Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾತ್ರಿ ಬೆಳಗಾಗುವುದರಲ್ಲಿ ಮುಖದ ಸೌಂದರ್ಯವೇ ಬದಲಾಗಬಹುದು!
ರಾತ್ರಿ ಬೆಳಗಾಗುವುದರಲ್ಲಿ ನೀವು ಸುಂದರಿಯಾಗುತ್ತೀರಿ ಎಂಬುದಾಗಿ ಹೇಳಿದಲ್ಲಿ ಯಾರ ಮುಖ ತಾನೇ ಅರಳುವುದಿಲ್ಲ. ನಿಮ್ಮೆಲ್ಲಾ ಸೌಂದರ್ಯ ಸಮಸ್ಯೆಗಳನ್ನು ಒಂದು ದಿನದಲ್ಲೇ ನೀವು ನಿವಾರಿಸಿಕೊಳ್ಳಬಹುದು ಎಂಬ ಮಾತು ಎಲ್ಲಾ ಯುವತಿಯರನ್ನು ಸಂತಸದಿಂದ ಕುಣಿದಾಡುವಂತೆ ಮಾಡಿಬಿಡುತ್ತದೆ. ಕೈಗೆಟಕುವ ಬೆಲೆಯ ಫೇಸ್ ಪ್ಯಾಕ್-ಮಿಸ್ ಮಾಡದಿರಿ!
ಇಂದಿನ ಲೇಖನದಲ್ಲಿ ಹೊಳಪಿನ ಚಿನ್ನದ ಕಾಂತಿಯ ಮುಖಾರವಿಂದನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಅದು ಕೂಡ ಮನೆಯಲ್ಲೇ ದೊರೆಯುವ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿಕೊಂಡು ಮುಖದಲ್ಲಿ ಕಾಂತಿಯನ್ನು ಪಡೆದುಕೊಳ್ಳುವ ಸಲಹೆ ಇದಾಗಿದೆ.

ವಿಟಮಿನ್ ಇ, ಗ್ಲಿಸರಿನ್, ರೋಸ್ ವಾಟರ್‌ನಂತಹ ಅತ್ಯದ್ಭುತ ಸಾಮಾಗ್ರಿಗಳು ನಿಮ್ಮ ಸೌಂದರ್ಯವನ್ನು ರಾತ್ರಿ ಬೆಳಗಾಗುವುದರಲ್ಲಿ ನಳನಳಿಸುವಂತೆ ಮಾಡುತ್ತದೆ. ಹಾಗಿದ್ದರೆ ನೈಸರ್ಗಿಕವಾಗಿ ಚಿನ್ನದ ಕಾಂತಿಯ ಹೊಳಪನ್ನು ನಿಮ್ಮ ಮುಖದಲ್ಲಿ ಪಡೆದುಕೊಳ್ಳುವ ಸಲಹೆಗಳನ್ನು ಇಲ್ಲಿ ನೀಡುತ್ತಿದ್ದು ಅದು ಹೇಗೆ ಎಂಬುದನ್ನು ಕಂಡುಕೊಳ್ಳಿ.
ಹಂತ 1
ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಸ್ವಚ್ಛಗೊಳಿಸಿ. ಮೈಕ್ರೋಫೈಬರ್ ಟವೆಲ್ ಅನ್ನು ತೆಗೆದುಕೊಂಡು, ಮುಖವನ್ನು ಬಿರುಸಿನಿಂದ ಉಜ್ಜಿಕೊಳ್ಳದೆ, ಮೃದುವಾಗಿ ನೀರನ್ನು ತೆಗೆಯಿರಿ.
ಹಂತ 2
ಒಂದು ಪಾತ್ರೆಯಲ್ಲಿ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ತೆಗೆದುಕೊಳ್ಳಿ. ಸೂಜಿ ಬಳಸಿ ಮಾತ್ರೆಯಿಂದ ಜೆಲ್ ಅನ್ನು ಹೊರತೆಗೆಯಿರಿ.
ಹಂತ 3
ಪಾತ್ರೆಗೆ ಗ್ಲಿಸರಿನ್ ಅನ್ನು ಹಾಕಿ ನಂತರ ಮಾತ್ರೆಯ ಜೆಲ್ ಅನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
ಹಂತ 4
ಈ ದ್ರಾವಣಕ್ಕೆ ಕೆಲವು ಹನಿಗಳಷ್ಟು ರೋಸ್ ವಾಟರ್ ಸೇರಿಸಿ. ನಿಮ್ಮ ಮುಖಕ್ಕೆ ಎಷ್ಟು ಬೇಕೋ ಅಷ್ಟೇ ಮಿಶ್ರಣವನ್ನು ಸಿದ್ಧಪಡಿಸಿ.
ಹಂತ 5
ನಿಮ್ಮ ಮುಖ ಮತ್ತು ಕುತ್ತಿಗೆಗೆ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ನಂತರ ಮಸಾಜ್ ಮಾಡಿ. ಮೇಲಿನಿಂದ ಕೆಳಕ್ಕೆ ಈ ಮಾದರಿಯಲ್ಲಿ ಮಸಾಜ್ ಮಾಡಿ. ಇದರಿಂದ ರಕ್ತಸಂಚಾರವುಂಟಾಗುತ್ತದೆ. ಮುಖಕ್ಕೆ ದ್ರಾವಣ ಚೆನ್ನಾಗಿ ಹೀರಿಕೊಳ್ಳುವವರೆಗೆ ಹೀಗೆ ಮಾಡಿ.
ಹಂತ 6
ರಾತ್ರಿ ಪೂರ್ತಿ ಈ ಮಾಸ್ಕ್ ಹಾಗೆಯೇ ಇರಲು ಬಿಡಿ. ಮರುದಿನ ಬೆಳಗ್ಗೆ ನಿಮ್ಮ ತ್ವಚೆಯಲ್ಲಿ ನೀವು ಜಾದೂವನ್ನೇ ಕಾಣಬಹುದಾಗಿದೆ. ತ್ವಚೆಯು ಮೃದುವಾಗಿ, ಹೊಳೆಯುತ್ತಿರುತ್ತದೆ. ನಿಮ್ಮ ಮುಖ ಹೆಚ್ಚು ಡ್ರೈಯಾಗಿದೆ ಎಂದಾದಲ್ಲಿ ಈ ಮಾಸ್ಕ್ ಅನ್ನು ಪ್ರತೀ ರಾತ್ರಿ ಹಚ್ಚಿಕೊಳ್ಳಿ. ನಿಮ್ಮದು ಎಣ್ಣೆ ತ್ವಚೆ ಎಂದಾದಲ್ಲಿ, ವಾರದಲ್ಲಿ ಎರಡು ಬಾರಿ ಮಾಡಿ. ಚಿನ್ನದ ಕಾಂತಿಯನ್ನು ಮುಖಕ್ಕೆ ಒದಗಿಸುವ ಫೇಸ್ ಪ್ಯಾಕ್ ಅನ್ನು ನೀವು ಟ್ರೈ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತ್ವಚೆಯ ಸೌಂದರ್ಯಕ್ಕೆ ದುಬಾರಿ ಬೆಲೆಯ ಫೇಸ್‌ಪ್ಯಾಕ್‍ಗಳೇಕೆ?



Click it and Unblock the Notifications






