Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇವು-ಮೊಸರಿನ ಪ್ಯಾಕ್- ಕಡಿಮೆ ಖರ್ಚು, ಅಧಿಕ ಲಾಭ!
ತ್ವಚೆಯ ಆರೈಕೆಗಾಗಿ ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಬಳಸುತ್ತೇವೆ. ತ್ವಚೆ ಕೆಲವು ಸಮಯ ಕಾಂತಿಯನ್ನು ತೋರಿಸಿದರೂ ಬಳಿಕ ಅದು ಮೊದಲಿನಂತೆ ಕಳೆಗುಂದುತ್ತದೆ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ಸೌಂದರ್ಯವರ್ಧಕಗಳಲ್ಲಿ ಬಳಸುತ್ತಿರುವಂತ ಕೆಲವು ರಾಸಾಯನಿಕಗಳು ಕೂಡ ಇಂತಹ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ತ್ವಚೆಯ ಮೇಲಿನ ಕೆಲವೊಂದು ಕಪ್ಪು ಕಲೆಗಳು ನಿಮ್ಮನ್ನು ನಿಸ್ತೇಜವಾಗಿ ಕಾಣುವಂತೆ ಮಾಡುತ್ತದೆ. ಒಂದು ಕಪ್ ಮೊಸರಿನಲ್ಲಿದೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳು!
ತ್ವಚೆಗೆ ಸಂಬಂಧಿಸಿದ ವಿಷಯಕ್ಕೆ ಬಂದರೆ ಹೆಚ್ಚಿನವರು ಅದರ ಮೇಲಿನ ಕಲೆಗಳನ್ನು ನೋಡಿ ತುಂಬಾ ಹತಾಶೆಯನ್ನು ಅನುಭವಿಸುತ್ತಾರೆ. ಆದರೆ ಮನೆಮದ್ದನ್ನು ನಿಯಮಿತವಾಗಿ ಬಳಸುವುದರಿಂದ ತ್ವಚೆಯ ಆರೈಕೆಯೊಂದಿಗೆ ಕಾಂತಿಯನ್ನು ಮರಳಿ ಪಡೆಯಬಹುದು. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ
ಬೇವು ಮತ್ತು ಮೊಸರನ್ನು ಬಳಸಿಕೊಂಡು ತ್ವಚೆಯ ಆರೈಕೆಯನ್ನು ಉತ್ತಮ ರೀತಿಯಲ್ಲಿ ಮಾಡಬಹುದಾಗಿದೆ. ಬೇವಿನ ಎಲೆಗಳನ್ನು ತೊಳೆದು ಅದನ್ನು ಒಂದು ಮಿಕ್ಸಿಗೆ ಹಾಕಿ ಎರಡು ಚಮಚ ಮೊಸರು ಹಾಕಿಕೊಂಡು ರುಬ್ಬಿಕೊಂಡು ಪೇಸ್ಟ್ ಮಾಡಿ. ಈಗ ನೈಸರ್ಗಿಕವಾಗಿರುವ ತ್ವಚೆಯ ಪ್ಯಾಕ್ ತಯಾರಾಗಿದೆ. ಇದನ್ನು ಹಚ್ಚಿಕೊಂಡು 15 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಬೇವು ಹಾಗೂ ಮೊಸರಿನ ಪ್ಯಾಕ್‌ನ ಲಾಭಗಳು ಏನು ಎಂದು ತಿಳಿಯಿರಿ....

ಪ್ರಜ್ವಲ ಮೈಬಣ್ಣ
ಈ ನೈಸರ್ಗಿಕ ಪ್ಯಾಕ್ ವಿಟಮಿನ್ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ತ್ವಚೆಯ ಕೋಶಗಳಿಗೆ ಪೋಷಣೆಯನ್ನು ನೀಡಿ ಅದು ಆರೋಗ್ಯಕರ ಹಾಗೂ ಪ್ರಜ್ಞಲವಾಗುವಂತೆ ಮಾಡುತ್ತದೆ.

ಕಲೆಗಳ ನಿವಾರಣೆ
ನೈಸರ್ಗಿಕವಾಗಿರುವಂತ ಈ ಪ್ಯಾಕ್ ಹಾನಿಗೊಳಗಾಗಿರುವ ಕೋಶಗಳನ್ನು ಸರಿಪಡಿಸಿ ಮರುಸ್ಥಾಪಿಸುತ್ತದೆ. ನಿಯಮಿತವಾಗಿ ಬಳಸಿದರೆ ಕಲೆಗಳು ಮಾಯವಾಗುತ್ತದೆ.

ಸೂರ್ಯನ ಕಿರಣಗಳಿಂದ ರಕ್ಷಣೆ
ಸೂರ್ಯನ ಕಿರಣಗಳಲ್ಲಿ ಇರುವಂತಹ ಯುವಿ ಕಿರಣಗಳಿಂದ ರಕ್ಷಿಸುತ್ತದೆ ಹಾಗೂ ಚರ್ಮದ ಮೇಲೆ ಸೂರ್ಯನ ಬಿಸಿಲಿನಿಂದಾಗಿ ಮೂಡುವಂತಹ ಕಲೆಗಳನ್ನು ಮೊಸರು ಹಾಗೂ ಬೇವಿನ ಮಾಸ್ಕ್ ತೆಗೆದುಹಾಕುತ್ತದೆ.

ಮೊಡವೆ ನಿವಾರಣೆ
ಈ ಪ್ಯಾಕ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವುದರಿಂದ ಮುಖದಲ್ಲಿ ಮೂಡುವಂತಹ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ನಿವಾರಿಸಿ ಮುಖ ಹಾಗೂ ದೇಹದಲ್ಲಿ ಮೊಡವೆಗಳು ಮೂಡದಂತೆ ನೋಡಿಕೊಳ್ಳುತ್ತದೆ.

ಚರ್ಮದ ರಚನೆ ಬಿಳಿಯಾಗುವುದು
ಇದು ನೈಸರ್ಗಿಕವಾಗಿ ಬ್ಲೀಚಿಂಗ್ ಕೆಲಸವನ್ನು ಮಾಡುವ ಕಾರಣದಿಂದಾಗಿ ಚರ್ಮದ ರಚನೆಯು ಬಿಳಿಯಾಗುವುದು.

ಸಣ್ಣಪುಟ್ಟ ಚರ್ಮದ ಸಮಸ್ಯೆ ನಿವಾರಣೆ
ಗಾಯ, ಸುಟ್ಟಗಾಯ ಹಾಗೂ ತರುಚಿದ ಗಾಯಗಳು ಆದರೆ ಬೇವು ಹಾಗು ಮೊಸರನ್ನು ಬಳಸಿದರೆ ಇವುಗಳಿಂದ ಪರಿಹಾರ ಸಿಗುವುದು. ಇದರಲ್ಲಿರುವ ನಂಜುನಿರೋಧಕ ಗುಣಗಳು ಇದಕ್ಕೆ ಕಾರಣವಾಗಿದೆ.

ತ್ವಚೆಯನ್ನು ಮೃದುವಾಗಿಸುವುದು
ಮೊಸರು ನೈಸರ್ಗಿಕವಾಗಿ ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ಇದು ಚರ್ಮದ ಕೋಶಗಳಿಗೆ ತೇವಾಂಶವನ್ನು ನೀಡಿ ಚರ್ಮವು ಕಾಂತಿಯನ್ನು ಪಡೆಯಲು ನೆರವಾಗುವುದು.



Click it and Unblock the Notifications
