Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಚಳಿಗಾಲ ಶುರುವಾಗಿ ಬಿಟ್ಟಿದೆ! ತ್ವಚೆ ಆರೈಕೆ ಹೀಗಿರಲಿ....
ಚಳಿಗಾಲದಲ್ಲಿ ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಕಟ್ಟುನಿಟ್ಟಾಗಿ ನಿಯಮಿತವಾಗಿ ಪಾಲಿಸಿಕೊಂಡು ಹೋದರೆ ಒಡೆದ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.
ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೇವಲ ಆರೋಗ್ಯ ಮಾತ್ರವಲ್ಲ, ನಮ್ಮ ತ್ವಚೆಯ ಕಡೆ ಕೂಡ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಯಾಕೆಂದರೆ ಚಳಿಗಾಲದಲ್ಲಿ ಚರ್ಮವು ಒಡೆದು ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಎಷ್ಟೇ ಮುತುವರ್ಜಿ ವಹಿಸಿದರೂ ಸಮಸ್ಯೆಯಿಂದ ಪಾರಾಗುವುದು ತುಂಬಾ ಕಷ್ಟವೆನಿಸುತ್ತದೆ. ಕೊರೆಯುವ ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ
ಅದರಲ್ಲೂ ಒಣಚರ್ಮವನ್ನು ಹೊಂದಿರುವವರಿಗೆ ಇದು ತೀರ ಸಾಮಾನ್ಯವಾಗಿರುತ್ತದೆ. ಒಣಚರ್ಮ ಮಾತ್ರವಲ್ಲದೆ ಎಣ್ಣೆಯಾಂಶವುಳ್ಳ ಚರ್ಮದವರಿಗೂ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರು ಇದರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕು. ಈ ಲೇಖನದಲ್ಲಿ ನೀಡಿರುವ ಕೆಲವೊಂದು ಸಲಹೆಗಳನ್ನು ಬಳಸಿಕೊಂಡು ನೀವು ಚಳಿಗಾಲದಲ್ಲಿ ಚರ್ಮ ಒಡೆಯುವ ಸಮಸ್ಯೆಯಿಂದ ಪಾರಾಗಬಹುದು.
ಇದಕ್ಕೆ ತಾಳ್ಮೆ ಹಾಗೂ ಸಮಯ ನೀಡಿದರೆ ನೀವು ಸಮಸ್ಯೆಯಿಂದ ಪಾರಾಗಬಹುದು. ಯಾರೂ ಕೂಡ ಚಳಿಗಾಲದಲ್ಲಿ ನೋವಿನ ತ್ವಚೆಯನ್ನು ಬಯಸುವುದಿಲ್ಲ. ಚರ್ಮವು ಒಡೆಯುವುದರಿಂದ ಕಾಂತಿಯುವ ತ್ವಚೆಯು ಸೌಂದರ್ಯವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ನೋವನ್ನು ನೀಡುವುದು. ಚಳಿಗಾಲದಲ್ಲಿ ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಕಟ್ಟುನಿಟ್ಟಾಗಿ ನಿಯಮಿತವಾಗಿ ಪಾಲಿಸಿಕೊಂಡು ಹೋದರೆ ಒಡೆದ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು. ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆ ಹೀಗಿರಲಿ

ಸ್ನಾನಕ್ಕೆ ಮೊದಲು ತೈಲ
ಸ್ನಾನಕ್ಕೆ ಮೊದಲು ತೈಲವನ್ನು ಹಚ್ಚಿಕೊಳ್ಳಿ. ಸಾಮಾನ್ಯವಾದ ತೆಂಗಿನ ಎಣ್ಣೆ ಒಳ್ಳೆಯದು. ಇದು ಚರ್ಮದಲ್ಲಿರುವ ತೇವಾಂಶವನ್ನು ಕಾಪಾಡಿಕೊಂಡು ಸ್ನಾನದ ವೇಳೆ ಚರ್ಮದ ತೇವಾಂಶವು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ.
ಉಗುರುಬೆಚ್ಚಗಿನ ನೀರು
ಚಳಿಗಾಲದಲ್ಲಿ ಚಳಿ ಇರುವುದರಿಂದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದು. ಯಾಕೆಂದರೆ ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಲು ತುಂಬಾ ಕಷ್ಟವಾಗುತ್ತದೆ.
ನಿಯಮಿತ ಮಾಯಿಶ್ಚರೈಸರ್ ಬೇಡ
ಸ್ನಾನ ಮಾಡಿದ ಬಳಿಕ ನೀವು ಯಾವಾಗಲೂ ಬಳಸುವಂತಹ ಸಾಮಾನ್ಯವಾದ ಮಾಯಿಶ್ಚರೈಸರ್ ಅನ್ನು ಬಳಸಬೇಡಿ. ಚಳಿಗಾಲಕ್ಕಾಗಿಯೇ ವಿಶೇಷವಾಗಿರುವ ಮೊಶ್ಚಿರೈಸರ್ ಬಳಸಿ. ಇದು ಮಾಯಿಶ್ಚರೈಸರ್ ಅನ್ನು ಕಾಪಾಡಿಕೊಂಡು ಚರ್ಮವು ಒಣಗುವುದನ್ನು ತಡೆಯುತ್ತದೆ. ಇದು ನೀವು ಪಾಲಿಸಲೇಬೇಕಾದ ಸಲಹೆಗಳು.
ನೀರು ಕುಡಿಯಿರಿ
ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಿರುತ್ತದೆ. ಆದರೂ ನೀವು ನೀರು ಕುಡಿಯುತ್ತಲೇ ಇರಬೇಕು. ಬೇಸಿಗೆಯಂತೆ ಚಳಿಗಾಲದಲ್ಲೂ ನೀರು ಕುಡಿಯುತ್ತಾ ಇರುವುದು ತುಂಬಾ ಒಳ್ಳೆಯದು.
ಮಸಾಜ್ ತೈಲ
ವಾರದಲ್ಲಿ ಒಂದು ಸಲ ಮಲಗುವ ಮೊದಲು ಮಸಾಜ್ ತೈಲದಿಂದ ದೇಹವನ್ನು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ವಾರದಲ್ಲಿ ಒಂದು ಸಲಕ್ಕಿಂತ ಹೆಚ್ಚು ಮಾಡಿದರೆ ಅದರಿಂದ ತುಂಬಾ ಒಳ್ಳೆಯದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ ಚರ್ಮದಲ್ಲಿ ತೇವಾಂಶವು ಉಳಿದುಕೊಳ್ಳುವಂತೆ ಮಾಡುತ್ತದೆ.
ಶಿಯಾ ತುಪ್ಪ
ಒಣ ಚರ್ಮವನ್ನು ಹೊಂದಿರುವವರ ಸ್ಥಿತಿ ಚಳಿಗಾಲದಲ್ಲಿ ಹೇಳಿ ಪ್ರಯೋಜನವಿಲ್ಲ. ಇದಕ್ಕೆ ಒಳ್ಳೆಯ ಉಪಾಯವೆಂದರೆ ಶಿಯಾ ತುಪ್ಪವನ್ನು ಬಳಸುವುದು. ಅತ್ಯಂತ ಒಣಚರ್ಮವನ್ನು ಹೊಂದಿರುವವರು ಕೂಡ ಇದನ್ನು ಬಳಸಿಕೊಳ್ಳಬಹುದು.
ಕೈಗೆ ಕ್ರೀಮ್ ಹಚ್ಚಿ
ನಮ್ಮ ದೇಹದಲ್ಲಿ ಹೆಚ್ಚು ಕೆಲಸ ಮಾಡುವ ಭಾಗವೆಂದರೆ ಅದು ಕೈಗಳು. ಆದರೆ ಕೈಗಳನ್ನು ನಾವು ಹೆಚ್ಚಾಗಿ ಕಡೆಗಣಿಸುತ್ತಲೇ ಇರುತ್ತೇವೆ. ಇಂತಹ ಕೈಗಳಿಗಾಗಿ ಕ್ರೀಮ್ ಗಳನ್ನು ಬಳಸಿ ಆರೈಕೆ ಮಾಡಿಕೊಳ್ಳಿ. ಇದರಿಂದ ಕೈಗಳಿಗೆ ತೇವಾಂಶವು ಸಿಗುವುದು.



Click it and Unblock the Notifications

















