಪ್ಪೆ ಫೇಸ್ ಪ್ಯಾಕ್ ಮತ್ತು ಅಲೋವೆರಾ ಜೆಲ್. ಮುಖದ ಅಂದಕ್ಕೆ-ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್



Click it and Unblock the Notifications
